ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chikkaballapu News: ಮಲಿನವಾದ ಮನಸ್ಸಿನಲ್ಲಿ ಶುದ್ಧ ಚೈತನ್ಯರೂಪದ ಆತ್ಮದರ್ಶನ ಸಾಧ್ಯವಿಲ್ಲ : ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್

ತನ್ನನ್ನು ತಾನು ಅರಿಯಬೇಕು ಎಂದು ಎಲ್ಲಾ ಸಂತರು ಉಪದೇಶ ಮಾಡಿದ್ದಾರೆ. ತನ್ನನ್ನು ತಾನು ಅರಿಯುವುದೇ ಮೋಕ್ಷ. ದುರ್ಗುಣಗಳನ್ನು ಒಳಗೊಂಡಿರುವ ಮನಸ್ಸು ಈ ಸಾಧನೆ ಮಾಡಲು ಬಿಡುವುದಿಲ್ಲ. ಮನಸ್ಸು ಕನ್ನಡಿಯ ಹಾಗೆ. ಧೂಳು ಮುಚ್ಚಿದ ಕನ್ನಡಿಯಲ್ಲಿ ಪ್ರತಿಬಿಂಬವೂ ಮಲಿನವಾಗಿ ಕಾಣುವಂತೆ, ದುರ್ಗುಣಗಳಿಂದ ಕೂಡಿ, ಮಲಿನವಾದ ಮನಸ್ಸಿ ನಲ್ಲಿ ಶುದ್ಧ ಚೈತನ್ಯರೂಪದ ಆತ್ಮದರ್ಶನ ಸಾಧ್ಯವಿಲ್ಲ

ಮಾನವರು ಆಸೆಯೆಂಬ ಪಾಶದಿಂದ ಬಂಧಿತರಾಗುವುದಕ್ಕೆ ಮನಸ್ಸೇ ಕಾರಣವಾಗಿದೆ. ಜ್ಞಾನದ ಉದಯ ಮನಸ್ಸಿನಿಂದ ಆರಂಭವಾಗುತ್ತದೆ,ಮಲಿನವಾದ ಮನಸ್ಸಿನಲ್ಲಿ ಶುದ್ದ ಆತ್ಮದರ್ಶನ ಸಾಧ್ವವಿಲ್ಲ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ||ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಚಿಂತಾಮಣಿ: ಮಾನವರು ಆಸೆಯೆಂಬ ಪಾಶದಿಂದ ಬಂಧಿತರಾಗುವುದಕ್ಕೆ ಮನಸ್ಸೇ ಕಾರಣವಾಗಿದೆ. ಜ್ಞಾನದ ಉದಯ ಮನಸ್ಸಿನಿಂದ ಆರಂಭವಾಗುತ್ತದೆ, ಮಲಿನವಾದ ಮನಸ್ಸಿನಲ್ಲಿ ಶುದ್ದ ಆತ್ಮದರ್ಶನ ಸಾಧ್ವವಿಲ್ಲ ಎಂದು ಕೈವಾರ ಕ್ಷೇತ್ರದ ಧರ್ಮಾಧಿಕಾರಿ ಗಳಾದ ಡಾ.ಎಂ.ಆರ್.ಜಯರಾಮ್ ಅಭಿಪ್ರಾಯಪಟ್ಟರು.

ಶ್ರೀಕ್ಷೇತ್ರ ಕೈವಾರದ ಗವಿಯ ಬಳಿಯ ಪ್ರಕೃತಿಯ ಮಡಿಲಲ್ಲಿ ನೆಲೆಸಿರುವ ಯೋಗಾನರಸಿಂಹಸ್ವಾಮಿ ವೈಕುಂಠ ಯಾಗಶಾಲೆಯಲ್ಲಿ ಕೈವಾರ ತಾತಯ್ಯನವರ 300ನೇ ಜಯಂತಿಯ ಅಂಗವಾಗಿ ಆಯೋಜಿಸಲಾಗಿದ್ದ 10ನೇ ತಿಂಗಳ ಶ್ರೀರಾಮಭವತಾರಕ ಮಂತ್ರದ ಶ್ರೀರಾಮಕೋಟಿ ಜಪಯಜ್ಞ ಉದ್ಘಾಟಿಸಿ ಮಾತನಾಡಿದರು.

ತನ್ನನ್ನು ತಾನು ಅರಿಯಬೇಕು ಎಂದು ಎಲ್ಲಾ ಸಂತರು ಉಪದೇಶ ಮಾಡಿದ್ದಾರೆ. ತನ್ನನ್ನು ತಾನು ಅರಿಯುವುದೇ ಮೋಕ್ಷ. ದುರ್ಗುಣಗಳನ್ನು ಒಳಗೊಂಡಿರುವ ಮನಸ್ಸು ಈ ಸಾಧನೆ ಮಾಡಲು ಬಿಡುವುದಿಲ್ಲ. ಮನಸ್ಸು ಕನ್ನಡಿಯ ಹಾಗೆ. ಧೂಳು ಮುಚ್ಚಿದ ಕನ್ನಡಿಯಲ್ಲಿ ಪ್ರತಿಬಿಂಬವೂ ಮಲಿನವಾಗಿ ಕಾಣುವಂತೆ, ದುರ್ಗುಣಗಳಿಂದ ಕೂಡಿ, ಮಲಿನವಾದ ಮನಸ್ಸಿನಲ್ಲಿ ಶುದ್ಧ ಚೈತನ್ಯರೂಪದ ಆತ್ಮದರ್ಶನ ಸಾಧ್ಯವಿಲ್ಲ. ಆದ್ದರಿಂದ ಮನಸ್ಸಿನ ಮಾಲಿನ್ಯವನ್ನು ಕಳೆದು ಶುದ್ಧಮಾಡಿಕೊಳ್ಳಬೇಕು. ಗುರುವಿನ ಉಪದೇಶಗಳನ್ನು ಬದುಕಿ ನಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸಿನ ಮಾಲಿನ್ಯ ದೂರವಾಗಿ ಶುದ್ಧವಾಗುತ್ತದೆ. ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳಲು ಪ್ರತಿ ತಿಂಗಳೂ 24 ಗಂಟೆಗಳ ಕಾಲ ಪ್ರಕೃತಿಯ ಮಡಿಲಿನಲ್ಲಿ ನಾಮಸ್ಮರಣೆ ಮಾಡಲಾಗುತ್ತದೆ ಎಂದರು.

ಇದನ್ನೂ ಓದಿ: Chikkaballapur News: ಪೋಶೆಟ್ಟಿಹಳ್ಳಿಯಲ್ಲಿ ಶಾಲಾ ಪ್ರಾರಂಭೋತ್ಸವಕ್ಕೆ ಜಿಲ್ಲಾಧಿಕಾರಿ ಜಿ.ಪ್ರಭು ಅವರಿಂದ ಚಾಲನೆ

ಕಾರ್ಯಕ್ರಮಕ್ಕೂ ಮೊದಲಿಗೆ ಘಂಟಾನಾದ, ಸುಪ್ರಭಾತ, ಗೋಪೂಜೆಯನ್ನು ಶ್ರೀಯೋಗಿ ನಾರೇಯಣ ಮಠದಲ್ಲಿ ನೆರವೇರಿಸಲಾಯಿತು. ನಂತರ ಗವಿಯ ಬಳಿಗೆ ಭಕ್ತರು ಬಂದರು. ಗವಿ ಯಾಗಶಾಲೆಯಲ್ಲಿರುವ ಶ್ರೀಗಣಪತಿ, ಮಹಾಲಕ್ಷ್ಮೀ, ಯೋಗಾನರಸಿಂಹಸ್ವಾಮಿ ಹಾಗೂ ಸದ್ಗುರು ಶ್ರೀಯೋಗಿನಾರೇಯಣ ತಾತಯ್ಯನವರ ವಿಗ್ರಹಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಶ್ರೀರಾಮಕೋಟಿ ನಡೆಯುವ ಸ್ಥಳದಲ್ಲಿ ವಿಶೇಷ ವೇದಿಕೆಯನ್ನು ಹಾಕಲಾಗಿತ್ತು. ಆ ವೇದಿಕೆಯಲ್ಲಿ ಶ್ರೀಸೀತಾರಾಮರ ವಿಗ್ರಹಗಳನ್ನು, ಕೈವಾರ ತಾತಯ್ಯನವರ ಭಾವಚಿತ್ರ ಗಳನ್ನು ಹಾಗೂ ಮಧ್ಯದಲ್ಲಿ ದೀಪಸ್ತಂಭವನ್ನು ಇಡಲಾಗಿತ್ತು. ಧರ್ಮಾಧಿಕಾರಿ ದಂಪತಿ ಗಳು ದೀಪವನ್ನು ಬೆಳಗುವುದರ ಮೂಲಕ ರಾಮಕೋಟಿ ಜಪಯಜ್ಞಕ್ಕೆ ಚಾಲನೆ ನೀಡಿದರು.

ರಾಮಕೋಟಿಯನ್ನು ಅಖಂಡ 24 ಗಂಟೆಗಳ ಕಾಲ ನಿರಂತರವಾಗಿ ಮಾಡಲಾಯಿತು. ಶ್ರೀಯೋಗಾನರಸಿಂಹಸ್ವಾಮಿ ತಂಡ, ಶ್ರೀಅಮರನಾರೇಯಣಸ್ವಾಮಿ ತಂಡ, ಶ್ರೀಮಹಾಲಕ್ಷ್ಮೀ ತಂಡಗಳೆಂದು ಮೂರು ತಂಡಗಳನ್ನು ಮಾಡಲಾಗಿತ್ತು. ಒಂದು ಗಂಟೆಗೆ ಒಂದು ತಂಡವು “ರಾಮ ರಾಮ ಮುಕುಂದ ಮಾಧವ ರಾಮ ಸದ್ಗುರು ಕೇಶವಾ, ರಾಮ ದಶರಥ ತನಯ ದೇವಾ ರಾಮಶ್ರೀ ನಾರೇಯಣ” ಎಂಬ ಶ್ರೀರಾಮಭವತಾರಕ ಮಂತ್ರವನ್ನು ಪಠಿಸುತ್ತಾ, ತಾಳ ಹಾಕುತ್ತಾ, ಶ್ರೀರಾಮರ ವೇದಿಕೆಯ ಸುತ್ತಲೂ ಹೆಜ್ಜೆ ಹಾಕುತ್ತಾ ಭಕ್ತಿಯಿಂದ ಪಠಿಸುತ್ತಿದ್ದರು.

Ramakoti

ಉಪನ್ಯಾಸಕ ವೆಂಕಟರಮಣಪ್ಪ ಪ್ರಸ್ತಾವಿಕವಾಗಿ ಮಾತನಾಡಿದರು. ವಿದುಷಿ ಉಷಮ್ಮ, ಸರೋಜಮ್ಮ, ದಾಕ್ಷಾಯಿಣಿರವರು ಪ್ರಾರ್ಥಿಸಿದರು. ದೂರ ಪ್ರಾಂತ್ಯಗಳಿಂದ ಬಂದಿದ್ದ ಭಕ್ತರು ನಾಮಸ್ಮರಣೆಯನ್ನು ಮಾಡಿ ಪುನೀತರಾದರು. ಬೆಳಗಿನ ಜಾವ ನಾಮಸ್ಮರಣೆ ಯನ್ನು ಮಹಾಮಂಗಳಾರತಿಯೊಂದಿಗೆ ಸಮಾಪ್ತಿಗೊಳಿಸಲಾಯಿತು.

ಕಾರ್ಯಕ್ರಮದಲ್ಲಿ ಶ್ರೀಯೋಗಿನಾರೇಯಣ ಮಠದ ಉಪಾಧ್ಯಕ್ಷರಾದ ಜೆ.ವಿಭಾಕರರೆಡ್ಡಿ, ಖಜಾಂಚಿ ಆರ್.ಪಿ.ಎಂ.ಸತ್ಯನಾರಾಯಣ್, ಶ್ರೀಯೋಗಿನಾರೇಯಣ ಸಂಕೀರ್ತನಾ ಯೋಜನೆ ಸಂಚಾಲಕರಾದ ವಿದ್ವಾನ್ ವಾನರಾಶಿ ಬಾಲಕೃಷ್ಣ ಭಾಗವತರ್, ಸದಸ್ಯರಾದ ಕೆ.ನರಸಿಂಹಪ್ಪ, ಕೆ.ವಿ.ಸುರೇಶ್, ನಿವೃತ್ತ ಐಎಎಸ್ ಅಧಿಕಾರಿ ಬಿ.ಎನ್.ಕೃಷ್ಣಯ್ಯ, ಹಾಗೂ ವಿವಿಧ ಭಾಗಗಳಿಂದ ಬಂದ ಭಕ್ತರು ಭಾಗವಹಿಸಿದ್ದರು.