ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ಶಿಡ್ಲಘಟ್ಟದಲ್ಲಿ ಸುಭಿಕ್ಷಕ್ಕಾಗಿ ಮರವತ್ತೂರು ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ

ಗಂಗಮ್ಮದೇವಿ ವಸಂತ್ ಮಾತನಾಡಿ, ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆ ಯಲ್ಲಿ ಶಿಡ್ಲಘಟ್ಟದ ವಿವಿಧ ಮಂಡಳಿಗಳ ಭಕ್ತರು ಒಗ್ಗೂಡಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ದೇವಿಯ ಆಶೀರ್ವಾದದಿಂದ ಉತ್ತಮ ಮಳೆಯಾಗಿ ರಾಜ್ಯದಲ್ಲಿ ಸುಭಿಕ್ಷತೆ ನೆಲೆಸಲಿ ಎಂಬುದು ಎಲ್ಲರ ಆಶಯವಾಗಿದೆ

ಶಿಡ್ಲಘಟ್ಟ: ಉತ್ತಮ ಮಳೆಯಾಗಿ ನಾಡಿನಲ್ಲಿ ಸುಭಿಕ್ಷತೆ ನೆಲೆಸಬೇಕು, ರೈತರು ನೆಮ್ಮದಿಯಿಂದ ಬದುಕಬೇಕು ಹಾಗೂ ಸಮೃದ್ಧ ಬೆಳೆ ಬೆಳೆಯಬೇಕು ಎಂಬ ಸಂಕಲ್ಪದೊಂದಿಗೆ ಶಿಡ್ಲಘಟ್ಟದ ಹತ್ತು ಮಂಡಳಿಗಳ ಭಕ್ತರು ತಾಲೂಕು ವೀರಾಪುರ ಬಳಿಯ ಶ್ರೀ ಮಲೈ ಮಹದೇಶ್ವರ ಸ್ವಾಮಿ ದೇವಾಲ ಯದ ಆವರಣದಲ್ಲಿ ಮರವತ್ತೂರು ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿ ಸಾಮೂಹಿಕ ಪ್ರಾರ್ಥನೆ ನಡೆಸಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕರ್ನಾಟಕ ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ಮಂಜು ನಾಥ್, ಉತ್ತಮ ಮಳೆಯಾಗಿ ರೈತರ ಸಂಕಷ್ಟ ದೂರವಾಗಬೇಕು. ಜಲಾಶಯಗಳು ಭರ್ತಿಯಾಗಿ ಕೃಷಿ ಚಟುವಟಿಕೆಗಳು ಚುರುಕುಗೊಳ್ಳಬೇಕು ಎಂಬ ಉದ್ದೇಶದಿಂದ ದೇವಿಯ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Shidlaghatta News: ಮತದಾರರ ಪಟ್ಟಿಯೇ ಪ್ರಜಾಪ್ರಭುತ್ವದ ಶಕ್ತಿ; ಎಸ್‌ಐಆರ್‌ಗೆ ಸಹಕರಿಸಿ: ಸೀಕಲ್ ರಾಮಚಂದ್ರಗೌಡ

ಗಂಗಮ್ಮದೇವಿ ವಸಂತ್ ಮಾತನಾಡಿ, ಮಳೆಯ ಕೊರತೆಯಿಂದ ರೈತರು ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ಶಿಡ್ಲಘಟ್ಟದ ವಿವಿಧ ಮಂಡಳಿಗಳ ಭಕ್ತರು ಒಗ್ಗೂಡಿ ವಿಶೇಷ ಪೂಜೆ ಹಮ್ಮಿಕೊಂಡಿ ದ್ದಾರೆ. ದೇವಿಯ ಆಶೀರ್ವಾದದಿಂದ ಉತ್ತಮ ಮಳೆಯಾಗಿ ರಾಜ್ಯದಲ್ಲಿ ಸುಭಿಕ್ಷತೆ ನೆಲೆಸಲಿ ಎಂಬುದು ಎಲ್ಲರ ಆಶಯವಾಗಿದೆ ಎಂದು ತಿಳಿಸಿದರು.

ಪೂಜೆಯ ಬಳಿಕ ಭಕ್ತರು ದೇವಿಯ ನಾಮಸ್ಮರಣೆ, ಭಜನೆ ಹಾಗೂ ಜಯಘೋಷಗಳಲ್ಲಿ ಪಾಲ್ಗೊಂಡ ರು. ನಂತರ ಎಲ್ಲರಿಗೂ ಮಹಾಪ್ರಸಾದ ವಿತರಿಸಲಾಯಿತು. ವಿವಿಧ ಊರುಗಳಿಂದ ಆಗಮಿಸಿದ್ದ ಭಕ್ತರು ಪೂಜೆಯಲ್ಲಿ ಭಕ್ತಿಭಾವದಿಂದ ಭಾಗವಹಿಸಿ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಆನೂರು ಪಿಳ್ಳಪ್ಪ, ನಳ್ಳಿಮರದಹಳ್ಳಿ ನಾಗರಾಜು, ಗಂಗಮ್ಮದೇವಿ ವಸಂತ್, ಮಯೂರ ವೃತ್ತದ ವಾಲ್ಮೀಕಿ ದೇವಾಲಯದ ಉಮಾದೇವಿ, ವೀರಾಪುರ ಸುಬ್ರಮಣಿ, ಬೆಳ್ಳುಟಿ ಮಂಗಳಮ್ಮ, ಜಯಮ್ಮ, ಹೇಮಾವತಿ,ಮಂಜುಳ, ನಾಗವೇಣಿ ಸೇರಿದಂತೆ ಹಲವರು ಉಪಸ್ಥಿತ ರಿದ್ದರು.