ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಚಿತ್ರಕಲಾ ಪರಿಷತ್‌ನೊಂದಿಗೆ ಸತ್ಯ ಸಾಯಿ ಮಾನವ ಅಭ್ಯುದಯ ವಿವಿ ಒಡಂಬಡಿಕೆ: ಕಲಾ ಶಿಕ್ಷಣಕ್ಕೆ ಮತ್ತಷ್ಟು ಮಹತ್ವ

ನಾವೆಲ್ಲರೂ ಒಂದು ಉದ್ದೇಶಕ್ಕಾಗಿ ಜನಿಸಿದ್ದೇವೆ. ಆ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶ್ರೀಮಂತರಾಗಿ ಹುಟ್ಟುವುದು ಅದ್ಭುತವಾದ ಅವಕಾಶ. ಏಕೆಂದರೆ ಅದು ಕೇವಲ ಮನುಷ್ಯನಾಗಿ ಹುಟ್ಟುವುದು ಮುಖ್ಯವಾಗಿರುವುದಿಲ್ಲ. ಯಾರಿಗಾ ದರೂ ಏನನ್ನಾದರೂ ಮಾಡಲು ಸಾಧ್ಯವಾಗುವ ಒಂದು ಉತ್ತಮ ಅವಕಾಶವಾಗಿರುತ್ತದೆ

ಚಿಕ್ಕಬಳ್ಳಾಪುರ: ಮುದ್ದೇನಹಳ್ಳಿಯ ಸತ್ಯ ಸಾಯಿ ಗ್ರಾಮದಲ್ಲಿ ನಡೆಯುತ್ತಿರುವ 'ಒಂದು ಜಗತ್ತು ಒಂದು ಕುಟುಂಬ ವಿಶ್ವ ಸಾಂಸ್ಕೃತಿಕ ಉತ್ಸವ'ದ ೯೧ನೇ ದಿನವಾದ ಶುಕ್ರವಾರ (ನ.೧೪) ಕರ್ನಾಟಕ ಚಿತ್ರಕಲಾ ಪರಿಷತ್ತು ಮತ್ತು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯಗಳು ಒಡಂಬಡಿಕೆ ಮಾಡಿಕೊಂಡವು.

ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಸಮ್ಮುಖದಲ್ಲಿ ಕರ್ನಾಟಕ ಚಿತ್ರ ಕಲಾ ಪರಿಷತ್ತಿನ ಕಾರ್ಯದರ್ಶಿ ಎಸ್.ಎನ್.ಶಶಿಧರ್ ಮತ್ತು ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ ಹನುಮಂತ ರಾವ್ ನಾಯ್ಡು ಅವರು ಒಡಂಬಡಿಕೆ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಈ ಒಡಂಬಡಿಕೆಯು ಸಾಂಸ್ಕೃ ತಿಕ ಚಟುವಟಿಕೆಗಳು, ಕಲಾ ಶಿಕ್ಷಣದಲ್ಲಿ ಹೊಸ ಅವಕಾಶಗಳು, ಸಂಶೋಧನೆ, ಸಿಬ್ಬಂದಿ ವಿನಿಮಯ, ಸಾಂಸ್ಕೃತಿಕ ಚಟುವಟಿಕೆಗಳು ಸೇರಿದಂತೆ ಹಲವು ವಿಷಯಗಳನ್ನು ಒಳಗೊಂಡಿದೆ.

ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಸದ್ಗುರು ಶ್ರೀ ಮಧುಸೂದನ ಸಾಯಿ, ನಾವೆಲ್ಲರೂ ಒಂದು ಉದ್ದೇಶಕ್ಕಾಗಿ ಜನಿಸಿದ್ದೇವೆ. ಆ ಉದ್ದೇಶಗಳನ್ನು ಈಡೇರಿಸಿಕೊಳ್ಳು ವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶ್ರೀಮಂತರಾಗಿ ಹುಟ್ಟುವುದು ಅದ್ಭುತವಾದ ಅವಕಾಶ. ಏಕೆಂದರೆ ಅದು ಕೇವಲ ಮನುಷ್ಯನಾಗಿ ಹುಟ್ಟುವುದು ಮುಖ್ಯವಾಗಿರುವುದಿಲ್ಲ. ಯಾರಿಗಾದರೂ ಏನನ್ನಾದರೂ ಮಾಡಲು ಸಾಧ್ಯವಾಗುವ ಒಂದು ಉತ್ತಮ ಅವಕಾಶ ವಾಗಿರುತ್ತದೆ ಎಂದು ಹೇಳಿದರು.

ಇದನ್ನೂ ಓದಿ: Chintamani News: ಪೋಷಕರು ಮತ್ತು ಶಿಕ್ಷಕರ ಸಮನ್ವಯತೆ ಅಗತ್ಯ : ಪ್ರವಚನಕಾರ ತಳಗವಾರ ಟಿ.ಎಲ್.ಆನಂದ್

ಸತ್ಯ ಸಾಯಿ ಬಾಬಾ ಅವರ ೧೦೦ನೇ ಜನ್ಮ ಶತಮಾನೋತ್ಸವ ಆಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು, ಕೆಲಸಗಳು ಭರದಿಂದ ಸಾಗುತ್ತಿವೆ. ಗಣ್ಯರು ಆಗಮಿಸುತ್ತಿದ್ದು, ಕೆಲವೊಂದು ಶಿಷ್ಟಾಚಾರಗಳನ್ನು ಅನುಸರಿಸಬೇಕಾಗಿದೆ. ಇದಕ್ಕಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಅತಿಥಿ ದೇಶ ಶ್ರೀಲಂಕಾ ಬಗ್ಗೆ ಮಾತನಾಡಿದ ಸದ್ಗುರು, ಶ್ರೀಲಂಕಾ ತುಂಬಾ ಸುಂದರವಾದ ದೇಶವಾಗಿದ್ದು, ತನ್ನದೇ ಆದ ವಿಶಿಷ್ಟ ಮೋಡಿ, ಸಂಸ್ಕೃತಿಗಳನ್ನು ಹೊಂದಿದೆ. ಇದು ವಿರಾಮ ತೆಗೆದುಕೊಳ್ಳಲು ಉತ್ತಮ ಸ್ಥಳವಾಗಿದೆ. ತಾಜಾ ಗಾಳಿ, ಶುದ್ಧ ನೀರು ಎಲ್ಲವೂ ತುಂಬಾ ಶುದ್ಧವಾಗಿದೆ. ಸುಂದರವಾದ ಕಡಲ ತೀರಗಳಿವೆ, ಅಲ್ಲಿನ ಜನರು ಕೂಡ ತುಂಬಾ ಕರುಣಾಮಯಿಗಳು. ಜೀವನದಲ್ಲಿ ಒಮ್ಮೆಯಾದರೂ ಶ್ರೀಲಂಕಾಗೆ ಹೋಗಿ ಬನ್ನಿ ಎಂದು ನೆರೆದಿದ್ದವರಿಗೆ ಕರೆ ನೀಡಿದರಲ್ಲದೆ, ಶ್ರೀಲಂಕಾದಲ್ಲಿ ಶೈಕ್ಷಣಿಕ ವಿನಿಮಯ, ಆರೋಗ್ಯ, ಪೌಷ್ಟಿಕಾಂಶ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೇವೆ ಎಂದು ಘೋಷಿಸಿದರು.

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್.ಶಂಕರ್ ಮಾತನಾಡಿ, ಶ್ರೀ ಸತ್ಯ ಸಾಯಿ ಮಾನವ ಅಭ್ಯುದಯ ವಿಶ್ವವಿದ್ಯಾಲಯದೊಂದಿಗೆ ಕರ್ನಾಟಕ ಚಿತ್ರಕಲಾ ಪರಿಷತ್ ಒಡಂಬಡಿಕೆ ಮಾಡಿಕೊಂಡಿರುವುದು ಸಂಸ್ಥೆಯ 65 ವರ್ಷಗಳ ಇತಿಹಾಸದಲ್ಲಿ ಸ್ಮರಣೀಯ ದಿನವಾಗಿದೆ. ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಆಶೀರ್ವಾದದೊಂದಿಗೆ ಕರ್ನಾ ಟಕದ ಇತರ ಭಾಗಗಳಲ್ಲಿಯೂ ನಮ್ಮ ಚಟುವಟಿಕೆಗಳನ್ನು ಹೆಚ್ಚಿಸುತ್ತೇವೆ. ಸದ್ಗುರು ದೇಶ, ಜಗತ್ತಿನಾದ್ಯಂತ ಅನೇಕ ಸಂಸ್ಥೆಗಳನ್ನು ಹೊಂದಿದ್ದಾರೆ. ಆದ್ದರಿಂದ ಈ ಸಹಯೋಗವು ಎಲ್ಲಾ ಸ್ಥಳಗಳಿಗೂ ವಿಸ್ತರಿಸುತ್ತದೆ. ಇದರಿಂದಾಗಿ ಅಂತಿಮವಾಗಿ ಕಲಾ ಶಿಕ್ಷಣವು ದೇಶದ ಮತ್ತು ಪ್ರಪಂಚದ ಮೂಲೆಗಳನ್ನು ತಲುಪುತ್ತದೆ ಎಂದು ಹೇಳಿದರು.

ದೇಶದಲ್ಲಿ ಶಿಕ್ಷಣ ಮತ್ತು ಆರೋಗ್ಯ ತುಂಬಾ ದುಬಾರಿಯಾಗಿದೆ. ಆದರೆ ಈವೆರಡನ್ನೂ ಸ್ವಾಮೀಜಿಯವರು ಉಚಿತವಾಗಿ ನೀಡುತ್ತಿದ್ದಾರೆ. ವೈದ್ಯಕೀಯ ಶಿಕ್ಷಣವನ್ನು ಉಚಿತವಾಗಿ ನೀಡುವ ಏಕೈಕ ಸಂಸ್ಥೆಯೂ ಇದಾಗಿದೆ. ಇದಕ್ಕಾಗಿ ಸದ್ಗುರು ಮಧುಸೂದನ ಸಾಯಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಪರಿವರ್ತನೆ ತಂದ ಸದ್ಗುರು: ಕ್ರಿಕೆಟಿಗ ಅರವಿಂದ ಡಿ ಸಿಲ್ವ

ಶ್ರೀಲಂಕಾದ ಮಾಜಿ ಕ್ರಿಕೆಟ್ ಆಟಗಾರರಾದ ಅರವಿಂದ ಡಿ ಸಿಲ್ವ ಮಾತನಾಡಿ, ದಿನೇ ದಿನೇ ಬೆಳೆಯುತ್ತಿರುವ ಒಂದು ಜಗತ್ತು ಒಂದು ಕುಟುಂಬ ಮಿಷನ್ ಅದ್ಭುತ ಸಂಸ್ಥೆಯಾಗಿದ್ದು, ಇದರ ಭಾಗವಾಗಲು ನನಗೆ ತುಂಬಾ ಸಂತೋಷವಾಗಿದೆ. ಮಾನವೀಯತೆಯ ವಿಚಾರದಲ್ಲಿ ನನ್ನಲ್ಲಿ ದೊಡ್ಡ ಪರಿವರ್ತನೆಯನ್ನು ತಂದಿದೆ. ಸದ್ಗುರು ಅವರು ಪ್ರೇರಕ ಶಕ್ತಿಯಾಗಿದ್ದಾರೆ. ಈ ಸಂಸ್ಥೆಯ ಭಾಗವಾದ ಬಳಿಕ ನನ್ನಲ್ಲಿ ದೊಡ್ಡ ಬದಲಾವಣೆಯನ್ನು ಕಂಡುಕೊಂಡಿ ದ್ದೇನೆ ಎಂದು ವಿವರಿಸಿದರು.

ಬೌದ್ಧ ಗುರು ಬಟ್ಟರಮುಲ್ಲೆ ಅಮದಾಸನ ಥಿರೋ ಮಾತನಾಡಿ, ನಮ್ಮೆಲ್ಲರ ಹೃದಯಗಳು ಒಂದು ಲಯದಲ್ಲಿ ಇರುವುದರಿಂದ ನಾವೆಲ್ಲರೂ ಒಟ್ಟಿಗೆ ಸೇರಿದ್ದೇವೆ. ನೀವು ಕಪ್ಪು ಅಥವಾ ಬಿಳಿ,ಪುರುಷ ಅಥವಾ ಮಹಿಳೆ, ಬಡವ ಅಥವಾ ಶ್ರೀಮಂತ ಎಂಬುದು ಮುಖ್ಯವಲ್ಲ. ಆದರೆ ನಾವೆಲ್ಲರೂ ಇಲ್ಲಿ ಬಂದಿರುವುದಕ್ಕೆ ಒಂದು ಉದ್ದೇಶವಿದೆ. ಅದೇ ಒಂದು ಜಗತ್ತು ಒಂದು ಕುಟುಂಬ. ಇಂದು ಸುಂದರವಾದ ಸ್ಫೂರ್ತಿ ನೀಡುವ ಮಿಷನ್ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಸಾಧಕರಿಗೆ ಪುರಸ್ಕಾರ, ಸನ್ಮಾನ

ಗ್ರಾನುಲೆಸ್ ಇಂಡಿಯಾ ಲಿಮಿಟೆಡ್ ನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ ಕೃಷ್ಣಪ್ರಸಾದ್ ಚಿಗುರುಪಾಟಿ ಮತ್ತು ಮಹೀಂದ್ರಾ ಫೈನಾನ್ಸ್ ನ ಮಾಜಿ ಉಪಾಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕರಾದ ರಮೇಶ್ ಜಿ ಅಯ್ಯರ್ ಅವರಿಗೆ 'ಒಂದು ಜಗತ್ತು ಒಂದು ಕುಟುಂಬ ಜಾಗತಿಕ ನಾಯಕತ್ವ ಪುರಸ್ಕಾರ' ನೀಡಿ ಗೌರವಿಸಲಾಯಿತು. ಈಚ್ ಒನ್ ಎಜುಕೇಟ್ ಒನ್ ಸ್ಕಾಲರ್ ಶಿಪ್ ಕಾರ್ಯಕ್ರಮಕ್ಕೆ ಬೆಂಬಲ ನೀಡುತ್ತಿರುವ 'ವಿಲೋ ಮೆಟರ್ ಅಂಡ್ ಪ್ಲಾಟ್ ಪಂಪ್ಸ್ ಪ್ರೈವೇಟ್ ಲಿಮಿಟೆಡ್' ಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಹಿರಿಯ ವ್ಯವಸ್ಥಾಪಕರಾದ ಬಿ ಸೆಂಥಿಲ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.

ಶ್ರೀ ಮಧುಸೂದನ ಸಾಯಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಗೆ ಬೆಂಬಲ ನೀಡುತ್ತಿರುವ 'ಲಕ್ಷಕ ಟೆಕ್ಸ್ ಎಂಎಲ್ಪಿ' ಕಂಪನಿಗೆ 'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾದ ಎಂಎನ್ ಪದ್ಮನಾಭನ್ ಪ್ರಶಸ್ತಿ ಸ್ವೀಕರಿಸಿದರು.  ಅನ್ನಪೂರ್ಣ ಟ್ರಸ್ಟ್ ಗೆ ಬೆಂಬಲ ನೀಡುತ್ತಿರುವ ನಾಟ್ ಸಲೂಷನ್ಸ್ ಪ್ರೈವೇಟ್ ಲಿಮಿಟೆಡ್ ಗೆ  'ಸಿಎಸ್‌ಆರ್ ಸರ್ಕಲ್ ಆಫ್ ಹಾನರ್ ಪುರಸ್ಕಾರ' ನೀಡಿ ಗೌರವಿಸಲಾಯಿತು. ಕಂಪನಿಯ ಸಂಸ್ಥಾಪಕರು ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಸುಮಂತ್ ಕುಮಾರ್ ಕೊನೂರು ಅವರು ಪ್ರಶಸ್ತಿ ಸ್ವೀಕರಿಸಿದರು.

ಶ್ರೀಲಂಕಾದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವ ಡಾ.ಕ್ರಿಸ್ಟೋಫರ್ ಸ್ಟಬ್ಸ್ ಮತ್ತು ರಂಜಿ ಸ್ಟಬ್ಸ್ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು. ಶ್ರೀಲಂಕಾದಲ್ಲಿ ಕಾರ್ಪೊರೇಟ್ ಆಡಳಿತಕ್ಕೆ ಉತ್ತಮ ಕೊಡುಗೆ ನೀಡುತ್ತಿರುವ ಕುಶೀಲ್ ಗುಣಶೇಖರ ಅವರಿಗೆ ಒಂದು ಜಗತ್ತು ಒಂದು ಕುಟುಂಬ ಮಾನ ವೀಯ ಪುರಸ್ಕಾರ ನೀಡಿ ಗೌರವಿಸಲಾಯಿತು.  

ಶ್ರೀಲಂಕಾದ ಪ್ರತಿನಿಧಿ ಡಾ.ಮಿನಾಲಿ ಉತ್ಪಾಲ ಡಿಸ್ಸಾನಾಯಕೆ ಅವರು ತಮ್ಮ ದೇಶದ ಕಲೆ, ಸಂಸ್ಕೃತಿ, ಸಂಗೀತ, ಭಾಷೆ, ಪ್ರಸಿದ್ಧ ತಾಣಗಳು, ಖಾದ್ಯಗಳು, ಸಾಂಪ್ರದಾಯಿಕ ಉಡುಪು, ಅಧಾತ್ಮ ಸೇರಿದಂತೆ ಹಲವು ವಿಚಾರ ಗಳ ಬಗ್ಗೆ ಮಾಹಿತಿ ನೀಡಿದರು. ಮತ್ತೊಬ್ಬ ಪ್ರತಿನಿಧಿ ಮಹೇಶ್ವರಶರ್ಮಾ ಪ್ರತೀಪನ್ ಅವರು ತಮ್ಮ ಜೀವನದಲ್ಲಿನ ಆಧ್ಯಾತ್ಮಿಕ ಪರಿವರ್ತನೆಯ ಅನುಭವ ಹಂಚಿಕೊಂಡರು.