ಚಿಕ್ಕಬಳ್ಳಾಪುರ : ಅಜಾತಶತ್ರು ತಂದೆ ಮಗ ಜಿ.ಹೆಚ್.ನಾಗರಾಜ್, ವಿನಯ್‌ಶ್ಯಾಮ್ ಹುಟ್ಟುಹಬ್ಬವು ಧಾರ್ಮಿಕ ಸಾಮರಸ್ಯ(Religious harmony)ಕ್ಕೆ ಸಾಕ್ಷಿಯಾಗಿತ್ತು. ಅವರಿವರೆನ್ನದೆ, ಆ ಪಕ್ಷ ಈ ಪಕ್ಷ ಎನ್ನದೆ ಆ ಧರ್ಮ ಈ ಧರ್ಮ ಎನ್ನದೆ ಸಕಲರೂ ಬಂದು ಶುಭ ಹಾರೈಸಿದ್ದು ನೋಡಿದರೆ ಇವರು ಅಜಾತ ಶತ್ರುಗಳಂತೆ ಭಾಸವಾದರು.
ಸಮಾಜ ಸೇವಕ, ಉದ್ಯಮಿ ಹಾಗೂ ಧರ್ಮದರ್ಶಿ ಜಿ.ಹೆಚ್.ನಾಗರಾಜ್ ಮತ್ತು ಅವರ ಪುತ್ರ, ಯುವ ಮುಖಂಡ ವಿನಯ್ ಶಾಮ್ ಅವರಿಬ್ಬರ ಜನ್ಮದಿನಗಳು ಜನವರಿ ಒಂದು ಹಾಗೂ ಮೂರರಂದು ಬರುವ ಕಾರಣ ಇದನ್ನು ಹಬ್ಬದಂತೆ ಆಚರಿಸುತ್ತಾ ಬಂದಿದ್ದಾರೆ. ಗುರುವಾರ ಮತ್ತು ಶುಕ್ರವಾರ ಅವರ ನಿವಾಸಕ್ಕೆ ಅವರಿವರೆನ್ನದೆ ಸಾವಿರಾರು ಮಂದಿ ಆಗಮಿಸಿ ಶುಭಾಶಯಗಳನ್ನು ಕೋರಿದ್ದೇ ಇವರು ಗಳಿಸಿದ ಜನಪ್ರೀತಿಗೆ ಸಾಕ್ಷಿಯಂತಿತ್ತು.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ವಿವಿಧ ಭಾಗಗಳಿಂದ ಆಗಮಿಸಿದ ಜನರು ಹಾರ-ತುರಾಯಿ ಅರ್ಪಿಸಿ,ಕೇಕ್ ಕತ್ತರಿಸಿ ತಂದೆ–ಮಗ ಇಬ್ಬರಿಗೂ ಹೊಸ ವರ್ಷದ ಹಾಗೂ ಜನ್ಮದಿನದ ಶುಭಾಶಯ ಗಳನ್ನು ಕೋರಿದರು. ಆಗಮಿಸಿದ ಎಲ್ಲ ಅತಿಥಿಗಳಿಗೆ ಭರ್ಜರಿ ಆತಿಥ್ಯ ಕಲ್ಪಿಸಲಾಗಿದ್ದು, ಮಾಂಸಾ ಹಾರಿ ಮತ್ತು ಸಸ್ಯಾಹಾರಿ ಭೋಜನ ವ್ಯವಸ್ಥೆ ಮಾಡಲಾಗಿತ್ತು.
ನಿನ್ನೆ ಹಾರೋಬಂಡೆಯ ಸಾಯಿಬಾಬಾ ದೇವಾಲಯದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಿ ಮಾತೆಯ ರಿಗೆ ಸೀರೆ ವಿತರಿಸಿದ ಜಿ.ಹೆಚ್.ನಾಗರಾಜ್, ಇಂದು ಮನೆಯಲ್ಲೇ ಉಳಿದು ಆಗಮಿಸಿದ ಪ್ರತಿಯೊಬ್ಬ ರನ್ನು ಗೌರವದಿಂದ ಬರಮಾಡಿಕೊಂಡು ಕ್ಷೇಮ ಸಮಾಚಾರ ವಿಚಾರಿಸಿದರು. ಯುವ ಮುಖಂಡ ವಿನಯ್ ಶಾಮ್ ಕೂಡ ಅತಿಥಿಗಳನ್ನು ಆತ್ಮೀಯವಾಗಿ ಸ್ವಾಗತಿಸಿ, ಜನರಿಂದ ಬಂದ ಶುಭಾಶಯ ಗಳನ್ನು ಸ್ವೀಕರಿಸಿ ಸಂತಸ ವ್ಯಕ್ತಪಡಿಸಿದರು.
ಇದನ್ನೂ ಓದಿ: Chikkaballapur News: ದೇವರಾಜ್ ಅರಸು ಮೆಡಿಕಲ್ ಕಾಲೇಜು ಅಧ್ಯಕ್ಷ ಜಿ.ಹೆಚ್.ನಾಗರಾಜ್ ಜನ್ಮದಿನ ಆಚರಣೆ
ಈ ಸಂದರ್ಭದಲ್ಲಿ ಮಾತನಾಡಿದ ಜಿ.ಹೆಚ್.ನಾಗರಾಜ್, ಹೊಸ ವರ್ಷ ಎಲ್ಲರಿಗೂ ಶುಭಕರವಾಗಲಿ, ಮಳೆ-ಬೆಳೆ ಸಮೃದ್ಧವಾಗಲಿ ಎಂದು ಹಾರೈಸಿದರು. ರೈತರ ಬೆಳೆಗಳಿಗೆ ಉತ್ತಮ ಬೆಲೆ ನೀಡುವಂತೆ ಬೆಳೆದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಕಲ್ಪಿಸಲಿ ಎಂದು ಹೇಳಿದರು.
ಸದಾ ಜನರ ಮಧ್ಯೆ ಇದ್ದು ಅವರ ಕಷ್ಟ ಸುಖಗಳಿಗೆ ಸ್ಪಂದಿಸುವವರೆ ಸದಾ ಕಾಲ ಜನರ ಮನಸ್ಸಿ ನಲ್ಲಿ ಇರುತ್ತಾರೆ. ನಮ್ಮ ಕುಟುಂಬವು ಕೂಡ ಅಧಿಕಾರಕ್ಕೆ ಆಸೆ ಪಡದೆ ಹಲವಾರು ವರ್ಷಗಳಿಂದ ಜನರಿಗೆ ಸಹಾಯ ಮಾಡುತ್ತ, ಸಮಾಜ ಸೇವೆ, ದೇವತಾ ಕಾರ್ಯಗಳನ್ನು ನಡೆಸಿಕೊಂಡು ಬಂದಿ ದ್ದೇವೆ. ದ್ವೇಷ ಅಸೂಯೆ ಬಿಟ್ಟು ಪರಸ್ಪರ ಪ್ರೀತಿ ಹಂಚಿಕೊAಡು ಶಾಂತಿಯ ಸಮಾಜ ನಿರ್ಮಾಣಕ್ಕೆ ಮುಂದಾಗೋಣ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡೋಣ. ಬೇರೆ ಸಮಯದಲ್ಲಿ ಪರಸ್ಪರ ಪ್ರೀತಿ ಹಂಚಿ ಒಂದಾಗಿ ಬಾಳೋಣ ಎಂದರು.
ಕೆ.ವಿ. ಹಾಗೂ ಪಂಚಗಿರಿ ವಿದ್ಯಾದತ್ತಿಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಮಾತನಾಡಿ, ಶಾಸಕರ ಹುದ್ದೆ ಇಲ್ಲದಿದ್ದರೂ ಜಿ.ಹೆಚ್.ನಾಗರಾಜ್ ಅವರು ಶಾಸಕರು ಮಾಡುವ ಕೆಲಸಗಳನ್ನು ಕ್ಷೇತ್ರದಲ್ಲಿ ಸೇವೆಯ ಮೂಲಕ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ನಾನು ರಾಜಕೀಯಕ್ಕೆ ಬರಲು, ಜನಸೇವೆ ಮಾಡಲು ಪ್ರೇರಣೆಯಾದವರೂ ಕೂಡ ಅವರೇ ಎಂದು ಹೇಳಿದರು. ಅವರಿಗೆ ಭಗವಂತ ಆಯುರಾರೋಗ್ಯ ಹಾಗೂ ದೀರ್ಘಾಯುಷ್ಯ ದೊರಕಲಿ ಎಂದು ಶುಭ ಹಾರೈಸಿದರು.
ತಂದೆ–ಮಗನ ಜನ್ಮದಿನ ಸಮಾರಂಭದಲ್ಲಿ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂ ಡರು, ನಗರಸಭೆ ಮಾಜಿ ಸದಸ್ಯರು,ವಿವಿಧ ಜನಪ್ರತಿನಿಧಿಗಳು ಸೇರಿದಂತೆ ಕೋಲಾರ, ದೊಡ್ಡ ಬಳ್ಳಾಪುರ ಹಾಗೂ ಬೆಂಗಳೂರಿನಿAದಲೂ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿ ಶುಭಾಶಯಗಳನ್ನು ತಿಳಿಸಿದರು.
ಈ ವೇಳೆ, ಕರ್ನಾಟಕ ಬೀಜ ನಿಗಮದ ಅಧ್ಯಕ್ಷ ನಂದಿ ಅಂಜನಪ್ಪ, ನಗರಸಭೆ ಕಮಿಷನರ್ ಮನ್ಸೂರ್ ಅಲಿ, ನಗರಸಭೆ ಮಾಜಿ ಉಪಾಧ್ಯಕ್ಷ ನಾಗರಾಜ್.ಜೆ, ಮಾವು ನಿಗಮದ ಮಾಜಿ ಅಧ್ಯಕ್ಷ ಕೆ ವಿ ನಾಗರಾಜ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ರಾಜಾಕಾಂತ್, ಪರಮೇಶ್, ಗಡಿನಾಡು ರೈತ ಸಂಘದ ಮುನಿರಾಜು, ರಾಮಕೃಷ್ಣ, ನಗರಸಭೆ ಮಾಜಿ ಸದಸ್ಯರಾದ ನರಸಿಂಹಮೂರ್ತಿ, ಅಂಬ ರೀಷ್, ಮಂಜುನಾಥ್, ಕಾಂಗ್ರೆಸ್ ಹಿರಿಯ ಮುಖಂಡ ಲಾಯರ್ ನಾರಾಯಣಸ್ವಾಮಿ, ಜೆಡಿಎಸ್‌ನ ಕೆ.ಆರ್ ರೆಡ್ಡಿ, ಪಟ್ರೇನಹಳ್ಳಿ ಕೃಷ್ಣ, ಕುಬೇರ್ ಅಚ್ಚು, ಮಂಡಿಕಲ್ ಕುಪೇಂದ್ರ, ಮಮತಾ ಮೂರ್ತಿ, ರೈತ ಮುಖಂಡ ಮೈಲಪ್ಪನಹಳ್ಳಿ ರಾಜಶೇಖರ್ ರೆಡ್ಡಿ, ಸಮೀವುಲ್ಲಾ, ಹರೀಶ್ ರೆಡ್ಡಿ, ಪತ್ರಕರ್ತರಾದ ಮುನಿರಾಜು.ಎಂ.ಅರಿಕೆರೆ, ಗೋವರ್ಧನ್, ಸಲಾವುದ್ದೀನ್, ಸದಾಶಿವ, ಅರ್ಪಿತ್, ವೀರನಾಗ್ ಇತರರು ಆಗಮಿಸಿ ಇಬ್ಬರಿಗೂ ಹುಟ್ಟು ಹಬ್ಬದ ಶುಭಾಶಯಗಳು ಕೋರಿದರು.
*
ಕ್ಷೇತ್ರದ ಜನರು ನಮಗೆ ನೀಡಿರುವ ಅಪಾರ ಮತ್ತು ಅಕಳಂಕ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಎಂದೆAದಿಗೂ ನಾವು ಅವರ ಪ್ರೀತಿಗೆ ಅಭಾರಿಯಾಗಿರುತ್ತೇವೆ. ಜನರು ನಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸವನ್ನು ಸದಾ ಕಾಲ ಉಳಿಸಿಕೊಳ್ಳವುದಾಗಿ ತಿಳಿಸಿದ ಅವರು, ದಯವಿಟ್ಟು ಯಾರು ಕೂಡ ಯಾರ ಬಗ್ಗೆಯೂ ದ್ವೇಷ ಬೆಳೆಸಿಕೊಳ್ಳಬೇಡಿ. ರಾಜಕೀಯವನ್ನು ಬಿಟ್ಟು ಪರಸ್ಪರ ನಿಷ್ಕಲ್ಮಷ ಪ್ರೀತಿ ಯನ್ನೇ ಹಂಚಿ. ಒಳ್ಳೆಯ ಗುಣಗಳನ್ನು ಬೆಳೆಸಿಕೊಂಡು ಸಮಾಜಕ್ಕೆ ಒಳ್ಳೆಯ ಸಂದೇಶ ಸಾರೋಣ ಎಂದರು.
-ವಿನಯ್ ಶ್ಯಾಮ್.ಸಮಾಜ ಸೇವಕ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ