ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chinthamani News: ವಯೋನಿವೃತ್ತ ವೆಂಕಟಚಲಪತಿ ಎನ್.ದಂಪತಿಗೆ ಗಣ್ಯರಿಂದ ಆತ್ಮೀಯ ಸನ್ಮಾನ

1986ರಿಂದ 1992ರವರೆಗೆ ದಿನಸಿ ಅಂಗಡಿ ಹಾಗೂ ಕಡಲೆಕಾಯಿ ವ್ಯಾಪಾರ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅವರು, 1992ರ ಆಗಸ್ಟ್ 29ರಂದು ಶಿಡ್ಲಘಟ್ಟ ತಾಲೂಕಿನ ಕ್ಯಾಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದರು. 1998ರ ಜೂನ್ 22ರಂದು ಬುರುಡಗುಂಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸೇವೆ ಮುಂದು ವರಿಸಿದರು.

ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ಥಕ ಸೇವೆ ಸಲ್ಲಿಸಿ, ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಸಂಘಟನೆಗಳಲ್ಲಿ ಕ್ರಿಯಾಶೀಲ ಸಂಘಟಕರಾಗಿ ಗುರುತಿಸಿಕೊಂಡ ವೆಂಕಟಚಲಪತಿ ಎನ್. ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಚಿಂತಾಮಣಿ: ಶಿಕ್ಷಣ ಕ್ಷೇತ್ರದಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ಸಾರ್ಥಕ ಸೇವೆ ಸಲ್ಲಿಸಿ, ಸರ್ಕಾರಿ ನೌಕರರು ಹಾಗೂ ಶಿಕ್ಷಕರ ಸಂಘಟನೆಗಳಲ್ಲಿ ಕ್ರಿಯಾಶೀಲ ಸಂಘಟಕರಾಗಿ ಗುರುತಿಸಿ ಕೊಂಡ ವೆಂಕಟಚಲಪತಿ ಎನ್. ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ದಂಪತಿ ಯನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.

ಸಿ.ನರಸಿಂಹಲು ಹಾಗೂ ದಿವಂಗತ ಗಂಗಮ್ಮ ದಂಪತಿಯ ಪುತ್ರರಾದ ವೆಂಕಟಚಲಪತಿ ಅವರು ಬುರುಡಗುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಗ್ರಾಮಾಂತರ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದು, ಬಾಗೇಪಲ್ಲಿಯ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಪದವಿಪೂರ್ವ ಹಾಗೂ ಶಿಕ್ಷಕರ ತರಬೇತಿ ಪೂರೈಸಿದರು. ಬಾಗೇಪಲ್ಲಿಯ ನ್ಯಾಷನಲ್ ಕಾಲೇಜು ಮತ್ತು ಚಿಂತಾಮಣಿಯ ಆಂಜನಿ ಮುನಿಸಿಪಲ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.

1986ರಿಂದ 1992ರವರೆಗೆ ದಿನಸಿ ಅಂಗಡಿ ಹಾಗೂ ಕಡಲೆಕಾಯಿ ವ್ಯಾಪಾರ ನಡೆಸಿ ಸ್ವಾವಲಂಬಿ ಬದುಕು ಕಟ್ಟಿಕೊಂಡ ಅವರು, 1992ರ ಆಗಸ್ಟ್ 29ರಂದು ಶಿಡ್ಲಘಟ್ಟ ತಾಲೂಕಿನ ಕ್ಯಾಸಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಸೇರ್ಪಡೆಯಾದರು. 1998ರ ಜೂನ್ 22ರಂದು ಬುರುಡಗುಂಟೆಯ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಸೇವೆ ಮುಂದುವರಿಸಿದರು.

ಇದನ್ನೂ ಓದಿ: Chinthamani News: ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದು ಕೂಡ ಉತ್ತಮ ಕಾರ್ಯ: ಆರ್.ನರಸಿಂಹಮೂರ್ತಿ

2009ರ ಜೂನ್ 1ರಿಂದ 2014ರ ಮಾರ್ಚ್ವರೆಗೆ ಹಿರಗಂಪಲ್ಲಿ ಕ್ಲಸ್ಟರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ)ಯಾಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ, ಶಿಕ್ಷಕರು ಮತ್ತು ಶಿಕ್ಷಣ ಇಲಾಖೆಯ ನಡುವೆ ಸಮನ್ವಯ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. 2019ರ ನವೆಂಬರ್ 1ರಿಂದ ಕೆ. ರಾ. ಗುಟ್ಟಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿದ ಅವರು, ನಂತರ ಶಿಡ್ಲಘಟ್ಟದ ಕೋಟೆ ಸರ್ಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭರ್ತಿ ಮುಖ್ಯ ಶಿಕ್ಷಕರಾಗಿ ಸೇವೆ ಪೂರೈಸಿ ವಯೋನಿವೃತ್ತರಾದರು.

ಶಿಕ್ಷಕ ವೃತ್ತಿಯ ಜೊತೆಗೆ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯರಾಗಿ, ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರಾಗಿ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಹ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ ವೆಂಕಟಚಲಪತಿ ಅವರು ಸಂಘಟನಾ ಚಾತುರ್ಯ, ಕ್ರಿಯಾಶೀಲತೆ ಮತ್ತು ಬದ್ಧತೆಯಿಂದ ನೌಕರರು ಹಾಗೂ ಶಿಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ವಿವಿಧ ಸಂಘ–ಸAಸ್ಥೆಗಳ ಚುನಾವಣೆಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ಫಲಿತಾಂಶ ಪ್ರಕಟವಾಗುವವರೆಗೂ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸುವುದು ಅವರ ವಿಶೇಷತೆಯಾಗಿದೆ.

ವಯೋನಿವೃತ್ತಿ ಹಿನ್ನೆಲೆಯಲ್ಲಿ ಸರ್ಕಾರಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ರೆಡ್ಡಿ ಪಿ., ಉಪಾಧ್ಯಕ್ಷೆ ದೇವಮ್ಮ, ನಿರ್ದೇಶಕರಾದ ಗಂಗುಲಪ್ಪ ವಿ., ಶಂಕರ್ ರೆಡ್ಡಿ ಡಿ.ವಿ., ಸಿ.ಕೆ. ಬಾಬು, ಕೃಷ್ಣಾರೆಡ್ಡಿ ಡಿ.ವಿ., ಲಕ್ಷ್ಮೀನಾರಾಯಣ, ಜಯರಾಮರೆಡ್ಡಿ, ಮಸ್ತಾನ್ ವಲಿ, ಚಕ್ರ ಪಾಣಿ, ಕಾರ್ಯದರ್ಶಿ ನಾಗರಾಜ್ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಜಿಲ್ಲಾಧ್ಯಕ್ಷ ಮತ್ತು ಲಯನ್ಸ್ ಜಿಲ್ಲೆ 317ಎಫ್ ಕನ್ನಡ ಮತ್ತು ಸಂಸ್ಕೃತಿ ವಿಭಾಗದ ಜಿಲ್ಲಾಧ್ಯಕ್ಷ ಡಾ. ಕೈವಾರ ಶ್ರೀನಿವಾಸ ಅವರು ವೆಂಕಟಚಲಪತಿ ಎನ್. ದಂಪತಿಯನ್ನು ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಿದರು.

ವೆಂಕಟಚಲಪತಿ ಅವರ ಕರ್ತವ್ಯನಿಷ್ಠೆ, ಸಂಘಟನಾ ಬದ್ಧತೆ ಹಾಗೂ ಸಾರ್ಥಕ ಸೇವೆ ಶಿಕ್ಷಕ ಸಮುದಾಯಕ್ಕೆ ಮಾದರಿಯಾಗಿದೆ ಎಂದು ಶ್ಲಾಘಿಸಿದ ಗಣ್ಯರು, ಅವರ ನಿವೃತ್ತ ಜೀವನ ಆರೋಗ್ಯ, ನೆಮ್ಮದಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ಶುಭ ಹಾರೈಸಿದರು.