ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shidlaghatta News: ಸಂಕಷ್ಟದಲ್ಲಿ ಬೆಂಬಲಿಸಿದ ಜನತೆಗೆ ಕೃತಜ್ಞತೆ ಸಲ್ಲಿಸಿದ ರಾಜೀವ್‌ಗೌಡರ ಪತ್ನಿ ಸಹನಾ ರಾಜೀವ್ ಗೌಡ

ನನ್ನ ವಿರುದ್ಧ ರಾಜಕೀಯ ಸಂಚು ರೂಪಿಸಿ ಹೆಸರನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸತ್ಯವನ್ನು ಯಾರೂ ಮರೆಮಾಡಲು ಸಾಧ್ಯವಿಲ್ಲ. ನನ್ನ ಮೇಲೆ ರಾಜಕೀಯ ಪಿತೂರಿ ಮಾಡಿದವರು ಯಾರು ಎಂಬು ದನ್ನು ದೇವಿಯೇ ನೋಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ತಕ್ಕ ಉತ್ತರ ನೀಡುತ್ತಾರೆ

ಶಿಡ್ಲಘಟ್ಟ: ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಅವರು ಜೈಲಿನಲ್ಲಿದ್ದ ಅವಧಿಯಲ್ಲಿ ಕ್ಷೇತ್ರದ ಜನರು ತೋರಿದ ಅಪಾರ ಪ್ರೀತಿ, ವಿಶ್ವಾಸ ಮತ್ತು ಬೆಂಬಲ ನಮ್ಮ ಕುಟುಂಬಕ್ಕೆ ಅಪಾರ ಧೈರ್ಯ ತುಂಬಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸಹನಾ ರಾಜೀವ್ ಗೌಡ ತಿಳಿಸಿದ್ದಾರೆ.

ತಾಲೂಕಿನ ಸಾದಲಿ ಗ್ರಾಮದ ಸಾದಲಮ್ಮ ದೇವಸ್ಥಾನದಲ್ಲಿ ಏರ್ಪಡಿಸಿದ್ದ ವಿಶೇಷ ಪೂಜೆ ಕಾರ್ಯ ಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಸಾದಲಮ್ಮ ದೇವಿಯ ಮೇಲೆ ನನಗೆ ಅಪಾರ ನಂಬಿಕೆ ಇದೆ. ರಾಜೀವ್ ಗೌಡರು ಜೈಲಿನಿಂದ ಬಿಡುಗಡೆಯಾಗಲಿ ಎಂದು ನಾನು ಹರಕೆ ಮಾಡಿಕೊಂಡಿದ್ದೆ. ದೇವಿ ನಮ್ಮ ಕೈ ಬಿಡಲ್ಲ ಎಂಬ ವಿಶ್ವಾಸ ನನಗಿದೆ ಎಂದು ತಿಳಿಸಿದರು.

ಸಂಕಷ್ಟದ ಸಮಯದಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ನಮ್ಮೊಂದಿಗೆ ನಿಂತದ್ದು ದೊಡ್ಡ ಬಲವಾಯಿತು. ಜನರು ತೋರಿದ ಆತ್ಮೀಯತೆ ಮತ್ತು ನಂಬಿಕೆ ನಮ್ಮ ರಾಜಕೀಯ ಜೀವನಕ್ಕೆ ಹೊಸ ಉತ್ಸಾಹ ನೀಡಿದೆ ಎಂದು ಹೇಳಿದರು.

ಇದನ್ನೂ ಓದಿ: Shidlaghatta News: ಹಿರಿಯ ನಾಯಕರ ಅನುಭವವೇ ನಮ್ಮ ಶಕ್ತಿ: ಪುಟ್ಟು ಆಂಜಿನಪ್ಪ

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ನನ್ನ ವಿರುದ್ಧ ರಾಜಕೀಯ ಸಂಚು ರೂಪಿಸಿ ಹೆಸರನ್ನು ಕೆಡಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ ಸತ್ಯವನ್ನು ಯಾರೂ ಮರೆಮಾಡಲು ಸಾಧ್ಯವಿಲ್ಲ. ನನ್ನ ಮೇಲೆ ರಾಜಕೀಯ ಪಿತೂರಿ ಮಾಡಿದವರು ಯಾರು ಎಂಬು ದನ್ನು ದೇವಿಯೇ ನೋಡಿಕೊಳ್ಳುತ್ತಾರೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಜನರು ತಕ್ಕ ಉತ್ತರ ನೀಡುತ್ತಾರೆ ಎಂದು ಹೇಳಿದರು.

ನಾನು ಯಾರ ಮೇಲೂ ದ್ವೇಷ ಇಟ್ಟುಕೊಳ್ಳುವುದಿಲ್ಲ. ಯಾರಿಗೂ ಕೆಟ್ಟದ್ದಾಗಲಿ ಎಂದು ಆಶಿಸುವು ದಿಲ್ಲ. ನ್ಯಾಯಾಂಗ ವ್ಯವಸ್ಥೆಯ ಮೇಲೂ ಹಾಗೂ ದೇವಿಯ ಮೇಲೂ ಸಂಪೂರ್ಣ ನಂಬಿಕೆ ಇದೆ. ಸತ್ಯಕ್ಕೆ ಯಾವತ್ತೂ ಜಯ ಸಿಗುತ್ತದೆ ಎಂಬ ವಿಶ್ವಾಸ ನನ್ನದು ಎಂದು ಹೇಳಿದರು.

13cbpm8sg

ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರಾದ ಗುಡಿಯಪ್ಪ, ಅಪ್ಸರ ಪಾಷ, ಮತ್ತೂರು ವೆಂಕಟೇಶ್, ಡಾಲ್ಫಿನ್ ನಾಗರಾಜ್, ಬಸವಪಟ್ಟಣ ಮೂರ್ತಿ, ದೇವರಾಜ್, ನಾಗ ನರಸಿಂಹ, ಮನು ಗುಡಿಹಳ್ಳಿ ನರೇಂದ್ರ, ಚಲಪತಿ, ಗಾಯತ್ರಿ, ಯಾಸ್ಮಿನ್ ತಾಜ್ ಸೇರಿದಂತೆ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

*
"ಮುಂದಿನ ದಿನಗಳಲ್ಲಿ ನಡೆಯಲಿರುವ ಗ್ರಾಮ ಪಂಚಾಯತಿ ಹಾಗೂ ನಗರಸಭೆ ಚುನಾವಣೆಗಳು ನಮ್ಮ ಶಕ್ತಿಯನ್ನು ಸಾಬೀತುಪಡಿಸುವ ವೇದಿಕೆಯಾಗಲಿದೆ. ಜನರ ಆಶೀರ್ವಾದ ಮತ್ತು ಕಾರ್ಯ ಕರ್ತರ ಐಕ್ಯತೆಯೇ ನಮ್ಮ ಬಲ. ಅಭಿವೃದ್ಧಿ, ಪಾರದರ್ಶಕ ಆಡಳಿತ ಮತ್ತು ಸಾಮಾನ್ಯ ಜನರ ಹಿತಕ್ಕಾಗಿ ಕಾಂಗ್ರೆಸ್ ಸದಾ ಬದ್ಧವಾಗಿದೆ. ಚುನಾವಣೆಯಲ್ಲಿ ನಮ್ಮ ಪ್ರತಾಪವನ್ನು ತೋರಿಸಿ, ಜನಸೇವೆಯೇ ನಮ್ಮ ಗುರಿ ಎಂಬುದನ್ನು ಸಾಬೀತುಪಡಿಸೋಣ. ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ವಿಜಯ ನಮ್ಮದೇ ಆಗಲಿದೆ."

— ರಾಜೀವ್ ಗೌಡ, ಕಾಂಗ್ರೆಸ್ ಮುಖಂಡ