ಚಿಂತಾಮಣಿ: ತಾಲ್ಲೂಕಿನ ಕೋನಪಲ್ಲಿ ಸಮೀಪ ದ್ವಿಚಕ್ರ ವಾಹನ ಸವಾರನೊಬ್ಬನಿಗೆ ಸ್ವಯಂ ಅಪಘಾತ ಸಂಭವಿಸಿದ್ದು ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಬಾಲರಾಜು ಬಿನ್ ಚೆನ್ನಪ್ಪಯ್ಯ(21ವರ್ಷ )ಶ್ರೀನಿವಾಸಪುರ ತಾಲ್ಲೂಕು ಎಂಬುವವರು ಗಂಭೀರವಾಗಿ ಗಾಯ ಗೊಂಡಿದ್ದಾರೆ.
ಇದನ್ನೂ ಓದಿ: Chikkaballapur News: ಟೆಂಡರ್ ಪ್ರಕ್ರಿಯೆಯಲ್ಲಿ ಪಾರದರ್ಶಕತೆ, ಕಾನೂನು ಪಾಲನೆಗೆ ಅಧಿಕಾರಿಗಳಿಗೆ ತರಬೇತಿ
ಕೂಡಲೇ ಸ್ಥಳೀಯರು ವಿಷಯ ಮುಟ್ಟಿಸಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು,112 ಜನ ಸ್ನೇಹಿ ಪೊಲೀಸ್ ವಾಹನದಲ್ಲಿ ಗಾಯಾಳುವನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ಕರೆ ತಂದಿದ್ದಾರೆ. ಬಾಲರಾಜು ಚಿಕ್ಕಬಳ್ಳಾಪುರದಿಂದ ಚಿಂತಾಮಣಿ ಕಡೆಗೆ ಬರುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
ಗಾಯಾಳು ಬಾಲರಾಜು ಅವರನ್ನು ಚಿಂತಾಮಣಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸುವ ಮೂಲಕ ಪೊಲೀಸರು ತಮ್ಮ ಮಾನವೀಯತೆ ಮೆರೆದಿದ್ದಾರೆ.