ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

MP Dr.K.Sudhakar: ಜ.15ಕ್ಕೆ ಫಿಟ್ ಇಂಡಿಯಾ ಭಾಗವಾಗಿ ನಂದಿಗಿರಿ ಪ್ರದಕ್ಷಿಣೆ , 3 ಸಾವಿರ ಮಂದಿ ಭಾಗಿ : ಸಂಸದ ಡಾ.ಕೆ. ಸುಧಾಕರ್ ಹೇಳಿಕೆ

ಪ್ರಧಾನಿಗಳ ಆಶಯದಂತೆ ಸದೃಢ ಭಾರತವನ್ನು ಕಟ್ಟುವ ಉದ್ದೇಶ ನನಗಿದ್ದು ವಾಕಾಥಾನ್, ಮ್ಯಾರಥಾನ್, ನಡಿಗೆ, ಟ್ರೆಕ್ಕಿಂಗ್, ಕ್ರೀಡಾ ಮಹೋತ್ಸವ ಇತ್ಯಾದಿಗಳನ್ನು ಹಳ್ಳಿಯಿಂದ ಜಿಲ್ಲಾ ಹಂತದವರೆಗೆ ಆಯೋಜಿಸಿ ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕ್ಷೇತ್ರದಿಂದಲೇ ಮುನ್ನುಡಿ ಬರೆಯುವ ಉದ್ದೇಶವಿದೆ.ಮಹಿಳೆಯರಿಗೆ ಕೂಡ ಕ್ರೀಡೆಗಳನ್ನು ಆಯೋಜಿಸುವ ಕೆಲಸ ಮಾಡಲಾಗುವುದು

ಚಿಕ್ಕಬಳ್ಳಾಪುರ: ಜ.15ರಂದು ಸಂಕ್ರಾಂತಿ(Sankranti) ಹಾಗೂ ಫಿಟ್ ಇಂಡಿಯಾ(Fit India) ಭಾಗ ವಾಗಿ ಇತಿಹಾಸ ಪ್ರಸಿದ್ಧ ನಂದಿಬೆಟ್ಟದ ಸುತ್ತಲೂ ಗಿರಿಪ್ರದಕ್ಷಿಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳ ಲಾಗಿದ್ದು ಇದರಲ್ಲಿ ಸುಮಾರು 3 ಸಾವಿರ ಮಂದಿ ಭಾಗಿಯಾಗುವ ವಿಶ್ವಾಸವಿದೆ ಎಂದು ಸಂಸದ ಡಾ.ಕೆ.ಸುಧಾಕರ್ (MP Dr. K. Sudhakar)ತಿಳಿಸಿದರು.

ನಗರದ ಜಿಲ್ಲಾ ಸಂಸದರ ಗೃಹಕಚೇರಿಯಲ್ಲಿ ನಡೆದ ಸಭೆಯನ್ನು ಉದ್ದೇಶಿಸಿ ಶನಿವಾರ ಮಾತನಾಡಿದರು.

ಕ್ಷೇತ್ರದ 254 ಪ್ರತಿಬೂತ್‌ನಿಂದ ಕಾರ್ಯಕರ್ತರು ಗಿರಿ ಪ್ರದಕ್ಷಿಣೆಯಲ್ಲಿ ಭಾಗಿಯಾಗಿ ಹೊಸ ವರ್ಷದ ನಡಿಗೆಯಲ್ಲಿ ಭಾಗಿಯಾಗಲು ಬೆಳಿಗ್ಗೆ 6 ಗಂಟೆಗೇ ಬರಬೇಕು ಎಂದು ಮನವಿ ಮಾಡಿದರು.

2026ರ ದಿನದರ್ಶಿಕೆಯನ್ನು ಕಳೆದ ವಾರವೇ ಬಿಡುಗಡೆ ಮಾಡಬೇಕಿತ್ತು. ದೆಹಲಿಯಲ್ಲಿ ಇದ್ದಿದ್ದರಿಂದ ಬಿಡುಗಡೆ ಆಗಿರಲಿಲ್ಲ. ಹೀಗಾಗಿ ಈದಿನ ಬಿಡುಗಡೆ ಮಾಡುತ್ತಿದ್ದೇನೆ ಎಂದರು.  

ಇದನ್ನೂ ಓದಿ: MP Dr K Sudhakar: ಇವಿಎಂ ಮೇಲೆ ನಂಬಿಕೆ ಇಲ್ಲಾಂದ್ರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಲಿ: ಸಂಸದ ಡಾ ಕೆ ಸುಧಾಕರ್ ಸವಾಲು

ಪ್ರಧಾನಿಗಳ ಆಶಯದಂತೆ ಸದೃಢ ಭಾರತವನ್ನು ಕಟ್ಟುವ ಉದ್ದೇಶ ನನಗಿದ್ದು ವಾಕಾಥಾನ್, ಮ್ಯಾರಥಾನ್, ನಡಿಗೆ, ಟ್ರೆಕ್ಕಿಂಗ್, ಕ್ರೀಡಾ ಮಹೋತ್ಸವ ಇತ್ಯಾದಿಗಳನ್ನು ಹಳ್ಳಿಯಿಂದ ಜಿಲ್ಲಾ ಹಂತದವರೆಗೆ ಆಯೋಜಿಸಿ ಆ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕ್ಷೇತ್ರದಿಂದಲೇ ಮುನ್ನುಡಿ ಬರೆಯುವ ಉದ್ದೇಶವಿದೆ.ಮಹಿಳೆಯರಿಗೆ ಕೂಡ ಕ್ರೀಡೆಗಳನ್ನು ಆಯೋಜಿಸುವ ಕೆಲಸ ಮಾಡಲಾಗುವುದು ಎಂದರು.

ವಿಬಿ ಜಿರಾಮ್‌ಜಿ ಕಾಯ್ದೆ(VB Jiramji Act)ಯ ಮೂಲಕ ಗ್ರಾಮೀಣ ಪ್ರದೇಶದ ಜನಜೀವನ ಉತ್ತಮ ಪಡಿಸಲು ನಮ್ಮ ಸರಕಾರ ನರೇಗಾ ಯೋಜನೆಗೆ ತಿದ್ದುಪಡಿ ತಂದು ಹೆಸರು ಬದಲಾವಣೆ ಮಾಡಲಾ ಗಿತ್ತು. ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ಈಗ ವಿಬಿಜಿರಾಮ್‌ಜಿ ಎಂದು ಹೆಸರಿಸಲಾಗಿದೆ. ಆದರೆ ಕಾಂಗ್ರೆಸ್ ಮಂದಿಗೆ ರಾಮನ ಹೆಸರು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹೀಗಾಗಿಯೇ ವಿರೋಧ ಮಾಡುತ್ತಿದ್ದಾರೆ ಎಂದರು.

ರಾಮ್ ಶಬ್ದ ಕೇಳಿದರೆ ಸಾಕು ಕಾಂಗೆಸ್ ಮುಖಂಡರು ಕುಳಿತಕಡೆ ಕೂರುವುದಿಲ್ಲ. ಶ್ರೀರಾಮ ಮಂದಿರ ಕಟ್ಟಿ ವಿಶ್ವಕ್ಕೆ ವಿಶ್ವವೇ ತಲೆತೋಗಿ ದರ್ಶನಕ್ಕೆ ಬಂದರೂ ಕಾಂಗ್ರೆಸ್‌ನ ಒಂದು ನರಪಿಳ್ಳೆ ಯೂ ಹೋಗಲಿಲ್ಲ. ಉದ್ಘಾಟನೆ ನಂತರ ಹೋಗಿ ದರ್ಶನ ಮಾಡಿ ಬರುತ್ತಿದ್ದಾರೆ ಎಂದು ವ್ಯಂಗ್ಯ ವಾಡಿದರು.

ವಿಬಿಜಿರಾಮ್‌ಜಿ ಯೋಜನೆ ಗ್ರಾಮೀಣ ಭಾರತವನ್ನು ಸಶಕ್ತವಾಗಿ ಕಟ್ಟಲು ಸಶಕ್ತವಾಗಿದ್ದರೂ ಕಾಂಗ್ರೆಸ್ ಇದರ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ. ನಮ್ಮ ಪಕ್ಷದ ಕಾರ್ಯಕರ್ತರು ಮುಖಂಡರು ಹಳ್ಳಿಹಳ್ಳಿಗೆ ತೆರಳಿ ಇದರ ಅನುಷ್ಠಾನದ ಬಗ್ಗೆ ಜನತೆಗೆ ತಿಳಿಸಬೇಕು ಎಂದು ಮನವಿ ಮಾಡಿದ ಅವರು ಈ ಬಗ್ಗೆ ಸುದ್ದಿಗೋಷ್ಟಿ ಕರೆದು ಯೋಜನೆಸಾಧಕ ಬಾಧಕಗಳ ಬಗ್ಗೆ ತಿಳಿಸಲಾಗು ವುದು ಎಂದರು.

ಈ ವೇಳೆ ಕೆ.ವಿ.ನವೀನ್‌ ಕಿರಣ್, ಮರಳುಕುಂಟೆ ಕೃಷ್ಣಮೂರ್ತಿ, ಕೇಶವರೆರಡ್ಡಿ, ಚೆನ್ನಕೃಷ್ಣಾರೆಡ್ಡಿ, ರಾಮಸ್ವಾಮಿ, ಕೆ.ವಿ.ನಾಗರಾಜ್,ಆವುಲಕೊಂಡರಾಯಪ್ಪ, ಲೀಲಾವತಿ ಶ್ರೀನಿವಾಸ್, ಅಶೋಕ್, ಎಸ್.ಆರ್.ದೇವರಾಜ್ ಮತ್ತಿತರರು ಇದ್ದರು.