ಲೋಕಾಯುಕ್ತ ಆದೇಶದ ಹಿನ್ನೆಲೆ ಸರ್ವೆ ಕಾರ್ಯಕ್ಕೆ ಮುಂದಾದ ಅಧಿಕಾರಿಗಳು
ಚಿಂತಾಮಣಿ: ಸರ್ವೆ ಕಾರ್ಯ ಮುಕ್ತಾಯವಾದ ನಂತರ ಒತ್ತುವರಿ ತೆರವು ಗೊಳಿಸಲು ಮುಂದಾ ದಾಗ ಎರಡು ಗುಂಪುಗಳ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ಗಲಾಟೆ ನಡೆದು ಒತ್ತುವರಿ ತೆರವು ಮಾಡಲು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಕಂದಾಯ ಹಾಗೂ ಸರ್ವೆ ಇಲಾಖೆ ಅಧಿಕಾರಿಗಳು ವಾಪಸ್ ಆದ ಘಟನೆ ಚಿಂತಾಮಣಿ ತಾಲೂಕಿನ ಕೈವಾರ ಹೋಬಳಿಯ ಮುತ್ತುಕದಹಳ್ಳಿ ಗ್ರಾಮ ದಲ್ಲಿ ನಡೆದಿದೆ.
ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿ ಮುತ್ತುಕದಹಳ್ಳಿ ಗ್ರಾಮದಿಂದ ತಳಗವಾರ ಗ್ರಾಮಕ್ಕೆ ನಕಾಶೆಯಂತೆ ದಾರಿಯನ್ನು ಗುರುತಿಸಿ ಕೊಡಬೇಕೆಂದು ಸದರಿ ಗ್ರಾಮದ ಎಚ್ ದೇವರಾಜ್ ಎಂಬು ವರು ತಾಲೂಕು ದಂಡಾಧಿಕಾರಿಗಳಿಗೆ ಮತ್ತು ಲೋಕಾಯುಕ್ತ ಗೆ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ: Chikkaballapur News: ಶರಣರಿಂದ ಲಿಂಗ ಸಮಾನತೆ ಸಾಧ್ಯವಾಯಿತು: ತಹಸೀಲ್ದಾರ್ ರಶ್ಮಿ ಅಭಿಮತ
ಅದರಂತೆ ಲೋಕಾಯುಕ್ತ ಅಧಿಕಾರಿಗಳು ತಾಲೂಕು ದಂಡಾಧಿಕಾರಿಗಳಿಗೆ ಸರ್ವೆ ಕಾರ್ಯ ನಡೆಸಿ ದಾರಿಯನ್ನು ಗುರುತಿಸಿ ಕೊಡಬೇಕೆಂದು ಆದೇಶ ಮಾಡಿದ ಹಿನ್ನೆಲೆ ಸರ್ವೆ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಅಧಿಕಾರಿ ವಿನೋದ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಸರ್ವೆ ಕಾರ್ಯ ಮಾಡಿದ ನಂತರ ಒತ್ತುವರಿ ಯಾಗಿರುವುದನ್ನು ಗುರುತಿಸಿದರು.
ಕೆಲ ರೈತರ ಜಮೀನುಗಳಲ್ಲಿ ಒತ್ತುವರಿ ತೆರವು ಗೊಳಿಸಿಕೊಂಡು ಬಂದು ನಾರಾಯಣಸ್ವಾಮಿ ಎಂಬುವರ ಜಮೀನಿನಲ್ಲಿ ಒತ್ತುವರಿ ತೆರವುಗೊಳಿಸಲು ಬಂದಾಗ ಸದರಿ ಜಮೀನಿನವರು ಒತ್ತುವರಿ ಯನ್ನು ತೆರವುಗೊಳಿಸಲು ಅವಕಾಶ ಕಲ್ಪಿಸಿ ಕೊಡದೆ ಜೆಸಿಬಿ ಮುಂದೆ ಕೂತು ಒತ್ತುವರಿ ತೆರೆವು ಕಾರ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಗ್ರಾಮದಿಂದ ಒತ್ತುವರಿಯನ್ನು ತೆರವು ಮಾಡಿಕೊಂಡು ಬನ್ನಿ ಹಾಗೂ ಸೂಕ್ತ ರೀತಿಯಲ್ಲಿ ಸರ್ವೆ ಕಾರ್ಯ ನಡೆದಿಲ್ಲ ಎಂದು ಪಟ್ಟು ಹಿಡಿದರು.
ಇದೇ ವಿಚಾರಕ್ಕೆ ಅಲ್ಲಿದ್ದ ಮತ್ತೊಂದು ಗುಂಪಿನ ನಡುವೆ ಕೈ ಕೈ ಮಿಲಾಯಿಸುವ ಹಂತಕ್ಕೆ ವಾದ ವಿವಾದಗಳು ನಡೆದವು. ಪೊಲೀಸರು ಮಧ್ಯ ಪ್ರವೇಶಿಸಿ ಎರಡು ಗುಂಪುಗಳಿಗೆ ಸಮಾಧಾನ ಪಡಿಸಿ ಅಧಿಕಾರಿಗಳು ಹಾಗೂ ಪೊಲೀಸರು ವಾಪಸ್ ಬಂದರು.