ಚಿಕ್ಕಬಳ್ಳಾಪುರ : ಇತ್ತೀಚಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಸಾಹಿತಿ ಡಾ.ಆರ್. ಸುನಂದಮ್ಮ ( Dr R Sunandamma) ಅವರು ಕರ್ನಾಟಕ ಲೇಖಕಿಯರ ಸಂಘದ ನೂತನ ಅಧ್ಯಕ್ಷರಾಗಿ ಭಾನುವಾರ ಆಯ್ಕೆಯಾಗಿದ್ದಾರೆ.
ಬೆಂಗಳೂರಿನಲ್ಲಿ ನಡೆದ ಚುನಾವಣೆಯಲ್ಲಿ ಡಾ. ಆರ್ ಸುನಂದಮ್ಮ 471 ಮಾತುಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ ಎದುರಾಳಿ ನಿರ್ಮಲ ಯಲಿಗಾರ್ 282 ಮತಗಳನ್ನು ಪಡೆದು ಪರಾಜಿತರಾದರು.ಒಟ್ಟು 757 ಮತಗಳ ಪೈಕಿ 04 ಮತಗಳು ಅಸಿಂಧುವಾದರೆ ಉಳಿದವು ಚಲಾವಣೆಯಾದವು.
ಇದನ್ನೂ ಓದಿ: Chikkamagaluru News: ಪ್ರೀತಿಸಿದವಳಿಗೆ ಕೈಕೊಟ್ಟು ಬೇರೊಬ್ಬರ ಜೊತೆ ಮದುವೆ; ಕಲ್ಯಾಣ ಮಂಟಪಕ್ಕೆ ನುಗ್ಗಿ ಯುವತಿ ರಂಪಾಟ
ಸುನಂದಮ್ಮ ಅವರ ಆಯ್ಕೆಯ ಸಂಗತಿ ತಿಳಿದ ಕೂಡಲೇ ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಸಂತಸ ಮನೆ ಮಾಡಿದೆ. ಅಂದ ಹಾಗೆ, ಆರ್.ಸುನಂದಮ್ಮ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಹೋಬಳಿ ವೆಂಕಟಾಪುರ ಗ್ರಾಮದವರು.ಹಾಲಿ ವಾಸ ಬೆಂಗಳೂರು.