ಚಿಕ್ಕಬಳ್ಳಾಪುರ : 2026 ನೇ ಸಾಲಿನ NEET ಪರೀಕ್ಷೆಯು ಭಾನುವಾರ ಜಿಲ್ಲೆಯ 10 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು ಈ ಸಂಬಂಧ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದು ಕೊಂಡಿದೆ.
ಜಿಲ್ಲೆಯಲ್ಲಿ ನಡೆಯುವ ನೀಟ್ ಪರೀಕ್ಷೆಗೆ ಒಟ್ಟು 3575 ವಿದ್ಯಾರ್ಥಿಗಳು ನೋಂದಾಯಿಸಿ ಕೊಂಡಿರುತ್ತಾರೆ. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಿಇಟಿ ಯಲ್ಲಿ ನಡೆದ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗಿದೆ.
ಭಾನುವಾರ ನಡೆಯಲಿರುವ ನೀಟ್ ಪರೀಕ್ಷೆಯು ಮಧ್ಯಾಹ್ನ 2ಗಂಟೆಗೆ ಆರಂಭವಾಗಲಿದೆ. ಆದರೆ ಎಲ್ಲಾ ವಿದ್ಯಾರ್ಥಿಗಳು ಬೆಳಿಗ್ಗೆ 11 ಗಂಟೆಗೆ ಆಯಾ ಪರೀಕ್ಷಾ ಕೇಂದ್ರಗಳಿಗೆ ಹಾಜ ರಾಗಿ ತಪಾಸಣೆಗೆ ಒಳಪಟ್ಟು ತಮ್ಮ ಕೊಠಡಿಗಳಿಗೆ ತೆರಳಬಹುದಾಗಿರುತ್ತದೆ ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.
ಇದನ್ನೂ ಓದಿ: Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.
ಇವುಗಳನ್ನು ತರಬಾರದು !!!!
NTA ರವರ ನಿರ್ದೇಶನದಂತೆ ಪೆನ್ ಪೆನ್ಸಿಲ್, ಕ್ಯಾಲ್ಕುಲೇಟರ್, ಜ್ಯಾಮಿಟ್ರಿ ಬಾಕ್ಸ್ ಒಳಗೊಂಡಂತೆ ಯಾವುದೇ ಲೇಖನ ಸಾಮಗ್ರಿ, ಸಂಪರ್ಕ ಸಾಧನಗಳಾದ ಮೊಬೈಲ್ ಪೋನ್, ಬ್ಲುಟೂಥ್, ಇಯರ್ ಫೋನ್,ಮೈಕ್ರೋ ಫೋನ್, ಪೇಜರ್, ಹೆಲ್ತ್ ಬ್ಯಾಂಡ್, ಬೆಲ್ಟ್, ವ್ಯಾಲೆಟ್, ಗಾಗಲ್ಸ್, ಹ್ಯಾಂಡ್ ಬ್ಯಾಗ್, ಕೈ ಗಡಿಯಾರ,
ಕ್ಯಾಪ್‌ಗಳನ್ನು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತರುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
ಯಾವುದೇ ಆಭರಣಗಳನ್ನು ಧರಿಸುವಂತಿಲ್ಲ, ವಸ್ತ್ರ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು. ಯಾವುದೇ ತಿಂಡಿ-ತಿನಿಸುಗಳನ್ನು ತರುವಂತಿಲ್ಲ. ಆದರೆ ಕುಡಿಯುವ ನೀರಿಗಾಗಿ ಪಾರದರ್ಶಕ ನೀರಿನ ಬಾಟಲ್ ತರಬಹುದು.
ವಿದ್ಯಾರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸ ತಕ್ಕದ್ದು.
ಪೋಷಕರು ಮೇಲ್ಕಂಡ ಸೂಚನೆಗಳನ್ನು ತಮ್ಮ ಮಕ್ಕಳಿಗೆ ತಪ್ಪದೇ ಪಾಲಿಸುವಂತೆ ಸೂಕ್ತ ಸೂಚನೆಗಳನ್ನು ನೀಡಿ ಪರೀಕ್ಷೆ ಸುಗಮವಾಗಿ ನಡೆಯಲು ಸಹಕರಿಸುವಂತೆ ಜಿಲ್ಲಾಧಿಕಾರಿ ಗಳಾದ ಪ್ರಭು .ಜಿ ಮಾಧ್ಯಮ ಪ್ರಕಟಣೆ ಮೂಲಕ ತಿಳಿಸಿದ್ದಾರೆ.