ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ಮುರುಗಮಲ್ಲ ಉರುಸ್ ಮಹೋತ್ಸವ: ದರ್ಗಾದಲ್ಲಿ ಜೆ.ಕೆ.ಕೃಷ್ಣಾರೆಡ್ಡಿ ವಿಶೇಷ ಪೂಜೆ

ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮುರುಗಮಲ್ಲದ ಹಜರತ್ ಅಮ್ಮ ಜಾನ್, ಬಾಬಾ ಜಾನ್ ದರ್ಗಾದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಉರುಸ್ ಮಹೋತ್ಸವದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ಹಾಗೂ ಮಾಜಿ ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ ಅವರು ಭಾಗವಹಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು. ದರ್ಗಾಕ್ಕೆ ಆಗಮಿಸಿದ ಜೆ.ಕೆ.ಕೃಷ್ಣಾರೆಡ್ಡಿ ಅವರಿಗೆ ದರ್ಗಾದ ಪ್ರಮುಖರು ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಸಾಂಪ್ರದಾಯಿಕ ಶಾಲ ಹಾಕಿ, ಹೂಮಾಲೆ ತೊಡಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ದರು.

ಮುರುಗಮಲ್ಲ ಉರುಸ್ ಮಹೋತ್ಸವ:ದರ್ಗಾಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಜೆ.ಕೆ.ಕೃಷ್ಣಾರೆಡ್ಡಿ

ಚಿಂತಾಮಣಿ: ತಾಲ್ಲೂಕಿನ ಪ್ರಸಿದ್ಧ ಯಾತ್ರಾಸ್ಥಳವಾದ ಮುರುಗಮಲ್ಲದ ಹಜರತ್ ಅಮ್ಮ ಜಾನ್, ಬಾಬಾ ಜಾನ್ ದರ್ಗಾದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಉರುಸ್ ಮಹೋತ್ಸವದಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರು ಹಾಗೂ ಮಾಜಿ ಉಪಸಭಾಪತಿ ಜೆ.ಕೆ.ಕೃಷ್ಣಾರೆಡ್ಡಿ ಅವರು ಭಾಗವಹಿಸಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ದರ್ಗಾಕ್ಕೆ ಆಗಮಿಸಿದ ಜೆ.ಕೆ.ಕೃಷ್ಣಾರೆಡ್ಡಿ ಅವರಿಗೆ ದರ್ಗಾದ ಪ್ರಮುಖರು ಹಾಗೂ ಸ್ಥಳೀಯ ಜೆಡಿಎಸ್ ಮುಖಂಡರು ಸಾಂಪ್ರದಾಯಿಕ ಶಾಲ ಹಾಕಿ, ಹೂಮಾಲೆ ತೊಡಿಸಿ ಗೌರವಪೂರ್ವಕವಾಗಿ ಸನ್ಮಾನಿಸಿ ದರು.

ಇದನ್ನೂ ಓದಿ: Chinthamani News: ಮುರುಗಮಲ್ಲ ದರ್ಗಾದಲ್ಲಿ ಗಂಧೋತ್ಸವ ಸಡಗರ: ಭಾವೈಕ್ಯತೆಗೆ ಸಾಕ್ಷಿಯಾದ ಉರುಸ್

ಬಳಿಕ ದರ್ಗಾದ ಪವಿತ್ರ ಮಜಾರ್‌ಗೆ ತೆರಳಿದ ಕೃಷ್ಣಾರೆಡ್ಡಿ ಅವರು, ಧಾರ್ಮಿಕ ವಿಧಿ-ವಿಧಾನಗಳಂತೆ ಚಾದರ್ ಮತ್ತು ಹೂವಿನ ಹಾರವನ್ನು ಅರ್ಪಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದರ್ಗಾದ ಮೌಲ್ವಿಗಳು ದೇಶದಲ್ಲಿ ಶಾಂತ್, ಸೌಹಾರ್ದತೆ ಮತ್ತು ಸದ್ಭಾವನೆ ನೆಲಸಲಿ ಎಂದು ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜೆ.ಕೆ. ಕೃಷ್ಣಾರೆಡ್ಡಿ ಅವರು, "ಮುರುಗಮಲ್ಲ ದರ್ಗಾವು ಹಿಂದೂ-ಮುಸ್ಲಿಂ ಭಾವೈಕ್ಯತೆಯ ಪ್ರತೀಕವಾಗಿದೆ. ಇಲ್ಲಿಗೆ ಆಗಮಿಸುವ ಎಲ್ಲಾ ಧರ್ಮದ ಭಕ್ತರ ಅಭೀಷ್ಟಗಳು ಈಡೇರಲಿ ಹಾಗೂ ಕ್ಷೇತ್ರದಲ್ಲಿ ಶಾಂತಿ, ಸಮೃದ್ಧಿ ಮತ್ತು ಸಹೋದರತೆ ನೆಲೆಸಲಿ,"ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಮುಖ ಜನಪ್ರತಿನಿಧಿಗಳು, ಗ್ರಾಮಾಂತರ ಹಾಗೂ ಅದರ ಭಾಗದಜೆಡಿಎಸ್ ಮುಖಂಡರು ಹಾಗೂ ಅಪಾರ ಸಂಖ್ಯೆಯ ಭಕ್ತಾದಿಗಳು ಉಪಸ್ಥಿತರಿದ್ದರು