ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಮೇ.17ಕ್ಕೆ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ

ಈಗಾಗಲೇ 721ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ ಹೆಸರನ್ನು ನೋಂದಾಯಿಸಿಕೊಂಡಿದ್ದು, ಇನ್ನೂ 200 ಹೆಸರನ್ನು ನಾವು ಯಾವುದೇ ಆರ್ಥಿಕ ಸಹಾಯದ ಆಮಿತಿ ನೀಡಿ ಪ್ರಚಾರ ಮಾಡಿಲ್ಲ, ಕೇವಲ ಪ್ರತಿಭೆಯನ್ನು ಗುರುತಿಸಿ ಗೌರವಿಸು ವುದು ನಮ್ಮ ಮೂಲ ಉದ್ದೇಶವಾಗಿದೆ. ತಡವಾಗಿ ನೋಂದಣಿ ಮಾಡಿಕೊಳ್ಳುವ ಪೋಷಕರಲ್ಲಿ ಮನವಿ ಮಾಡಿದ ಅವರು, ಕೆಲವು ವಸ್ತುಗಳ ಕೊರತೆಯಾಗಬಹುದು.

ತಾಲ್ಲೂಕಿನ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜಾತಿ, ಧರ್ಮ ಮತ್ತು ವರ್ಣಭೇದಗಳನ್ನು ಮರೆತು ಎಲ್ಲರೂ ಒಂದೇ ಎಂಬ ಮನೋಭಾವನೆ ಯಿಂದ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಕಾಂತರಾಜು ಸಿ. ತಿಳಿಸಿದರು.

ಗೌರಿಬಿದನೂರು: ತಾಲ್ಲೂಕಿನ ಸಂಕಲ್ಪ ಚಾರಿಟಬಲ್ ಟ್ರಸ್ಟ್ ವತಿಯಿಂದ ಹಮ್ಮಿ ಕೊಂಡಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಜಾತಿ, ಧರ್ಮ ಮತ್ತು ವರ್ಣಭೇದ ಗಳನ್ನು ಮರೆತು ಎಲ್ಲರೂ ಒಂದೇ ಎಂಬ ಮನೋಭಾವನೆಯಿಂದ ಆಯೋಜಿಸಲಾಗಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಕಾಂತರಾಜು ಸಿ. ತಿಳಿಸಿದರು.

ನಗರದ ಅಭಿಲಾಷ ಲೇಔಟ್‌ನಲ್ಲಿರುವ ಸಂಕಲ್ಪ ಚಾರಿಟಬಲ್ ಟ್ರಸ್ಟ್ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಟ್ರಸ್ಟ್ ವತಿಯಿಂದ ದಿ.17 ರಂದು ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್'ರವರ 135 ನೇ ಜಯಂತಿ ಪ್ರಯುಕ್ತ 2025-26ನೇ ಸಾಲಿನಲ್ಲಿ ಉತ್ತೀರ್ಣರಾದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ, ವಿದ್ಯಾರ್ಥಿ ನಿಯರಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ವನ್ನು ಕಾರಣಾಂತರಗಳಿಂದ ನಗರದ ಸುಮಂಗಲಿ ಕಲ್ಯಾಣ ಮಂಟಪಕ್ಕೆ ವರ್ಗಾಯಿಸಲಾಗಿದೆ. ದಯವಿಟ್ಟು ಎಲ್ಲ ಸಹಕರಿಸಿ ಕಾರ್ಯಕ್ರಮಕ್ಕೆ ತಪ್ಪದೇ ಹಾಜರಾಗಬೇಕೆಂದರು.

ಇದನ್ನೂ ಓದಿ: Gauribidanur News: ರೈಲ್ವೆ ಅಂಡರ್ ಪಾಸ್ ನಿರ್ಮಿಸಿ: ಸಂಸದ ಡಾ.ಕೆ.ಸುಧಾಕರ್‌ಗೆ ಮನವಿ

ಕಾರ್ಯಕ್ರಮವು ಪಾಲನಹಳ್ಳಿ ಮಠದ ಮಠಾಧೀಶರಾದ ಶ್ರೀ ಸಿದ್ದರಾಜು ಸ್ವಾಮೀಜಿಗಳ ಆಶೀರ್ವಾದದೊಂದಿಗೆ ಆರಂಭವಾಗಲಿದೆ.

ಮುಖ್ಯ ಅತಿಥಿಗಳಾಗಿ ಗೌರಿಬಿದನೂರು ಪ್ರಧಾನ ಸಿವಿಲ್ ನ್ಯಾಯಧೀಶ ಡಾ.ಗಣೇಶ್.ಎನ್, ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷಡಾ. ಗೊಲ್ಲಹಳ್ಳಿ ಶಿವಪ್ರಸಾದ್, ಹೈಕೋರ್ಟ್ ವಕೀಲ ಪ್ರೊ.ಹರಿರಾಮ್ ರಾಮ್ ಹಾಗೂ ಸ್ಥಳೀಯ ಮುಖಂಡರು ಸೇರಿದಂತೆ ಇನ್ನಿತರರು ಭಾಗವಹಿಸಲಿರುವರು.

ಈಗಾಗಲೇ 721ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ಹೆಸರನ್ನು ನೋಂದಾಯಿಸಿ ಕೊಂಡಿದ್ದು, ಇನ್ನೂ 200 ಹೆಸರನ್ನು ನಾವು ಯಾವುದೇ ಆರ್ಥಿಕ ಸಹಾಯದ ಆಮಿತಿ ನೀಡಿ ಪ್ರಚಾರ ಮಾಡಿಲ್ಲ, ಕೇವಲ ಪ್ರತಿಭೆಯನ್ನು ಗುರುತಿಸಿ ಗೌರವಿಸುವುದು ನಮ್ಮ ಮೂಲ ಉದ್ದೇಶ ವಾಗಿದೆ. ತಡವಾಗಿ ನೋಂದಣಿ ಮಾಡಿಕೊಳ್ಳುವ ಪೋಷಕರಲ್ಲಿ ಮನವಿ ಮಾಡಿದ ಅವರು, ಕೆಲವು ವಸ್ತುಗಳ ಕೊರತೆಯಾಗಬಹುದು.

ಆದರೆ ಮಗುವನ್ನು ವೇದಿಕೆಯ ಮೇಲೆ ಕರೆದು ಗೌರವಿಸುವುದರಲ್ಲಿ ಯಾವುದೇ ಲೋಪ ವಾಗುವುದಿಲ್ಲ ಎಂದರು. ಅಲ್ಲದೆ, ಪ್ರಸ್ತುತ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆ ಬರೆಯುತ್ತಿರುವ ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮತ್ತೊಂದು ಪ್ರತ್ಯೇಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಹೆಚ್ಚಿನ ಸಂಖ್ಯೆಯಲ್ಲಿ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದರು.

ಇದೇ ವೇಳೆ ಟ್ರಸ್ಟ್ನ ಎಚ್.ಎಂ.ವೆಂಕಟೇಶ್, ಪ್ರಭಾಕರ್, ಸಂದೀಪ್, ಪೃಥ್ವಿ, ಶಿವಪ್ಪ, ನರಸಿಂಹಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.