ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bagepally News: ಗ್ರಾಮೀಣ ಭಾಗದ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಗುರುತಿಸಿಕೊಳ್ಳಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ: ಬಿಇಓ ಎನ್ ವೆಂಕಟೇಶಪ್ಪ

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿದ್ದರು. ಕೋಲಾಟ, ಜಾನಪದ, ರಂಗಗೀತೆ, ಗೀಗಿಪದ, ಭಾವಗೀತೆ, ಛದ್ಮವೇಷ, ಕಥೆ ಹೇಳುವುದು, ಜಾನಪದ ನೃತ್ಯ, ಮಿಮಿಕ್ರಿ, ರಂಗೋಲಿ, ರಸಪ್ರಶ್ನೆ, ರಂಗಪ್ರದರ್ಶನ, ಪದ್ಯ ಹೇಳುವುದು, ಖವ್ವಾಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮನ್ನು ತೊಡಗಿಸಿ ಕೊಂಡರು.

ಬಾಗೇಪಲ್ಲಿ: ನಮ್ಮ ಗ್ರಾಮೀಣ ಮಕ್ಕಳಲ್ಲಿಯು ಅನೇಕ ಕಲೆಗಳು ಅಡಗಿವೆ ಅಂತಹ ಮಕ್ಕಳು ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಕೊಳ್ಳಲು ಇಂತಹ ಪ್ರತಿಭಾ ಕಾರಂಜಿ ಉತ್ತಮ ವೇಧಿಕೆ ಯಾಗಿದೆ ಎಂದು ಬಿಇಓ ಎನ್ ವೆಂಕಟೇಶಪ್ಪ ಅವರು ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ, ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಬಾಗೇಪಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಲಯ. ಬಾಗೇಪಲ್ಲಿ, ಮತ್ತು ಸಮೂಹ ಸಂಪನ್ಮೂಲ ಕೇಂದ್ರ  2025-26 ನೇ ಸಾಲಿನ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ. ಕಲೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಾಗೇಪಲ್ಲಿ, ಚೇಳೂರು ತಾಲ್ಲೂಕುಗಳ ಕ್ಲಸ್ಟರ್ ಮಟ್ಟದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾದ 22 ಕ್ಲಸ್ಟರ್‌ಗಳ ವಿದ್ಯಾರ್ಥಿಗಳು ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯ ಸಾಂಸ್ಕೃತಿಕ, ಕರಕುಶಲ ಚಟುವಟಿಕೆಗಳಲ್ಲಿ ಭಾಗಿಯಾದರು.

ಇದನ್ನೂ ಓದಿ: Bagepally News: ಕರವೇಯಿಂದ ರಾಜ್ಯೋತ್ಸವ ಆಚರಣೆ

3 ಹಂತಗಳಲ್ಲಿ ಪ್ರಾಥಮಿಕ ವಿಭಾಗ (1ರಿಂದ 4ನೇ ತರಗತಿ) 13 ಸ್ಪರ್ಧೆಗಳಲ್ಲಿ 264 ವಿದ್ಯಾರ್ಥಿಗಳು, ಹಿರಿಯರ ವಿಭಾಗದ (5ನೇ ತರಗತಿಯಿಂದ 7ನೇ ತರಗತಿ) 16 ಸ್ಪರ್ಧೆಗಳಲ್ಲಿ 356 ವಿದ್ಯಾರ್ಥಿಗಳು ಮತ್ತು ಪ್ರೌಢಶಾಲಾ ವಿಭಾಗದಲ್ಲಿ (8ರಿಂದ 10 ನೇ ತರಗತಿ) 21 ಸ್ಪರ್ಧೆ ಗಳಲ್ಲಿ 415 ಮಕ್ಕಳು ಭಾಗವಹಿಸಿದ್ದರು.

ಸರ್ಕಾರಿ ಶಾಲೆ ವಿದ್ಯಾರ್ಥಿಗಳು ಬಣ್ಣ ಬಣ್ಣದ ವೇಷಭೂಷಣಗಳನ್ನು ಧರಿಸಿದ್ದರು. ಕೋಲಾಟ, ಜಾನಪದ, ರಂಗಗೀತೆ, ಗೀಗಿಪದ, ಭಾವಗೀತೆ, ಛದ್ಮವೇಷ, ಕಥೆ ಹೇಳುವುದು, ಜಾನಪದ ನೃತ್ಯ, ಮಿಮಿಕ್ರಿ, ರಂಗೋಲಿ, ರಸಪ್ರಶ್ನೆ, ರಂಗಪ್ರದರ್ಶನ, ಪದ್ಯ ಹೇಳುವುದು, ಖವ್ವಾಲಿ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ವಿದ್ಯಾರ್ಥಿಗಳನ್ನು ತಮ್ಮನ್ನು ತೊಡಗಿಸಿ ಕೊಂಡರು. ಜೇಡಿಮಣ್ಣಿನಲ್ಲಿ ಮೊಸಳೆ, ಆಮೆ, ಪರಿಸರದ ಬಗೆ ಸೇರಿದಂತೆ ವಿವಿಧ ಕಲಾಕೃತಿ ಗಳನ್ನು ರಚನೆ ಮಾಡಿದರು. ತಾಲ್ಲೂಕಿನ ಸರ್ಕಾರಿ ಶಾಲೆಗಳ ಶಿಕ್ಷಕರು ತಮ್ಮ ಶಾಲೆಗಳ ಮಕ್ಕಳನ್ನು ಸಿದ್ಧಗೊಳಿಸಿದರು.

ಕಾರ್ಯಕ್ರಮದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಿ.ಎನ್.ಸತ್ಯನಾರಾಯಣರೆಡ್ಡಿ, ಆರ್.ವೆಂಕಟರಾಮಪ್ಪ, ಆರ್. ಹನುಮಂತರೆಡ್ಡಿ, ರಂಗಾರೆಡ್ಡಿ, ನಾಗರಾಜ್, ವೆಂಕಟ ರವಣಪ್ಪ, ವೆಂಕಟರಾಯಪ್ಪ, ಎಂ.ಎನ್. ಮಂಜುನಾಥ್, ನಸರುದ್ದೀನ್, ಎನ್. ಶಿವಪ್ಪ, ಮಂಜುನಾಥ್, ಬಾವಾಜಾನ್, ಚಂದ್ರಶೇಖರ್, ಓಬೇದುಲ್ಲಾ, ರಂಗನಾಥ್, ಸುಜಾತ, ಈಶ್ವರಪ್ಪ, ಶಿವಯ್ಯ, ಕದಿರಪ್ಪ, ವರುಣ್, ಪ್ರಭಾವತಮ್ಮ, ಪ್ರಮೀಳ ಇದ್ದರು.