ಚಿಕ್ಕಬಳ್ಳಾಪುರ: ತಾಲೂಕು ಕಸಾಪ ವತಿಯಿಂದ ಪೋಶೆಟ್ಟಿಹಳ್ಳಿ ಸರ್ಕಾರಿ ಪ್ರೌಢಶಾಲೆ ಯಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆ, ಭಾವಗೀತೆಗಳ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು .
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೇ ಗೌಡ ಮಾತನಾಡಿ, ಸಾಹಿತ್ಯ ಪರಿಷತ್ತು ನವೆಂಬರ್ ತಿಂಗಳಲ್ಲಿ ನೆಲ, ಜಲನಾಡು, ನುಡಿ, ಕಲೆ ,ಸಂಸ್ಕೃತಿ ಹಾಗೂ ಸಾಹಿತ್ಯದ ಕುರಿತು ಶಾಲಾ ಕಾಲೇಜುಗಳಲ್ಲಿ ಜಾಗೃತಿ ಮೂಡಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ಶಾಲೆಗಳಲ್ಲಿ ಕನ್ನಡ ಸಾಹಿತ್ಯದ ಕಂಪು ಪಸರಿಸಲು ಪರಿಷತ್ತು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಗ್ರಾಮೀಣ ಭಾಗದಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕನ್ನಡದ ಕಂಪನ್ನು ಪಸರಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಮಕ್ಕಳಲ್ಲಿ ಇತ್ತೀಚೆಗೆ ಕನ್ನಡದ ಅಭಿಮಾನ ಮೂಡಿಸುವ ಕಾರ್ಯಕ್ರಮಗಳು ಕಡಿಮೆಯಾಗುತ್ತಿರುವುದು ಖೇದಕರ ವಿಷಯ. ಮಕ್ಕಳಿಗೆ ನಾಡಿನ ಇತಿಹಾಸವನ್ನು ತಿಳಿಸುವ ಕಾರ್ಯ ಆಗಬೇಕಿದೆ ಗ್ರಾಮೀಣ ಭಾಗದಲ್ಲಿ ಅತ್ಯಂತ ಪ್ರತಿಭಾವಂತ ಮಕ್ಕಳಿದ್ದು ಅವರ ಬುದ್ಧಿಶಕ್ತಿಗೆ ಸಾಣೆ ಹಿಡಿಯುವ ಕೆಲಸ ಆದಾಗ ಉತ್ತಮವಾದ ಸ್ಪರ್ಧಾ ಮನೋಭಾವ ಮೂಡುತ್ತದೆ ಎಂದರು.
ಇದನ್ನೂ ಓದಿ: Chikkaballapur News: ಸಚಿವ ಸಮೀರ್ ಅಹ್ಮದ್ ಮತ್ತು ಸಹಚರರ ವಿರುದ್ಧ ತೀವ್ರ ಆಕ್ರೋಶ : ಪ್ರಮೋದ್ ಮುತಾಲಿಕ್ ಸಾಥ್
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಶಾಲೆಯ ಮುಖ್ಯೋಪಾಧ್ಯಾಯ ರಾದ ಮಹೇಶ್ವರಪ್ಪ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸವುಳ್ಳ ನಾಡಿನ ಕನ್ನಡ ಭಾಷಯ ಹಿರಿಮೆಯು ಹೆಮ್ಮೆ ಪಡುವಂತದ್ದು, ಗ್ರೀಕರ ನಾಟಕಗಳಲ್ಲಿ ಕನ್ನಡದ ಪದಪುಂಜಗಳು ಕಂಡುಬರುವುದನ್ನು ಇತಿಹಾಸಕಾರರು ಗುರುತಿಸಿದ್ದಾರೆ. ನಾಡಿನ ಮೊಟ್ಟಮೊದಲ ಶಾಸನವು ಹಲ್ಮಿಡಿ ಶಾಸನ ವಾಗಿದ್ದು, ಮೊಟ್ಟಮೊದಲ ಗದ್ಯಕೃತಿ ಶಿವಕೋಟ್ಯಾಚಾರ್ಯರ ವಡ್ಡಾರಾಧನೆ. ಕಾವ್ಯ ಕೃತಿ ಕವಿರಾಜಮಾರ್ಗ ಎಂಬುದು ಕನ್ನಡಿಗರಲ್ಲಿ ರೋಮಾಂಚನಗೊಳಿಸುವಂತದ್ದು. ಇಂಥ ಕನ್ನಡ ಪ್ರೇಮವನ್ನು ಕನ್ನಡ ಸಾಹಿತ್ಯ ಪರಿಷತ್ತು ಎಲ್ಲೆಡೆ ಪಸರಿಸುತ್ತಿರುವುದು ಸಂತೋಷದ ಸಂಗತಿ ಎಂದು ಬಣ್ಣಿಸಿ ದರು.
ಕನ್ನಡದ ಇತಿಹಾಸ ಕುರಿತು ರಸ ಪ್ರಶ್ನೆ, ಭಾವಗೀತೆಗಳು, ಪ್ರಬಂಧ ಸ್ಪರ್ಧೆಗಳು ಏರ್ಪಡಿಸು ವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾಮನೋಭಾವ ಹೆಚ್ಚಲು ಸಹಕಾರಿಯಾಗಿದೆ. ಕನ್ನಡದ ಜಾಗೃತಿಯು ಕೂಡ ಆಗುತ್ತದೆ ಎಂದರು.
ರಸಪ್ರಶ್ನೆ ವಿಭಾಗದಲ್ಲಿ ಭಾನುಪ್ರಿಯ ಪ್ರಥಮ,ಮಹಿದರ್ ದ್ವಿತೀಯ, ಮಧುಪ್ರಿಯ ತೃತೀಯ. ಪ್ರಬಂಧ ಸ್ಪರ್ಧೆಯಲ್ಲಿ ಸಂದೀಪ್ ಪ್ರಥಮ ಗಗನಶ್ರೀ ದ್ವಿತೀಯ, ಅನೋಕ್ ತೃತೀಯ. ಕವಿಕೃತಿ ಪರಿಚಯ ವಿಭಾಗದಲ್ಲಿ ಸುಪ್ರೀತ ಪ್ರಥಮ ,ಅಮೃತ ದ್ವಿತೀಯ, ಅಪ್ಸಿಯ ತೃತೀಯ. ಕನ್ನಡ ಭಾವಗೀತೆಗಳ ಸ್ಪರ್ಧೆಯಲ್ಲಿ ಮಾನ್ಯಶ್ರಿ ಪ್ರಥಮ, ಲಿಖಿತ ದ್ವಿತೀಯ ತೃತೀಯ ಭಾನುಪ್ರಿ ಮತ್ತು ಪುಷ್ಪ ರವರುಗಳು ವಿಜೇತರಾದರು.ವಿಜೇತರಾದ ಮಕ್ಕಳಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಕಾರ್ಯದರ್ಶಿ ಕೆ.ಎಂ.ರೆಡ್ಡಪ್ಪ, ಶಿಕ್ಷಕರಾದ ವೆಂಕಟರಮಣಪ್ಪ, ಫಣಿಕೃಷ್ಣ ಪ್ರಸಾದ್, ಮನೋಹರ್, ಆನಂದ್, ನಾಗಮಣಿ, ಲಕ್ಷಿನಾರಾಯಣಪ್ಪ, ಸೌಭಾಗ್ಯ ಇತರರು ಉಪಸ್ಥಿತರಿದ್ದರು.