ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಇಂಟೆಕ್ ಉಪಾಧ್ಯಕ್ಷರಾಗಿ ಕುದುರೇಬ್ಯಾಲ್ಯದ ಪದ್ಮರಾಜ್ ಆಯ್ಕೆ

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟೆಕ್ ವಿಭಾಗದ ಅಧ್ಯಕ್ಷ ಡಾ.ಜಿ.ಸಂಜೀವ್ ರೆಡ್ಡಿ ಅವರ ಆದೇಶದ ಮೇರೆಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಮೋದನೆಯ ಮೇರೆಗೆ ರಾಜ್ಯ ಇಂಟೆಕ್ ಅಧ್ಯಕ್ಷ ಡಿ.ಲಕ್ಷ್ಮೀ ವೆಂಕಟೇಶ್ ಅವರು ಪದ್ಮರಾಜ್ ಜೈನ್.ಕೆ. ಎಚ್ ರವರನ್ನು ರಾಜ್ಯ ಇಂಟೆಕ್ ಉಪಾಧ್ಯಕ್ಷ ರನ್ನಾಗಿ ನೇಮಕ ಮಾಡಿ ಬೆಂಗಳೂರು ಕೆ.ಪಿ.ಸಿ.ಸಿ ಕಚೇರಿಯಲ್ಲಿ ನೇಮಕ ಆದೇಶ ಪತ್ರವನ್ನು ವಿತರಣೆ ಮಾಡಿದ್ದಾರೆ

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಂಗಸಂಸ್ಥೆ ಇಂಡಿಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕರ್ನಾಟಕ ಶಾಖೆಯ ರಾಜ್ಯ ಉಪಾಧ್ಯಕ್ಷರಾಗಿ ಗೌರಿಬಿದನೂರು ತಾಲ್ಲೂಕಿನ ಕುದುರೇಬ್ಯಾಲ್ಯ ಗ್ರಾಮದ ಪದ್ಮರಾಜ್ ಜೈನ್.ಕೆ.ಎಚ್. ನೇಮಕಗೊಂಡಿದ್ದಾರೆ.

ಗೌರಿಬಿದನೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಂಗಸಂಸ್ಥೆಯಾದ ಇಂಡಿ ಯನ್ ನ್ಯಾಷನಲ್ ಟ್ರೇಡ್ ಯೂನಿಯನ್ ಕಾಂಗ್ರೆಸ್ ಕರ್ನಾಟಕ ಶಾಖೆಯ ರಾಜ್ಯ ಉಪಾಧ್ಯಕ್ಷರಾಗಿ ಗೌರಿಬಿದನೂರು ತಾಲ್ಲೂಕಿನ ಕುದುರೇಬ್ಯಾಲ್ಯ ಗ್ರಾಮದ ಪದ್ಮರಾಜ್ ಜೈನ್.ಕೆ.ಎಚ್. ನೇಮಕಗೊಂಡಿದ್ದಾರೆ.

ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಇಂಟೆಕ್ ವಿಭಾಗದ ಅಧ್ಯಕ್ಷ ಡಾ.ಜಿ.ಸಂಜೀವ್ ರೆಡ್ಡಿ ಅವರ ಆದೇಶದ ಮೇರೆಗೆ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅನುಮೋದನೆಯ ಮೇರೆಗೆ ರಾಜ್ಯ ಇಂಟೆಕ್ ಅಧ್ಯಕ್ಷ ಡಿ.ಲಕ್ಷ್ಮೀ ವೆಂಕಟೇಶ್ ಅವರು ಪದ್ಮರಾಜ್ ಜೈನ್.ಕೆ. ಎಚ್ ರವರನ್ನು ರಾಜ್ಯ ಇಂಟೆಕ್ ಉಪಾಧ್ಯಕ್ಷ ರನ್ನಾಗಿ ನೇಮಕ ಮಾಡಿ ಬೆಂಗಳೂರು ಕೆ.ಪಿ.ಸಿ.ಸಿ ಕಚೇರಿಯಲ್ಲಿ ನೇಮಕ ಆದೇಶ ಪತ್ರವನ್ನು ವಿತರಣೆ ಮಾಡಿದ್ದಾರೆ.

ಇದನ್ನೂ ಓದಿ:Gauribidanur News: ಬಿಕೆಎಸ್, ನೂತನ ಪದಾಧಿಕಾರಿಗಳ ಆಯ್ಕೆ

ಕರ್ನಾಟಕ ರಾಜ್ಯ ಘಟಕ, ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್, ನೂತನ ರಾಜ್ಯ ಉಪಾಧ್ಯಕ್ಷ ಪದ್ಮರಾಜ್ ಜೈನ್.ಕೆ.ಹೆಚ್ ಅವರು, ಮಾತನಾಡಿ, ನನ್ನನ್ನು ಕರ್ನಾಟಕ ರಾಜ್ಯ ಇಂಟೆಕ್ ಉಪಾಧ್ಯಕ್ಷರಾಗಿ ನೇಮಕ ಮಾಡಿರುವ ಕೆಪಿಸಿಸಿ ಅಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತಿಯಾದ ಡಿಕೆಶಿ ಮತ್ತು ಇಂಟಕ್ ರಾಜ್ಯಾಧ್ಯಕ್ಷ ಡಿ.ಲಕ್ಷ್ಮಿ ವೆಂಕಟೇಶ್ ರವರಿಗೆ ಹೃತ್ತೂರ್ವಕ ಧನ್ಯವಾದಗಳನ್ನು ಸಲ್ಲಿಸುತ್ತೇನೆ.

ಕಾರ್ಮಿಕರ ಹಕ್ಕುಗಳ ರಕ್ಷಣೆ ಹಾಗೂ ಸಂಘಟನೆಯ ಬಲವರ್ಧನೆ ಹಾಗೂ ರಾಜ್ಯದ ಕಾರ್ಮಿಕ ವರ್ಗದ ಅಭಿವೃದ್ಧಿಗಾಗಿ ಇನ್ನಷ್ಟು ಶ್ರಮಿಸುವ ಈ ಜವಾಬ್ದಾರಿ ನೀಡಿದೆ. ಪಕ್ಷ ಮತ್ತು ಸಂಘಟನೆಯ ವಿಶ್ವಾಸಕ್ಕೆ ತಕ್ಕಂತೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುವ ಭರವಸೆ ಯನ್ನು ನೀಡುತ್ತೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಇಂಟೆಕ್ ರಾಜ್ಯ ಅಧ್ಯಕ್ಷರಾದ ಲಕ್ಷ್ಮೀ ವೆಂಕಟೇಶ್, ಕೆಪಿಸಿಸಿ ಕಚೇರಿ ಕಾರ್ಯದರ್ಶಿ ಎಲ್.ನಾರಾಯಣ್, ಕಾರ್ಯಾಧ್ಯಕ್ಷ ಶಾಮಣ್ಣಾರೆಡ್ಡಿ, ಖಜಾಂಚಿ ವಿನಯ್ ಬಾಬು ಉಪಸ್ಥಿತರಿದ್ದರು.