ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸದ್ಗುರು ಸನ್ನಿಧಿ ಮತ್ತು ಈಶ ಫೌಂಡೇಶನ್ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯೊಂದಿಗೆ ಸಂಯೋಜಿತವಾಗಿಲ್ಲ : ಸ್ವಾಮಿ ವಿಮೋಹ ಸ್ಪಷ್ಟನೆ

ಈಶ ಫೌಂಡೇಶನ್ ಅಥವಾ ಸದ್ಗುರು ಸನ್ನಿಧಿಯು ಕರ್ನಾಟಕದ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸರ್ಕಾರದಿಂದ (ಹಿಂದಿನ ಅಥವಾ ಪ್ರಸ್ತುತ) ಯಾವುದೇ ಭೂಮಿ ಅಥವಾ ಹಣವನ್ನು ಪಡೆದಿಲ್ಲ.ಎಲ್ಲಾ ಭೂಮಿಯನ್ನು ಗ್ರಾಮಸ್ಥರಿಂದ (ಭೂಮಾಲೀಕ ರಿಂದ) ನೇರವಾಗಿ ಹಣ ಪಾವತಿಸಿ ಖರೀದಿಸಲಾಗಿದೆ

ರಾಜಕೀಯ ಅಥವಾ ಧಾರ್ಮಿಕ ಸಂಘಟನೆಯೊಂದಿಗೆ ಸಂಯೋಜಿತವಾಗಿಲ್ಲ

ಸುದ್ದಿಗೋಷ್ಟಿಯಲ್ಲಿ ಸ್ವಾಮಿ ವಿಮೋಹ ಮಾತನಾಡಿದರು.

Profile Ashok Nayak May 8, 2025 11:27 AM

ಚಿಕ್ಕಬಳ್ಳಾಪುರ:ತಾಲೂಕಿನ ಅವಲಗುರ್ಕಿ ಗ್ರಾಮ ಪಂಚಾಯಿತಿ ಬಳಿ ನಿರ್ಮಾಣಗೊಂಡಿರುವ ಸದ್ಗುರು ಸನ್ನಿಧಿ ಮತ್ತು ಈಶ ಫೌಂಡೇಶನ್ ಯಾವುದೇ ರಾಜಕೀಯ ಅಥವಾ ಧಾರ್ಮಿಕ ಸಂಘಟನೆ ಯೊಂದಿಗೆ ಸಂಯೋಜಿತವಾಗಿಲ್ಲ. ಈಶ ಫೌಂಡೇಶನ್ ಸದ್ಗುರು ಜಗ್ಗಿ ವಾಸವಾಸುದೇವ್ ಸ್ಥಾಪಿಸಿದ ಆಧ್ಯಾತ್ಮಿಕ ಸಂಸ್ಥೆಯಾಗಿದೆ ಎಂದು ಈಶ ಫೌಂಡೇಶನ್‌ನ ಸ್ವಾಮಿ ವಿಮೋಹ ತಿಳಿಸಿದರು. ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯನ್ನು ದ್ದೇಶಿಸಿ ಮಾತನಾಡಿ, ಈಶ ಫೌಂಡೇಶನ್ ಅಥವಾ ಸದ್ಗುರು ಸನ್ನಿಧಿಯು ಕರ್ನಾಟಕದ ಯಾವುದೇ ರಾಜಕೀಯ ಪಕ್ಷ ಅಥವಾ ಯಾವುದೇ ಸರ್ಕಾರದಿಂದ (ಹಿಂದಿನ ಅಥವಾ ಪ್ರಸ್ತುತ) ಯಾವುದೇ ಭೂಮಿ ಅಥವಾ ಹಣವನ್ನು ಪಡೆದಿಲ್ಲ.ಎಲ್ಲಾ ಭೂಮಿಯನ್ನು ಗ್ರಾಮಸ್ಥರಿಂದ (ಭೂಮಾಲೀಕ ರಿಂದ) ನೇರವಾಗಿ ಹಣ ಪಾವತಿಸಿ ಖರೀದಿಸಲಾಗಿದೆ ಎಂದರು.  

ಅವಲಗುರ್ಕಿ ಗ್ರಾಮ ಪಂಚಾಯಿತಿ ಬಳಿ ನಿರ್ಮಾಣಗೊಂಡಿರುವ ಈಶ ಸಂಸ್ಥೆಯ 112 ಅಡಿಗಳ ಅಧಿಯೋಗಿ ಶಿವ,೨೧ ಅಡಿಗಳ ನಂದಿವಿಗ್ರಹ ಮತ್ತು 54 ಅಡಿಗಳ ಮಹಾಶೂಲವು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ಪ್ರಸಿದ್ಧಿ ಪಡೆದು ಈಗ ಸಾವಿರಾರು ಮಂದಿ ರಾಜ್ಯಾದ್ಯಂತ ಇಲ್ಲಿಗೆ ಆಗಮಿಸುತ್ತಿದ್ದು ಇದೀಗ ಚಿಕ್ಕಬಳ್ಳಾಪುರ ತಾಲ್ಲೂಕಿನ ಕೀರ್ತಿ ಶಿಖರವಾಗಿದೆ. ಇಲ್ಲಿಯೇ ಈಗ ನಿರ್ಮಾಣ ವಾಗುತ್ತಿರುವ ಲಿಂಗಭೈರವಿ ದೇಗುಲ ಕಟ್ಟಡದ ಎದುರಿನಲ್ಲಿ ನವಗ್ರಹ ದೇವಾಲಯ ಮತ್ತು ಪಕ್ಕದಲ್ಲಿ ಪುರುಷರಿ ಗಾಗಿ ಸೂರ್ಯ ಪುಷ್ಕರಣಿ, ಮಹಿಳೆಯರಿಗಾಗಿ ಚಂದ್ರ ಪುಷ್ಕರಣಿ ಶೀಘ್ರದಲ್ಲೆ ನಿರ್ಮಾಣವಾಗಿ ಲೋಕಾರ್ಪಣೆ ಗೊಳ್ಳಲಿದೆ ಎಂದರು.  

ಇದನ್ನೂ ಓದಿ:  Chikkaballapur News: ವಾಸವಿ ಅಮ್ಮನವರ ಜಯಂತೋತ್ಸವದ ಅಂಗವಾಗಿ ಬ್ರೆಡ್, ಬಿಸ್ಕೆಟ್ ಹಾಗೂ ಓ ಆರ್ ಎಸ್ ವಿತರಣೆ

ಈಶ ಕೇವಲ ಧಾರ್ಮಿಕ ಕ್ಷೇತ್ರವನ್ನು ಅಷ್ಟೇ ಅಲ್ಲದೆ ಸಮಾಜ ಸೇವಾ ಕಾರ್ಯಕ್ರಮ, ಪರಿಸರ ಅಭಿವೃದ್ಧಿ ಯೋಗ, ಶಿಕ್ಷಣ, ಕ್ರೀಡೆ ಮುಂತಾದ ವಿಭಾಗಗಳಲ್ಲಿ  ತೊಡಗಿಕೊಂಡಿದೆ. ಈಗಾಗಲೇ ನೂರಾರು ಯೋಗ ಶಿಬಿರಗಳನ್ನು ಏರ್ಪಡಿಸಿದ್ದು ಈ ಯೋಗ ಶಿಬಿರದಲ್ಲಿ ಉಚಿತವಾಗಿ ಯೋಗಾ ತರಬೇತಿ ನೀಡಲಾಗುವುದು ಹಾಗೂ ಆನ್ಲೈನ್ ಮೂಲಕವೂ ಸಹ ಯೋಗ ತರಬೇತಿ ನೀಡಲಾಗು ತ್ತಿದೆ ಎಂದರು.

ಪರಿಸರ ವಿಭಾಗದಲ್ಲಿ ಈಗಾಗಲೇ ಸುಮಾರು ಒಂದುವರೆ ಲಕ್ಷ ಸಸಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಆಸಕ್ತಿಯುಳ್ಳವರಿಗೆ ವಿತರಿಸಲಾಗಿದೆ ಹಾಗೂ ಈಶ ಸಂಸ್ಥೆ ಸಹ ಪರಿಸರವನ್ನು ಸಮತೋಲನ ವಾಗಿಸಲು ಸಸಿ ನೆಡುವ ಅಭಿಯಾನ ಹಮ್ಮಿಕೊಂಡಿದೆ ಹಾಗೂ ಸುತ್ತಮುತ್ತಲ ಗ್ರಾಮಗಳ ಜನತೆಯ ಕಷ್ಟ ಸುಖಗಳಿಗೆ ಈಶ ಸ್ಪಂದಿಸಿದೆ ಇದೀಗ ಸುತ್ತಮುತ್ತ ಗ್ರಾಮೀಣ ಪ್ರದೇಶದ ಜನತೆಗೆ ಈಶ ಸಂಸ್ಥೆ ಯಿಂದ ಅವರು ಆರ್ಥಿಕ ಸ್ವಾವಲಂಬನೆಯಿಂದ ಜೀವನ ನಿರ್ವಹಣೆ ಮಾಡಿಕೊಳ್ಳುವ ಉತ್ತಮ ಅವಕಾಶವನ್ನು ದೊರಕಿಸಿ ಕೊಟ್ಟಿದೆ ಎಂದರು.

ಮುಂದಿನ ದಿನಗಳಲ್ಲಿ ಈಶ ಸಂಸ್ಥೆಯ ವತಿಯಿಂದ ಪ್ರಾಚೀನ ಗುರುಕುಲ ಪದ್ಧತಿಯನ್ನು ಮರು ಕಲ್ಪಿಸುವ ರೀತಿಯಲ್ಲಿ ವಿದ್ಯಾ ಸಂಸ್ಥೆ ಆರಂಭಿಸುವುದು ಒಳಗೊಂಡಂತೆ 10 ಹಲವು ಸುಧಾರಣಾ ಕ್ರಮಗಳನ್ನು ಈ ಭಾಗದ ಜನತೆಗೆ ಪರಿಚಯಿಸಲಿದೆ ಎಂದರು.

ಸಂದರ್ಶಕರ ವಾಹನಗಳ ಪಾರ್ಕಿಂಗ್ ಉದ್ದೇಶಕ್ಕಾಗಿ ನಾವು 30 ಎಕರೆಗಳಿಗಿಂತ ಹೆಚ್ಚು ಭೂಮಿ ಯನ್ನು ಮೀಸಲಿಟ್ಟಿದ್ದೇವೆ. ಪಾರ್ಕಿಂಗ್ ಮತ್ತು ಟ್ರಾಫಿಕ್ ಅನ್ನು ನಿಯಂತ್ರಿಸಲು ಮತ್ತು ನಮ್ಮ ಭೂಮಿಗೆ ಪಾರ್ಕಿಂಗ್ ಶುಲ್ಕವನ್ನು ಸಂಗ್ರಹಿಸಲು 50ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಮತ್ತು 25 ಗೃಹರಕ್ಷಕರನ್ನು ನಿಯೋಜಿಸಿದ್ದೇವೆ.

ಯೋಗ ನರಸಿಂಹ ದೇವಸ್ಥಾನಕ್ಕೆ ಹೋಗಲು ನಾವು ಗ್ರಾಮಸ್ಥರಿಂದ ಯಾವುದೇ ಶುಲ್ಕವನ್ನು ಸಂಗ್ರ ಹಿಸುವುದಿಲ್ಲ ಮತ್ತು ರಸ್ತೆ ಬಳಕೆಗಾಗಿ ಯಾವುದೇ ಶುಲ್ಕವನ್ನು ಸಂಗ್ರಹಿಸದೆ ಗ್ರಾಮದ ರಸ್ತೆಯನ್ನು ಈಶ ಫೌಂಡೇಶನ್ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಈಶಾ ಸಂಸ್ಥೆಯ ಕಾರ್ಯಕರ್ತರುಗಳಾದ ಪ್ರಣತಿ, ಅಪರ್ಣ, ಸ್ವಾಮಿ ಪ್ರಭೋಧ, ನಿರ್ಮಲ, ಕೃಷ್ಣವೇಣಿ, ವಿನಯ್, ಪ್ರಣವ್, ಲತಾ, ಹರ್ಷ,ರವಿತೇಜ,  ಶರತ್.ಮತ್ತಿತರರು ಇದ್ದರು.