ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಜಿಲ್ಲಾಡಳಿತ ಭವನದಲ್ಲಿ ಶಾಶ್ವತವಾಗಿ ಸ್ವಸಹಾಯ ಸಂಘಗಳ ಪ್ರೋತ್ಸಾಹಕ್ಕಾಗಿ ಅಕ್ಕ ಮಳಿಗೆ ತೆರೆಯಲು ಚಿಂತನೆ : ಸಿಇಓ ಡಾ.ನವೀನ್ ಭಟ್ ಘೋಷಣೆ

ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಎಸ್‌ಹೆಚ್‌ಜಿ ಗುಂಪುಗಳಿಗೆ ಆರ್ಥಿಕ ಚೈತನ್ಯ ತುಂಬುವ ಸಲುವಾಗಿ ಏರ್ಪಡಿಸಿದ್ದ ಸಂಜೀವಿನಿ ಉಗಾದಿ ಮಾಸಿಕ ಸಂತೆ ಮಾರಾಟ ಮೇಳವು ಒಳ್ಳೆಯ ಯಶಸ್ಸು ಕಂಡಿದ್ದು ಮುಂದಿನ ಹಬ್ಬಗಳಲ್ಲೂ ಇಂತಹ ಮಾರಾಟ ಮೇಳಗಳನ್ನು ಆಯೋಜಿಸ ಲಾಗುವುದು ಎಂದು ಹೇಳಿದರು.

ಚಿಕ್ಕಬಳ್ಳಾಪುರ : ಯುಗಾದಿ ಹಾಗೂ ರಂಜಾನ್ ಹಬ್ಬದ ಪ್ರಯುಕ್ತ ಜಿಲ್ಲಾಡಳಿತ, ಜಿಲ್ಲಾ ಪಂಚಾ ಯತ್ ಹಾಗೂ ಸಂಜೀವಿನಿ-ಡೇ ಎನ್.ಆರ್.ಎಲ್.ಎಂ. ಯೋಜನೆ ವತಿಯಿಂದ ಜಿಲ್ಲೆಯಾದ್ಯಂತ ಆಯೋಜಿಸಿದ್ದ "ಸಂಜೀವಿನಿ ಯುಗಾದಿ ಮಾಸಿಕ ಸಂತೆ ಮಾರಾಟ ಮೇಳವು ಅತ್ಯಂತ ಯಶಸ್ವಿ ಯಾಗಿದೆ. ಮೂರು ದಿನದಲ್ಲಿ 3 ಸಾವಿರ ಕಿಟ್ ಮಾರಾಟವಾಗಿದ್ದು 29 ಲಕ್ಷ 85 ಸಾವಿರದಷ್ಟು ವಹಿವಾಟು ನಡೆಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವೈ.ನವೀನ್ ಭಟ್ ತಿಳಿಸಿದರು.

ನಗರಹೊರವಲಯ ಜಿಲ್ಲಾಡಳಿತ ಭವನದ ಎದುರು ತೆರೆದಿರುವ ಸಂಜೀವಿನಿ ಉಗಾದಿ ಮಾಸಿಕ ಸಂತೆ ಮಾರಾಟ ಮೇಳದ ಮಳಿಗೆಗಳಿಗೆ ಬುಧವಾರ ಭೇಟಿ ನೀಡಿದ್ದ ಅವರು ಎಸ್‌ಹೆಚ್‌ಜಿ ಗುಂಪು ಗಳೊಂದಿಗೆ ಮಾತುಕತೆ ನಡೆಸಿದ ನಂತರ ಮಾಧ್ಯಮಕ್ಕೆ ಮಾಹಿತಿ ನೀಡಿದರು.

ಯುಗಾದಿ ಹೋಳಿಗೆ ಕಿಟ್ ಮಾರಾಟದಲ್ಲಿ ಗೌರಿಬಿದನೂರು ತಾಲೂಕಿನಲ್ಲಿ 800 ಕಿಟ್‌ಗಳನ್ನು ಮಾರಾಟ ಮಾಡಲಾಗಿದೆ. ಅದೇ ರೀತಿ ಎಲ್ಲಾ ತಾಲೂಕುಗಳಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಜಿಲ್ಲೆಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಾಧನೆ ಕಳೆದ 10 ವರ್ಷಗಳಿಂದ ಮೌನ ಕ್ರಾಂತಿಯಂತೆ ಸಾಗಿದೆ. 1 ಲಕ್ಷಕ್ಕೂ ಹೆಚ್ಚು ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದು ಇವರಿಗೆ ಗುಣಮಟ್ಟದ ವಸ್ತುಗಳನ್ನು ಬ್ರಾಂಡ್ ಮಾಡಿ ಮಾರಾಟ ಮಾಡುವಕಲೆ ಗೊತ್ತಿದೆ. ಆದರೆ ಇವರಿಗೆ ಮಾರುಕಟ್ಟೆಯ ಕೊರತೆಯಿರುವುದು ನನ್ನ ಗಮನಕ್ಕೆ ಬಂದಿತು. ಇದನ್ನು ಮನಗಂಡು ಯುಗಾದಿ ರಂಜಾನ್ ಹಬ್ಬದ ಸಂದರ್ಭವನ್ನು ಬಳಸಿಕೊಂಡು ಸ್ವಸಹಾಯ ಸಂಘಗಳ ನೆರವಿಗೆ ನಿಲ್ಲಲಾಗಿದೆ ಎಂದರು.

ಇದನ್ನೂ ಓದಿ: Chikkaballapur News: ಉನ್ನತ ಶಿಕ್ಷಣ ಪಡೆಯದಿದ್ದರೂ ಡಿವಿಜಿ ಅವರ ಪ್ರತಿಭೆ ಶ್ರೀಮಂತಿಕೆಯಿಂದ ಕೂಡಿತ್ತು: ಡಾ.ಕೋಡಿರಂಗಪ್ಪ ಅಭಿಮತ

ಜಿಲ್ಲಾಡಳಿತದ ವತಿಯಿಂದ ಇದೇ ಮೊದಲ ಬಾರಿಗೆ ಎಸ್‌ಹೆಚ್‌ಜಿ ಗುಂಪುಗಳಿಗೆ ಆರ್ಥಿಕ ಚೈತನ್ಯ ತುಂಬುವ ಸಲುವಾಗಿ ಏರ್ಪಡಿಸಿದ್ದ ಸಂಜೀವಿನಿ ಉಗಾದಿ ಮಾಸಿಕ ಸಂತೆ ಮಾರಾಟ ಮೇಳವು ಒಳ್ಳೆಯ ಯಶಸ್ಸು ಕಂಡಿದ್ದು ಮುಂದಿನ ಹಬ್ಬಗಳಲ್ಲೂ ಇಂತಹ ಮಾರಾಟ ಮೇಳಗಳನ್ನು ಆಯೋಜಿಸಲಾಗುವುದು ಎಂದು ಹೇಳಿದರು.

ನಮ್ಮ ಪ್ರಯತ್ನದ ಹಿಂದೆ ಜಿಲ್ಲಾ ಉಸ್ತುವಾರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಅವರ ಮಾರ್ಗದರ್ಶನವಿದ್ದು ಚಿಂತಾಮಣಿ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ  ಈ ವಿಶೇಷ ಮೇಳಕ್ಕೆ ಚಾಲನೆ ನೀಡಿದ್ದರು. ಇದು ಅಭೂತಪೂರ್ವ ಯಶಸ್ಸು ಕಂಡಿದೆ ಎಂದರು. ಮೊದಲ ದಿನ 12 ಲಕ್ಷ ವಹಿವಾಟು ನಡೆಸಿದೆ, ಎರಡನೇ ದಿನ 10 ಲಕ್ಷ ವಹಿವಾಟು, ಮೂರನೇ ದಿನ 5 ಲಕ್ಷ ವಹಿವಾಟು ನಡೆಸಿದೆ. ನಮಗೆ ಸಾಕಷ್ಟು ಬೇಡಿಕೆಯಿದ್ದರೂ ಪೂರೈಕೆ ಮಾಡಲಾಗಿಲ್ಲ. ಮುಂದಿನ ದಿನಗಳಲ್ಲಿ ಗ್ರಾಹಕರ ಬೇಡಿಕೆಯಂತೆ ಉತ್ತಮ ರೀತಿಯಲ್ಲಿ ಪೂರೈಕೆ ಮಾಡಲಾಗುವುದು ಎಂದರು.

Ehh

ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪಿನ ಸದಸ್ಯರಿಂದ ನಡೆಯುವ ಉದ್ದಿಮೆಗಳಿಂದ ವಿಶೇಷವಾಗಿ ತಯಾರಿಸಿದ, ಪೊಟ್ಟಣ ಮಾಡಲಾದ ಉತ್ಕೃಷ್ಟ ಗುಣಮಟ್ಟದ ಸಾವಯವ ಉತ್ಪನ್ನಗಳು, ವಿವಿಧ ಕರಕುಶಲ ವಸ್ತುಗಳು, ಆಹಾರ ಉತ್ಪನ್ನಗಳು ಹಾಗೂ ಗೃಹೊಪಯೋಗಿ ವಸ್ತುಗಳನ್ನು ಜೊತೆಗೆ ಖಾದಿ ಬಟ್ಟೆಗಳನ್ನು ಗ್ರಾಹಕರಿಗೆ ಉತ್ತಮ ಗುಣಮಟ್ಟದಲ್ಲಿ ಹಾಗೂ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡುವ ಉದ್ದೇಶದಿಂದ ಈ ಮೇಳ ಆಯೋಜಿಸ ಲಾಗಿತ್ತು. ಇದರಿಂದ ಪ್ರೇರಣೆ ಪಡೆದು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಯುಗಾದಿ ಹಾಗೂ ರಂಜಾನ್ ಹಬ್ಬದ ಅಂಗವಾಗಿ ಯುಗಾದಿ ಹೋಳಿಗೆ ಕಿಟ್ ಮಾರಾಟ ಆಯೋಜಿಸಲಾಯಿತು ಎಂದರು.

ಸಂಜೀವಿನಿ-ಡೇ ಎನ್.ಆರ್.ಎಲ್.ಎಂ. ಯೋಜನೆಯಡಿ ಜಿಲ್ಲೆಯಲ್ಲಿ ಸ್ವ ಸಹಾಯ ಸಂಘಗಳ ಮಹಿಳೆಯರು ವಿವಿಧ ಸ್ವ ಉದ್ದಿಮೆಗಳನ್ನು ಕೈಗೊಳ್ಳುವ ಮೂಲಕ ಸ್ವಾವಲಂಬಿ ಜೀವನ ನಡೆಸು ತ್ತಿದ್ದಾರೆ. ಗ್ರಾಮೀಣ ಪ್ರದೇಶದ ಮಹಿಳಾ ಸಂಘಗಳ ಸಬಲೀಕರಣ ಮತ್ತು ಸ್ವ ಉದ್ಯೋಗಕ್ಕೆ ಪ್ರೋತ್ಸಾಹ ನೀಡುವ ಸದುದ್ದೇಶದಿಂದ ಜಿಲ್ಲೆಯ ಎಲ್ಲಾ ತಾಲ್ಲೂಕು ಕೇಂದ್ರಗಳು ಸೇರಿದಂತೆ ಇತರೆ ಪ್ರಮುಖ ಸ್ಥಳಗಳಲ್ಲಿ ಈ ವಿಶೇಷ ಮೇಳವನ್ನು ಆಯೋಜನೆ ಮಾಡಿ ರೂ.4000 ಅಕ್ಕ ಕಿಟ್ ಗಳನ್ನು ಮಾರಾಟ ಮಾಡಲಾಗಿದೆ. ಇದರಿಂದ 25 ಲಕ್ಷಕ್ಕೂ ಹೆಚ್ಚಿನ  ಆದಾಯ ಸ್ವಸಹಾಯ ಸಂಘಗಳಿಗೆ ಬಂದಿದೆ ಎಂದರು.

ಈ ಮೇಳಕ್ಕೆ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 12 ಗ್ರಾಮ ಪಂಚಾಯತಿಗಳ 24ಕ್ಕೂ ಹೆಚ್ಚು ಸ್ವ ಸಹಾಯ ಗುಂಪುಗಳಿಂದ 250ಕ್ಕೂ ಹೆಚ್ಚು ಮಹಿಳಾ ಸದಸ್ಯರನ್ನೊಳಗೊಂಡ ತಂಡವು ಒಟ್ಟಾಗಿ ಸೇರಿ ಈ ಯುಗಾದಿ ಅಕ್ಕ ಹೋಳಿಗೆ ಕಿಟ್ ನ್ನು ತಯಾರಿಸಿದ್ದಾರೆ. ಈ ವಿಶೇಷ ಕಿಟ್‌ನಲ್ಲಿ ನಮ್ಮ ಜಿಲ್ಲೆಯಲ್ಲಿ ಬೆಳೆದು ತಯಾರಿ ಮಾಡಿರುವ ತೊಗರಿಬೇಳೆ, ಹೆಸರುಬೇಳೆ, ಗಾಣದ ಕಡಲೇ ಕಾಯಿ ಎಣ್ಣೆ , ಮೈದಾ ಹಿಟ್ಟು, ಆರ್ಗಾನಿಕ್ ಬೆಲ್ಲ, ತುಪ್ಪ, ಹೋಮ್ ಮೇಡ್ ಹಪ್ಪಳ, ತೆಂಗಿನಕಾಯಿ, ಗಾಣದ ಹರಳೆಣ್ಣೆ, ಸೀಗೇಕಾಯಿ ಪುಡಿ, ತುಪ್ಪ ಸೇರಿದಂತೆ ಇತರೆ ಪೌಷ್ಠಿಕಾಂಶ ಪದಾರ್ಥಗಳು ಸೇರಿವೆ ಎಂದರು.

ಜಿಲ್ಲೆಯ ಬಹುತೇಕ ಗ್ರಾಹಕರು ಕಿಟ್ ಗಳನ್ನು ಖರೀದಿಸಿ ಸ್ವ ಸಹಾಯ ಗುಂಪುಗಳಿಗೆ ಪ್ರೋತ್ಸಾಹ  ನೀಡಿದ್ದಾರೆ.ಮುಂದಿನ ದಿನಗಳ ಹಬ್ಬಗಳಿಗೆ ಇನ್ನೂ ಹೆಚ್ಚಿನ ವಿವಿಧ ಬಗೆಯ ವಿಶೇಷ ಉತ್ಪನ್ನಗಳ ಕಿಟ್ ಗಳನ್ನು ತಯಾರಿಸಲಾಗುವುದು ಜೊತೆಗೆ ಜಿಲ್ಲಾಡಳಿತ ಭವನದಲ್ಲಿಯೇ ಒಂದು ಶಾಶ್ವತ ಮಳಿಗೆಯನ್ನು ತೆರೆದು ಜಿಲ್ಲೆಯ ಮಹಿಳಾ ಸ್ವಸಹಾಯ ಗುಂಪುಗಳು  ಸಾವಯವ ಉತ್ಪನ್ನಗಳಿಂದ ತಯಾರಿಸುವ ದಿನಸಿ ಪದಾರ್ಥಗಳನ್ನು ಹಾಗೂ ವಸ್ತುಗಳನ್ನು ಮಾರಾಟ ಮಾಡಲಾಗುವುದು ಜಿಲ್ಲೆಯ ಸಾರ್ವಜನಿಕರು ಮುಂದೆಯೂ ಸಹ ಸ್ಪಂಧಿಸುವAತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಅತೀಕ್ ಪಾಷ, ಸಹಾಯಕ ಕಾರ್ಯದರ್ಶಿ ಮುನಿರಾಜು, ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ, ಎನ್‌ಆರ್‌ಎಲ್ ಎಂ ಸಿಬ್ಬಂದಿ, ಸ್ವ ಸಹಾಯ ಸಂಘದ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

ಮೇಳದಲ್ಲಿ ಸ್ವ ಸಹಾಯ ಸಂಘದ ಮಹಿಳೆಯರು ಸ್ಥಳದಲ್ಲಿಯೇ ತಯಾರಿಸಿದ ಬಿಸಿ ಬಿಸಿಯಾದ ಹೋಳಿಗೆ ಹಾಗೂ ಇತರೆ ಖಾದ್ಯಗಳನ್ನು ಗಣ್ಯರು ಸವಿಯುವ ಮೂಲಕ ಸಂತಸ ವ್ಯಕ್ತಪಡಿಸಿದರು ಹಾಗೂ ಸಾರ್ವಜನಿಕರು ಸಹ ಸವಿದರು ಮೆಚ್ಚುಗೆ ಸೂಚಿಸಿದರು.