ಬಾಗೇಪಲ್ಲಿ: ಪಿ.ಎಂ.ಶ್ರೀ ಸರ್ಕಾರಿ ಶಾಲೆಯಲ್ಲಿ ನುರಿತ ಹಾಗೂ ತರಬೇತಿ ಪಡೆದ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಗುಣಮಟ್ಟದ ಶಿಕ್ಷಕರು ಇದ್ದಾರೆ. ಖಾಸಗಿ ಶಾಲೆಗಳು ವ್ಯಾಮೋಹಕ್ಕೆ ಒಳಗಾಗಿದೆ ಪಿ.ಎಂ.ಶ್ರೀ ಶಾಲೆಗೆ ಸೇರಿಸುವಂತೆ ಮುಖ್ಯ ಶಿಕ್ಷಕ ಆರ್.ಹನುಮಂತ ರೆಡ್ಡಿ ಮನವಿ ಮಾಡಿದರು.
ಪಟ್ಟಣದ ಪಿ.ಎಂ.ಶ್ರೀ ಶಾಲೆಯಲ್ಲಿ ನನ್ನ ಶಾಲೆ ನನ್ನ ಕೊಡುಗೆ ಹಾಗೂ ಶಾಲಾ ಹಬ್ಬ -2026 ಕಾರ್ಯಕ್ರಮ ದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಶಾಲೆಗೆ ಮೈಸೂರು ಪ್ರಥಮ ಸಂಸ್ಥೆಯಿಂದ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದಿಂದ 10 ಕಂಪ್ಯೂಟರ್ ಹಾಗೂ ಗ್ರಂಥಾಲಯ ನೀಡಿದ್ದಾರೆ.
ಸೆಹಗಲ್ ಫೌಂಡೇಷನ್ ಶಾಲಾ ಆವರಣದಲ್ಲಿ ಹೆಣ್ಣುಮಕ್ಕಳಿಗೆ ಹೈಟೆಕ್ ಶೌಚಾಲಯ ನಿರ್ಮಿಸಿದೆ. ಹಾಲು ಒಕ್ಕೂಟದ ನಿರ್ದೇಶಕ ವಿ.ಮಂಜುನಾಥರೆಡ್ಡಿ 3 ಕಂಪ್ಯೂಟರ್, ಶಾಸಕ ಎಸ್.ಎನ್. ಸುಬ್ಬಾ ರೆಡ್ಡಿ ನಿರ್ವಹಣಾ ವೆಚ್ಚಕ್ಕೆ ₹2 ಲಕ್ಷ ಅನುದಾನ ನೀಡಿದ್ದು, ಖಾಸಗಿ ಸಂಘ, ಸಂಸ್ಥೆಗಳಿಂದ ಹಾಗೂ ಜನಪ್ರತಿನಿಧಿಗಳು ಶಾಲೆಯ ಪ್ರಗತಿಗೆ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: Bagepally News: ಜನ ಕಸ ಹಾಕುವುದನ್ನು ತಪ್ಪಿಸಲು ರಂಗೋಲಿ ಮೊರೆ ಹೋದ ಪುರಸಭೆ ಸಿಬ್ಬಂದಿ!
ಹೊಸ ಶಿಕ್ಷಣ ನೀತಿಯನ್ನು ಬಾಗೇಪಲ್ಲಿ ಪಟ್ಟಣದ ಪಿ.ಎಂ.ಶ್ರೀ ಶಾಲೆ ಅಳವಡಿಸಲಾದ ಅತ್ಯಾಧುನಿಕ ಮೂಲ ಸೌಕರ್ಯ, ಸುಸಜ್ಜಿತ ಪ್ರಯೋಗಾಲಯ. ತಂತ್ರಜ್ಞಾನ ಆಧಾರಿತ ಸ್ಟ್ರಾರ್ಟ್ ಕ್ಲಾನ್, ಸುಸಜ್ಜಿತ ಗ್ರಂಥಾಲಯ ಸೌಲಭ್ಯ, ಎಲ್ಲ ಮಾದರಿಯ ಕ್ರೀಡೆಗಳಿಗೆ ಪ್ರೊತ್ಸಾಹ ನೀಡುವುದು ಹಾಗೂ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುತ್ತಿರುವ ಹಿನ್ನಲೆ ತಮ್ಮ ಮಕ್ಕಳನ್ನು ಪಿ.ಎಂ.ಶ್ರೀ ಶಾಲೆಗೆ ಸೇರಿಸಲು ಮನವಿ ಮಾಡಿದರು.
ಶಿಕ್ಷಣ ಇಲಾಖೆ ಸಮನ್ವಯ ಅಧಿಕಾರಿಗಳಾದ ವೆಂಕಟರಾಮ್ ಮಾತನಾಡಿ, ’ಸರ್ಕಾರಿ ಶಾಲೆಗಳು ಮಕ್ಕಳಲ್ಲಿ ಮೌಲ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರೊಂದಿಗೆ ಪಾಲಕರು ಕೈಜೋಡಿಸಿದಾಗ ಮಾತ್ರ ಮಗು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯ’ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಅಕ್ಷರ ದಾಸೋಹ ನಿರಧೇಶಕ ಬೈರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪಿ.ವಂಕಟರವಣ, ಸರ್ಕಾರಿ ನೌಕರರ ಜಿಲ್ಲಾ ಉಪಾಧ್ಯಕ್ಷೆ ಪ್ರಭಾವ ತಮ್ಮ, ಯೋಗ ಶಿಕ್ಷಕರಾದ ರಘುನಾಥ ರೆಡ್ಡಿ, ನಿವೃತ್ತಿ ಶಿಕ್ಷಕ ಪ್ರಸಾದ್, ಎಸ್.ಡಿ.ಎಂ.ಸಿ ಸದಸ್ಯ ತಿಮ್ಮರಾಜು,ಹಿರಿಯ ಶಿಕ್ಷಕಿ ಧರ್ಮಪುತ್ರಿ, ಪ್ರೌಢಶಾಲಾ ಬಡ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಈಶ್ವರಪ್ಪ,ವೈ.ಮಂಜುನಾಥ್ ಹಾಗೂ ಶಾಲಾ ಶಿಕ್ಷಕರು ಮಕ್ಕಳು ಹಾಗೂ ಪೋಷಕರು ಹಾಜರಿದ್ದರು.