ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Chikkaballapur News: ಕೆಐಎಡಿಬಿ ವಿರೋಧಿ ಹೋರಾಟ ಸಮಿತಿಗಳ ಮಹಾಪೋಷಕರೇ ಸಮಾಜ ಸೇವಕರ ಮುಖವಾಡ ಹೊತ್ತ ರಾಜೀವ್‌ಗೌಡ: ರಾಮಾಂಜಿ ಆರೋಪ

ರಾಜೀವ್ ಗೌಡರೇ ನಿಮಗೆ ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗುವುದಾದರೆ ಮೊದಲು ನಿಮ್ಮ ನವರಂಗಿ ಆಟ ನಿಲ್ಲಿಸಿ. ನೀವೊಬ್ಬ ಪ್ರಭಾವಿ ಮುಖಂಡರೇ ಆಗಿದ್ದಲ್ಲಿ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊಡಿಸುವ ಮೊದಲೇ ಅದನ್ನು ನಿಲ್ಲಿಸಲು ಮುಂದಾಗಬಹುದಿತ್ತು ಅಲ್ಲವೆ. ನಿಮಗೆ ಆ ಸಾಮರ್ಥ್ಯ ಇಲ್ಲ. ಸುಮ್ಮನೆ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ದೊಡ್ಡ ಸಮಾಜ ಸೇವಕ ಎಂದು ಬಿಂಬಿಸಿಕೊಂಡಿದ್ದೀರಿ.

ಕೆಐಎಡಿಬಿ ವಿರೋಧಿ ಹೋರಾಟ ಸಮಿತಿಗಳ ಮಹಾಪೋಷಕರೇ ಸಮಾಜ ಸೇವಕರ ಮುಖವಾಡ ಹೊತ್ತ ರಾಜೀವ್‌ಗೌಡ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಮಾಂಜಿ ಆರೋಪಿಸಿದರು.

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲೂಕು ಜಂಗಮಕೋಟೆ ಭಾಗದಲ್ಲಿ ಪ್ರಾರಂಭವಾಗ ಲಿರುವ ಕೆಐಎಡಿಬಿ ಕೈಗಾರಿಕೀಕರಣದ ವಿರುದ್ದ ನಿರಂತರ ಹೋರಾಟಗಳನ್ನು ರೂಪಿಸಿ ಸರಕಾರದ ದಿಕ್ಕು ತಪ್ಪಿಸುತ್ತಿರುವ ಸಂಘಟನೆಗಳ ಮಹಾಪೋಷಕರಾಗಿ ಕಾಂಗ್ರೆಸ್ ಪಕ್ಷದ ಪರಾಜಿತ ಅಭ್ಯರ್ಥಿ ರಾಜೀವ್‌ಗೌಡರೇ ಆಗಿದ್ದಾರೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಮಾಂಜಿ ಆರೋಪ ಗಂಭೀರ ಆರೋಪ ಮಾಡಿದರು.

ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

ರಾಜೀವ್ ಗೌಡರೇ ನಿಮಗೆ ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿ ಮುಖ್ಯವಾಗುವುದಾದರೆ ಮೊದಲು ನಿಮ್ಮ ನವರಂಗಿ ಆಟ ನಿಲ್ಲಿಸಿ. ನೀವೊಬ್ಬ ಪ್ರಭಾವಿ ಮುಖಂಡರೇ ಆಗಿದ್ದಲ್ಲಿ ಕೆಐಎಡಿಬಿ ಪ್ರಾಥಮಿಕ ಅಧಿಸೂಚನೆ ಹೊಡಿಸುವ ಮೊದಲೇ ಅದನ್ನು ನಿಲ್ಲಿಸಲು ಮುಂದಾಗಬಹುದಿತ್ತು ಅಲ್ಲವೆ. ನಿಮಗೆ ಆ ಸಾಮರ್ಥ್ಯ ಇಲ್ಲ. ಸುಮ್ಮನೆ ಇಲ್ಲಿ ಸಣ್ಣ ಪುಟ್ಟ ಕೆಲಸ ಮಾಡಿ ದೊಡ್ಡ ಸಮಾಜ ಸೇವಕ ಎಂದು ಬಿಂಬಿಸಿಕೊಂಡಿದ್ದೀರಿ. ನಮ್ಮ ಕ್ಷೇತ್ರದಲ್ಲಿ ಕೈಗಾರಿಕೆಗಳಿಲ್ಲದ ಕಾರಣ ನಿತ್ಯವೂ 2 ಸಾವಿರಕ್ಕೂ ಹೆಚ್ಚು ಮಂದಿ ಹೊರ ಜಿಲ್ಲೆಗಳಿಗೆ ಕೆಲಸಕ್ಕಾಗಿ ಗುಳೆಹೋಗುತ್ತಿದ್ದಾರೆ.ಇದನ್ನು ತಪ್ಪಿಸಬೇಕಾದರೆ ಕ್ಷೇತ್ರದಲ್ಲಿ ಕೈಗಾರಿಕೆಗಳು ಸ್ಥಾಪನೆಯಾಗಲೇ ಬೇಕು. ಇದಕ್ಕೆ ಬೆಂಬಲ ನೀಡುವುದನ್ನು ಮೊದಲು ಕಲಿಯಿರಿ ಎಂದು ಚಾಟಿ ಬೀಸಿದರು.

ಇದನ್ನೂ ಓದಿ: Chikkaballapura Bandh: ಹೆಚ್.ಎನ್.ವ್ಯಾಲಿ ಮೂರನೇ ಹಂತದ ಶುದ್ಧೀಕರಣಕ್ಕಾಗಿ ಒತ್ತಾಯಿಸಿ ಕರೆ ನೀಡಿದ್ದ ಚಿಕ್ಕಬಳ್ಳಾಪುರ ಬಂದ್ ಸಂಪೂರ್ಣ ಯಶಸ್ವಿ

ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯಲ್ಲಿ 1 ಸಾವಿರ ಎಕರೆ ಕೆಐಎಡಿಬಿ ಭೂಸ್ವಾಧೀನ ಮಾಡುತ್ತಿದೆ.ನಿಮ್ಮದೇ ತಾಲೂಕಿನಲ್ಲಿ ಈ ಕೆಲಸ ಆಗುತ್ತಿದ್ದರೂ ಏಕೆ ನೀವು ನಿಲ್ಲಿಸುವ ಕೆಲಸ ಮಾಡುತ್ತಿಲ್ಲ.ಅದನ್ನು ಬಿಟ್ಟು ಶಿಡ್ಲಘಟ್ಟ ತಾಲೂಕಿನಲ್ಲಿಯೇ ಮೊದಲ ಕೈಗಾರಿಕಾ ಪ್ರದೇಶ ನಿರ್ಮಾಣ ಆಗಲಿರುವಾಗ ಇದನ್ನು ತಪ್ಪಿಸಲು ರೈತಸಂಘಟನೆಗಳ ಮೂಲಕ ಹೋರಾಟ ಜೀವಂತವಾಗಿಡುವ ಪ್ರಯತ್ನ ಮಾಡುತ್ತಿರುವುದು ಯಾರಿಗೂ ತಿಳಿದಿಲ್ಲ ಎಂದು ಭಾವಿಸಿದ್ದರೆ ಅದು ನಿಮ್ಮ ದಡ್ಡತನ ಎಂದು ವ್ಯಂಗ್ಯವಾಡಿದರು.

ನಮಗೆ ಕೈಗಾರಿಕೆ ಯಾಕೆ ಬೇಕು ಎಂದರೆ ಸರಕಾರ 25/06/2024 ರಂದು 2832 ಎಕರೆ ಭೂ ಸ್ವಾಧೀನಕ್ಕೆ ಕೆಐಎಡಿಬಿ ಮೂಲಕ ಸರಕಾರ ಪ್ರಾಥಮಿಕ ಅಧಿಸೂಚನೆ ಹೊರಡಿಸಿತು. ಈ ಭಾಗದ ರೈತರು ಫಲವತ್ತಾದ ಕೃಷಿ ಭೂಮಿ ವಶಪಡಿಸಿಕೊಳ್ಳುವುದನ್ನು ನಾವು ಬಿಡುವು ದಿಲ್ಲ ಎಂದು ಪಟ್ಟು ಹಿಡಿದು ಸರಕಾರದ ವಿರುದ್ಧ ಹೋರಾಟ ಮಾಡಿದ ಪರಿಣಾಮ ದಿನಾಂಕ 25/02/2026 ರಂದು 491 ಎಕರೆ  ಪ್ರದೇಶವನ್ನು ಕೈ ಬಿಟ್ಟು ಉಳಿದ 2332 ಎಕರೆ ಭೂಮಿಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಿರುತ್ತಾರೆ. ಈ ವಿಚಾರದಲ್ಲಿ ಸರಕಾರ ತಕ್ಷಣ ರೈತರ ಸಭೆ ಕರೆದು ಅಂತಿಮ ದರಪಟ್ಟಿಯ ತೀರ್ಮಾನ ಮಾಡಬೇಕು ಎಂದು ಒತ್ತಾಯಿಸಿ ಜಿಲ್ಲೆಯ ನೀರಾವರಿ ಹಾಗೂ ಇತರೆ ಸಮಸ್ಯೆಗಳ ಪರಿಹಾರಕ್ಕಾಗಿ ಮಾ.23 ರಿಂದ ಜಿಲ್ಲಾಡಳಿತ ಭವನದ ಎದುರು ಅನಿರ್ಧೀಷ್ಟ ಧರಣಿಯನ್ನು ಹಮ್ಮಿಕೊಂಡಿದ್ದೇವೆ ಎಂದರು.

cbpm7r

ನಲ್ಲೇನಹಳ್ಳಿ ಸುಬ್ರಹ್ಮಣಿ ಮಾತನಾಡಿ, ಕೆಐಎಡಿಬಿ ಭೂಸ್ವಾಧೀನ ವಿರೋಧಿ ಸಮಿತಿಯನ್ನು ಭಕ್ತರಹಳ್ಳಿ ಬೈರೇಗೌಡ ಅವರು ತಮ್ಮ  ಸಂಪತ್ತು ಹೆಚ್ಚಿಸಿಕೊಳ್ಳುವ ಅಕ್ಷಯಪಾತ್ರೆ ಯಾಗಿಸಿ ಕೊಂಡಿದ್ದಾರೆ.ಅವರ  ಮಕ್ಕಳನ್ನು ಪ್ರತಿಷ್ಟಿತ ಕಾಲೇಜುಗಳಲ್ಲಿ ಓದಿಸಲು ಲಕ್ಷಾಂತರ ರೂಪಾಯಿ ಫೀಸು ಕಟ್ಟ÷ಲು ಹಣ ಎಲ್ಲಿಂದ ಬಂತು ಎಂಬುದು ಗೊತ್ತಿದೆ. ನಿಮ್ಮ ಮಕ್ಕಳಂತೆ ಉಳಿದ ರೈತರೂ ಅವರ ಮಕ್ಕಳು ಎಂಬಿಬಿಎಸ್, ಇಂಜಯರಿAಗ್ ಆಗಬಾರದಾ ಬೈರೇಗೌಡರೇ ಎಂದು ಪ್ರಶ್ನಿಸಿದರು.

ಬೈರೇಗೌಡರೆ ರೈತರೆಂದರೆ ರೈತರಷ್ಟೇ, ಜಂಗಮಕೋಟೆ ಹೋಬಳಿಯವರು ಮಾತ್ರ ರೈತರು, ದಿಬ್ಬೂರಹಳ್ಳಿ ಭಾಗದವರು ರೈತರಲ್ಲವಾ? ಆ ಭಾಗದ ರೈತರೂ ಕೂಡ ನಮ್ಮ ಭೂಮಿ ಕೊಡಲು ನೀವ್ಯಾರು ಬೈರೇಗೌಡರೇ ಎಂದು ಪ್ರಶ್ನಿಸಬೇಕಿತ್ತು. ಯಾಕೆ ಕೇಳುತ್ತಿಲ್ಲ ಎಂದು ಪ್ರಶ್ನಿಸಿದರು.

ಬೈರೇಗೌಡರು ೪೯೧ ಎಕರೆ ಭೂಮಿ ಹಿಂದಕ್ಕೆ ಕೊಡಿಸಿರುವ ಎಂ.ಎಲ್‌ಎ ಅವರನ್ನೂ ಬೈಯುತ್ತಾರೆ, ಜಿಲ್ಲಾ ಉಸ್ತುವಾರಿ ಸಚಿವರು, ಮುಖ್ಯಮಂತ್ರಿಗಳನ್ನೂ ಬೈಯುತ್ತಾರೆ.ನೀವು ಪರಿಶುದ್ಧರಾಗಿದ್ದರೆ ಬೇರೆಯವರ ಬಳಿ ಯಾಕೆ ಕೈಚಾಚಬೇಕು. ಮೊದಲು ನೀವು ರೈತರ ಹೆಸರೇಳಿಕೊಂಡು ಹಣ ಪಡೆಯುವುದು ನಿಲ್ಲಿಸಿ ಆಮೇಲೆ ಎಲ್ಲರನ್ನೂ ಬೈಯುವುದು ಸರಿ.ನೀವು ರಿಯಲ್ ಎಸ್ಟೇಟ್ ಮಾಲಿಕರ ಬಳಿ ಹಣ ಪಡೆಯುವುದು ಎಲ್ಲರಿಗೂ ಗೊತ್ತಿರುವ ಸತ್ಯ. ರೈತರೇ ಮೊದಲು  ನೀವು ರೈತರಾಗಿರಿ.ಯಾರ ಮಾತೋ ಕೇಳಿ ದಾರಿ ತಪ್ಪಿ ಅವರ ಹರಕೆಯ ಕುರಿಯಾಗಬೇಡಿ ಎಂದು ಮನವಿ ಮಾಡಿದರು.

ಕೆಐಎಡಿಬಿ ರೈತಪರ ಹೋರಾಟ ಸಮಿತಿ ಮುಖಂಡ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ ನಮ್ಮ ಯುವಕರಿಗೆ ಉದ್ಯೋಗ ಕೊಡಿಸಲು, ನಮ್ಮಲ್ಲೇ ಉದ್ಯೋಗ ಸೃಷ್ಟಿ ಆಗಬೇಕು. ತಾಲೂಕಿನಿಂದ 2000 ಮಂದಿ ಉದ್ಯೋಗ ಹುಡುಕಿ ದೊಡ್ಡಬಳ್ಳಾಪುರ, ವೇಮಗಲ್, ನರಸಾಪುರ, ಹೊಸಕೋಟೆಗೆ ಹೋಗುತ್ತಾರೆ. ಇದನ್ನು ತಪ್ಪಿಸಲು ಜಂಗಮಕೋಟೆ ಭಾಗ ದಲ್ಲಿ ಕೈಗಾರಿಕೆ ಪ್ರಾರಂಭಿಸಲು ಹೊರಟಿರುವ ಸರಕಾರಕ್ಕೆ ನಾವು ಸಹಕಾರ ನೀಡಲಿದ್ದೇವೆ. ಆದರೆ 2332 ಎಕರೆ ಭೂಮಿಗೆ ಅಂತಿಮ ಅಧಿಸೂಚನೆ ಹೊರಡಿಸಿದ್ದು ಈ ಕೂಡಲೇ ರೈತರ ಸಭೆ ಕರೆದು ಅವರಿಗೆ ಕೊಡುವ ಅಂತಿಮ ದರಪಟ್ಟಿ ತೀರ್ಮಾ ಮಾಡಬೇಕು. ಜಿಲ್ಲೆಯ ರೈತರ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮಾ.23ರಂದು ಜಿಲ್ಲಾಧಿಕಾರಿಗಳ ಭವನದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದರು.

ಈ ವೇಳೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ರಾಮಾಂಜೀನೇಯ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೇ ಜಿಲ್ಲಾ ಪ್ರದಾನ ಕಾರ್ಯದರ್ಶಿ, ಭಕ್ತರಹಳ್ಳಿ ಪ್ರತೀಶ್,ದಲಿತ ಸಂಘರ್ಷ ಸಮಿತಿ ಭೀಮಾ ಮಾರ್ಗ ರಾಜ್ಯ ಸಂಚಾಲಕ ಎನ್,ಮೂರ್ತಿ, ಕಸ್ತೂರಿ ಕರ್ನಾಟಕ ಜನಪರ ವೇದಿಕೆಯ ಜಿಲ್ಲಾದ್ಯಕ್ಷ ರಾಮಾಂಜಿ,
ಸುವರ್ಣ ಕರ್ನಾಟಕ ಜನ ಪರ ವೇದಿಕೆಯ ತಾಲೂಕು ಅದ್ಯಕ್ಷರಾದ ಸುರೇಶ್(ಸೂರಿಭಗತ್), ಮರಗೆಲಸ ಕಾರ್ಮಿಕರ ಘಟಕದ ತಾಲೂಕು ಅಧ್ಯಕ್ಷರಾದ ದೀಪು ಮತ್ತು ಜಂಗಮಕೋಟೆ ಹೋಬಳಿ ಕೆಐಎಡಿಬಿ, 13 ಹಳ್ಳಿಗಳ ರೈತ ಪರ ಹೋರಾಟ ಸಮಿತಿಯ ನಲ್ಲೇನಹಳ್ಳಿ ಸುಬ್ರಮಣಿ, ಜಂಗಮಕೋಟೆ ಜೆಸಿ, ಮಂಜಣ್ಣ, ನಾರಾಯಣಸ್ವಾಮಿ, ಬಸವಪಟ್ಟಣ ಗ್ರಾಮದ ನಾಗರಾಜ್, ವೆಂಕಟೇಶ್, ಯಣ್ಣಂಗೂರು ಗ್ರಾಮದ ಈರಪ್ಪ, ಪ್ರದೀಪ್, ಚೀಮಂಗಲ ಗ್ರಾಮದ ಚಿನ್ನಪ್ಪ, ಚಿಕ್ಕಂಡಹಳ್ಳಿ ಲಕ್ಷ್ಮಿ ನಾರಾಯಣ್, ರೈತ ಸಂಘದ ತಾಲೂಕು ಕಾರ್ಯದರ್ಶಿ ನವೀನಕುಮಾರ್,  ಚಿಕ್ಕಬಳ್ಳಾಪುರ ತಾಲೂಕು ಕಾರ್ಯದರ್ಶಿ ಕುಡವತಿ ಶಿವರಾಜು,ಹೋಬಳಿ ಅದ್ಯಕ್ಷ ಪ್ರದೀಪ್ ಗೌಡ, ನಿರಂಜನಕುಮಾರ್, ದಲಿತ ಸಂಘರ್ಷ ಸಮಿತಿಯ ರಾಜೇಶ್, ಮನೋಜ್,ಹಾಗೂ ಇತರರು ಉಪಸ್ದಿತರಿದ್ದರು.