ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗ್ರಾಮಸ್ಥರ ಕನಸಿಗೆ ಜೀವ ತುಂಬಿದ ಶಾಸಕ ಪ್ರದೀಪ್ ಈಶ್ವರ್ : ದೇವಿಶೆಟ್ಟಿಹಳ್ಳಿಯಲ್ಲಿ 25 ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಯಲ್ಲವಳ್ಳಿ ರಮೇಶ್, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಾಸಕ ಪ್ರದೀಪ್ ಈಶ್ವರ್ ಮೊದಲ ಆದ್ಯತೆ ನೀಡಿದ್ದು, ಜನರು ಸಮಸ್ಯೆ ಹೇಳಿಕೊಂಡ ತಕ್ಷಣ ಪರಿಹಾರದ ದಾರಿಯನ್ನು ಹುಡುಕಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು

ಚಿಕ್ಕಬಳ್ಳಾಪುರ : ಮಳೆ ಬಂದರೆ ಕೆಸರು, ಬೇಸಿಗೆ ಬಂದರೆ ಧೂಳು. ದಶಕಗಳಿಂದ ರಸ್ತೆ ಇಲ್ಲದೆ ಸಂಕಷ್ಟ ಅನುಭವಿಸುತ್ತಿದ್ದ ದೇವಿಶೆಟ್ಟಿಹಳ್ಳಿ ಗ್ರಾಮದ ಜನರ ಬಹುವರ್ಷಗಳ ಕನಸಿಗೆ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಜೀವ ತುಂಬಿದ್ದಾರೆ. ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯಿಂದ 25 ಲಕ್ಷ ಅನುದಾನ ಮಂಜೂರು ಮಾಡಿ ಸಿಸಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡುವಂತೆ ಮಾಡಿರುವುದು ಗ್ರಾಮಸ್ಥರಲ್ಲಿ ಹೊಸ ಭರವಸೆ ಮೂಡಿಸಿದ್ದು, "ಜನರ ಸಮಸ್ಯೆಗೆ ಸ್ಪಂದಿಸುವ ನೈಜ ಜನಪ್ರತಿನಿಧಿ" ಎಂದು ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಹೋಬಳಿಯ ದೇವಿಶೆಟ್ಟಿಹಳ್ಳಿ ಗ್ರಾಮದಲ್ಲಿ ಸಿದ್ದಾರ್ಥ ಶಾಲೆ ಯಿಂದ ದಲಿತ ಕಾಲೋನಿ ಹಾಗೂ ಮುಸ್ಲಿಂ ಕಾಲೋನಿಗೆ ಸಂಪರ್ಕ ಕಲ್ಪಿಸುವ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಸೋಮವಾರ ಸ್ಥಳೀಯ ಕಾಂಗ್ರೆಸ್ ಮುಖಂಡರಿಂದ ಭೂಮಿಪೂಜೆ ನೆರವೇರಿಸ ಲಾಯಿತು.

ಇದನ್ನೂ ಓದಿ; MLA Pradeep Eshwar: ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ಪ್ರಕರಣ ದಾಖಲಿಸಿ; ಇಲ್ಲದಿದ್ದರೆ ಉಗ್ರ ಪ್ರತಿಭಟನೆ: ಮಂಜುನಾಥರೆಡ್ಡಿ

ಶಾಸಕರ ಪ್ರದೇಶ ಅಭಿವೃದ್ಧಿ ನಿಧಿಯ 25 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಈ ಕಾಮಗಾರಿ ಹಲವು ವರ್ಷಗಳಿಂದ ರಸ್ತೆ ಸಮಸ್ಯೆಯಿಂದ ಬಳಲುತ್ತಿದ್ದ ನಿವಾಸಿಗಳಿಗೆ ನಿರಾಳತೆಯ ನಿರೀಕ್ಷೆ ಮೂಡಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಯಲ್ಲವಳ್ಳಿ ರಮೇಶ್, ಗ್ರಾಮೀಣ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶಾಸಕ ಪ್ರದೀಪ್ ಈಶ್ವರ್ ಮೊದಲ ಆದ್ಯತೆ ನೀಡಿದ್ದು, ಜನರು ಸಮಸ್ಯೆ ಹೇಳಿಕೊಂಡ ತಕ್ಷಣ ಪರಿಹಾರದ ದಾರಿಯನ್ನು ಹುಡುಕಿ ಅಭಿವೃದ್ಧಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಯುವ ಮುಖಂಡ ಜನಾರ್ದನ್ ಮಾತನಾಡಿ, "ಸುಮಾರು ಐದು ದಶಕಗಳಿಂದ ಗ್ರಾಮಸ್ಥರು ರಸ್ತೆಗಾಗಿ ಮನವಿ ಸಲ್ಲಿಸುತ್ತಲೇ ಬಂದಿದ್ದರು. ಆದರೆ ಯಾರೂ ಸ್ಪಂದಿಸಿರಲಿಲ್ಲ. ಪ್ರದೀಪ್ ಈಶ್ವರ್ ಅವರು ಮಾತ್ರ ಜನರ ಕಷ್ಟವನ್ನು ಅರ್ಥಮಾಡಿಕೊಂಡು 25 ಲಕ್ಷ ಅನುದಾನ ಮಂಜೂರು ಮಾಡಿ ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದಾರೆ. ಇದು ಕೇವಲ ರಸ್ತೆ ನಿರ್ಮಾಣವಲ್ಲ, ಗ್ರಾಮಸ್ಥರ ಬದುಕಿಗೆ ಗೌರವ ನೀಡಿದ ಕೆಲಸ" ಎಂದು ಹೇಳಿದರು.

cbpm12devisettihalli

ಅಲ್ಪಸಂಖ್ಯಾತ ಮುಖಂಡ ಚಾಂದ್ ಪಾಷ ಮಾತನಾಡಿ, ಸಿದ್ದಾರ್ಥ ಶಾಲೆ, ಅಲ್ಪಸಂಖ್ಯಾತರ ಕಾಲೋನಿ ಹಾಗೂ ದಲಿತ ಕಾಲೋನಿಗೆ ಸಂಪರ್ಕ ಕಲ್ಪಿಸುವ ರಸ್ತೆ ಇಲ್ಲದೆ ಮಳೆಗಾಲದಲ್ಲಿ ಮಕ್ಕಳು, ಮಹಿಳೆಯರು ಹಾಗೂ ಹಿರಿಯರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದರು. ಈ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದ ತಕ್ಷಣವೇ ಅನುದಾನ ಮಂಜೂರು ಮಾಡಿ ಕಾಮಗಾರಿ ಆರಂಭಿಸಿರುವುದು ಜನಪರ ಕಾಳಜಿಯ ಪ್ರತೀಕವಾಗಿದೆ ಎಂದು ತಿಳಿಸಿದರು.

ಯುವ ಮುಖಂಡ ಹರೀಶ್ ಮಾತನಾಡಿ ಶಾಸಕ ಪ್ರದೀಪ್ ಈಶ್ವರ್ ಅವರು ಜಾತಿ, ಧರ್ಮ ಬೇಧ ವಿಲ್ಲದೆ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಸಮಾಜದ ಎಲ್ಲ ವರ್ಗದ ಜನರಿಗೆ ಸಮಾನ ಅವಕಾಶ ಕಲ್ಪಿಸುವ ದೃಷ್ಟಿಯಿಂದ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳು ತ್ತಿದ್ದಾರೆ. ಅಧಿಕಾರವನ್ನು ಜನಸೇವೆಯ ಸಾಧನವಾಗಿಸಿಕೊಂಡಿರುವ ಅವರು ನಿಜವಾದ ಅರ್ಥದಲ್ಲಿ "ಬಹುಜನ ಬಂಧು"ವಾಗಿದ್ದಾರೆ ಎಂದು ಬಣ್ಣಿಸಿದರು.

ಮುಖಂಡ ಗಂಗಾಧರ್ ಮಾತನಾಡಿ, ನಮ್ಮ ಗ್ರಾಮದ ರಸ್ತೆ ಸಮಸ್ಯೆ ಕುರಿತು ಶಾಸಕರನ್ನು ಭೇಟಿ ಮಾಡಿ ಮನವಿ ಮಾಡಿದ ತಕ್ಷಣವೇ "ಎಷ್ಟು ಅನುದಾನ ಬೇಕು?" ಎಂದು ಕೇಳಿ, ಯಾವುದೇ ವಿಳಂಬ ವಿಲ್ಲದೆ 25 ಲಕ್ಷ ಬಿಡುಗಡೆ ಮಾಡಿಸಿದ ಶಾಸಕ ಪ್ರದೀಪ್ ಈಶ್ವರ್ ಅವರ ಸ್ಪಂದನೆ ನಮ್ಮನ್ನು ಆಶ್ಚರ್ಯಗೊಳಿಸಿತು. ಜನರ ನೋವಿಗೆ ಸ್ಪಂದಿಸುವ ಇಂತಹ ಜನಪ್ರತಿನಿಧಿಗಳು ಸಮಾಜಕ್ಕೆ ಅಗತ್ಯ ಎಂದು ಹೇಳಿದರು.

ದೇವಿಶೆಟ್ಟಿಹಳ್ಳಿಯಲ್ಲಿ ಆರಂಭವಾಗಿರುವ ಈ ರಸ್ತೆ ಕಾಮಗಾರಿ ಕೇವಲ ಕಾಂಕ್ರೀಟ್ ರಸ್ತೆ ನಿರ್ಮಾಣ ವಲ್ಲ, ವರ್ಷಗಳ ನಿರೀಕ್ಷೆಗೆ ಉತ್ತರ, ಜನರ ಬದುಕಿಗೆ ನೆಮ್ಮದಿ ಹಾಗೂ ಅಭಿವೃದ್ಧಿಯತ್ತ ಸಾಗುತ್ತಿರುವ ಗ್ರಾಮದ ಹೊಸ ಹೆಜ್ಜೆಯಾಗಿದೆ ಎಂಬುದು ಇಡೀ ಗ್ರಾಮಸ್ಥರ ಮೆಚ್ಚುಗೆಯ ಮಾತಾಗಿತ್ತು. ಈ ವೇಳೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.