ಶಿಡ್ಲಘಟ್ಟ : ನಮ್ಮ ಬದುಕು ಸಮಾಜಕ್ಕೆ ಮಾದರಿಯಾಗಬೇಕು. ನಿರ್ಗತಿಕರ ಪರ ನಿಲ್ಲುವ ದಾರಿಯಲ್ಲಿ ನಡೆದಾಗ ನಮ್ಮ ಜೀವನ ಯಶಸ್ವಿಯಾಗುತ್ತದೆ ' ಎಂದು ಕಾಂಗ್ರೆಸ್ ಮುಖಂಡ ಅಂಜಿನಪ್ಪ ಪುಟ್ಟು ಹೇಳಿದರು.
ನಗರದ ವೇಣುಗೋಪಾಲ ಸ್ವಾಮಿ ದೇವಾಲಯದ ಬಳಿ ಡಾ.ಪುನೀತ್ ರಾಜಕುಮಾರ್ ಅವರ ವೇದಿಕೆಯಲ್ಲಿ ಆಯೋಜಿಸಿದ್ದ ರೇಷ್ಮೆ ನಗರ ಕನ್ನಡ ರಾಜ್ಯೋತ್ಸವ ಆಚರಣ ಸಮಿತಿ ವತಿಯಿಂದ ೭೦ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕನ್ನಡ ನಮ್ಮ ಅಸ್ಮಿತೆ. ನಮ್ಮ ಭಾಷೆ ಮೇಲಿನ ಅಭಿಮಾನ ಹೆಚ್ಚಿಸಿಕೊಂಡು ಮನದಲ್ಲಿ ಆರಾಧಿಸ ಬೇಕು. ಎಲ್ಲಾದರು ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕವಿ ವಾಣಿಯಂತೆ ನಾವೆಲ್ಲರೂ ಮಾತೃಭಾಷೆ ಉಳಿಸಿ ಬೆಳೆಸೋಣ ಎಂದರು.
ಇದನ್ನೂ ಓದಿ: Shidlaghatta News: ಉಚಿತ ಆರೋಗ್ಯ ತಪಾಸಣಾ ಶಿಬಿರ:ದೈಹಿಕ ಚಟುವಟಿಕೆ ರೂಢಿಸಿಕೊಳ್ಳಲು ಸಲಹೆ
ಕೆಪಿಸಿಸಿ ಸಂಯೋಜಕರಾದ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮಾತನಾಡಿ ಕನ್ನಡಿಗ ರಾದ ನಾವು ನುಡಿ ಕನ್ನಡ, ನಡೆ ಕನ್ನಡ, ಉಸಿರು ಕನ್ನಡ ಎಂದು ಜೀವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಷಯ. ಇದೇ ವೇಳೆ ಕನ್ನಡದ ಬಗ್ಗೆ, ಕನ್ನಡಿಗರ ಬಗ್ಗೆ ಹೆಮ್ಮೆ ಪಡುವ ವಿಷಯಗಳು ಆಗಾಗ ಕೇಳಿಬರುತ್ತಿರುತ್ತವೆ. ನಾಮಫಲಕಗಳಲ್ಲಿ ಶೇಕಡ.೫೦ ಕ್ಕಿಂತ ಹೆಚ್ಚು ಕನ್ನಡ ಬಳಸಬೇಕು ಎಂದರು.
ನಗರದಲ್ಲಿ ಆಸ್ಪತ್ರೆ, ಕೆಲವು ಅಂಗಡಿಗಳ ಮುಂದೆ ಸೇರಿದಂತೆ ಬಹುತೇಕ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ನಿಯಮಾನುಸಾರ ಕನ್ನಡ ಬಳಸಲಾಗಿಲ್ಲ. ಅನ್ಯ ಭಾಷೆಗಳೇ ರಾರಾಜಿಸುತ್ತಿವೆ. ಹೀಗಾಗಿ ಅಂತಹ ನಾಮಫಲಕಗಳನ್ನು ತೆರವುಗೊಳಿಸಬೇಕು ಎಂದು ಕಾಂಗ್ರೆಸ್ ಮುಖಂಡ ಹಾಗೂ ಕೆಪಿಸಿಸಿ ಸಂಯೋಜಕರಾದ ರಾಜೀವ್ ಗೌಡ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಮಾಜಿ ಶಾಸಕ ಎಂ ರಾಜಣ್ಣ, ಡಾ. ಸತ್ಯನಾರಾಯಣರಾವ್, ಹಸರೇ ಉಸಿರು ಟ್ರಸ್ಟ್ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಾಮಾಂಜನೇಯ, ಸುವರ್ಣ ಜನಶಕ್ತಿ ವೇದಿಕೆ ಅಧ್ಯಕ್ಷ ಸುರೇಶ್ ಭಗತ್, ಕದಂಬ ಸೇನೆ ತಾಲ್ಲೂಕು ಅಧ್ಯಕ್ಷ ಹಾಗೂ ಕಲಾವಿದ ಸಿ.ಎನ್ ಮುನಿರಾಜು ಯುವರತ್ನ ಸುನಿಲ್, ಶಿವರಾಮೇಗೌಡ,ಶ್ರೀರಾಮ್, ಸೋಮಶೇಖರ್, ವರದರಾಜು, ಮಂಜುಳ ಎಂ, ಲಕ್ಷ್ಮಿ ದೇವಿ, ಲಾವಣ್ ಮಂಜುಳಾ ಗಾಯಿತ್ರಿ, ನ್ನಡಪರ ಸಂಘಟನೆಗಳು ರೈತ ಪರ ಸಂಘಟನೆಗಳು ಪದಾಧಿಕಾರಿಗಳು ಭಾಗವಹಿಸಿದ್ದರು.
*
"ರಾಜ್ಯೋತ್ಸವ ಅಂದರೆ ಭಾಷಾಭಿಮಾನ ಅಲ್ಲ. ಭಾಷೆ ಎಂದರೆ ಕೇವಲ ಧ್ವನಿ ಅಷ್ಟೇ. ಕನ್ನಡದ ಭಾಷೆಯ ಭಾವ ಸರ್ವ ಜನಾಂಗದ ಶಾಂತಿಯ ತೋಟ ಎನ್ನುವ ನಂಬಿಕೆ. ಇದು ಕುವೆಂಪು ಅವರ ವಿಶ್ವ ಮಾನವ ಸಂದೇಶ. ಎಲ್ಲ ಧರ್ಮದವರನ್ನು ಅಪ್ಪಿಕೊಂಡು ಬದುಕು ನಡೆಸುವುದೇ ರಾಜ್ಯೋತ್ಸವ. ಕನ್ನಡಿಗ ತನ್ನ ಭಾಷೆಯ ಬಗ್ಗೆ ಅಭಿಮಾನ, ಪ್ರೀತಿ ಇಟ್ಟುಕೊಳ್ಳುವುದು ಅಹಂಕಾರ ಅಲ್ಲ. ಕನ್ನಡಕ್ಕೆ, ಕರ್ನಾಟಕಕ್ಕೆ ಇರುವ ವೈಶಿಷ್ಟ್ಯತೆಯನ್ನು ಸಂಭ್ರಮಿಸುವುದಾಗಿದೆ. ರಾಜ್ಯದ ಸರ್ಕಾರವು ಈ ನಿಟ್ಟಿನಲ್ಲಿ ಕನ್ನಡಪರವಾಗಿ, ಕನ್ನಡಿಗರ ಪರವಾಗಿ ಕೆಲಸ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು."
ರಮೇಶ್ ಕುಮಾರ್ ಡಿಎಸ್ಪಿ