ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gauribidanur News: ನವರಾತ್ರಿ ಅಂಗವಾಗಿ ಶೃಂಗೇರಿ ಶಾರದಾ ಮಂದಿರದಲ್ಲಿ ವಿಶೇಷ ಪೂಜೆ; ನೂರಾರು ಭಕ್ತರು ಭಾಗಿ

ಸಂಘದ ಉಪಾಧ್ಯಕ್ಷ ವೆಂಕಟಕೃಷ್ಣಮೂರ್ತಿ ಅವರ ಕುಟುಂಬದ ನೇತೃತ್ವದಲ್ಲಿ ನಡೆದ ಗಣ ಹೋಮದಲ್ಲಿ ಸಂಘದ ಗೌರವಾಧ್ಯಕ್ಷ ಡಾ.ಎಚ್.ಎಸ್.ಶಶಿಧರ್ ಕುಮಾರ್, ಅಧ್ಯಕ್ಷ ರಘುಬಾಬು, ಕಾರ್ಯದರ್ಶಿ ಉಪೇಂದ್ರ ರಾವ್, ಖಜಾಂಚಿ ಟಿ.ಎಸ್. ಶಶಿಧರ್ ಸೇರಿದಂತೆ ಪದಾಧಿಕಾರಿಗಳು ಧಾರ್ಮಿಕ ಕಾರ್ಯದ ಜವಾಬ್ದಾರಿ ವಹಿಸಿದ್ದರು.

ಗೌರಿಬಿದನೂರು: ನಾಡಿನಲ್ಲಿ ಪ್ರಕೃತಿ ವಿಕೋಪಗಳು ದೂರವಾಗಿ, ಲೋಕಕಲ್ಯಾಣ ಮತ್ತು ಜನರ ಸುಖ-ಸಮೃದ್ಧಿಗಾಗಿ ನಗರದ ವಿ.ವಿ. ಪುರಂ ಬಡಾವಣೆಯ ಶ್ರೀ ಶೃಂಗೇರಿ ಶಾರದಾ ಮಂದಿರದ ಆವರಣದಲ್ಲಿ ಬ್ರಾಹ್ಮಣ ಕ್ಷೇಮಾಭ್ಯುದಯ ಸಂಘದ ವತಿಯಿಂದ ನವರಾತ್ರಿ ಪ್ರಯುಕ್ತ ಸಹಸ್ರ ಮೋದಕ ಗಣಹೋಮವನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು.

ಸಂಘದ ಉಪಾಧ್ಯಕ್ಷ ವೆಂಕಟಕೃಷ್ಣಮೂರ್ತಿ ಅವರ ಕುಟುಂಬದ ನೇತೃತ್ವದಲ್ಲಿ ನಡೆದ ಗಣ ಹೋಮದಲ್ಲಿ ಸಂಘದ ಗೌರವಾಧ್ಯಕ್ಷ ಡಾ.ಎಚ್.ಎಸ್.ಶಶಿಧರ್ ಕುಮಾರ್, ಅಧ್ಯಕ್ಷ ರಘುಬಾಬು, ಕಾರ್ಯದರ್ಶಿ ಉಪೇಂದ್ರ ರಾವ್, ಖಜಾಂಚಿ ಟಿ.ಎಸ್. ಶಶಿಧರ್ ಸೇರಿದಂತೆ ಪದಾಧಿಕಾರಿಗಳು ಧಾರ್ಮಿಕ ಕಾರ್ಯದ ಜವಾಬ್ದಾರಿ ವಹಿಸಿದ್ದರು.

ಇದನ್ನೂ ಓದಿ: Navaratri Festival 2026: ದಾಂಡಿಯಾ ಆಡಲು ರೆಡಿಯಾಗಿದ್ದೀರಾ...? ಹಾಗಿದ್ದರೆ ಪಾಲಿಸಿ ಈ ನಿಯಮ

ವಾಣಿ ಮಹಿಳಾ ಸಂಘದ ಸೌಜನ್ಯ, ಉಮಾಮಹೇಶ್ವರಿ, ರಜನಿ, ಶೈಲಜಾ, ಗುಣಶೀಲ, ಮಮತಾ ಸೇರಿದಂತೆ ಇತರರು ಪೂಜಾ ಕಾರ್ಯಗಳನ್ನು ನೆರವೇರಿಸಿದರು. ಭೂಕಂಪನ ಮಾಪನ ಕೇಂದ್ರದ ನಿವೃತ್ತ ವಿಜ್ಞಾನಿ ಡಿ.ಎಸ್. ರಾವ್, ಕೆಎಂಎಫ್ ಮಾಜಿ ನಿರ್ದೇಶಕ ಡೈರಿ ಎಸ್. ರಮೇಶ್ ಸೇರಿದಂತೆ ನಗರದ ನೂರಾರು ಭಕ್ತರು ಪಾಲ್ಗೊಂಡು ದೇವರ ದರ್ಶನ ಪಡೆದು ಪೂಜೆಯಲ್ಲಿ ಭಾಗಿಯಾದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಡಾ. ಎಚ್.ಎಸ್. ಶಶಿಧರ್ ಕುಮಾರ್, ಪ್ರತಿವರ್ಷದಂತೆ ಈ ಬಾರಿಯೂ ನವರಾತ್ರಿಯ ಒಂಬತ್ತು ದಿನಗಳ ಕಾಲ ಸಂಘದ ವತಿಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ಆಯೋಜಿಸಲಾಗಿದೆ. ಪ್ರತಿದಿನ ನೂರಾರು ಭಕ್ತರು ಪೂಜಾ ಕಾರ್ಯಗಳಲ್ಲಿ ಪಾಲ್ಗೊಂಡು ತಮ್ಮ ಇಷ್ಟಾರ್ಥಗಳ ಈಡೇರಿಕೆಗಾಗಿ ಪ್ರಾರ್ಥಿಸುತ್ತಿದ್ದಾರೆ ಎಂದು ತಿಳಿಸಿದರು.