ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರದೀಪ್ ಈಶ್ವರ್ ಹಠಾವೋ, ಚಿಕ್ಕಬಳ್ಳಾಪುರ ಬಚಾವೋ’: ಎಸ್.ಪಿ. ಶ್ರೀನಿವಾಸ್

ದಾವಣಗೆರೆಯಲ್ಲಿ ಜನರು ನಿಮಗೆ ಯಾವ ರೀತಿಯಲ್ಲಿ ಉತ್ತರ ನೀಡಿದ್ದಾರೋ, ಅದೇ ರೀತಿ ಚಿಕ್ಕಬಳ್ಳಾಪುರದ ಜನರೂ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಸ್ವಂತ ಕ್ಷೇತ್ರಕ್ಕೆ ರಕ್ಷಾ ರಾಮಯ್ಯ ಅವರನ್ನು ಕರೆ ತರುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.

ಚಿಕ್ಕಬಳ್ಳಾಪುರ: ಶಾಸಕ ಪ್ರದೀಪ್ ಈಶ್ವರ್(MLA Pradeep Eshwar) ಅವರಿಗೆ 2028ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಿ-ಫಾರಂ ತಪ್ಪಿಸಲು ಯಾರೂ ಪ್ರಯತ್ನಿಸುವ ಅಗತ್ಯವಿಲ್ಲ. ಅವರ ಕಾರ್ಯವೈಖರಿ ಹಾಗೂ ಜನರಲ್ಲಿನ ಅಸಮಾಧಾನವೇ ಅದಕ್ಕೆ ಕಾರಣವಾಗಲಿದೆ ಎಂದು ಕೆಪಿಸಿಸಿ(KPCC) ಮಾಜಿ ಸದಸ್ಯ ಎಸ್.ಪಿ. ಶ್ರೀನಿವಾಸ್ ಹೇಳಿದರು.

ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ‘ಪ್ರದೀಪ್ ಈಶ್ವರ್ ಹಠಾವೋ, ಚಿಕ್ಕಬಳ್ಳಾಪುರ ಬಚಾವೋ’ ಎಂದು ಘೋಷಣೆ ಕೂಗಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ಜನರು ನಿಮಗೆ ಯಾವ ರೀತಿಯಲ್ಲಿ ಉತ್ತರ ನೀಡಿದ್ದಾರೋ, ಅದೇ ರೀತಿ ಚಿಕ್ಕಬಳ್ಳಾಪುರದ ಜನರೂ ಮುಂದಿನ ದಿನಗಳಲ್ಲಿ ಉತ್ತರ ನೀಡಲಿದ್ದಾರೆ ಎಂದು ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ತಮ್ಮ ಸ್ವಂತ ಕ್ಷೇತ್ರಕ್ಕೆ ರಕ್ಷಾ ರಾಮಯ್ಯ ಅವರನ್ನು ಕರೆ ತರುತ್ತೇವೆ. ತಾಕತ್ತಿದ್ದರೆ ತಡೆಯಿರಿ ಎಂದು ಸವಾಲು ಹಾಕಿದರು.

ಎಂ.ಎಸ್. ರಾಮಯ್ಯ ಅವರ ಕುಟುಂಬದ ಬಗ್ಗೆ ಹಗುರವಾಗಿ ಮಾತನಾಡುವುದನ್ನು ಸಹಿಸುವು ದಿಲ್ಲ. ರಾಮಯ್ಯ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ. ಎಲ್ಲ ವರ್ಗದವರಿಗೂ ಅವರು ನಾಯಕರು. ಕಾಂಗ್ರೆಸ್ ಪಕ್ಷಕ್ಕೆ ಅವರ ಕುಟುಂಬದ ಕೊಡುಗೆ ಅಪಾರ ವಾಗಿದೆ. ಆದರೆ ಪ್ರದೀಪ್ ಈಶ್ವರ್ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Chikkaballapur News: ಕಲಿಕಾ ಕೇಂದ್ರದಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣದ ಜೊತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ

ನಮ್ಮ ಕೂಗು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ(Chief Minister DK Shivakumar, former Chief Minister Siddaramaiah), ಸುರ್ಜೆವಾಲ, ವೇಣು ಗೋಪಾಲ್ ಅವರಿಗೆ ತಿಳಿಯಬೇಕು ಎಂದು ಸುದ್ದಿಗೋಷ್ಟಿ ನಡೆಸುತ್ತಿದ್ದೇವೆ.

ಪರಿಶ್ರಮ ಪ್ರಚಾರ ಮಾಡಲು ನಾನೇ ಕಾರಣ. ಶಿವಣ್ಣ, ಆರ್.ಚಂದ್ರು, ಸುದೀಪ್ ಅವರಿಗೆ ಪರಿಚಯ ಮಾಡಿದ್ದು ನಾನು. ಎಂ.ಸಿ, ಸುಧಾಕರ್(M C Sudhakar) ಅವರ ಹುಟ್ಟುಹಬ್ಬದ ದಿನ ಕರೆದು ಕೊಂಡು ಹೋಗಿದ್ದು ನಾನೇ?. ಈತನ ಬೆಳವಣಿಗೆಯಲ್ಲಿ ನನ್ನ ಪಾತ್ರ ಇದೆ. ಈ ಗಿರಾಕಿ ನಮ್ಮ ಕ್ಷೇತ್ರಕ್ಕೆ ಬೇಡ ಎಂದು ಹೇಳಿದ್ದೆ. ಎಂಸಿಎಸ್‌ಗೆ ತಡವಾಗಿ ನನ್ನ ಮಾತು ಅರ್ಥವಾಯಿತು. ರಕ್ಷ ರಾಮಯ್ಯ ಅವರ ಬಗ್ಗೆ ಹಗುರವಾಗಿ ಮಾತನಾಡಿದರೆ ಬೀದಿಬೀದಿಯಲ್ಲಿ ಅಟ್ಟಾಡಿಸಿ ಹೊಡೆಯು ತ್ತೇವೆ. ನಿನ್ನ ಸ್ವಂತ ಊರು ಗೋರೆಂಟ್ಲ. ನಿನಗೆ ತಾಕತ್ತು ಇದ್ದರೆ ನಿನ್ನ ತಮ್ಮನನ್ನು ಗ್ರಾಮ ಪಂಚಾಯಿತಿಗೆ ನಿಲ್ಲಿಸಿ ಗೆಲ್ಲಿಸು ನೋಡೋಣ ಎಂದು ಸವಾಲು ಹಾಕಿದರು.

ಲೋಕಸಭಾ ಚುನಾವಣೆಯಲ್ಲಿ ರಕ್ಷಾ ರಾಮಯ್ಯ ಸೋಲಲು ಪ್ರದೀಪ್ ಈಶ್ವರ್ ಅವರೇ ಕಾರಣ ಎಂದು ಆರೋಪಿಸಿದ ಶ್ರೀನಿವಾಸ್, ಮಾಧ್ಯಮಗಳ ಮುಂದೆ ಪ್ರಚಾರ ಮಾಡುವುದಕ್ಕಿಂತ ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಸೇವೆ ಸಲ್ಲಿಸಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಉಷಾ ಶ್ರೀನಿವಾಸ್ ಮಾತನಾಡಿ, ಶಾಸಕ ಜಾತಿ–ಜಾತಿಗಳ ನಡುವೆ ಸಂಘರ್ಷ ಉಂಟಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದಿನ ಶಾಸಕರು ಎಲ್ಲ ವರ್ಗದವರನ್ನು ಒಗ್ಗೂಡಿಸಿಕೊಂಡು ಕೆಲಸ ಮಾಡುತ್ತಿದ್ದರು. ಬಲಿಜ ಸಮುದಾಯಕ್ಕೆ ಶಾಸಕರ ಕೊಡುಗೆ ಏನು? ಸಮುದಾಯದವರಿಗೆ ಎಷ್ಟು ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

ನಗರಸಭೆ ಚುನಾವಣೆಯಲ್ಲಿ ಗೆಲ್ಲಲು ನಿಷ್ಠಾವಂತ ಕಾರ್ಯಕರ್ತರು ಎಷ್ಟು ಶ್ರಮಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಚುನಾವಣೆ ಸಮೀಪಿಸಿದಾಗ ಮಾತ್ರ ಜನರ ನಡುವೆ ಕಾಣಿಸಿಕೊಂಡು ಭರವಸೆ ನೀಡಲಾಗುತ್ತಿದೆ ಎಂದು ಟೀಕಿಸಿದ ಅವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬರಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಕಾಕಲ ಚಿಂತ ರಾಜಣ್ಣ ಮಾತನಾಡಿ, ಶಾಸಕರ ಕಾರ್ಯವೈಖರಿಯನ್ನು ಖಂಡಿಸಿದರು. ತಾವು ಚಿಮುಲ್ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾದಾಗ ಬಿಜೆಪಿ ಪರ ಕೆಲಸ ಮಾಡಿದ್ದಾಗಿ ತಮ್ಮ ವಿರುದ್ಧ ಆರೋಪಿಸಲಾಗಿತ್ತು ಎಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್ ಮುಖಂಡ ಶಂಕರ್ ಮಾತನಾಡಿ ಬಲಿಜ ಜನಾಂಗದ ಹೆಸರು ಕೇಳಿದರೆ ಜನ ಭಯ ಪಡುವಂತೆ ಆಗಿದೆ.ಶಾಸಕ ಎಂಬ ಹೆಸರು ಹೇಳಲೂ ಕೂಡ ಅನರ್ಹ.ನಮ್ಮ ಸಮುದಾಯ ೨ಎ ಬಗ್ಗೆ ಮಾತನಾಡಲ್ಲ. ಬಲಿಜ ನಿಗಮದ ಬಗ್ಗೆ ಮಾತನಾಡಲ್ಲ, ಬಲಿಜ ವಿದ್ಯಾರ್ಥಿಗಳ ಬಗ್ಗೆ ಮಾತ ನಾಡಲ್ಲ. ಶಾಸಕ ಆದ ಮೇಲೆ ಕೈವಾರ ತಾತಯ್ಯ ಜಯಂತಿಗೆ ಬಂದಿಲ್ಲ. ಬೇರೆ ಸಮುದಾಯಗಳಿಗೆ ಎತ್ತಿ ಕೊಟ್ಟುವ ಕೆಲಸ ಮಾಡುತ್ತಾರೆ.ಬಾಯಿಬಿಟ್ಟರೆ ದಲಿತರ  ಎನ್ನುವ ನೀವು ಪೆರೇಸಂದ್ರ ರಸ್ತೆಗೆ ದಲಿತರಾದ ಬುಡಿಮಪ್ಪ,ಆಂಬುಲೆನ್ಸ್ ಬಾಬು ಹೆಸರು ಇಡಿ,  ನಿಮ್ಮ ತಾತ ಏನಾದರೂ ಸ್ವಾತಂತ್ರ್ಯ ಹೋರಾಟಗಾರರ ಎಂದು ಪ್ರಶ್ನಿಸಿದರು.

ಮೆಡಿಕಲ್ ಕಾಲೇಜಿನ ಒಂದು ಬ್ಲಾಕ್‌ಗೆ ಸಂಸದರ ತಾಯಿ ಹೆಸರು ಯಾಕೆ ಇಡಲು ಶಿಫಾರಸ್ಸು ಮಾಡುತ್ತೀರಿ, ದಲಿತರ ಹೆಸರು ಇಡಬಹುದಿತ್ತು ಅಲ್ಲವೆ? ಅಂಬೇಡ್ಕರ್ ಹೆಸರೂ ಇಡಲು ಮನಸ್ಸು ಯಾಕೆ ಬರಲಿಲ್ಲ.ಅಧಿಕಾರ ದುರುಪಯೋಗ ಮಾಡುವುದು ಸಾಕು. ನಾನು ಬಲಿಜ, ನೀನೂ ಬಲಿಜ. ನೀನು ಬಂದರೆ ನಾನೂ ಬರುತ್ತೇನೆ. ನಂದಿ ದೇವಾಲಯದಲ್ಲಿ ಪ್ರಮಾಣ ಮಾಡು ನಾನು ಕ್ರರ‍್ಸ್ನಿಂದ ಹಣ ಪಡೆಯುತ್ತಿಲ್ಲ, ಟೌನ್ ಪ್ಲಾನ್‌ನಿಂದ ಹಣ ಪಡೆಯುತ್ತಿಲ್ಲವಾ? ಎಸಿ ಬಳಿ ಎಷ್ಟು ಹಣ ಪಡೆದಿಲ್ಲವಾ? ನಂದಿ ಸಬ್ ಇನ್ಸ್ಪೆಕ್ಟರ್ ಬಳಿ 25 ಲಕ್ಷ ಹಣ ಪಡೆದಿಲ್ಲವಾ? ನಿನ್ನ ತಮ್ಮ ತಾಲೂಕು ಆಫೀಸಲ್ಲಿ ರೋಲ್‌ಕಾಲ್ ಮಾಡುತ್ತಿಲ್ಲ ಎಂದು ಪ್ರಮಾಣ ಮಾಡು. ನಿನ್ನ ತಮ್ಮ ಆಲೂಗಡ್ಡೆ ಬೆಳೆ ಬೆಳೆದಿದ್ದರಾ? ಕೆಳಗಿನ ತೋಟದಲ್ಲಿ ಸ್ಟೆಪ್ ಬೈ ಸ್ಟೆಪ್ ಮನೆ ಕಟ್ಟೋದಿಕ್ಕೆ. ವರ್ಷಕ್ಕೆ 15 ಕೋಟಿ ಹಣ ತೆಗೆದುಕೊಂಡು ಹೋಗುತ್ತಿದ್ದೀರಿ.ಇದು ಸುಳ್ಳಾ, ಪ್ರದೀಪ್ ಈಶ್ವರ್ ನಯಾಪೈಸೆ ತಂದು ಹಾಕಿ ಚುನಾವಣೆ ಮಾಡಿಲ್ಲ. ನೀನಾಗೆ ಕರೆದೆ, ಸಾಲ ಕೇಳಿದ್ದು ನಿಜ. ವಾಪಸ್ಸು ಕೊಡುತ್ತೀನಿ ಎಂದು ಹೇಳಿದ್ದು ನಿಜ. ಇನ್ನೂ ಇದೆ ಮುಂದೆ ಮಾತಾಡೋಣ ಎಂದು ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಂಕರ್, ಮಂಜುನಾಥ್, ಶೆಟ್ಟಿವಾರಹಳ್ಳಿ ಶ್ರೀನಿವಾಸ್, ವೆಂಕಟೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.