ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಿಂತಾಮಣಿ ತಹಸೀಲ್ದಾರರಿಗೆ ಶಾಸಕ ಪ್ರದೀಪ್ ಈಶ್ವರ್ ಖಡಕ್ ಪತ್ರ: ದಲಿತರಿಗೆ ದೇವಾಲಯ ಪ್ರವೇಶ ಮತ್ತು ಅಂಬೇಡ್ಕರ್ ಪ್ರತಿಮೆ ಮರುನಿರ್ಮಾಣಕ್ಕೆ ಆಗ್ರಹ

ದಲಿತರ ಮೇಲಿನ ದೌರ್ಜನ್ಯ,ದೇವಾಲಯ ಪ್ರವೇಶ ನಿರಾಕರಣೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದನ್ನು ಖಂಡಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್ ಅವರು ಚಿಂತಾಮಣಿ ತಾಲ್ಲೂಕು ದಂಡಾಧಿಕಾರಿಗಳಿಗೆ ತಹಸೀಲ್ದಾರ್ ಸುದೀರ್ಘ ಪತ್ರ ಬರೆದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಚಿಂತಾಮಣಿ: ದಲಿತರ ಮೇಲಿನ ದೌರ್ಜನ್ಯ,ದೇವಾಲಯ ಪ್ರವೇಶ ನಿರಾಕರಣೆ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ರಾತ್ರೋರಾತ್ರಿ ತೆರವುಗೊಳಿಸಿರುವುದನ್ನು ಖಂಡಿಸಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರು ಚಿಂತಾಮಣಿ ತಾಲ್ಲೂಕು ದಂಡಾಧಿಕಾರಿಗಳಿಗೆ ತಹಸೀಲ್ದಾರ್ ಸುದೀರ್ಘ ಪತ್ರ ಬರೆದು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ನಾನೊಬ್ಬ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಮಭಕ್ತ. ಅವರ ಆಶಯಗಳನ್ನು ನಂಬಿ ಕೊಂಡು ರಾಜಕಾರಣಕ್ಕೆ ಬಂದಿದ್ದು,ವಿಧಾನಸೌಧದಲ್ಲಿ ಅಂಬೇಡ್ಕರ್ ಅವರ ಹೆಸರಿನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದೇನೆ. 

ದಲಿತರಿಗೆ ಎಲ್ಲೇ ಸಮಸ್ಯೆಯಾದರೂ ರಾಜಕಾರಣವನ್ನು ಲೆಕ್ಕಿಸದೆ ಅವರ ಪರವಾಗಿ ನಿಲ್ಲುತ್ತೇನೆ" ಎಂದು ಪ್ರದೀಪ್ ಈಶ್ವರ್ ತಿಳಿಸಿದ್ದಾರೆ.

ಇದನ್ನೂ ಓದಿ: Chikkaballapur News: ಕಾಂಗ್ರೆಸ್‌ನಲ್ಲಿ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಬೇಕು: ಮಂಜುನಾಥ್

ಚಿಂತಾಮಣಿಯಲ್ಲಿ ರಾತ್ರೋರಾತ್ರಿ ಯಾರ ಗಮನಕ್ಕೂ ಬಾರದೆ ತಾಲ್ಲೂಕು ಆಡಳಿತವು ಅಂಬೇಡ್ಕರ್ ಅವರ ಪ್ರತಿಮೆಯನ್ನು ತೆರವುಗೊಳಿಸಿರುವುದು ತಮಗೆ ತೀವ್ರ ನೋವುಂಟುಮಾಡಿದೆ. ಈ ಕ್ರಮದ ವಿರುದ್ಧ ದಲಿತರು ಧ್ವನಿ ಎತ್ತಿದಾಗ ಅವರ ಮೇಲೆಯೇ ದೌರ್ಜನ್ಯ ಹಾಗೂ ಹಲ್ಲೆ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಶಾಸಕರು ಆರೋಪಿಸಿದ್ದಾರೆ.

ಚಿಂತಾಮಣಿಯ ಊಲವಾಡಿಯ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ಇಂದಿಗೂ ದಲಿತ ರಿಗೆ ಪ್ರವೇಶ ನೀಡದೆ ಶೋಷಣೆ ಮಾಡಲಾಗುತ್ತಿದೆ ಎಂಬ ದೂರುಗಳು ವ್ಯಾಪಕವಾಗಿ ಕೇಳಿ ಬರುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಚಿಂತಾಮಣಿಯಲ್ಲಿ ತೆರವುಗೊಳಿಸಲಾದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಯನ್ನು ತಕ್ಷಣವೇ ಮರುನಿರ್ಮಾಣ ಮಾಡಬೇಕು ಹಾಗೂ ಊಲವಾಡಿಯ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು.

ಒಂದು ವೇಳೆ ತಾಲ್ಲೂಕು ಆಡಳಿತವು ಇದರಲ್ಲಿ ವಿಫಲವಾದರೆ,ತಾವೇ ಸ್ವತಃ ದಲಿತರೊಂದಿಗೆ ತೆರಳಿ ದೇವಾಲಯ ಪ್ರವೇಶ ಮಾಡುವುದಾಗಿ ಶಾಸಕ ಪ್ರದೀಪ್ ಈಶ್ವರ್ ಅವರು ತಹಸೀಲ್ದಾರರಿಗೆ ಎಚ್ಚರಿಕೆ ನೀಡಿದ್ದಾರೆ.