ಬಾಗೇಪಲ್ಲಿ: ನಾಡಿನ ಜನತೆಗೆ ಒಳ್ಳೆಯದಾಗಲೀ ಎಂಬ ಸದುದ್ದೇಶದೊಂದಿಗೆ ದೇಗುಲ ಮಹೋ ತ್ಸವ ಕಾರ್ಯಕ್ರಮದಲ್ಲಿ ಕಳೆದ ಮೂರು ದಿನಗಳಿಂದ ವಿಶೇಷ ಪೂಜಾ ಕೈಂಕರ್ಯಗಳನ್ನು ನೆರವೇರಿಸಿ ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತಿದ್ದೇವೆಂದು ಯುವ ಮುಖಂಡ ಎನ್.ಮಂಜುನಾಥ ತಿಳಿಸಿದ್ದಾರೆ.
ಬಾಗೇಪಲ್ಲಿ ತಾಲೂಕಿನ ಕಸಭಾ ಹೋಬಳಿಯ ತೀಮಾಕಲಪಲ್ಲಿ ಗ್ರಾಮದಲ್ಲಿ ಗ್ರಾಮಸ್ಥರಿಂದ ನಿರ್ಮಿಸಿರುವ ಶ್ರೀ ಸೀತಾ, ರಾಮ, ಲಕ್ಷ್ಮಣ ಹನುಮ ಸಮೇತ ದೇಗುಲ ಲೋಕಾರ್ಪಣೆ ಹಾಗೂ ಶ್ರೀ ಕೋದಂಡರಾಮಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ತೀಮಾಕಲಪಲ್ಲಿ ಗ್ರಾಮದಲ್ಲಿ ನಿರ್ಮಿಸಿರುವ ನೂತನ ದೇವಾಲಯ ಹಾಗೂ ಧ್ವಜ ಸ್ತಂಭ ಸ್ಥಾಪನೆ, ಕೋದಂಡರಾಮಸ್ವಾಮಿ ವಿಗ್ರಹ ಪ್ರತಿಷ್ಠಾಪನಾ ಕಾರ್ಯಕ್ಕೆ ಗ್ರಾಮಸ್ಥರು ಸೇರಿದಂತೆ ಹಲವು ಗಣ್ಯರ ಸಹಕಾರ ನೀಡಿದ್ದಾರೆ.
ಇದನ್ನೂ ಓದಿ: Bagepally News: ಮಾ.25ರಂದು ಬೆಂಗಳೂರಿನ ಫ್ರಿಡಂ ಪಾರ್ಕ್ನಲ್ಲಿ ಬಲಗೈ ಜಾತಿಗಳ ಬೃಹತ್ ಹೋರಾಟ
ವಿಗ್ರಹ ಪ್ರತಿಷ್ಠಾಪನ ಕಾರ್ಯಕ್ರಮದ ಅಂಗವಾಗಿ ನಾಡಿನ ಸಮಸ್ತ ಜನತೆಗೆ ಒಳ್ಳೆಯದಾಗಲಿ ಎಂದು ಮೂರು ದಿನಗಳ ಕಾಲ ವಿಶೇಷವಾಗಿ ಪುಣ್ಯವಾಚನ, ನವಗ್ರಹ, ಮೃತ್ಯಂಜಯ, ಬಲಿಹರಣ, ಗೋ ಪೂಜೆ, ಕೂಷ್ಮಾಂಢ ವೇಧನೆ ಸೇರಿ ವಿಶೇಷ ಹೋಮ, ಪೂಜೆಗಳನ್ನು ನೇರವೇರಿಸಿದ್ದೇವೆ.
ವಿಗ್ರಹ ಪ್ರತಿಷ್ಠಾಪನಾ ಮಹೋತ್ಸವಕ್ಕೆ ಆಗಮಿಸಿದ್ದ ಎಲ್ಲಾ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿ ಯೋಗ ಅಯೋಜಿಸಿದ್ದೇವೆ. ಗ್ರಾಮದ ದೇಗುಲಕ್ಕೆ ಭಕ್ತಾದಿಗಳು ಒಮ್ಮೆ ಭೇಟಿ ನೀಡಿ ದೇವರ ದರ್ಶನ ಪಡೆದುಕೊಂಡು ಪುನೀತರಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್ ಕೇಶವರೆಡ್ಡಿ ಗ್ರಾಮಸ್ಥರಾದ ಗಣೇಶ್‌ರೆಡ್ಡಿ, ಶಿವಶಂಕರ, ಸುಬ್ಬರಾಯಪ್ಪ, ಚೌಡಪ್ಪ, ಲಕ್ಷಣ, ಟಿಎಂಎಸ್ ಶ್ರೀನಿವಾಸ್, ನಂಜುಂಡಪ್ಪ, ಟಿಬಿಎಲ್ ಶ್ರೀನಿವಾಸ್, ಜಿ.ಎನ್.ಸೀನಪ್ಪ, ಮಧು, ಶೇಖರ್, ವೆಂಕಟರವಣಪ್ಪ, ನಂದೀಶ್, ಎಸ್‌ಎಂಎಲ್ ಶ್ರೀನಿವಾಸ್, ಶ್ರೀನಿವಾಸಲು, ತಲಾರಿ ನಾಗರಾಜು, ನರಸಿಂಹಮೂರ್ತಿ, ನರಸಿಂಹಪ್ಪ ಸೇರಿದಂತೆ ಹಲವಾರು ಮುಖಂಡರು ಭಕ್ತಾದಿಗಳು ಹಾಜರಿದ್ದರು.