ಚಿಕ್ಕಬಳ್ಳಾಪುರ: ಕಾಲಜ್ಞಾನಿ, ವರಕವಿ, ಸದ್ಗುರು ಶ್ರೀ ಯೋಗಿ ನಾರೇಯಣ ತಾತಯ್ಯನವರ ರಥೋತ್ಸವವನ್ನು ಶ್ರದ್ದಾ ಭಕ್ತಿಗಳಿಂದ ಆಚರಿಸಲಾಯಿತು. ಸಹಸ್ರಾರು ಭಕ್ತರ ಸಮ್ಮುಖ ದಲ್ಲಿ ಸದ್ಗುರು ತಾತಯ್ಯನವರ ರಥೋತ್ಸವವನ್ನು ವಿಜೃಂಭಣೆಯಿಂದ ನೇರವೇರಿಸ ಲಾಯಿತು.
ರಥೋತ್ಸವದ ಅಂಗವಾಗಿ ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಸದ್ಗುರು ಯೋಗಿ ನಾರೇಯಣ ತಾತಯ್ಯನವರ ಮೂಲ ವಿಗ್ರಹವನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಸದ್ಗುರು ತಾತಯ್ಯನವರ ಉತ್ಸವ ವಿಗ್ರಹಕ್ಕೆ ವಿಶೇಷ ಅಭಿಷೇಕ ಮತ್ತು ವೇದಘೋಷದೊಂದಿಗೆ ಅಷ್ಟಾವಧಾನ ಸೇವೆಯನ್ನು ಸಮರ್ಪಿಸಲಾಯಿತು. ನಂತರ ಸದ್ಗುರುಗಳಿಗೆ ಮಹಾ ಮಂಗಳಾರತಿಯನ್ನು ಸಮರ್ಪಿಸಲಾಯಿತು. ಈ ಪೂಜಾ ಕೈಂಕರ್ಯದಲ್ಲಿ ಧರ್ಮಾಧಿಕಾರಿ ಡಾ||ಎಂ.ಆರ್.ಜಯರಾಮ್ ದಂಪತಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: Chalukya Utsava: ಬಜೆಟ್ ಘೋಷಣೆಯಂತೆ ಚಾಲುಕ್ಯ ಉತ್ಸವ ಆಯೋಜಿಸಲಾಗಿದೆ: ಸಿಎಂ ಸಿದ್ದರಾಮಯ್ಯ
ಪೂಜಾನಂತರ ಅಲಂಕೃತ ಪಲ್ಲಕ್ಕಿಯಲ್ಲಿ ಮಂಗಳವಾದ್ಯಗಳೊಂದಿಗೆ ಸದ್ಗುರುಗಳ ಉತ್ಸವ ವಿಗ್ರಹವನ್ನು ಹಾಗೂ ಪಾದುಕೆಗಳನ್ನು ರಥಕ್ಕೆ ಕರೆತರಲಾಯಿತು. ರಥವನ್ನು ವಿಶೇಷ ಹೂಗಳಿಂದ ಸಿಂಗರಿಸಲಾಗಿತ್ತು. ರಥಶಾಂತಿ ಮತ್ತು ಪೂಜೆಯನ್ನು ಸಲ್ಲಿಸಲಾಯಿತು. ಭಕ್ತರು ತೇರು ಬಾಳೆಹಣ್ಣನ್ನು ತೇರಿಗೆ ಅರ್ಪಿಸಿ ಹರಿಕೆ ಸಲ್ಲಿಸಿದರು. ಭಜನೆಯಲ್ಲಿ ಭಕ್ತರು ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದು ಮುಳುಗಿದರು. ರಥೋತ್ಸವಕ್ಕೆ ತಾತಯ್ಯನವರ ಭಕ್ತರು ಆಂಧ್ರ ತಮಿಳುನಾಡು ಮುಂತಾದ ಕಡೆಗಳಿಂದ ಸಾವಿರಾರು ಭಕ್ತರು ಬಂದು ಸೇರುತ್ತಾರೆ. ರಾತ್ರಿ ಯಿಡೀ ಅಖಂಡ ಭಜನೆಗಳನ್ನು ಭಕ್ತರು ಮಾಡಿದರು. ಭಕ್ತರು ಟ್ರಾಕ್ಟರ್‌ಗಳಲ್ಲಿ ಮಜ್ಜಿಗೆ, ಪಾನಕ ಹಂಚುತ್ತಿದ್ದರು.
ರಥೋತ್ಸವದಲ್ಲಿ ಯೋಗಿನಾರೇಯಣ ಮಠದ ಟ್ರಸ್ಟ್ ಸಮಿತಿಯ ಸದಸ್ಯರುಗಳು, ಕೈವಾರ ಮತ್ತು ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿದ್ದರು. ನಾದಸುಧಾರಸ ಸಾಂಸ್ಕೃತಿಕ ವೇದಿಕೆ ಯಲ್ಲಿ ರಥೋತ್ಸವದ ಅಂಗವಾಗಿ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಕೈವಾರದ ನಾಟ್ಯಾಂಜಲಿ ಕಲಾಕೇಂದ್ರ ಪರಿಮಳ ಅರಳುಮಲ್ಲಿಗೆ ತಂಡದವರಿಂದ ಭರತ ನಾಟ್ಯ ಹಾಗೂ ಶ್ರೀಬಸವಣ್ಣ ಕನ್ನಡ ಕಲಾ ಸಂಘ, ಮದ್ದೇರಿ ಟಿ.ಮುನಿರೆಡ್ಡಿ ತಂಡದವ ರಿಂದ ಶ್ರೀಕೃಷ್ಣ ಸಂಧಾನ ಎಂಬ ಪೌರಾಣಿಕ ನಾಟಕವನ್ನು ಏರ್ಪಡಿಸಲಾಗಿತ್ತು.