ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Ex-serviceman attempts suicide: ಕಾನೂನಿನಂತೆ ಜಮೀನು ಮಂಜೂರು ಮಾಡದ ಅಧಿಕಾರಿಗಳು: ಮಾಜಿ ಸೈನಿಕ ವಿಷ ಕುಡಿದು ಆತ್ಮಹತ್ಯೆಗೆ ಯತ್ನ!

ಅಧಿಕಾರಿಗಳು ಕಾನೂನಿನಂತೆ ಜಮೀನು ಮಂಜೂರು ಮಾಡಿಲ್ಲ.ಕಳೆದ 20 ವರ್ಷ ಗಳಿಂದ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ  ಎಂದು ಆರೋಪಿಸಿ ಮಾಜಿ ಸೈನಿಕ  ಶಿವಾನಂದರೆಡ್ಡಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದಿದೆ

20 ವರ್ಷಗಳ ಸುದೀರ್ಘ ಹೋರಾಟಕ್ಕೂ ಸಿಗದ ನ್ಯಾಯ: ಪ್ರವಾಸಿ ಮಂದಿರದಲ್ಲೇ ಮಾಜಿ ಯೋಧ ಆತ್ಮಹತ್ಯೆಗೆ ಯತ್ನ

ಚಿಂತಾಮಣಿ : ಅಧಿಕಾರಿಗಳು ಕಾನೂನಿನಂತೆ ಜಮೀನು ಮಂಜೂರು ಮಾಡಿಲ್ಲ.ಕಳೆದ 20 ವರ್ಷ ಗಳಿಂದ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ  ಎಂದು ಆರೋಪಿಸಿ ಮಾಜಿ ಸೈನಿಕ ಶಿವಾನಂದರೆಡ್ಡಿ(Ex-serviceman attempts suicide) ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣ ನಗರದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದಿದೆ.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗೋಷ್ಠಿ ನಡೆಸಿದ ನಂತರ ಯಾವುದೋ ಕ್ರಿಮಿನಾಶಕ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ.ಕೂಡಲೇ ಅಲ್ಲಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಪೊಲೀಸರು ಸ್ಥಳಕ್ಕೆ ಆಗಮಿಸಿ ಅವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಬಳ್ಳಾಪುರಕ್ಕೆ ರವಾನಿಸಿದ್ದಾರೆ.

ಇದನ್ನೂ ಓದಿ: Chinthamani News: ಮುರುಗಮಲ್ಲ ಉರುಸ್ ಮಹೋತ್ಸವ: ದರ್ಗಾದಲ್ಲಿ ಜೆ.ಕೆ.ಕೃಷ್ಣಾರೆಡ್ಡಿ ವಿಶೇಷ ಪೂಜೆ

ಶಿವಾನಂದರೆಡ್ಡಿ 1987 ರಲ್ಲಿ ಸೈನ್ಯಕ್ಕೆ ಸೇರಿ 2004 ರಲ್ಲಿ ನಿವೃತ್ತಿಯಾಗಿದ್ದಾರೆ.1999 ಕಾರ್ಗಿಲ್ ಸಮಯ ಞದಲ್ಲಿ ಕಾಲಿಗೆ ಪೆಟ್ಟುಬಿದ್ದು 2004 ರಲ್ಲಿ ಕಡ್ಡಾಯ ನಿವೃತ್ತಿ ಮಾಡಿದರು. ಕಾಲಿಗೆ ಪೆಟ್ಟಾದಾಗ 2000 ರಲ್ಲಿ ವಿಶ್ರಾಂತಿಗಾಗಿ ಬೆಳಗಾಂ ಗೆ ಕಳುಹಿಸಿದರು. ನನಗೆ ಜಮೀನು ನೀಡುವಂತೆ ಕರ್ನಲ್ ಎಂ.ಬಿ.ರಾಣಾ ಡಿಸಿ,ತಹಶೀಲ್ದಾರ್ ಸೈನಿಕ ಕ್ಷೇಮಾಭಿವೃದ್ಧಿ ಬೋರ್ಡ್ ಗೆ ಶಿಪಾರಸ್ ಮಾಡಿದ್ದರು ಎಂದು ಶಿವಾನಂದರೆಡ್ಡಿ ತಿಳಿಸಿದರು.

1003479059

ಇಲ್ಲಿಗೆ ಬಂದಾಗ ಯಾವುದೇ ಜಮೀನು ಮಂಜೂರು ಮಾಡಿರಲಿಲ್ಲ.ಅಧಿಕಾರಿಗಳನ್ನು ಪ್ರಶ್ನಿಸಿದಾಗ ತಾಲ್ಲೂಕಿನಲ್ಲಿ ಯಾವುದೇ ಜಮೀನಿಲ್ಲ.ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಜಮೀನಿದೆ. ಅಲ್ಲಿಗೆ ಹೋಗಿ ಎಂದು 2004 ರಲ್ಲಿ ಪತ್ರ ನೀಡಿದರು.2019-20 ರಲ್ಲಿ ಸುಮಾರು ಜನ ಯೋದರರಿಗೆ ಜಮೀನು ನೀಡುತ್ತಾರೆ. ನನಗೆ ಮಾತ್ರ ನೀಡಲಿಲ್ಲ. 2020 ರಿಂದ ಹೋರಾಟ ಮಾಡುತ್ತಿದ್ದರೂ ಯಾವ ಅಧಿಕಾರಿ ಯೂ  ಕನಿಕರ ತೋರಲಿಲ್ಲ ಎಂದು ಅವಲತ್ತುಕೊಂಡರು.

ಭೂಮಿ ಇಲ್ಲ ಎಂದು ಹಿಂಬರಹ ನೀಡಿದ ನಂತರ ಬೇರೆಯವರಿಗೆ ನೀಡಲು ಜಮೀನು ಇರುತ್ತದೆ. ಒಕ್ಕಲಿಗರ ಸಂಘ ಅಧಿಕಾರಿಗಳಿಗೆ ಬೆಂಬಲ ನೀಡುತ್ತಿದ್ದಾರೆ. ತಾಲ್ಲೂಕಿನ ಲಭ್ಯತಾಪಟ್ಟಿಯಲ್ಲಿ ನನಗೆ ನೀಡಲು ಭೂಮಿ ಇಲ್ಲ.ಇದು ಯಾವ ನ್ಯಾಯ?ಲೋಕಾಯುಕ್ತಕ್ಕೆ ದೂರು ನೀಡಿದರೂ ಪ್ರಯೋಜನ ವಾಗಲಿಲ್ಲ.ನಾನು ಪ್ರತಿಭಟನೆ ನಡೆಸಿದಾಗ ಒಕ್ಕಲಿಗರ ಸಂಘವೂ ಬೆಂಬಲ ನೀಡಿತ್ತು. ಸರ್ಕಾರಿ ಆದೇಶಗಳನ್ನು ಅಧಿಕಾರಿಗಳು ಗಾಳಿಗೆ ತೂರುತ್ತಾರೆ ಎಂದು ಆರೋಪಿಸಿದರು.