ಕ್ಷೇತ್ರದ ಆವಲಗುರ್ಕಿ ಪಂಚಾಯಿತಿಯಲ್ಲಿ ಉಚಿತ ಸೀರೆ ವಿತರಣೆಗೆ ಚಾಲನೆ ನೀಡಿ ಹೇಳಿಕೆ
ಚಿಕ್ಕಬಳ್ಳಾಪುರ : ರಾಜ್ಯ ರಾಜಕಾರಣದಲ್ಲಿ ಚಿಮ್ಮುಹಲಗೆಯಂತಿರುವ ಶಾಸಕ ಪ್ರದೀಪ್ ಈಶ್ವರ್ ಅಹಿಂದ ವರ್ಗದ ಆಶಾಕಿರಣವಾಗಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ರಕ್ಷಿತ್‌ರೆಡ್ಡಿ ತಿಳಿಸಿದರು. ತಾಲೂಕಿನ ಆವಲಗುರ್ಕಿ ಪಂಚಾಯಿತಿ ಕುರ್ಲಹಳ್ಳಿ, ವಡ್ರೇಪಾಳ್ಯ, ಕವರ್ನಹಳ್ಳಿ ಲಿಂಗಶೆಟ್ಟಿಪುರ ಗ್ರಾಮಗಳಲ್ಲಿನ ಅಕ್ಕತಂಗಿಯರಿಗೆ ಶಾಸಕ ಪ್ರದೀಪ್ ಈಶ್ವರ್ ಅವರು ಕಳೆದ ೩ ವರ್ಷಗಳಿಂದ ವರಮಹಾಲಕ್ಷ್ಮೀ ಹಬ್ಬಕ್ಕೆ ವಿತರಿಸು ತ್ತಿದ್ದ ಸೀರೆ ಕುಂಕುಮ ಬಳೆಗಳನ್ನು ವಿತರಿಸಿ ಅವರು ಮಾತನಾಡಿದರು.
ಕ್ಷೇತ್ರದ ಜನತೆಗೆ ಹತ್ತು ಹಲವು ಉಚಿತ ಸೇವೆ ಒದಗಿಸುತ್ತಿರುವ ಶಾಸಕರು ಮಹಿಳೆಯರಿಗೆ ಬಾಗೀನ ನೀಡುವ ಸತ್ಸಂಪ್ರದಾಯವನ್ನು ಕಳೆದ ೩ ವರ್ಷಗಳಿಂದ ಪಾಲಿಸಿಕೊಂಡು ಬಂದಿದ್ದಾರೆ.ತಡವಾದರೂ ಕೂಡ ಕೊಟ್ಟ ಮಾತನ್ನು ಉಳಿಸಿಕೊಂಡು ಸೀರೆ ವಿತರಣೆ ಮಾಡುವ ಮೂಲಕ ನುಡಿದಂತೆ ನಡೆದು ಯುವಕ ಯುವತಿಯರ ಕಣ್ಮಣಿಯಾಗಿರುವ ಪ್ರದೀಪ್ ಈಶ್ವರ್ ಅವರು ನಿಜಾರ್ಥದಲ್ಲಿ ಅಭಿವೃದ್ಧಿಯ ಹರಿಕಾರರಾಗಿದ್ದಾರೆ ಎಂದರು.
ಇದನ್ನೂ ಓದಿ: Chikkamagaluru News: ಜಮೀನು ವಿವಾದ; ಕಾಂತಾರ ಸ್ಟೈಲ್‌ನಲ್ಲಿ ಪಂಜು ಹಿಡಿದು ಮಹಿಳೆ ಮೇಲೆ ಹಲ್ಲೆ ಮಾಡಿದ ವ್ಯಕ್ತಿ!
ಅಹಿಂದ ವರ್ಗದ ಪ್ರತಿಭಾವಂತ ಶಾಸಕರಾಗಿರುವ ಪ್ರದೀಪ್ ಈಶ್ವರ್ ಅವರ ರಾಜಕೀಯ ಏಳಿಗೆ ಸಹಿಸದೆ ಕೆಲವರು ಏನೇನೋ ಮಾತನಾಡುತ್ತಿದ್ದಾರೆ ಇದಕ್ಕೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಬಡವರ ಮಕ್ಕಳು ಬೆಳೆಯಬಾರದು ಎಂಬ ಮನೋಭಾವ ಹೊಂದಿರುವ ಕೆಲ ಮಂದಿಯಿAದ ಅವರ ಹೆಸರು ಕೆಡಿಸುವ ಕೆಲಸವಾಗುತ್ತಿದೆ.ಯಾರು ಏನೇ ಹೇಳಿದರು, ಟೀಕಿಸಿದರೂ ಅಭಿವೃದ್ಧಿಗೆ ಒತ್ತು ನೀಡಿರುವ ನಮ್ಮ ನಾಯಕರು ರೂಪಿಸಿರುವ ನಮ್ಮೂರಿಗೆ ನಮ್ಮ ಶಾಸಕ ಕಾರ್ಯಕ್ರಮ ಶಾಸಕರು ಮತ್ತು ಕ್ಷೇತ್ರದ ಜನರ ನಡುವಿನ ಸೇತುವೆಯಾಗಿದೆ ಎಂದು ಹೇಳಿದರು.
ಸೇವೆಗೆ ಹತ್ತು ಮುಖ
ನಮ್ಮ ನಾಯಕ ಪ್ರದೀಪ್ ಈಶ್ವರ್ ಶಾಸಕರಾದ ಮೊದಲ ದಿನದಿಂದಲೇ ಕ್ಷೇತ್ರದಲ್ಲಿ ಜನರ ಆರೋಗ್ಯ ಸುಧಾರಣೆ ಕಾಪಾಡುವ ನಿಟ್ಟಿನಲ್ಲಿ ೧೦ ಉಚಿತ ಆಂಬುಲೆನ್ಸ್ ಸೇವೆ ನೀಡಿರು ವುದು ರಾಜ್ಯದಲ್ಲಿಯೇ ಮಾದರಿಯಾಗಿದೆ. ಬಡವರ ಮಕ್ಕಳು ವೈದ್ಯಕಿಯ ಶಿಕ್ಷಣ ನೀಡಬೇಕು ಎಂಬ ಮಹದೊದ್ದೇಶದಿಂದ ಉಚಿತ ಸಿಇಟಿ ತರಬೇತಿ, ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಸೂಪರ್ ಸಿಕ್ಸ್ಟಿ ಪರೀಕ್ಷಾ ಬೋಧನೆ ಬಡವರ ಬಗ್ಗೆ ಅವರಿಗಿರುವ ಕಾಳಜಿ ಯ ಪ್ರತೀಕವಾಗಿವೆ.
ಕ್ಷೇತ್ರದ ಉದ್ದಗಲಕ್ಕೂ ಸಪ್ತಗಿರಿ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸೆ,ವರಮಹಾಲಕ್ಷ್ಮೀ ಹಬ್ಬಕ್ಕೆ ಸುಮಂಗಲಿಯರಿಗೆ ಬಾಗೀನ, ಶಿವರಾತ್ರಿ ಹಬ್ಬಕ್ಕೆ ಸರಕಾರಿ ಶಾಲಾ ಮಕ್ಕಳಿಗೆ ಹೊಸಬಟ್ಟೆ, ಕ್ಷೇತ್ರದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಮೆಡಿಕಲ್, ಇಂಜನಿಯರಿಂಗ್ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಮನೆಬಾಗಿಲಿಗೆ ತೆರಳಿ ಉಚಿತವಾಗಿ ವಿದ್ಯಾರ್ಥಿ ವೇತನದಂತಹ ಕಾರ್ಯಕ್ರಮಗಳು ನಿಜಕ್ಕೂ ಜನಪರ ಕಾರ್ಯಕ್ರಮಗಳ ಪಟ್ಟಿಗೆ ಸೇರಿವೆ.ಇಂತಹ ದಿಟ್ಟಧೀರ ಮನೋಭಾವ ಹೊಂದಿ ರುವ ನಮ್ಮ ಶಾಸಕರು ಬಡವರ ಕಣ್ಮಣಿಯಾಗಿದ್ದಾರೆ. ಇದನ್ನು ಸಹಿಸದೆ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಹೀಗಳೆಯುವುದು ವಿರೋಧಿಗಳ ಬೌದ್ಧಿಕ ದಾರಿದ್ರ್ಯವನ್ನು ತೋರಿಸುತ್ತಿದೆ ಎಂದರು.
ಮಂತ್ರಿಯಾಗುವುದು ಖಚಿತ
ಈ ಬಾರಿಯ ಸಂಪುಟ ಪುನಾರಚನೆ ಸಂದರ್ಭದಲ್ಲಿ ನಮ್ಮ ಶಾಸಕ ಪ್ರದೀಪ್ ಈಶ್ವರ್ ಅವರಿಗೆ ಮಂತ್ರಿಸ್ಥಾನ ದೊರೆಯುವುದು ಸತ್ಯವಾಗಿದೆ.ಆಗ ಟೀಕಾಕಾರ ಬಾಯಿಗೆ ಬೀಗ ಬೀಳಲಿದೆ.ಅಹಿಂದ ವರ್ಗದ ಕೋಟಾದಲ್ಲಿ ಇವರಿಗೆ ಸಚಿವ ಸ್ಥಾನ ನೀಡುವುದು ಬಹುತೇಕ ಖಚಿತವಾಗಿದೆ ಎಂದ ಅವರು ವರಮಹಾಲಕ್ಷ್ಮೀ ಹಬ್ಬಕ್ಕೆ ಕೊಡುತ್ತಿದ್ದ ಬಾಗೀನವನ್ನು ತಡವಾಗಿ ನೀಡುತ್ತಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.ಕೊಟ್ಟ ಮಾತನ್ನು ಉಳಿಸಿಕೊಳ್ಳು ವಲ್ಲಿ ಮುಂಚೂಣಿಯಲ್ಲಿರುವ ಶಾಸಕ ಪ್ರದೀಪ್ ಈಶ್ವರ್ ಬಡವರ ಪಾಲಿನ ಆಶಾಕಿರಣ ವಾಗಿದ್ದಾರೆ.ಇಂತಹ ನಾಯಕರ ಅವಧಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ಸಂತೋಷವಾಗುತ್ತಿದೆ ಎಂದರು.
ಈ ವೇಳೆ ಮಂಡಿಕಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗಭೂಷಣ್, ನಾಗೇಶ್‌ರೆಡ್ಡಿ ಮತ್ತಿತರರು ಇದ್ದರು.