ಚಿಕ್ಕಬಳ್ಳಾಪುರ: ಮದುವೆಯಾದ 15ನೇ ದಿನಕ್ಕೆ ನವವಧು ಓಡಿ ಹೋಗಿರುವ ಘಟನೆ (marriage fraud) ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬ್ರೋಕರ್‌ಗಳ ಮಾತು ನಂಬಿ ಕೆಟ್ಟ ಪತಿ ಇದೀಗ ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಆಂಧ್ರ ಮೂಲದ ಭಾಸ್ಕರ್ ಬ್ರೋಕರ್‌ಗಳ ಮೂಲಕ ಹುಡುಗಿಯನ್ನು ಹುಡುಕಿದ್ದ. ಹುಡುಗಿ ನೋಡಿದ ದಿನವೇ ಮದುವೆಯಾಗಿದ್ದ. ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ಮಾರ್ಗಾನುಕುಂಟೆ ಗ್ರಾಮದ ನೇತ್ರಾಳನ್ನು ವರಿಸಿದ್ದ. ಬಳಿಕ ಚಿಂತಾಮಣಿ ತಾಲೂಕಿನ ಗೌನಿಚೆರುವುಪಲ್ಲಿಯಲ್ಲಿರುವ ಭಾಸ್ಕರ್ ಪತಿಯ ಮಾವ ವೆಂಕಟರಮಣರೆಡ್ಡಿ ಮನೆಯಲ್ಲಿದ್ದರು.
ಈ ನಡುವೆ ಮದನಪಲ್ಲಿಗೆ ಹೋಗಿ ಬರುತ್ತೇನೆ ಎಂದು ಯುವಕ ತೆರಳಿದ್ದ. ಆತ ವಾಪಸ್ ಬರುವಷ್ಟರಲ್ಲೇ ಹೆಂಡತಿ ನೇತ್ರಾ ಎಸ್ಕೇಪ್ ಆಗಿದ್ದಾಳೆ. ಅಲ್ಲದೆ ಮನೆಯಲ್ಲಿದ್ದ ಒಡವೆಗಳನ್ನು ಎತ್ತಿಕೊಂಡು ಪರಾರಿಯಾಗಿದ್ದಾಳೆ. ಸದ್ಯ, ಘಟನೆ ಸಂಬಂಧ ಗಂಡ ಭಾಸ್ಕರ್ ರೆಡ್ಡಿ, ಬಟ್ಲಹಳ್ಳಿ ಪೊಲೀಸ್ ಠಾಣೆಗೆ ಬಂದು ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.
Murder Case: ತಮ್ಮನಿಗೆ ನಿಶ್ಚಯವಾದ ಹುಡುಗಿ ಮೇಲೆ ದುರಾಸೆ, ಕಲ್ಲೆತ್ತಿ ಹಾಕಿ ಕೊಂದ ಅಣ್ಣ!
ಯುವತಿ ಹಿನ್ನೆಲೆ ಗೊತ್ತಿಲ್ಲದೆ ನೇತ್ರಾಳನ್ನು ಯುವಕ ಭಾಸ್ಕರ್ ಮದುವೆಯಾಗಿದ್ದ. ಆದರೆ ಆಕೆಗೆ ಈ ಮೊದಲೇ ಮದುವೆಯಾಗಿ, ಮಕ್ಕಳಿದ್ದರು ಎಂಬ ವಿಚಾರ ತಿಳಿದುಬಂದಿದೆ. ಬ್ರೋಕರ್‌ಗಳ ಮೋಸಕ್ಕೆ ಯುವಕನ ಜೀವನ ಬಲಿಯಾಗಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ.