ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಚಿವ ಸಮೀರ್ ಅಹ್ಮದ್ ಮತ್ತು ಸಹಚರರ ವಿರುದ್ಧ ತೀವ್ರ ಆಕ್ರೋಶ : ಪ್ರಮೋದ್ ಮುತಾಲಿಕ್ ಸಾಥ್

ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಿಗದಿ ಪಡಿಸಿರುವ ಜಮೀನುಗಳಲ್ಲಿ ಯಥೇಚ್ಛವಾಗಿ ಹಿಪ್ಪು ನೇರಳೆ ಸೇರಿ ಬೆಳೆಯುತ್ತಿದ್ದಾರೆ. ಆದರೆ ಇದೀಗ ಹಿಪ್ಪುನೇರಳೆ ಬೆಳೆಗಳನ್ನು ನಾಶ ಮಾಡಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಚಾಲನೆ ನೀಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ.

ಕೋಡಿಹಳ್ಳಿ ಬಣದ ರೈತಸಂಘದಿಂದ ಮೆಕ್ಕೆಜೋಳ ಬೆಳೆದ ರೈತರ ಪರವಾಗಿ ಪ್ರತಿಭಟನೆ

ಚಿಕ್ಕಬಳ್ಳಾಪುರ ನಗರದ ಜಿಲ್ಲಾಡಳಿತ ಭವನದ ಎದುರು ಕೋಡಿಹಳ್ಳಿ ಚಂದ್ರಶೇಖರ್ ಬಣದ ರೈತರು ಪ್ರತಿಭಟನೆ ನಡೆಸಿದರು. -

Ashok Nayak
Ashok Nayak Nov 13, 2025 10:17 AM

ಚಿಕ್ಕಬಳ್ಳಾಪುರ : ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಬಣದ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ರೈತರು ಜಿಲ್ಲಾಡಳಿತ ಭವನದ ಎದುರು ಮೆಕ್ಕೆಜೋಳ ಸೇರಿ ಹಲವು ತರಕಾರಿ ಗಳನ್ನು ಸುರಿದು ಪ್ರತಿಭಟನೆ ನಡೆಸಿ ಸಚಿವ ಜಮೀರ್ ಅಹ್ಮದ್ ವಿರುದ್ಧ ಆಕ್ರೋಶ ಹೊರ ಹಾಕಿದರು.

ಜಿಲ್ಲಾಡಳಿತ ಭವನದ ಎದುರು ರೈತ ಸಂಘಟನೆ ನಡೆಸಿದ ಪ್ರತಿಭಟನೆಗೆ ಶ್ರೀರಾಮಸೇನೆ ಸಂಘಟನೆಯ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಸಹ ಸಾಥ್ ನೀಡುವ ಮೂಲಕ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಪೆರೇಸಂದ್ರದ ಮೆಕ್ಕೆಜೋಳದ ವ್ಯಾಪಾರಿ ರಾಮಕೃಷ್ಣಪ್ಪ ಎಂಬುವರಿಗೆ ಹೈದರಾಬಾದ್ ಮೂಲಕ ಮೂವರು ಸಹೋ ದರರು ೨ ಕೋಟಿ ರೂಗಳ ವಂಚನೆ ನಡೆಸಿದ್ದಾರೆ. ದೂರಿನ ಆಧಾರದಲ್ಲಿ ವಂಚಕರನ್ನು ಬಂಧಿಸಿದಾಗ ಅವರ ಸಚಿವ ಜಮೀರ್‌ಅಹಮದ್ ವಂಚಕರಿಗೆ ಸಹಾಯ ಮಾಡಿ ರೈತರಿಗೆ ಮೋಸ ಮಾಡಿದ್ದು, ಇದರಿಂದ ಸಚಿವ ಜಮೀರ್ ರೈತರಿಗೆ ವಿಲನ್ ಬದಲಾಗಿದ್ದಾರೆಂದು ಕಿಡಿಕಾರಿದರು.

ಇದನ್ನೂ ಓದಿ: Chikkaballapur News: ವಿದ್ಯೆಯು ವಿನಯ, ಉತ್ತಮ ನಡತೆ ಕೊಡಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ

ಹಲವು ಜಿಲ್ಲೆಗಳ ರೈತರನ್ನು ವಂಚನೆ ಮಾಡಿರುವ ವಂಚಕರು ಮೆಕ್ಕೆಜೋಳದ ವ್ಯಾಪಾರಿಗೆ ಮಾಡಿರುವ ವಂಚನೆಯಿಂದ ಜೋಳ ಮಾರುಕಟ್ಟೆ ಸ್ಥಗಿತಗೊಂಡು ೭೫೦೦ ರೂಗಳಿಂದ 3000 ರೂಗಳಿಗೆ ಕುಸಿತಗೊಂಡಿದ್ದು, ಈ ನಿಟ್ಟಿನಲ್ಲಿ ಸರ್ಕಾರ ೩-೪ ದಿನಗಳಲ್ಲಿ ಮೆಕ್ಕೆ ಜೋಳದ ರೈತರಿಗೆ ಸೂಕ್ತ ಪ್ರೋತ್ಸಾಹ ಬೆಲೆ ಘೋಷಿಸಿ ನ್ಯಾಯ ಒದಗಿಸದಿದ್ದಲ್ಲಿ ಮೆಕ್ಕೆ ಜೋಳದ ಮೂಟೆಗಳೊಂದಿಗೆ ಸಿಎಂ ನಿವಾಸದ ಎದುರು ಬೃಹತ್ ಪ್ರತಿಭಟನೆ ನಡೆಸಲಾಗು ವುದು ಎಂದು ಎಚ್ಚರಿಸಿದರು.

ಆದ್ದರಿಂದ ವಂಚನೆ ಕೇಸಿನಲ್ಲಿ ಭಾಗಿದಾರರಾಗಿರುವ ಸಚಿವ ಜಮೀರ್ ಅಹಮದ್ ವಿರುದ್ಧ ದೂರು ದಾಖಲಾಗುವುದು. ಪೊಲೀಸರು ಮೀನಾಮೇಷ ಮಾಡದೆ ದೂರು ದಾಖಲಿಸಿಕೊಳ್ಳ ಬೇಕು. ಈ ಮೂಲಕ ಅಪರಾಧಿಗಳಿಗೆ ಬೆಂಬಲವಾಗಿ ನಿಲ್ಲುವ ಸಚಿವರು ಜನಪ್ರತಿನಿಧಿಗಳು ಎಚ್ಚರಿಕೆ ರವಾನಿಸಲಾಗುವುದು ಎಂದರು.

ಅಲ್ಲದೆ ಕಬ್ಬಿಗೆ ನಿಗಧಿಪಡಿಸಿರುವ ಬೆಂಬಲ ಬೆಲೆಯು ಅವೈಜ್ಞಾನಿಕವಾಗಿದ್ದು, ಸರ್ಕಾರ ಎಲ್ಲ ರೈತ ಮುಖಂಡರನ್ನೊಳಗೊAಡ ಸಭೆಯನ್ನು ನಡೆಸಿ ಸೂಕ್ತ ಬೆಲೆ ನಿಗದಿಪಡಿಸಬೇಕು.

ಅಲ್ಲದೆ ಬೆಲೆ ಕುಸಿದಿರುವ ಮೆಕ್ಕೆಜೋಳ, ಈರುಳ್ಳಿ ಸೇರಿ ಇನ್ನಿತರೆ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ಘೋಷಿಸಿ ಖರೀದಿ ಕೇಂದ್ರಗಳನ್ನು ತೆರೆಯಬೇಕು ಎಂದು ಒತ್ತಾಯಿಸಿದರು.

ಸಂಘದ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಮಾತನಾಡಿ, ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ವ್ಯಾಪ್ತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ನಿಗಧಿಪಡಿಸಿರುವ ಜಮೀನುಗಳಲ್ಲಿ ಯಥೇಚ್ಛವಾಗಿ ಹಿಪ್ಪು ನೇರಳೆ ಸೇರಿ ಬೆಳೆಯುತ್ತಿದ್ದಾರೆ. ಆದರೆ ಇದೀಗ ಹಿಪ್ಪುನೇರಳೆ ಬೆಳೆಗಳನ್ನು ನಾಶ ಮಾಡಿ ಹೈಟೆಕ್ ರೇಷ್ಮೆ ಮಾರುಕಟ್ಟೆಗೆ ಚಾಲನೆ ನೀಡುವುದರಲ್ಲಿ ಯಾವುದೇ ಪ್ರಯೋಜನವಿಲ್ಲ. ಈ ನಿಟ್ಟಿನಲ್ಲಿ ಜಂಗಮಕೋಟೆ ಭಾಗದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಭೂಸ್ವಾಧೀನವನ್ನು ಕೈಬಿಡುವುದು ಸೇರಿ ಇನ್ನಿತರೆ ಬೇಡಿಕೆ ಈಡೇರಿಸಲು ಒತ್ತಾಯಿಸಿದರು.

ಜಮೀರ್ ವಿರುದ್ಧ ವಾಗ್ದಾಳಿ
ರೈತರ ಪರವಾಗಿ ನಿಲ್ಲಬೇಕಾದ ಸಚಿವ ಜಮೀರ್ ಅಹಮದ್ ಅವರು ಗೂಂಡಗಳು, ಮೋಸಗಾರರು, ವಂಚಕರ ಪರ ನಿಂತಿರುವುದು ಅವರಿಗೆ ಶೋಭೆ ತರುವುದಿಲ್ಲ. ಹೈದರಾ ಬಾದ್ ಮೂಲಕ ದೊಡ್ಡ ಮಾಫಿಯಾ ಸಹಾಯ ಮಾಡಿ ರೈತರ ಹೊಟ್ಟೆ ಮೇಲೆ ಕಾಲಿಡು ತ್ತಿದ್ದು, ಅವರನ್ನು ಭಿಕ್ಷೆ ಬೇಡುವಂತೆ ಮಾಡುತ್ತಿದ್ದಾರೆಂದು ಸಚಿವರ ವಿರುದ್ಧ ಹಿಂದೂಪರ ಸಂಘಟನೆಯ ಮುಖಂಡ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ರೈತರ ಪರ ವ್ಯವಹಾರ ನಡೆಸುತ್ತಿದ್ದ ರಾಮಕೃಷ್ಣಪ್ಪ ಅವರಿಗೆ ಒಮ್ಮೆಲೆ ಕೋಟಿಗಟ್ಟಲೆ ವಂಚಿಸಲಾಗಿದೆ. ವಂಚಕರನ್ನು ಜೈಲಿಗಟ್ಟಿದರೆ ಸಚಿವರೇ ಖುದ್ದು ಕರೆ ಮಾಡಿ ಸಂಬAಧಿಕರೆAದು ಬಿಡಿಸಿದ್ದಾರೆ. ರೈತರಿಗೆ ಅನ್ಯಾಯ ಆಗಿರುವುದರಿಂದ ಜಿಲ್ಲೆಗೆ ಆಗಮಿಸಿದ್ದು, ರೈತರಿಗೆ ಬಹಿರಂಗವಾಗಿ ಮೋಸ ಆಗಿದೆ. ಈ ಪ್ರಕರಣವನ್ನು ಗಂಭೀರ ವಾಗಿ ತೆಗೆದುಕೊಳ್ಳಬೇಕಿದೆ ಎಂದು ಆಗ್ರಹಿಸಿದರು.

ಬಡ್ಡಿಸಹಿತ ವಾಪಸ್ಸು ಕೊಡಬೇಕು. ಇಲ್ಲವಾದರೆ ಉಗ್ರ ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ರೈತ ಪರ ಎಂದು ಹೇಳಿ ಅವರಿಗೆ ಮೋಸ ಮಾಡುತ್ತಿದೆ ಎಂದು ಡಂಗೂರ ಹೊಡೆಯುತ್ತೇವೆ ಅನ್ಯಾಯ ಧ್ವನಿ ಎತ್ತಲಿದ್ದೇವೆ. ವಿವಾದವು ವಾರದಲ್ಲಿ ಬಗೆಹರಿಯಬೇಕು. ಏನು ಮಾಡಬೇಕು ಎಂದು ಗೊತ್ತಿದೆ ಎಂದು ಎಚ್ಚರಿಸಿದರು.

ಪಾಕ್ ಜೀವಂತವಾಗಿ ಇರುವವರೆಗೆ ಭಯೋತ್ಪಾದನೆ ನಿಲ್ಲುವುದಿಲ್ಲ. ಬಾಂಬ್ ಸ್ಪೋಟಗಳು ರಾಕ್ಷಸಿ ಪ್ರವೃತ್ತಿಯಾಗಿದೆ. ಪ್ರಾಣದಾತರಾಗಬೇಕಾದ ವೈದ್ಯರು ದೇಶದ್ರೋಹಿಗಳಾಗಿ ಸ್ಫೋಟಗಳಿಗೆ ಸಂಚು ರೂಪಿಸಿ ಪ್ರಾಣ ತೆಗೆಯಲು ಮುಂದಾಗಿರುವುದು. ಆತಂಕಕಾರಿ ವಿಚಾರ. ಕೇಂದ್ರ ಸರ್ಕಾರ ಆಂತರಿಕ ಭದ್ರತೆಗೆ ಹೆಚ್ಚಿನ ಒತ್ತು ನೀಡಬೇಕು. ಭಯೋ ತ್ಪಾದನೆಯಲ್ಲಿ ಭಾಗಿಯಾಗುವವರನ್ನು ಜೈಲಿಗೆ ಹಾಕುವ ಬದಲಿಗೆ ಗುಂಡಿಕ್ಕಿ ಕೊಲ್ಲಬೇಕು ಎಂದು ಆಕ್ರೋಶ ಹೊರ ಹಾಕಿದರು.

ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ ಜಿಲ್ಲಾಧ್ಯಕ್ಷ ರಾಮನಾಥ ರೆಡ್ಡಿ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ಚಿಕ್ಕಬಳ್ಳಾಪುರ ತಾಲೂಕು ಅಧ್ಯಕ್ಷ ಎಂ.ರಾಮಾಂಜಿನಪ್ಪ, ಜಿಲ್ಲಾ ಕಾರ್ಯದರ್ಶಿ ನೆಲಮಾಕನಹಳ್ಳಿ ಗೋಪಾಲ್, ಮತ್ತಿತರರು ಇದ್ದರು.