ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ಶಿವಕುಮಾರಸ್ವಾಮಿ ಜನ ಸೇವೆ ಅಜರಾಮರ: ಮುದುಗೆರೆ ರಾಜಶೇಖರ್

ಶಿವಕುಮಾರಸ್ವಾಮಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಜನ ಸೇವೆ ಎಂದೆಂ ದಿಗೂ ಅಜರಾಮರ ಎಂದು ಮುದುಗೆರೆ ರಾಜಶೇಖರ್ ತಿಳಿಸಿದರು. ಅವರು ಶಿವಕುಮಾರಸ್ವಾಮಿ ಜನ್ಮ ದಿನ ಪ್ರಯುಕ್ತ ಕೋಟಾಲದಿನ್ನೆಯಲ್ಲಿ ನಡೆದ ಶಿವಕುಮಾರಸ್ವಾಮಿ 119ನೇ ಜನ್ಮದಿನಾ ಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಗೌರಿಬಿದನೂರು: ಶಿವಕುಮಾರಸ್ವಾಮಿ ಇಂದು ನಮ್ಮೊಂದಿಗೆ ಇಲ್ಲದಿದ್ದರೂ ಅವರು ಮಾಡಿದ ಜನ ಸೇವೆ ಎಂದೆಂದಿಗೂ ಅಜರಾಮರ ಎಂದು ಮುದುಗೆರೆ ರಾಜಶೇಖರ್ ತಿಳಿಸಿದರು. ಅವರು ಶಿವಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ಕೋಟಾಲದಿನ್ನೆಯಲ್ಲಿ ನಡೆದ ಶಿವಕುಮಾರಸ್ವಾಮಿ 119ನೇ ಜನ್ಮ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿ ದರು.

ಶಿವಕುಮಾರಸ್ವಾಮಿ ಮಾಗಡಿ ತಾಲೂಕಿನ ವೀರಾಪುರದಲ್ಲಿ ಬಡ ಕುಟುಂಬದಲ್ಲಿ ಜನ್ಮ ತಾಳಿದರು.

ಇದನ್ನೂ ಓದಿ: Gauribidanur News: ವಿಜೃಂಭಣೆಯಿಂದ ನಡೆದ ಕೋಟೆ ಕೋದಂಡರಾಮಸ್ವಾಮಿ ಬ್ರಹ್ಮರಥೋತ್ಸವ

ಮುಂದೆ ಸಿದ್ದ ಗಂಗಾಮಠದ ಅಧ್ಯಕ್ಷರಾಗಿ ಪ್ರತಿ ವರ್ಷ ಸುಮಾರು 1500 ಮಂದಿ ವಿದ್ಯಾರ್ಥಿ ಗಳಿಗೆ ಉಚಿತ ಊಟ, ಶಿಕ್ಷಣ, ವಸತಿಯನ್ನು ಜಾತಿ ಬೇಧವಿಲ್ಲದೇ ನೀಡಿ ದೇಶಕ್ಕೆ ಉತ್ತಮ ವಿಧ್ಯಾರ್ಥಿಗಳನ್ನು ನೀಡಿದರು.

ಇಂದಿಗೂ ಈ ಶಿಕ್ಷಣಾಲಯದಲ್ಲಿ ವಿದ್ಯೆ ಪಡೆದ ಅನೇಕ ಮಂದಿ ವಿವಿಧ ಹುದ್ದೆ ಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದರು. ಅವರ ಮಾರ್ಗದರ್ಶನ ನಮ್ಮೆಲ್ಲರಿಗೂ ದಾರಿ ದೀಪ ಎಂದು ತಿಳಿಸಿದರು

ಕಾರ್ಯಕ್ರಮದಲ್ಲಿ ರುದ್ರಮ್ಮ, ರಘು, ಬಾಬು, ರಾಜಣ್ಣ, ಮಂಜು, ಲಕ್ಷ್ಮಿಪತಿ, ಚಂದ್ರಶೇಖರ, ಶ್ರೀಧರ ಮುಂತಾದವರು ಭಾಗವಹಿಸಿದ್ದರು.