ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

NEET: ಬಿಗಿ ಭದ್ರತೆಯ ನಡುವೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದ ನೀಟ್ ಪರೀಕ್ಷೆ

ಭಾನುವಾರ 2 ರಿಂದ 5 ಗಂಟೆಯವರೆಗೆ ನಡೆದ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು 11 ಗಂಟೆಯಿಂದಲೇ ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲಾ 10 ಪರೀಕ್ಷಾ ಕೇಂದ್ರಗಳ 100 ಮೀ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.ಈ ಸಂಬಂಧ ಜಿಲ್ಲಾಡಳಿತ ವೂ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಕೂಡ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು.

ಚಿಕ್ಕಬಳ್ಳಾಪುರ ಮಹಿಳಾ ಪ್ರಥಮದರ್ಜೆ ಕಾಲೇಜಿನ ನೀಟ್ ಪರೀಕ್ಷಾ ಕೇಂದ್ರದ ಪೋಟೋಗಳು..

ನೋಂದಣಿ-3575 ವಿದ್ಯಾರ್ಥಿಗಳು, ಹಾಜರಿ- 3456 ವಿದ್ಯಾರ್ಥಿಗಳು ಗೈರು ಹಾಜರಿ 119  

ಚಿಕ್ಕಬಳ್ಳಾಪುರ: 2026ನೇ ಸಾಲಿನ ನೀಟ್ ಪರೀಕ್ಷೆಯು ಭಾನುವಾರ ಜಿಲ್ಲೆಯ 10 ಪರೀಕ್ಷಾ ಕೇಂದ್ರ ಗಳಲ್ಲಿ ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ಇಲ್ಲದಂತೆ ಯಶಸ್ವಿಯಾಗಿ ನಡೆಯಿತು.

ಭಾನುವಾರ 2 ರಿಂದ 5 ಗಂಟೆಯವರೆಗೆ ನಡೆದ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿಗಳನ್ನು 11 ಗಂಟೆಯಿಂದಲೇ ತಪಾಸಣೆಗೆ ಒಳಪಡಿಸಲಾಗಿತ್ತು. ಎಲ್ಲಾ 10 ಪರೀಕ್ಷಾ ಕೇಂದ್ರಗಳ 100 ಮೀ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.ಈ ಸಂಬಂಧ ಜಿಲ್ಲಾಡಳಿತವೂ ಕೂಡ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ಕೂಡ ವಿದ್ಯಾರ್ಥಿಗಳು ಸುಗಮವಾಗಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿತ್ತು.

ನೋಂದಣಿ!!
ಜಿಲ್ಲೆಯಲ್ಲಿ ನಡೆದ ನೀಟ್ ಪರೀಕ್ಷೆಗೆ ಒಟ್ಟು 3575 ವಿದ್ಯಾರ್ಥಿಗಳು  ನೋಂದಾಯಿಸಿಕೊಂಡಿರುತ್ತಾರೆ. ಈ ಪೈಕಿ 2456 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 119 ವಿದ್ಯಾರ್ಥಿಗಳು ಪರೀಕ್ಷೆಯಿಂದ ಹೊರಗುಳಿದಿದ್ದಾರೆ. ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಸಿಇಟಿ ಪರೀಕ್ಷೆ ವೇಳೆ ನಡೆದಿದ್ದ ಅಹಿತಕರ ಘಟನೆಗಳು ಮರುಕಳಿಸದಂತೆ ಎಚ್ಚರ ವಹಿಸಲಾಗಿತ್ತು.

ಇದನ್ನೂ ಓದಿ: NEET exam: ಗ್ರಾಮೀಣ ವಿದ್ಯಾರ್ಥಿಗಳಿಗೆ ಸರಕಾರದಿಂದಲೇ ನೀಟ್‌ ಕೋಚಿಂಗ್‌

ಭದ್ರತಾ ಕ್ರಮಗಳು!!

ಪರೀಕ್ಷಾ ಕೇಂದ್ರಗಳ ಪ್ರವೇಶ ದ್ವಾರದಲ್ಲಿಯೇ ಶರೀರ ತಪಾಸಣೆ ಮಾಡಲಾಗಿದ್ದು, ಮೆಟಲ್ ಡಿಟೆಕ್ಟರ್ ಬಳಸಿ ಪರಿಶೀಲನೆ ನಡೆಸಲಾಯಿತು. ಪ್ರತಿಯೊಬ್ಬ ವಿದ್ಯಾರ್ಥಿಗೂ ಬಯೋಮೆಟ್ರಿಕ್ ಪರಿಶೀಲನೆ ಮಾಡಿದ್ದು ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿತ್ತು. ವಿದ್ಯಾರ್ಥಿಗಳ ಆರೋಗ್ಯದಲ್ಲಿ ಏರು ಪೇರಾದಲ್ಲಿ ಯೋಗಕ್ಷೇಮ ನೋಡಿಕೊಳ್ಳಲು ಆರೋಗ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು.

ದಾಖಲೆ ಪರಿಶೀಲನೆ
ಪರೀಕ್ಷಾ ಕೇಂದ್ರಕ್ಕೆ ಹಾಜರಾದ ಪ್ರತಿಯೊಬ್ಬ ವಿದ್ಯಾರ್ಥಿಯ ಪ್ರವೇಶ ಪತ್ರ ಪರಿಶೀಲನೆ, ಪೋಟೋ ಐಡಿ ಪ್ರೂಪ್, ಪಾಸ್ಪೋರ್ಟ್ ಸೈಜ್ ಪೋಟೋ ಪರಿಶೀಲನೆ ನಡೆಸಲಾಯಿತು.

ನಿಷೇಧ ಹೇರಲಾಗಿತ್ತು !!!!

ನೀಟ್ ಪರೀಕ್ಷಾ ನಿಯಮಗಳಂತೆ ಯಾವುದೇ ಲೇಖನ ಸಾಮಗ್ರಿ, ಸಂಪರ್ಕ ಸಾಧನಗಳಾದ ಮೊಬೈಲ್ ಪೋನ್, ಬ್ಲುಟೂಥ್, ಇಯರ್ ಫೋನ್,ಮೈಕ್ರೋ ಫೋನ್, ಪೇಜರ್, ಹೆಲ್ತ್ ಬ್ಯಾಂಡ್, ಬೆಲ್ಟ್, ವ್ಯಾಲೆಟ್, ಗಾಗಲ್ಸ್, ಹ್ಯಾಂಡ್ ಬ್ಯಾಗ್, ಕೈ ಗಡಿಯಾರ,ಕ್ಯಾಪ್‌ಗಳನ್ನು ವಿದ್ಯಾರ್ಥಿಗಳು ತಂದಿದ್ದಾರೆಯೇ ಇಲ್ಲವೆ ಎಂದು ಪರೀಕ್ಷೆ ಮಾಡಲಾಯಿತು. ಪೆನ್ ಪೆನ್ಸಿಲ್, ಕ್ಯಾಲ್ಕುಲೇಟರ್, ಜ್ಯಾಮಿಟ್ರಿ ಬಾಕ್ಸ್ ಒಳಗೊಂಡAತೆ, ಆಭರಣ, ನೀರಿನ ಬಾಟಲ್ ಸೇರಿ ಏನೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡೇ ವಿದ್ಯಾರ್ಥಿಗಳನ್ನು ಕೊಠಡಿ ಒಳಗೆ ಪ್ರವೇಶ ನೀಡಲಾಯಿತು.

ಪರೀಕ್ಷಾ ಕೇಂದ್ರಗಳ ಮಾಹಿತಿ!!

ಸರಕಾರಿ ಪ್ರಥಮದರ್ಜೆ ಕಾಲೇಜು ಚಿಂತಾಮಣಿ ನೋಂದಣಿ-480, ಹಾಜರಿ-458, ಗೈರುಹಾಜರಿ-22, ಸರಕಾರಿ ಪ್ರಥಮದರ್ಜೆ ಕಾಲೇಜು ಚಿಕ್ಕಬಳ್ಳಾಪುರ ನೋಂದಣಿ-480, ಹಾಜರಿ-470, ಗೈರು ಹಾಜರಿ -10, ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಚಿಂತಾಮಣಿ ನೋಂದಣಿ- 480. ಹಾಜರಿ-466, ಗೈರು ಹಾಜರಿ- 14, ಸರಕಾರಿ ಪ್ರೌಢಶಾಲೆ ಬಿ.ಬಿ.ರಸ್ತೆ ಚಿಕ್ಕಬಳ್ಳಾಪುರ ನೋಂದಣಿ-360, ಹಾಜರಿ-355, ಗೈರುಹಾಜರಿ-05, ಹೊಸ ಸರಕಾರಿ ಪ್ರೌಢಶಾಲೆ ಚಿಂತಾಮಣಿ, ನೋಂದಣಿ-312, ಹಾಜರಿ-299, ಗೈರುಹಾಜರಿ-13, ಕೆ.ವಿ.ಟಿ ಪಾಲಿಟೆಕ್ನಿಕ್ ಚಿಕ್ಕಬಳ್ಳಾಪುರ ನೋಂದಣಿ-312, ಹಾಜರಿ-296, ಗೈರು ಹಾಜರಿ-16, ಸರಕಾರಿ ಪದವಿ ಪೂರ್ವ ಕಾಲೇಜು ಚಿಕ್ಕಬಳ್ಳಾಪುರ ನೋಂದಣಿ-312, ಹಾಜರಿ-297, ಗೈರುಹಾಜರಿ-15, ಸರಕಾರಿ ಮಹಿಳಾ ಪದವಿಪೂರ್ವ ಕಾಲೇಜು ಚಿಂತಾಮಣಿ ನೋಂದಣಿ-312, ಹಾಜರಿ-306, ಗೈರುಹಾಜರಿ-06, ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಚಿಕ್ಕಬಳ್ಳಾಪುರ _ನೋಂದಣಿ-312, ಹಾಜರಿ-305, ಗೈರುಹಾಜರಿ-07, ಶಿಕ್ಷಣ ಮಹಾವಿದ್ಯಾಲಯ ಚಿಕ್ಕಬಳ್ಳಾಪುರ ನೋಂದಣಿ-215, ಹಾಜರಿ-204, ಗೈರುಹಾಜರಿ-11, ಒಟ್ಟು 3575 ವಿದ್ಯಾರ್ಥಿಗಳ ಪೈಕಿ 3496 ವಿದ್ಯಾರ್ಥಿಗಳು ಪರೀಕ್ಷೆ ಬರೆದರೆ 119 ಮಂದಿ ಗೈರು ಹಾಜರಾಗಿದ್ದರು.

ಒಟ್ಟಾರೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು ಮಾರ್ಗದರ್ಶನದಲ್ಲಿ ಭಾನುವಾರ ನಡೆದ ನೀಟ್ ಪರೀಕ್ಷೆ ಯಶಸ್ವಿಯಾಗಿ ಮುಗಿದಿರುವುದು ಸಮಾಧಾನದ ಸಂಗತಿಯಾಗಿದೆ.