ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಪ್ರತಿರೋಧದ ನಡುವೆ ಗೆದ್ದು ಬೀಗಿದ ಶಾಸಕ: ಮತ್ತೆ ಅಹಿಂದ ಪರ ಕಾಳಜಿ ಮೆರೆದ ಪ್ರʼದೀಪʼ

ಶಾಸಕರಾದ ಕೂಡಲೇ ಒಂದೆಡೆ ಸ್ವಪಕ್ಷೀಯ ಹಿತಶತ್ರುಗಳು ಮತ್ತೊಂದೆಡೆ ವಿರೋಧ ಪಕ್ಷಗಳ ವ್ಯವಸ್ಥಿತ ಹುನ್ನಾರ ಎದುರಾಗಿತ್ತು. ಈ ನಡುವೆ ಎದುರಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದರೂ ಒಳೇಟಿನ ಸುಳಿಗೆ ಸಿಲುಕಿ ಸೋಲಿನ ಉಡುಗೊರೆ ಯನ್ನು ತಮ್ಮ ಕೊರಳಿಗೆ ಹಾಕಿಕೊಂಡು ವಿಷಕಂಠನಾದರು. ಯಾವ ರಾಜಕೀಯ ಪಕ್ಷದ ಹಿನ್ನೆಲೆ ಇಲ್ಲದಿ ದ್ದರೂ, ಹಣವಂತರಲ್ಲದಿದ್ದರೂ ಜನರ ಪ್ರೀತಿ ಅಭಿಮಾನವೇ ಶಾಸಕತ್ವದ ಗದ್ದುಗೆ ತಂದುಕೊಟ್ಟಿತು.

ಚಿಕ್ಕಬಳ್ಳಾಪುರ: ರಾಜಕೀಯವೆಂಬ ಹಾವು ಏಣಿ ಆಟದಲ್ಲಿ ಅಂಬೆಗಾಲಿಡುತ್ತಿರುವ ಶಾಸಕ ಪ್ರದೀಪ್ ಈಶ್ವರ್ ತೀವ್ರ ಪ್ರತಿರೋಧದ ನಡುವೆಯೂ ಚಿಕ್ಕ ಬಳ್ಳಾಪುರ ನಗರದ ಪ್ರಾಧಿಕಾರದ ಅಧ್ಯಕ್ಷರಾಗಿ ಸಂದೀಪ್ ಚಕ್ರವರ್ತಿಯನ್ನು ನೇಮಕ ಮಾಡಿಸುವ ಮೂಲಕ ತಮ್ಮ ದಲಿತ ಪರ ಕಾಳಜಿಯನ್ನು ಮತ್ತೊಮ್ಮೆ ಮೆರೆದಿದ್ದಾರೆ.

2023ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾದಾಗಿನಿಂದಲೂ ಸ್ವಪಕ್ಷೀಯರಿಂದಲೇ ಒಂದಿಲ್ಲೊಂದು ಸಂಕಷ್ಟಕ್ಕೆ ಗುರಿಯಾಗುತ್ತ ಬಹಿರಂಗ ವಾಗಿ ತೇಜೋವಧೆಗೆ ಒಳಗಾದರೂ ವಿಚಲಿತರಾಗದೆ ಸ್ಥಿತಪ್ರಜ್ಞರಂತೆ ತಮ್ಮದೇ ನೆಲೆಯಲ್ಲಿ ಪಕ್ಷ ಸಂಘಟನೆ ಮಾಡುತ್ತಾ, ನೇರವಾಗಿ ಗ್ರಾಮಗಳಿಗೆ ಭೇಟಿ ನೀಡಿ ನಾಗರಿಕರ ಕಷ್ಟ ಸುಖಗಳನ್ನು ಅರಿಯುವ ಕೆಲಸ ಮಾಡಿದರು.

ಶಾಸಕರಾದ ಕೂಡಲೇ ಒಂದೆಡೆ ಸ್ವಪಕ್ಷೀಯ ಹಿತಶತ್ರುಗಳು ಮತ್ತೊಂದೆಡೆ ವಿರೋಧ ಪಕ್ಷಗಳ ವ್ಯವಸ್ಥಿತ ಹುನ್ನಾರ ಎದುರಾಗಿತ್ತು. ಈ ನಡುವೆ ಎದುರಾದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ಮಾಡಿದರೂ ಒಳೇಟಿನ ಸುಳಿಗೆ ಸಿಲುಕಿ ಸೋಲಿನ ಉಡುಗೊರೆ ಯನ್ನು ತಮ್ಮ ಕೊರಳಿಗೆ ಹಾಕಿಕೊಂಡು ವಿಷಕಂಠನಾದರು. ಯಾವ ರಾಜಕೀಯ ಪಕ್ಷದ ಹಿನ್ನೆಲೆ ಇಲ್ಲದಿದ್ದರೂ, ಹಣವಂತರಲ್ಲದಿದ್ದರೂ ಜನರ ಪ್ರೀತಿ ಅಭಿಮಾನವೇ ಶಾಸಕತ್ವದ ಗದ್ದುಗೆ ತಂದುಕೊಟ್ಟಿತು.

ಇದನ್ನೂ ಓದಿ: MLA Pradeep Eshwar: ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ನೇಮಕ; ಸಾಮಾನ್ಯ ಕಾರ್ಯಕರ್ತರಿಗೂ ಸ್ಥಾನ ಕಲ್ಪಿಸಿದ ನಿರ್ಧಾರಕ್ಕೆ ರಾಜಕೀಯ ಮಹತ್ವ

ಈ ಬೆಳವಣಿಗೆ ಈಗಾಗಲೇ ರಾಜಕಾರಣದಲ್ಲಿ ಪಳಗಿದವರಿಗೆ ಸಹಿಸಿಕೊಳ್ಳಲಾಗಲಿಲ್ಲ. ಈ ತಂಡ ಹಿಂದೆ ಚಿಕ್ಕಬಳ್ಳಾಪುರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ಯನ್ನು ನಡೆಸಿ ಶಾಸಕರನ್ನು ಹೀನಾಮಾ ನವಾಗಿ ಬ ಯ್ಯುವ ಜತೆಗೆ ಏಕವಚನ ಪ್ರಯೋಗವನ್ನು ಮಾಡಲು ಹಿಂಜರಿಯಲಿಲ್ಲ. ಕೆಪಿಸಿಸಿ ವೀಕ್ಷಕರ ತಂಡ ಚಿಕ್ಕ ಬಳ್ಳಾಪುರಕ್ಕೆ ಭೇಟಿ ಕೊಟ್ಟಾಗಲು ಕೂಡ ಬಹಿರಂಗವಾಗಿ ಶಾಸಕರ ವಿರುದ್ಧ ಗಲಾಟೆ ಮಾಡಿದ್ದರು.

ಸೆಪ್ಟೆಂಬರ್ 27ರಂದು ಇದೇ ತಂಡ ಕೆಪಿಸಿಸಿ ಅಧ್ಯಕ್ಷರ ಬಳಿಗೆ ಅತೃಪ್ತರ ನಿಯೋಗದೊಂದಿಗೆ ಭೇಟಿ ಮಾಡಿ ಶಾಸಕರ ಕಾರಣದಿಂದಾಗಿ ಕ್ಷೇತ್ರದಲ್ಲಿ ಪಕ್ಷ ನೆಲೆ ಕಳೆದುಕೊಳ್ಳುತ್ತಿದೆ. ಪಕ್ಷನಿಷ್ಠೆ ಹೊಂದಿಲ್ಲ ದವರಿಗೆ ಉನ್ನತ ಸ್ಥಾನಗಳನ್ನು ನೀಡಲಾಗುತ್ತಿದೆ.

ಪಕ್ಷಕ್ಕಾಗಿ ಶ್ರಮಿಸಿದವರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದೆಲ್ಲ ಅವಲತ್ತುಕೊಂಡಿದ್ದರು. ಈ ಎಲ್ಲ ಬೆಳವಣಿಗೆಗಳ ನಡುವೆ ಶಾಸಕ ಪ್ರದೀಪ್ ಈಶ್ವರ ಮೇಲುಗೈ ಸಾಧಿಸಿದ್ದು ಪ್ರತಿಭಾವಂತರು, ವಕೀಲರು, ಕಾಂಗ್ರೆಸ್ ಪಕ್ಷದ ಮುಖಂಡರಾದ ದಲಿತ ಸಮುದಾಯಕ್ಕೆ ಸೇರಿದ ಸಂದೀಪ್ ಚಕ್ರವರ್ತಿ ಯನ್ನು ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಕ ಮಾಡಿಸಿ ಆದೇಶ ಪ್ರತಿ ಕೊಡಿಸುವ ಮೂಲಕ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ.

ಇಷ್ಟೇ ಅಲ್ಲದೆ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಹಲವಾರು ವರ್ಷಗಳಿಂದ ಕಸ ಗುಡಿಸುತ್ತಿದ್ದ, ಚುನಾವಣೆಯ ಸಂದರ್ಭದಲ್ಲಿ ಮನೆಮನೆಗೆ ಕರಪತ್ರಗಳನ್ನು ಹಂಚುತ್ತ ಪಕ್ಷದ ಪರವಾಗಿ ಜನಮತ ಬರುವಂತೆ ನಿಷ್ಠೆಯಿಂದ ಕೆಲಸ ಮಾಡಿದ್ದ ತನ್ಜೀಮ್ ಅವರನ್ನು ಸದಸ್ಯರನ್ನಾಗಿ ನೇಮಕ ಮಾಡಿಸಿದ್ದಾರೆ. ಇವರಂತೆ ಮತ್ತೊಬ್ಬ ಸದಸ್ಯ ಹಮ್ಮಿಮ್ ಕೂಡ ಪಕ್ಷದ ಯಾವುದೇ ಕಾರ್ಯಕ್ರಮವಿರಲಿ ಕಾಂಗ್ರೆಸ್ ಪಕ್ಷದ ಬಾವುಟ ಹಿಡಿದು ಗಟ್ಟಿಗಂಟಲಲ್ಲಿ ಘೋಷಣೆ ಕೂಗುತ್ತಾ, ಪಕ್ಷದ ಕಚೇರಿಯಲ್ಲಿ ಕೆಲಸ ಮಾಡುತ್ತಾ ಪಕ್ಷನಿಷ್ಠೆ ಮೆರೆದಿದ್ದಾರೆ.

ಇವರಿಬ್ಬರೂ ಕೂಡ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಬದುಕಿಗಾಗಿ ನಿತ್ಯವೂ ಜಂಜಾಟ ನಡೆಸುವಂತಹ ನಿಕೃಷ್ಟ ಬದುಕನ್ನು ಬದುಕುತ್ತಿದ್ದಾರೆ. ಮನೆಯಲ್ಲಿ ಕಿತ್ತು ತಿನ್ನುವ ಬಡತನ ವಿದ್ದರೂ ಪಕ್ಷನಿಷ್ಠೆಯಿಂದಾಗಿ ಕಾಂಗ್ರೆಸ್ ಕಚೇರಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತ ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ಮುಟ್ಟಿಸುತ್ತಿದ್ದಾರೆ.

ಶಾಸಕರ ವಿರೋಧಿ ಗುಂಪು ಕೂಡ ಅಧ್ಯಕ್ಷ ಸ್ಥಾನ ತಪ್ಪಿಸಲು ಏನೇ ಪ್ರಯತ್ನ ನಡೆಸಿದರೂ, ಯಾರಿಗೆ ದೂರು ನೀಡಿದರೂ, ಏನೆಲ್ಲ ಮಸಲತ್ತು ನಡೆಸಿದರೂ ವಿಚಲಿತರಾಗದೆ ಪ್ರದೀಪ್ ಈಶ್ವರ ಅವರು ಅಂದುಕೊಂಡಂತೆ ಕೆಲಸ ಮಾಡಿ ಮುಗಿಸುವ ಮೂಲಕ ರಾಜಕೀಯ ಚಾಣಾಕ್ಷತೆ ಮೆರೆದಿದ್ದಾರೆ. ಅವರು ಶಾಸಕರಾದಾಗಿನಿಂದ ಈತನಕ ನನ್ನ ನಿಷ್ಠೆ ದಲಿತರು ಶೋಷಿತರು ಮತ್ತು ಹಿಂದುಳಿದವರ ಪರವಾಗಿದೆ ಎಂಬುದನ್ನು ಕೇವಲ ಮಾತಿನಲ್ಲಿ ಮಾತ್ರ ಘೋಷಿಸದೆ ಕಾರ್ಯರೂಪಕ್ಕೆ ತರುವ ಮೂಲಕ ವಿರೋಧ ಪಕ್ಷವು ಸೇರಿದಂತೆ ಸ್ವಪಕ್ಷೀಯ ಹಿತ ಶತ್ರುಗಳಿಗೆ ಟಾಂಗ್ ನೀಡುತ್ತಲೇ ಬರುತ್ತಿದ್ದಾರೆ.

ಅಧಿಕಾರ ಸ್ವೀಕಾರ

ಚಿಕ್ಕಬಳ್ಳಾಪುರ ನಗರ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಸಂದೀಪ್ ಚಕ್ರವರ್ತಿ ಮಂಗಳವಾರ ಸಂಜೆ ಅಧಿಕಾರ ಸ್ವೀಕರಿಸಿದ್ದಾರೆ. ಈ ವೇಳೆ ಮಾತನಾಡಿ, ಶಾಸಕರು ನನ್ನ ಮತ್ತು ನನ್ನ ಸಮುದಾಯದ ಮೇಲೆ ಇಟ್ಟಿರುವ ಪ್ರೀತಿ, ವಿಶ್ವಾಸ ಪ್ರಶ್ನಾತೀತವಾದದ್ದು. ಅವರ ನಂಬಿಕೆಯನ್ನು ಉಳಿಸಿಕೊಂಡು ಪ್ರಾಽಕಾರದ ಕಾರ್ಯಗಳನ್ನು ಪಾರದರ್ಶಕವಾಗಿ ಮಾಡಿಕೊಂಡು ಹೋಗುತ್ತೇನೆ. ಕಾನೂನು ಮೀರಿ ಯಾವ ಕಾರ್ಯವನ್ನೂ ಮಾಡು ವುದಿಲ್ಲ, ನಿಯಮಗಳಿಗೆ ಬದ್ಧವಾಗಿ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದರು.