ಚಿಕ್ಕಬಳ್ಳಾಪುರ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(Chief Minister D K Shivkumar) ಆದಿಯಾಗಿ ಎಲ್ಲಾ ಪಕ್ಷಗಳ ಗಣ್ಯಾತಿಗಣ್ಯರು ಬಂದು ಹೋಗುವ ಶಕ್ತಿಸ್ವರೂಪಿಣಿ ದೊಡ್ಡಮ್ಮತಾಯಿ ದೇವಿಯ ಸನ್ನಿಧಾನದ ಪ್ರಧಾನ ಅರ್ಚಕ ಸುರೇಶ್‌ಸ್ವಾಮಿಗಳ ಹುಟ್ಟುಹಬ್ಬವನ್ನು ಶನಿವಾರ ಸಾವಿರಾರು ಭಕ್ತರ ನೇತೃತ್ವದಲ್ಲಿ ಭಕ್ತಿ, ಸೇವೆ ಹಾಗೂ ಸಾಮಾಜಿಕ ಕಾಳಜಿಯ ಸಮನ್ವಯದೊಂದಿಗೆ ಅರ್ಥಪೂರ್ಣವಾಗಿ ಆಚರಿಸಲಾಯಿತು.
ತಾಲೂಕಿನ ಅಲಾಸ್ತಿಮ್ಮನಹಳ್ಳಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗಿನಿಂದಲೇ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಶಕ್ತಿಸ್ವರೂಪಿಣಿ ದೊಡ್ಡಮ್ಮತಾಯಿಯ ದೂತನಂತೆಯೇ ಭಾವಿಸ ಲ್ಪಡುವ ಸುರೇಶ್‌ಸ್ವಾಮಿಗಳ ಹುಟ್ಟುಹಬ್ಬವನ್ನು ಪ್ರತಿ ವರ್ಷ ಜೂ.20ರಂದು ಸಮಾಜಸೇವೆಯ ರೂಪದಲ್ಲಿ ಆಚರಿಸಿಕೊಂಡು ಬರುತ್ತಿರುವುದು ಭಕ್ತರಲ್ಲಿ ವಿಶೇಷ ಭಾವನಾತ್ಮಕ ಬಂಧವನ್ನು ಮೂಡಿಸಿದೆ.
ಇದನ್ನೂ ಓದಿ: Chikkaballapur News: ನಂದಿಗಿರಿಧಾಮದ ಸೂರ್ಯೋದಯದ ಸೊಬಗಿನಲ್ಲಿ ಯಶಸ್ವಿಯಾದ ‘ಕಲಾ ನಡಿಗೆ ನಿಮ್ಮ ಬಳಿಗೆ’ ಕಾರ್ಯಕ್ರಮ
ಹುಟ್ಟುಹಬ್ಬದ ಅಂಗವಾಗಿ ದೊಡ್ಡಮ್ಮತಾಯಿಗೆ ವಿಶೇಷ ಹೂವಿನ ಅಲಂಕಾರ ಮಾಡಲಾಗಿದ್ದು, ಹೋಮ, ಹವನ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿದವು. ದೇವಾಲಯಕ್ಕೆ ಆಗಮಿಸಿದ ಭಕ್ತರಿಗೆ ಬೆಳಗ್ಗಿನಿಂದ ಸಂಜೆವರೆಗೆ ತೀರ್ಥಪ್ರಸಾದ ವಿತರಣೆ ವ್ಯವಸ್ಥೆ ಯನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ವಿವಿಧ ಸಂಘ–ಸಂಸ್ಥೆಗಳ ಮುಖಂಡರು, ರಾಜಕೀಯ ನಾಯಕರು, ವ್ಯಾಪಾ ರಸ್ಥರು, ರೈತ ಸಂಘದ ಪ್ರತಿನಿಧಿಗಳು ಹಾಗೂ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಭಕ್ತರು ಭಾಗವಹಿಸಿ ಪುಷ್ಪಾಭಿಷೇಕ, ಬೃಹತ್ ಹೂಹಾರ ಸಮರ್ಪಣೆ ಮತ್ತು ಸಿಹಿ ಹಂಚುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್‌ಸ್ವಾಮಿ, “ನನಗೆ ಹೆಚ್ಚಿನ ವಿದ್ಯಾಭ್ಯಾಸ ಇಲ್ಲದಿರಬಹುದು. ಆದರೆ ಸಂಸ್ಕಾರ ದೊಡ್ಡದು. ಜನರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸು ನನ್ನದು. ನಾನು ಎಂದಿ ಗೂ ನನ್ನ ಹುಟ್ಟುಹಬ್ಬವನ್ನು ವೈಯಕ್ತಿಕವಾಗಿ ಆಚರಿಸಿಕೊಂಡ ನೆನಪಿಲ್ಲ. ಆದರೆ ದೊಡ್ಡಮ್ಮ ತಾಯಿಯ ಆಶೀರ್ವಾದದಿಂದ ಭಕ್ತರು ಜೂ.20ರ ಈ ದಿನವನ್ನು ಸಮಾಜಮುಖಿ ಕಾರ್ಯಕ್ರಮ ಗಳ ಮೂಲಕ ಆಚರಿಸುತ್ತಿದ್ದಾರೆ. ತಾಯಿಯ ಇಚ್ಛೆಯಂತೆ ಎಲ್ಲವೂ ನಡೆಯುತ್ತಿದೆ” ಎಂದು ಹೇಳಿದರು.
2014ರ ತನಕ ಸ್ಥಳೀಯರಿಗೆ ಮಾತ್ರ ಪರಿಚಿತವಾಗಿದ್ದ ಶ್ರೀಕ್ಷೇತ್ರದ ಮಹಿಮೆ ಇಂದು ರಾಜ್ಯದ ಗಡಿ ದಾಟಿ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಭಕ್ತರನ್ನೂ ಆಕರ್ಷಿಸುತ್ತಿದೆ. ದೇವಿಯ ಮೇಲಿನ ನಂಬಿಕೆಯಿAದ ಬರುವ ಭಕ್ತರಿಗೆ ಆಕೆಯ ಕೃಪಾಶೀರ್ವಾದ ದೊರೆಯುತ್ತದೆ ಎಂಬ ವಿಶ್ವಾಸ ಜನರಲ್ಲಿ ಗಟ್ಟಿಯಾಗಿದ್ದು, ಹಲವರು ತಮ್ಮ ಕಷ್ಟಗಳಿಗೆ ಪರಿಹಾರ ಕಂಡುಕೊಂಡ ಅನುಭವ ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ದೊಡ್ಡಮ್ಮತಾಯಿಯ ಕೃಪಾಶೀರ್ವಾದದಿಂದ ಮುಂದಿನ ದಿನಗಳಲ್ಲಿ ಶ್ರೀಕ್ಷೇತ್ರದ ನೇತೃತ್ವದಲ್ಲಿ ಉಚಿತ ಶಿಕ್ಷಣ ಮತ್ತು ಆರೋಗ್ಯ ಸೇವೆಗಳನ್ನು ಇನ್ನಷ್ಟು ವಿಸ್ತರಿಸುವ ಉದ್ದೇಶವಿದೆ ಎಂದು ಸುರೇಶ್‌ಸ್ವಾಮಿ ತಿಳಿಸಿದರು. ಆರೋಗ್ಯ ಸೇವೆಗಳು ಗ್ರಾಮೀಣ ಪ್ರದೇಶದ ಜನರಿಗೆ ತಲುಪಬೇಕೆಂಬ ಉದ್ದೇಶದಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ನಿರಂತರವಾಗಿ ಆಯೋಜಿಸ ಲಾಗುವುದು ಎಂದರು.
ಹುಟ್ಟುಹಬ್ಬದ ಅಂಗವಾಗಿ ಬೆಂಗಳೂರಿನ ಸ್ವಾಮಿ ವಿವೇಕಾನಂದ ರಕ್ತನಿಧಿ ಕೇಂದ್ರ ಹಾಗೂ ಚಿಕ್ಕಬಳ್ಳಾಪುರದ ರೆಡ್ ಕ್ರಾಸ್ ರಕ್ತನಿಧಿ ಕೇಂದ್ರಗಳ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ರಕ್ತದೊತ್ತಡ, ಮಧುಮೇಹ, ಹೃದಯ ರೋಗ, ಕಣ್ಣು, ಕಿವಿ–ಮೂಗು–ಗಂಟಲು, ದಂತ, ಎಲುಬು ಮತ್ತು ಕೀಲು, ಮಹಿಳಾ ಆರೋಗ್ಯ ಸೇರಿದಂತೆ ವಿವಿಧ ವಿಭಾಗಗಳ ತಪಾಸಣೆ ನಡೆಸಿ ಅಗತ್ಯ ಔಷಧಿ ಹಾಗೂ ವೈದ್ಯಕೀಯ ಸಲಹೆಗಳನ್ನು ಉಚಿತವಾಗಿ ನೀಡಲಾಯಿತು. ಸಾವಿರಾರು ಮಂದಿ ಈ ಸೌಲಭ್ಯದ ಪ್ರಯೋಜನ ಪಡೆದರು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಶ್ರೀ ಗೋವಿಂದ ತೀರ್ಥಸ್ವಾಮಿ ಗಳ ಸೇವಾ ದೇವನಗಿರಿ ಕ್ಷೇತ್ರದ ಮುನಿಯಪ್ಪ ದಾಸರ ತಂಡದಿಂದ ಭಕ್ತಿಗೀತೆಗಳ ಗಾಯನ ನಡೆಯಿತು. ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಗಾಯಕ ಶಿವಾರ ಉಮೇಶ್ ಹಾಗೂ ತಂಡದಿಂದ ಭಕ್ತಿಗೀತೆ ಮತ್ತು ಜಾನಪದ ಗೀತೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಕೆ.ಎಂ.ಎಫ್ ಪ್ರತಿನಿಧಿ ಭರಣಿ ವೆಂಕಟೇಶ್, ಚಿಮುಲ್ ನಿರ್ದೇಶಕ ಕೆ.ವಿ. ನಾಗರಾಜು, ಮರಳುಕುಂಟೆ ಕೃಷ್ಣಮೂರ್ತಿ, ಮಂಚೇನಹಳ್ಳಿ ಪ್ರಕಾಶ್, ಎನ್‌ಎಫ್‌ಸಿ ನಾರಾಯಣ ಸ್ವಾಮಿ, ಮಿಲ್ಟನ್ ವೆಂಕಟೇಶ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾಗೇಶ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸಂದೀಪ್ ರೆಡ್ಡಿ, ಹರಿಕೃಷ್ಣ ಫೌಂಡೇಶನ್‌ನ ಹರೀಶ್ ರೆಡ್ಡಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಹಾಗೂ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿ ಸುರೇಶ್‌ಸ್ವಾಮಿಗಳಿಗೆ ಶುಭಾಶಯ ಕೋರಿದರು.