ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪಿಎಲ್‌ಡಿ ಬ್ಯಾಂಕ್ ಚುನಾವಣೆ: ಕೋರ್ಟ್‌ ಮೆಟ್ಟಿಲೇರಿ ನಿರ್ದೇಶಕ ಸ್ಥಾನ ಗೆದ್ದ ಪ್ರಭಾವತಮ್ಮ

2025 ರಲ್ಲಿ ನಡೆದ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯಲ್ಲಿ ಬೀಚಗಾನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಸರಸ್ವತಮ್ಮ ಎಂಬುವವರು 24 ಮತಗಳನ್ನು ಪಡೆದು ಜಯ ಗಳಿಸಿದ್ದರು. ಅವರ ಪ್ರತಿಸ್ಪರ್ಧಿ ಪ್ರಭಾವತಮ್ಮ 14 ಮತಗಳನ್ನು ಪಡೆದು ಸೋತಿದ್ದರು. ಮತದಾನ ಮಾಡಲು ಅರ್ಹತೆ ಇಲ್ಲದವರಿಂದ ಮತ ಹಾಕಿಸಿಕೊಂಡು ಸರಸ್ವತಮ್ಮ ಜಯಗಳಿಸಿದ್ದಾರೆ ಎಂದು ಆರೋಪಿಸಿ ಪ್ರಭಾವತಮ್ಮ ಜಿಲ್ಲಾ ಉಪನಿಬಂಧಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಗುಡಿಬಂಡೆ ಪಿ.ಎಲ್.ಡಿ ಬ್ಯಾಂಕ್ ನ ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಪ್ರಭಾವತಮ್ಮ ರವರನ್ನು ಕಾಂಗ್ರೇಸ್ ಮುಖಂಡರು ಅಭಿನಂದಿಸಿದರು.

ಗುಡಿಬಂಡೆ: ಕಳೆದ ವರ್ಷ ನಡೆದ ಗುಡಿಬಂಡೆ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಅಭ್ಯರ್ಥಿ ಪ್ರಭಾವತಮ್ಮ, ಕೋರ್ಟ್ ಮೆಟ್ಟಿಲೇ ರಿದ್ದರು. ಇದೀಗ ಕೋರ್ಟ್ ಆದೇಶದಂತೆ ಮರು ಎಣಿಕೆ ನಡೆದಿದ್ದು, ಸೋತಿದ್ದ ಪ್ರಭಾವ ತಮ್ಮ ಇದೀಗ ನಿರ್ದೇಶಕಿಯಾಗಿ ಆಯ್ಕೆಯಾಗಿದ್ದಾರೆ.

2025 ರಲ್ಲಿ ನಡೆದ ಪಿ.ಎಲ್.ಡಿ. ಬ್ಯಾಂಕ್ ಚುನಾವಣೆಯಲ್ಲಿ ಬೀಚಗಾನಹಳ್ಳಿ ಮಹಿಳಾ ಮೀಸಲು ಕ್ಷೇತ್ರದಿಂದ ಸರಸ್ವತಮ್ಮ ಎಂಬುವವರು 24 ಮತಗಳನ್ನು ಪಡೆದು ಜಯ ಗಳಿಸಿದ್ದರು. ಅವರ ಪ್ರತಿಸ್ಪರ್ಧಿ ಪ್ರಭಾವತಮ್ಮ 14 ಮತಗಳನ್ನು ಪಡೆದು ಸೋತಿದ್ದರು. ಮತದಾನ ಮಾಡಲು ಅರ್ಹತೆ ಇಲ್ಲದವರಿಂದ ಮತ ಹಾಕಿಸಿಕೊಂಡು ಸರಸ್ವತಮ್ಮ ಜಯಗಳಿಸಿದ್ದಾರೆ ಎಂದು ಆರೋಪಿಸಿ ಪ್ರಭಾವತಮ್ಮ ಜಿಲ್ಲಾ ಉಪನಿಬಂಧಕರ ನ್ಯಾಯಾಲಯದ ಮೊರೆ ಹೋಗಿದ್ದರು.

ಇದನ್ನೂ ಓದಿ: Chikkaballapur News: ಸಮಾಧಾನ ರಾಜೀ ಮೂಲಕ ನ್ಯಾಯದಾನ ಸಕಾಲದಲ್ಲಿ ಕಾನೂನಿನ ಉಚಿತ ನೆರವು: ನ್ಯಾ. ಶಿಲ್ಪ.ಬಿ.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯವು, ಅರ್ಹವಲ್ಲದ ಮತಗಳನ್ನು ಹೊರತು ಪಡಿಸಿ ಕೇವಲ ಅರ್ಹ ಮತಗಳನ್ನು ಮಾತ್ರ ಪರಿಗಣಿಸಿ ಮರು ಮತ ಎಣಿಕೆ ನಡೆಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಗುರುವಾರ ಪಿಎಲ್‌ಡಿ ಬ್ಯಾಂಕ್ ಸಭಾಂಗಣದಲ್ಲಿ ಚುನಾವಣಾ ಅಧಿಕಾರಿ ಪ್ರೇಮ್ ಕುಮಾರ್ ಅವರ ನೇತೃತ್ವದಲ್ಲಿ ಮರು ಮತ ಎಣಿಕೆ ಪ್ರಕ್ರಿಯೆ ನಡೆಯಿತು.

ಮರು ಮತ ಎಣಿಕೆಯಲ್ಲಿ ಪ್ರಭಾವತಮ್ಮ ರವರು 14 ಮತಗಳನ್ನು ಪಡೆದು ಜಯ ಸಾಧಿಸಿದ್ದಾರೆ ಎಂದು ಚುನಾವಣಾಧಿಕಾರಿ ಪ್ರೇಮ್ ಕುಮಾರ್ ಘೋಷಣೆ ಮಾಡಿ ಪ್ರಮಾಣ ಪತ್ರ ವಿತರಣೆ ಮಾಡಿದರು. ಇನ್ನೂ ಜಯಶೀಲರಾಗಿರುವ ಪ್ರಭಾವತಮ್ಮನವರನ್ನು ಕಾಂಗ್ರೆ ಸ್ ಮುಖಂಡರು ಅಭಿನಂದಿಸಿದರು.

ಈ ಸಮಯದಲ್ಲಿ ಪಿ.ಎಲ್.ಡಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಆದಿರೆಡ್ಡಿ. ಮುಖಂಡರಾದ ಪ್ರಕಾಶ್, ರಮೇಶ್, ನವೀನ್, ಕೃಷ್ಣೇಗೌಡ, ಸುಬ್ಬರಾಯಪ್ಪ, ನಂಜುಂಡಪ್ಪ ಸೇರಿದಂತೆ ಹಲವರು ಇದ್ದರು.