ಗೌರಿಬಿದನೂರು: ದಿನಾಂಕ 14.05.2026ರ ಗುರುವಾರದ ನಗರಗೆರೆ ಹೋಬಳಿಯ ವಿವಿಧ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿಶೇಷ ಗ್ರಾಮ ಸಭೆಯಲ್ಲಿ ಭಾಗವಹಿಸಿ ಫಲಾನುಭವಿಗಳಿಗೆ ಸರ್ಕಾರಿ ಸವಲತ್ತುಗಳನ್ನು ವಿತರಿಸಲು ನಗರಗೆರೆ ಗ್ರಾಮಕ್ಕೆ ಆಗಮಿಸಿದ್ದ ವೇಳೆ ಮಾರ್ಗ ಮದ್ಯದ ಮಲ್ಲೇನ ಹಳ್ಳಿ ಕ್ರಾಸ್ ಬಳಿ ಶಾಸಕ ಕೆ.ಎಚ್.ಪುಟ್ಟಸ್ವಾಮಿ ಗೌಡ(MLA K.H. Puttaswamy Gowda) ರು ಮಲ್ಲೇನಹಳ್ಳಿ ಗ್ರಾಮಸ್ಥರನ್ನು ಭೇಟಿ ಮಾಡಿದರು.
ಇದನ್ನೂ ಓದಿ: Gauribidanur News: ಮೇ.17ಕ್ಕೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ
ಈ ವೇಳೆ ಊರಿನ ಗ್ರಾಮಸ್ಥರು ಸಲ್ಲಿಸಿದ ಅಹವಾಲು ಸ್ವೀಕರಿಸಿ ಅವುಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದರು. ಮುಖ್ಯವಾಗಿ ದೇವಸ್ಥಾನದ ಸ್ಥಳಗಳು ಮತ್ತು ಅನುಭವದಲ್ಲಿರುವ ರೈತರಿಗೆ ಯಾವುದೇ ರೀತಿ ಅಡ್ಡಿ ಪಡಿಸುವುದಿಲ್ಲ ಎಂದು ಭರವಸೆ ನೀಡಿದರು
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಮುನಿಕೃಷ್ಣ ಆದಿನಾರಾಯಣಪ್ಪ ಮತ್ತು ವೆಂಕಟೇಶಪ್ಪ ಹಾಗೂ ಮುಂತಾದವರು ಹಾಜರಿದ್ದರು.