ಶಿಡ್ಲಘಟ್ಟ : ರಥೋತ್ಸವದಂತಹ ಧಾರ್ಮಿಕ ಆಚರಣೆ ನಡೆಸುವ ಮೂಲಕ ಗ್ರಾಮೀಣರಲ್ಲಿ ಒಗ್ಗಟ್ಟು ಮೂಡುತ್ತದೆ.ಕ್ಷೇತ್ರದಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ, ಸರ್ವರಿಗೂ ಒಳಿದಾಗಲಿ ಎಂದು ಪ್ರಾರ್ಥಿಸಿರುವುದಾಗಿ ಕೆಪಿಸಿಸಿ ಸಂಯೋಜಕ ಹಾಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಹೇಳಿದರು.
ತಾಲ್ಲೂಕಿನ ದೇವರಮಳ್ಳೂರು ಗ್ರಾಮದಲ್ಲಿ ರಥೋತ್ಸವ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಇತಿಹಾಸ ಪ್ರಸಿದ್ದ ಶ್ರೀ ಶ್ರೀ ಮಳ್ಳೂರಾಂಭ ದೇವಿಯ ಪ್ರತಿ ವರ್ಷದಂತೆ ಅನಾದಿ ಕಾಲದಿಂದ ನಡೆಸಿಕೊಂಡು ಬರುತಿದ್ದು ಜಾತ್ರೆಯ ವಿಶೇಷ ಅದ್ದೂರಿ ರಥೋತ್ಸವ ಜಿಲ್ಲೆಯಲ್ಲಿ ಮಾದರಿಯಾಗಿದೆ ಎಂದರು.
ಮಳ್ಳೂರುಅಂಬೆ ದೇವರ ಆಶೀರ್ವಾದವನ್ನು ಪಡೆದು ಸಮಸ್ತ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ ಹಾಗೂ ನಾಡಿನ ಒಳಿತಿಗಾಗಿ ಉತ್ತಮ ಆರೋಗ್ಯ ಆಯುಷ್ ಕರುಣಿಸಲೆಂದು ಮತ್ತು ಉತ್ತಮ ಮಳೆ ಬೆಳೆ ಬಂದು ನಾಡಿನ ಎಲ್ಲಾ ರೈತಾಪಿ ವರ್ಗವು ಸುಖಕರವಾಗಲೆಂದು ಹಾರೈಸಿದೆ ಎಂದರು.
ಇದನ್ನೂ ಓದಿ: Shidlaghatta News: ಅಮೃತ ಸರೋವರ ದಂಡೆಯ ಮೇಲೆ ಸಂವಿಧಾನ ದಿನಾಚರಣೆ
ಮುಂದಿನ ೨೦೨೮ಕ್ಕೆ ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಾಂಗ್ರೆಸ್ ಭದ್ರಕೋಟೆ ಆಗೋದು ಖಚಿತ. ೨೦೨೮ಕ್ಕೂ ನಾನೇ ಅಭ್ಯರ್ಥಿ ಶಿಡ್ಲಘಟ್ಟ ಕ್ಷೇತ್ರಕ್ಕೆ, ಪುಟ್ಟು ಅಂಜಿನಪ್ಪ ಗೆ ಎಂ.ಎಲ್ ಸಿ ಟಿಕೆಟ್ ಕೊಡಿಸುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುನಿರಾಜು, ಗ್ರಾಮ ಪಂಚಾಯತಿ ಸದಸ್ಯ ವೆಂಕಟೇಶ್ ಚಕ್ರವರ್ತಿ, ನಂಜುAಡಪ್ಪ,ಶೇಖರ್,ರಾಜಣ್ಣ ಮುಖಂಡರಾದ ಕಂಪನಿಗೆ ದೇವರಾಜು, ವಕೀಲ ಸುಬ್ರಮಣಿ, ಶ್ರೀ ರಾಮ್, ರವಿ,ಲಕ್ಷ್ಮೀನಾರಾಯಣ, ಮುತ್ತೂರು ವೆಂಕಟೇಶ್, ನಾಗ ನರಸಿಂಹ,ನಾಗರಾಜು, ಸೇರಿದಂತೆ ಇನ್ನೂ ಹಲವು ಕಾಂಗ್ರೆಸ್ ಮುಖಂಡರುಗಳು ಹಾಜರಿದ್ದರು.