ಶಿಡ್ಲಘಟ್ಟ: ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಶಾಲೆಯಲ್ಲಿ ಸಿಗುವ ಪಠ್ಯ ಶಿಕ್ಷಣದ ಜತೆಗೆ ಮನೆಯಲ್ಲಿ ಪಾಲಕರು ನೀಡುವ ಸಂಸ್ಕಾರದ ಶಿಕ್ಷಣವೂ ಬಹಳ ಮುಖ್ಯ ಎಂದು ಸಿಟಿಜನ್ ಶಾಲೆ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶಿಡ್ಲಘಟ್ಟ ಖಾಸಗೀ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರಾರೆಡ್ಡಿ ತಿಳಿಸಿದರು.
ತಾಲ್ಲೂಕಿನ ಹಂಡಿಗನಾಳ ಗ್ರಾಮದಲ್ಲಿರುವ ಬಾಲಾಜಿ ಕನ್ವೆನ್ಷನ್ ಹಾಲ್ ನಲ್ಲಿ ಸಿಟಿಜನ್ ಶಾಲೆ ಶಿಡ್ಲಘಟ್ಟ ಹಮ್ಮಿಕೊಂಡಿದ್ದ ಶನಿವಾರ ಏರ್ಪಡಿಸಿದ್ದ ದಶಮನೋತ್ಸವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮನೆಯೇ ಮೊದಲ ಪಾಠಶಾಲೆ ಮತ್ತು ಪಾಲಕರು ಮೊದಲ ಶಿಕ್ಷಕರು. ಸಂಸ್ಕಾರಯುತ ಶಿಕ್ಷಣವು ಮಗುವಿನ ನಡವಳಿಕೆ, ಮೌಲ್ಯಗಳು ಮತ್ತು ಸಾಮಾಜಿಕ ಕೌಶಲಗಳನ್ನು ರೂಪಿಸುತ್ತದೆ. ಶಾಲೆಯಲ್ಲಿ ಪಠ್ಯ ಶಿಕ್ಷಣವು ಜ್ಞಾನವನ್ನು ನೀಡಿದರೆ, ಮನೆಯಲ್ಲಿ ಸಂಸ್ಕಾರದ ಶಿಕ್ಷಣವು ಮಗುವಿನ ವ್ಯಕ್ತಿತ್ವವನ್ನು ರೂಪಿಸುತ್ತದೆ. ಶಾಲೆಯಲ್ಲಿ ಕಲಿತ ಜ್ಞಾನವನ್ನು ಸಮಾಜದಲ್ಲಿ ಅನ್ವಯಿಸಲು ಮತ್ತು ಉತ್ತಮ ನಾಗರಿಕರಾಗಲು ಸಂಸ್ಕಾರದ ಶಿಕ್ಷಣವು ಸಹಾಯ ಮಾಡುತ್ತದೆ ಎಂದರು.
ಇದನ್ನೂ ಓದಿ: Shidlaghatta News: ದ್ವೇಷ ಭಾಷಣ ತಡೆ ಮಸೂದೆ: ಅಂಕಿತ ಹಾಕದಂತೆ ರಾಜ್ಯಪಾಲರಿಗೆ ಬಿಜೆಪಿ ಮನವಿ !
ಮಕ್ಕಳಿಗೆ ಪಠ್ಯಕ್ರಮ ಎಷ್ಟು ಮುಖ್ಯವೋ ಪಠ್ಯೇತರ ಚಟುವಟಿಕೆ ಅಷ್ಟೇ ಮುಖ್ಯ. ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಯಲ್ಲಿ ಪಾಲ್ಗೊಳ್ಳ ಬೇಕು.ಉತ್ತಮ ಶಿಕ್ಷಣದೊಂದಿಗೆ ಉತ್ತಮ ದೇಹದಾರ್ಡ್ಯ ಹಾಗೂ ಆರೋಗ್ಯ ಹೊಂದುವಂತೆ ತಿಳಿಸಿದರು.
ಪ್ರಾಂಶುಪಾಲ ಶಿವಣ್ಣ ಮಾತನಾಡಿ, ಸಿಟಿಜನ್ ಶಾಲೆಯಲ್ಲಿ ಸತತ 10 ವರ್ಷಗಳಿಂದ ಶೇ100ರಷ್ಟು ಫಲಿತಾಂಶ ಪಡೆಯುತ್ತಿದೆ.ನಮ್ಮಲ್ಲಿ ಅಭ್ಯಾಸ ಮಾಡಿದ ಹಲವು ವಿದ್ಯಾರ್ಥಿ ಗಳು ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ’ ಎಂದರು.
ವೈದ್ಯರಾದಡಾ ಸತ್ಯನಾರಾಯಣರಾವ್ ಮಾತನಾಡಿ, ವಿದ್ಯಾರ್ಥಿಗಳಾದವರು ತಂದೆ-ತಾಯಿಯರನ್ನು ಮತ್ತು ಕಲಿಸಿದ ಗುರುಗಳನ್ನು ಮರೆಯಬಾರದು. ಅವರಲ್ಲಿ ದೇವರ ಭಕ್ತಿ ಕಾಣಬೇಕು, ತಂದೆ, ತಾಯಿ, ಗುರು ಹೇಳಿಕೊಟ್ಟ ಮಾರ್ಗದರ್ಶನದಲ್ಲಿ ನಡೆದರೆ ನಾವುಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಶ್ರೀಮತಿ ಮಂಗಳಮ್ಮ,ರಂಗಾರೆಡ್ಡಿ, ಅನಿಲ್ ಚೌರಿ, ಭವ್ಯ, ಡಾ ಅಜಯ್ ಶೇಖರ್, ಶ್ವೇತಾ, ಮದನಗೋಪಾಲ್, ಅಕ್ಷರ ಪಿ ಯು ಕಾಲೇಜು ಪ್ರಕಾಶ್, ಮುಖ್ಯ ಶಿಕ್ಷಕ ಎನ್ ಸತೀಶ್,ಕ್ರೆಸೆಂಟ್ ಶಾಲೆಯ ತಮಿಮ್ ಪಾಶಾ, ಡಾಲ್ಫಿನ್ ಶಾಲೆಯ ಅಶೋಕ್, ಸೇರಿದಂತೆ ಶಿಕ್ಷಕರ ಸಿಬ್ಬಂದಿ ಪೋಷಕರು ಮಕ್ಕಳು ಹಾಜರಿದ್ದರು.
"ನಂತರ ನಡೆದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಮನಸೂರೆಗೊಳಿಸಿತು."