ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Onake Obavva Jayanti: ಒನಕೆ ಓಬವ್ವರ ಸಾಹಸ, ಸ್ವಾಮಿಭಕ್ತಿ, ಕಾರ್ಯತತ್ಪರತೆ ಇಂದಿನ ಮಹಿಳೆಯರಿಗೆ ಮಾದರಿ: ಜಿಲ್ಲಾಧಿಕಾರಿ ಜಿ. ಪ್ರಭು

ಮದಕರಿ ನಾಯಕನ ಆಳ್ವಿಕೆಯ ಸಂದರ್ಭದಲ್ಲಿ ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಕೋಟೆಯ ಕಿಂಡಿಯ ಮೂಲಕ ನುಸುಳುತ್ತಿದ್ದ ಶತ್ರು ಸೈನಿಕರನ್ನು ಗಮನಿಸಿದ ಓಬವ್ವ ಯಾವುದೇ ಭಯವಿಲ್ಲದೆ ಒನಕೆಯನ್ನೇ ಆಯುಧ ವನ್ನಾಗಿಸಿಕೊಂಡು ಎದುರಿಸಿ ದಳು. ಕೋಟೆಯ ರಕ್ಷಣೆಗೆ ಆಕೆ ತೋರಿದ ಧೈರ್ಯ ಮತ್ತು ಸಮಯ ಪ್ರಜ್ಞೆಯೇ ಓಬವ್ವ ಜಯಂತಿ ಆಚರಣೆಯ ಹಿಂದಿನ ಪ್ರೇರಣೆಯಾಗಿದೆ ಎಂದರು.

ಚಿಕ್ಕಬಳ್ಳಾಪುರ: ಚಿತ್ರದುರ್ಗದ ಇತಿಹಾಸದಲ್ಲಿ ಧೈರ್ಯ, ಸಮಯಪ್ರಜ್ಞೆ ಹಾಗೂ ನಾಡಭಕ್ತಿಯ ಪ್ರತೀಕವಾಗಿ ಗುರುತಿಸಿಕೊಂಡಿರುವ ವೀರವನಿತೆ ಒನಕೆ ಓಬವ್ವ(Onake Obavva)ರ ಸಾಹಸ, ಸ್ವಾಮಿಭಕ್ತಿ ಮತ್ತು ಕಾರ್ಯತತ್ಪರತೆ ಇಂದಿನ ಮಹಿಳೆಯರಿಗೆ ಮಾದರಿಯಾಗಿವೆ ಎಂದು ಜಿಲ್ಲಾಧಿಕಾರಿ ಜಿ. ಪ್ರಭು ಹೇಳಿದರು.

ನಗರದ ಕನ್ನಡ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಒನಕೆ ಓಬವ್ವ ಜಯಂತಿ(Onake Obavva Jayanti) ಉದ್ಘಾಟಿಸಿ ಮಾತನಾಡಿದರು.

ಮದಕರಿ ನಾಯಕನ ಆಳ್ವಿಕೆಯ ಸಂದರ್ಭದಲ್ಲಿ ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದಾಗ, ಕೋಟೆಯ ಕಿಂಡಿಯ ಮೂಲಕ ನುಸುಳು ತ್ತಿದ್ದ ಶತ್ರು ಸೈನಿಕರನ್ನು ಗಮನಿಸಿದ ಓಬವ್ವ ಯಾವುದೇ ಭಯವಿಲ್ಲದೆ ಒನಕೆಯನ್ನೇ ಆಯುಧ ವನ್ನಾಗಿಸಿಕೊಂಡು ಎದುರಿಸಿದಳು. ಕೋಟೆಯ ರಕ್ಷಣೆಗೆ ಆಕೆ ತೋರಿದ ಧೈರ್ಯ ಮತ್ತು ಸಮಯ ಪ್ರಜ್ಞೆಯೇ ಓಬವ್ವ ಜಯಂತಿ ಆಚರಣೆಯ ಹಿಂದಿನ ಪ್ರೇರಣೆಯಾಗಿದೆ ಎಂದರು.

ಇದನ್ನೂ ಓದಿ: Chikkaballapur News: ನ.12ರಂದು ರೈತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆ

ಓಬವ್ವ ಯುದ್ಧ ತರಬೇತಿ ಪಡೆದ ರಾಜಕುಮಾರಿಯಾಗಲಿ, ರಾಣಿಯಾಗಲಿ ಆಗಿರಲಿಲ್ಲ. ಸಾಮಾನ್ಯ ಶ್ರಮಜೀವಿ ಮಹಿಳೆಯಾಗಿದ್ದ ಆಕೆ, ಸಂದರ್ಭ ಎದುರಾದಾಗ ಅಪ್ರತಿಮ ಯೋಧಳಾಗಿ ಹೋರಾಡಿ ದಳು. ಇಂದಿನ ಯುವಜನರು ಆಕೆಯ ದೈಹಿಕ ಸಾಮರ್ಥ್ಯದ ಜತೆಗೆ ಸಮಯಪ್ರಜ್ಞೆ, ಕರ್ತವ್ಯನಿಷ್ಠೆ ಮತ್ತು ಧೈರ್ಯವನ್ನು ಮಾದರಿಯಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.

ವಿಶೇಷ ಉಪನ್ಯಾಸ ನೀಡಿದ ಕನ್ನಡ ಉಪನ್ಯಾಸಕ ಮುನಿರಾಜು ಎಂ.ಅರಿಕೆರೆ ಮಾತನಾಡಿ, ಒನಕೆ ಓಬವ್ವ ಪ್ರತಿನಿಧಿಸುವ ಛಲವಾದಿ ಸಮುದಾಯಕ್ಕೆ ಶ್ರೀಮಂತ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಿದೆ. ಕಾಯಕನಿಷ್ಠೆ, ಉತ್ತಮ ಸಂಸ್ಕೃತಿ, ಸಂಸ್ಕಾರ ಹಾಗೂ ಸ್ವಾಭಿಮಾನಕ್ಕೆ ಹೆಸರಾದ ಈ ಸಮುದಾಯದ ಇತಿಹಾಸವನ್ನು ಸಮಗ್ರವಾಗಿ ಅಧ್ಯಯನ ಮಾಡಬೇಕಿದೆ. ಇತಿಹಾಸದ ಕೆಲವು ನಿರೂಪಣೆಗಳಲ್ಲಿ ಸಮುದಾಯಗಳ ಕೊಡುಗೆಗಳು ಸಮರ್ಪಕವಾಗಿ ದಾಖಲಾಗದೆ ವ್ಯತ್ಯಾಸ ಗಳಾಗಿವೆ. ಇಂತಹ ಧೀರ ಪರಂಪರೆಯ ಹೆಮ್ಮೆಯ ಮುಕುಟಮಣಿ ಒನಕೆ ಓಬವ್ವ ಎಂದು ಹೇಳಿದರು.

11cbpm1p onakke

ಗುಡೇಕೋಟೆ ಪಾಳೆಯಗಾರರ ಬಳಿ ಕಹಳೆಯವರಾಗಿ ಸೇವೆ ಸಲ್ಲಿಸುತ್ತಿದ್ದ ಛಲವಾದಿ ಚೆನ್ನಪ್ಪನ ಮಗಳಾದ ಓಬವ್ವ, ಚಿತ್ರದುರ್ಗದ ಪಾಳೆಯಗಾರರ ಸೇವೆಯಲ್ಲಿದ್ದ ಮುದ್ದಹನುಮಪ್ಪ ಅವರನ್ನು ವಿವಾಹವಾಗಿದ್ದರು. ಓಬವ್ವ ಕೇವಲ ವ್ಯಕ್ತಿಯಲ್ಲ, ಶಕ್ತಿ. ನಿಷ್ಕಳಂಕ ನಾಡಭಕ್ತಿ, ಧೈರ್ಯ ಮತ್ತು ಸ್ವಾಭಿಮಾನದ ಸಂಕೇತವಾಗಿದ್ದು, ಆಕೆಯ ಸಾಹಸಮಯ ಜೀವನ ಛಲವಾದಿ ಸಮುದಾಯದ ಹೆಮ್ಮೆಯ ಪ್ರತೀಕವಾಗಿದೆ ಎಂದರು.

ಓಬವ್ವನ ಹೋರಾಟದ ಘಟನೆ ಹಾಗೂ ಆಕೆಯ ಸಾವಿನ ಕುರಿತು ಸಿನಿಮಾ ನಿರೂಪಣೆ ಮತ್ತು ಇತಿಹಾಸಕಾರ ಲಕ್ಷ್ಮಣ ತೆಲಗಾವಿ ಸೇರಿದಂತೆ ಇತರರು ದಾಖಲಿಸಿರುವ ಮಾಹಿತಿಗಳಲ್ಲಿ ವ್ಯತ್ಯಾಸ ಗಳಿವೆ. 1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ 'ನಾಗರಹಾವು' ಚಿತ್ರದಲ್ಲಿ ಓಬವ್ವ ಶತ್ರು ಸೈನಿಕನಿಂದ ಹತ್ಯೆಯಾಗುವಂತೆ ಚಿತ್ರಿಸಲಾಗಿದೆ. ಆದರೆ ಕೆಲವು ಇತಿಹಾಸಕಾರರ ನಿರೂಪಣೆಗಳಲ್ಲಿ ಘಟನೆ ನಡೆದ ಮೂರು ವರ್ಷಗಳ ಬಳಿಕ ಆಕೆ ಸಾವನ್ನಪ್ಪಿದಳೆಂಬ ಉಲ್ಲೇಖವಿದೆ. ಹೀಗಾಗಿ ಓಬವ್ವಳ ಬದುಕು, ಹೋರಾಟ ಮತ್ತು ಅಂತಿಮ ದಿನಗಳ ಕುರಿತು ಇತಿಹಾಸಕಾರರು ಹೆಚ್ಚಿನ ಸಂಶೋಧನೆ ನಡೆಸಿ ಸತ್ಯಾಸತ್ಯತೆಯನ್ನು ದಾಖಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂದೀಪ್ ಚಕ್ರವರ್ತಿ ಮಾತನಾಡಿ, ವೀರವನಿತೆ ಒನಕೆ ಓಬವ್ವ ಅವರ ಜೀವನ ಸಾಧನೆ ಮತ್ತು ಸಾಹಸಗಳು ಎಲ್ಲ ಸಮುದಾಯಗಳಿಗೂ ಸದಾಕಾಲ ಆದರ್ಶಪ್ರಾಯವಾಗಿವೆ ಎಂದರು.

11cbpm2sanmanaಒನಕೆ ಓಬವ್ವ ಜಯಂತಿ- (12) ಒಕ

ಪಲ್ಲಕ್ಕಿ ಮೆರವಣಿಗೆ, ಸಾಧಕರಿಗೆ ಸನ್ಮಾನ: ಕಾರ್ಯಕ್ರಮಕ್ಕೂ ಮೊದಲು ಅಂಬೇಡ್ಕರ್ ಭವನ ದಿಂದ ಒನಕೆ ಓಬವ್ವರ ಭಾವಚಿತ್ರದ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಜಾನಪದ ಕಲಾತಂಡಗಳ ಕುಣಿತ, ಛಲವಾದಿ ಸಮುದಾಯದ ಮಹಿಳೆಯರ ಪೂರ್ಣಕುಂಭ ಸ್ವಾಗತ ಮೆರವಣಿಗೆಗೆ ವಿಶೇಷ ಮೆರುಗು ನೀಡಿತು. ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ರವಿಕುಮಾರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ತೇಜಾನಂದರೆಡ್ಡಿ, ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ ವೆಂಕಟೇಶರೆಡ್ಡಿ, ಸಹಾಯಕ ವಾರ್ತಾಧಿಕಾರಿ ಮಂಜುನಾಥ್, ತಹಶೀಲ್ದಾರ್ ರಶ್ಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್. ವೆಂಕಟೇಶ್‌ರೆಡ್ಡಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮುನಿರತ್ನಮ್ಮ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಧಿಕಾರಿ ಶ್ರೀನಾಥ್ ಗೌಡ, ಸಮುದಾಯದ ಮುಖಂಡ ಏಡುಕೊಂಡಲ ಶ್ರೀನಿವಾಸ್, ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಜಿ.ಸಿ. ವೆಂಕಟರೋಣಪ್ಪ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.