ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gudibande News: ಸೌರ ವಿದ್ಯುತ್ ಹಾಗೂ ಹವಾಮಾನ ಸುಸ್ಥಿರತೆಯಿಂದ ಗ್ರಾಮಗಳ ಸ್ವಾವಲಂಬನೆ ಸಾಧ್ಯ: ಡಾ.ಶ್ರೀಧರ್ ಬಾಬು

ಶಿಕ್ಷಣ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ಈ ಮಹತ್ವಾಕಾಂಕ್ಷಿ ಯೋಜನೆಯು ಶಿಕ್ಷಣ, ನವೀಕರಿಸಬಹುದಾದ ಇಂಧನ ಮತ್ತು ಜೀವನೋಪಾಯದ ಕ್ಷೇತ್ರಗಳಲ್ಲಿ ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಹವಾಮಾನ ಬದಲಾವಣೆಯ ಸವಾಲು ಗಳನ್ನು ಎದುರಿಸಲು ಸಕಾರಾತ್ಮಕ ಹೆಜ್ಜೆ ಇಡುವುದು ಮತ್ತು ಸುಸ್ಥಿರ ಅಭಿವೃದ್ಧಿಯ ಮಾದರಿ ಗ್ರಾಮಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ

ಗುಡಿಬಂಡೆ: ಸೌರ ವಿದ್ಯುತ್ ಹಾಗೂ ಹವಾಮಾನ ಸುಸ್ಥಿರತೆಯಿಂದ ಮಾತ್ರ ಗ್ರಾಮಗಳ ನೈಜ ಅಭಿವೃದ್ಧಿ ಸಾಧ್ಯ ಎಂದು ಟೈಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶ್ರೀಧರ್ ಬಾಬು ತಿಳಿಸಿದರು. ತಾಲ್ಲೂಕಿನ ಬ್ರಾಹ್ಮಣರಹಳ್ಳಿ ಮತ್ತು ಇಡ್ರಹಳ್ಳಿ ಗ್ರಾಮ ಗಳಲ್ಲಿ ಸಂಸ್ಥೆಯ ವತಿಯಿಂದ ಹಮ್ಮಿಕೊಳ್ಳಲಾದ ನೆಟ್ ಜೀರೋ ವಿಲೇಜ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮ ಕುರಿತು ಮಾತನಾಡಿ, ಸೌರ ವಿದ್ಯುತ್ ಮತ್ತು ಹವಾಮಾನ ಸುಸ್ಥಿರ ಗ್ರಾಮಗಳ ನಿರ್ಮಾಣದ ಮೂಲಕ ಗ್ರಾಮೀಣ ಭಾಗದಲ್ಲಿ ಹೊಸ ಬದಲಾವಣೆ ತರಲು ಈ ಯೋಜನೆ ಯನ್ನು ರೂಪಿಸಲಾಗಿದೆ.

ಶಿಕ್ಷಣ ಮತ್ತು ನವೀಕರಿಸಬಹುದಾದ ಇಂಧನಕ್ಕೆ ಆದ್ಯತೆ ಈ ಮಹತ್ವಾಕಾಂಕ್ಷಿ ಯೋಜನೆ ಯು ಶಿಕ್ಷಣ, ನವೀಕರಿಸಬಹುದಾದ ಇಂಧನ ಮತ್ತು ಜೀವನೋಪಾಯದ ಕ್ಷೇತ್ರಗಳಲ್ಲಿ ಗ್ರಾಮಗಳನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸಕಾರಾತ್ಮಕ ಹೆಜ್ಜೆ ಇಡುವುದು ಮತ್ತು ಸುಸ್ಥಿರ ಅಭಿವೃದ್ಧಿಯ ಮಾದರಿ ಗ್ರಾಮಗಳನ್ನು ರೂಪಿಸುವುದು ಈ ಕಾರ್ಯಕ್ರಮದ ಆಶಯವಾಗಿದೆ ಎಂದರು.

ಟೈಡ್ ಸಂಸ್ಥೆಯ ಅಧಿಕಾರಿ ಕಮಲ ಈಶ್ವರ ಮಾತನಾಡಿ, ಗ್ರಾಮದ ಪ್ರತಿಯೊಂದು ಮನೆಗೂ ಹಂತ ಹಂತವಾಗಿ ಸೌರಶಕ್ತಿ ಸೌಲಭ್ಯವನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದರು. ಸ್ಥಳೀಯ ವಾಹಿನಿ ಅಭಿವೃದ್ಧಿ ಸಂಸ್ಥೆಯ ಯೋಜನಾ ನಿರ್ದೇಶಕ ವಾಹಿನಿ ಸುರೇಶ್ ಕಾರ್ಯಕ್ರಮಕ್ಕೆ ಸ್ವಾಗತ ಕೋರಿ, ಸುಸ್ಥಿರ ಗ್ರಾಮ ನಿರ್ಮಾಣದ ಈ ಕಾರ್ಯಕ್ಕೆ ಗ್ರಾಮಸ್ಥರ ಪರವಾಗಿ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಗ್ರಾಮದ ಅಭಿವೃದ್ಧಿ ಹಾಗೂ ಹವಾಮಾನ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರವನ್ನು ಖಚಿತಪಡಿಸಲು ಗ್ರಾಮ ಹವಾಮಾನ ಕ್ರಿಯಾಶೀಲ ಸಮಿತಿಯನ್ನು ರಚಿಸ ಲಾಯಿತು. ಈ ಸಮಯದಲ್ಲಿ ಟೈಡ್ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥ ಬಾಲಾಜಿ ರಾವ್, ನಿಶಾಂತ್, ಗ್ರಾಮ ಸಂಯೋಜಕರಾದ ರಾಮರೆಡ್ಡಿ ಮತ್ತು ಶ್ರೀನಿವಾಸ್, ಸಮಿತಿಯ ಸದಸ್ಯ ರಾದ ನಾರಾಯಣಸ್ವಾಮಿ, ಸರಸ್ವತಮ್ಮ, ಸಾವಿತ್ರಮ್ಮ, ನರಸಮ್ಮ, ಮಂಜುನಾಥ್ , ಶಿವಣ್ಣ, ಆರತಿ, ರುಕ್ಮಿಣಿಯಮ್ಮ, ವೆಂಕಟನಾರಾಯಣ ರೆಡ್ಡಿ ಹಾಗೂ ಬ್ರಾಹ್ಮಣರಹಳ್ಳಿಯ ಗೋವಿಂದಪ್ಪ, ರಮೇಶ್ ಬಾಬು, ಸಾಕಮ್ಮ ಸೇರಿದಂತೆ ಹಲವು ಮುಖಂಡರು ಮತ್ತು ಗ್ರಾಮಸ್ಥರು ಹಾಜರಿದ್ದರು.