ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA B.N. Ravikumar: ಎಚ್.ಕ್ರಾಸ್‌ನಲ್ಲಿ ಶ್ರೀಸೀತಾ ರಾಮಾಂಜನೇಯ ಸ್ವಾಮಿ ಬ್ರಹ್ಮರಥೋತ್ಸವ ಸಂಭ್ರಮ : ಶಾಸಕ ರವಿಕುಮಾರ್ ಭಾಗಿ

ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ ರಥೋತ್ಸವದಂತಹ ಧಾರ್ಮಿಕ ಆಚರಣೆ ಗಳಲ್ಲಿ ಜನತೆ ಸಕ್ರಿಯವಾಗಿ ಭಾಗವಹಿಸುವ ಮೂಲಕ ದೈವಕೃಪೆಗೆ ಪಾತ್ರವಾದಂತೆ ನಾಗರೀಕರಲ್ಲಿ ಒಗ್ಗಟ್ಟು ಮೂಡಿಸಲು ನೆರವಾಗಲಿದೆ ಎಂದರು.ಕ್ಷೇತ್ರದಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾ ಗಲಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿರುವು ದಾಗಿ ಹೇಳಿದರು.

ಶಿಡ್ಲಘಟ್ಟ: ತಾಲ್ಲೂಕಿನ ಎಚ್ ಕ್ರಾಸ್ ಪುರಾಣ-ಇತಿಹಾಸ ಪ್ರಸಿದ್ಧ ಶ್ರೀ ಸೀತಾ ರಾಮಾಂಜ ನೇಯ ಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ಬುಧವಾರ ವೈಭವದಿಂದ ಜರುಗಿತು. ರಥೋತ್ಸವದ ಅಂಗವಾಗಿ ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಗಳು ಪುರೋಹಿತರ ಸಮ್ಮುಖದಲ್ಲಿ ನಡೆದವು.

ರಥೋತ್ಸವ ಕಾರ್ಯಕ್ರಮಕ್ಕೆ ಶಾಸಕ ಬಿ.ಎನ್.ರವಿಕುಮಾರ್(MLA B.N. Ravikumar) ಹಾಗೂ ತಾಲ್ಲೂಕು ಪಂಚಾ ಯತಿ ಕಾರ್ಯನಿರ್ವಾಹಕ ಅಧಿಕಾರಿ ಹೇಮಾವತಿ ಆರ್ .ಚಾಲನೆ ನೀಡಿದರು.

ಧ್ವಜಾರೂಢ ಅಲಂಕಾರ ಸೇವೆ, ಪ್ರಕಾರೋತ್ಸವ, ಹನುಮಂತೋತ್ಸವ, ಮಹಾಭಿಷೇಕ, ಪಲ್ಲಕ್ಕಿ ಉತ್ಸಾಹ ಗೃಡೋತ್ಸವ ಶೈನೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದು ಭಕ್ತರ ಮನಗಳನ್ನು ಆಕರ್ಪಿಸಿದರು.

ಇದನ್ನೂ ಓದಿ: Shidlaghatta News: ಶ್ರೀ ನಗರೇಶ್ವರ ಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ

ಶಾಸಕ ಬಿ.ಎನ್ ರವಿಕುಮಾರ್ ಮಾತನಾಡಿ ರಥೋತ್ಸವದಂತಹ ಧಾರ್ಮಿಕ ಆಚರಣೆ ಗಳಲ್ಲಿ ಜನತೆ ಸಕ್ರಿಯವಾಗಿ ಭಾಗವಹಿಸುವ ಮೂಲಕ ದೈವಕೃಪೆಗೆ ಪಾತ್ರವಾದಂತೆ ನಾಗರೀಕರಲ್ಲಿ ಒಗ್ಗಟ್ಟು ಮೂಡಿಸಲು ನೆರವಾಗಲಿದೆ ಎಂದರು.ಕ್ಷೇತ್ರದಲ್ಲಿ ಈ ವರ್ಷ ಉತ್ತಮ ಮಳೆ ಬೆಳೆಯಾಗಲಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿರುವು ದಾಗಿ ಹೇಳಿದರು.

ಎಚ್.ಕ್ರಾಸ್ ಸರ್ಕಲ್ ಮೂಲಕ ಸಾಗಿದ ಬಂದ ರಥೋತ್ಸವದಲ್ಲಿ ಅಪಾರ ಸಂಖ್ಯೆ ಭಕ್ತರು ಪಾಲ್ಗೊಂಡಿದ್ದರು. ನಂತರ ರಥವು ವಿಜಯಪುರ ರಸ್ತೆ ಮೂಲಕ ಮೂಲಕ ಸಾಗಿ, ಪುನಃ ಅದೇ ಮಾರ್ಗದಲ್ಲಿ ಹಿಂತಿರುಗಿ ದೇವಾಲಯವನ್ನು ತಲುಪಿತು.ರಥೋತ್ಸವದಲ್ಲಿ ಸಾವಿ ರಾರು ಮಂದಿ ಭಾಗಿಯಾಗಿ ದೇವರ ದರ್ಶನ ಪಡೆದು ಪುನೀತರಾದರು.

ದೇವಾಲಯ ಸಮಿತಿಯ ಅಧ್ಯಕ್ಷ ಕೆ.ಬಿ.ಅಯ್ಯಪ್ಪಣ್ಣ,ಕಾಳನಾಯಕನಳ್ಳಿ ಭೀಮೇಶ್, ಪ್ರಚಾರ ಅರ್ಚಕರು ಪದ್ಮನಾಭಾಚಾರ್, ರೈತ ಸಂಘದ ಭಕ್ತರಹಳ್ಳಿ ಬೈರೇಗೌಡ, ಶಾಂತಕು ಮಾರ್, ಎಂ.ಸುಬ್ಬೇಗೌಡ,  ಸುಶೀಲಮ್ಮ.ಕೆ,  ಸೊಣ್ಣೇಗೌಡ, ಬಿ.ತಿಮ್ಮಸಂದ್ರ ರಾಮಕೃಷ್ಣಪ್ಪ, ರಾಜಣ್ಣ ಸಂಧ್ಯಾ ಮುನಿರಾಜು ಹೆಚ್ ಎಂ ಬೈರೇಗೌಡ, ರಾಮಕೃಷ್ಣಪ್ಪ, ಚನ್ನರಾಯಪ್ಪ, ಬಾಬು, ಹಾಗೂ ಸಾವಿರಾರು ಭಕ್ತಾದಿಗಳು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.