ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MP Dr.K.Sudhakar: ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯುವುದರ ಬದಲಿಗೆ ಸಿಎಂ ಸ್ಥಾನದ ಕುರ್ಚಿಗಾಗಿ ಕಾದಾಟ : ಸಂಸದ ಡಾ.ಕೆ.ಸುಧಾಕರ್

ಬಳ್ಳಾರಿಯಲ್ಲಿ ನಡೆದಿರುವ ಘಟನೆಯನ್ನು ನೆನಪಿಸಿಕೊಂಡರೆ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬುದು ಹೇಳಬೇಕಿಲ್ಲ, ಒಬ್ಬ ಖಾಸಗಿ ಗನ್ ಮ್ಯಾನ್ ಗನ್ ಫೈಯರ್ ಮಾಡಿ ಸಾಮಾನ್ಯ ಜನರ ಪ್ರಾಣ ತೆಗೆಯುವ ಹಂತಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೊಂಡಾಗಿರಿ ನಡೆಸಿ ಜನರನ್ನು ಬೆದರಿಸುತ್ತಿದ್ದಾರೆ ಇಂತಹ ದುರಾಡಳಿತ ಸರ್ಕಾರದ ವಿರುದ್ದ ಬಳ್ಳಾರಿಯ ಜನತೆ ಪಾದ ಯಾತ್ರೆ ಮೂಲಕ ಹೋರಾಟ ನಡೆಸಬೇಕಾಗಿದೆ

ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರಿಗೆ ನ್ಯಾಯಯುತ ಆಡಳಿತ ನಡೆಸುವ ಆಸಕ್ತಿ ಇದ್ದರೆ ಬಳ್ಳಾರಿ ಶಾಸಕ ನಾರಾ ಭರತ್‌ರೆಡ್ಡಿರನ್ನು ಕಾಂಗ್ರೆಸ್ ನಿಂದ ವಜಾಗೊಳಿಸಿ ಕ್ರಮ ಜರುಗಿಸುವ ಕೆಲಸ ಮಾಡಬೇಕೆಂದು ಸಂಸದ ಡಾ.ಕೆ.ಸುಧಾಕರ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಗುಡಿಬಂಡೆ: ರಾಜ್ಯ ಕಾಂಗ್ರೆಸ್ ಸರ್ಕಾರದ ನಾಯಕರಿಗೆ ನ್ಯಾಯಯುತ ಆಡಳಿತ ನಡೆಸುವ ಆಸಕ್ತಿ ಇದ್ದರೆ ಬಳ್ಳಾರಿ ಶಾಸಕ ನಾರಾ ಭರತ್‌ರೆಡ್ಡಿ(Bellary MLA Nara Bharat Reddy)ರನ್ನು ಕಾಂಗ್ರೆಸ್ ನಿಂದ ವಜಾಗೊಳಿಸಿ ಕ್ರಮ ಜರುಗಿಸುವ ಕೆಲಸ ಮಾಡಬೇಕೆಂದು ಸಂಸದ ಡಾ.ಕೆ.ಸುಧಾಕರ್ (Memeber of Parliament, Dr. K. Sudhakar) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಬಾಗೇಪಲ್ಲಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ರಲ್ಲಿರುವ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ಸಮಾಜ ಸೇವಕ ಹರಿನಾಥರೆಡ್ಡಿ ಚಾರಿಟೆಬಲ್ ಟ್ರಸ್‌ವತಿಯಿಂದ ಅಯೋಜಿಸಿದ್ದ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಕಾರ್ಯಕ್ರಮವನ್ನು ವಿವಿಧ ಗಣ್ಯರು ಉದ್ಘಾಟಿಸಿದರು.

ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಯುವುದರ ಬದಲಿಗೆ ಸಿಎಂ ಸ್ಥಾನದ ಕುರ್ಚಿಗಾಗಿ ಕಾದಾಡುಕೊಳ್ಳುತ್ತಿದ್ದಾರೆ, ಹಣ ಕೊಡಲಿಲ್ಲ ಆಂದರೆ ಸರ್ಕಾರಿ ಅಧಿಕಾರಿಗಳಿಗೆ ಹುದ್ದೆ ನೀಡುತ್ತಿಲ್ಲ ಎಲ್ಲಾ ಇಲಾಖೆಗಳಲ್ಲಿ ತೀವ್ರ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಳ್ಳಾರಿಯಲ್ಲಿ ನಡೆದಿರುವ ಘಟನೆಯನ್ನು ನೆನಪಿಸಿಕೊಂಡರೆ ಕಾನೂನು ಸುವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎಂಬುದು ಹೇಳಬೇಕಿಲ್ಲ, ಒಬ್ಬ ಖಾಸಗಿ ಗನ್ ಮ್ಯಾನ್ ಗನ್ ಫೈಯರ್ ಮಾಡಿ ಸಾಮಾನ್ಯ ಜನರ ಪ್ರಾಣ ತೆಗೆಯುವ ಹಂತಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗೊಂಡಾಗಿರಿ ನಡೆಸಿ ಜನರನ್ನು ಬೆದರಿಸತ್ತಿದ್ದಾರೆ ಇಂತಹ ದುರಾಡಳಿತ ಸರ್ಕಾರದ ವಿರುದ್ದ ಬಳ್ಳಾರಿಯ ಜನತೆ ಪಾದ ಯಾತ್ರೆ ಮೂಲಕ ಹೋರಾಟ ನಡೆಸಬೇಕಾಗಿದೆ ಎಂದರು.

ಇದನ್ನೂ ಓದಿ: MP Dr K Sudhakar: ಇವಿಎಂ ಮೇಲೆ ನಂಬಿಕೆ ಇಲ್ಲಾಂದ್ರೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಲಿ: ಸಂಸದ ಡಾ ಕೆ ಸುಧಾಕರ್ ಸವಾಲು

ಸಮಾಜ ಸೇವಕ ಹರಿನಾಥರೆಡ್ಡಿ ತನ್ನ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಅಯೋಜಿಸಿರುವ ಹೆಲ್ಮೆಟ್ ವಿತರಣೆ ಮಾಡುವ ಪವಿತ್ರ ಕಾರ್ಯಕ್ರಮವನ್ನು ಶ್ಲಾಘಿಸುತ್ತೇನೆ. ವಯಸ್ಸಿಗೆ ಬಂದು ÀÄನೆ ಜವಾಬ್ದಾರಿ ಹೊತ್ತುವ ಸಮಯದಲ್ಲಿ ರಸ್ತೆ ಅಪಘಾತದಲ್ಲಿ ಮಗನನ್ನು ಕಳೆದುಕೊಂಡ ತಂದೆ, ತಾಯಿಂದಿರ ಆಕ್ರಂಧನ ನೋಡಲು ಸಾಧ್ಯವಾಗುವುದಿಲ್ಲ, ಕುಟುಂಬಕ್ಕೆ ಅಸರೆಯಾಗಿರುವ ವ್ಯಕ್ತಿ ಯನ್ನು ಕಳೆದುಕೊಂಡಾಗ ಅಂತಹ ಕುಟುಂಬದ ನೋವು ಮತ್ತು ದುಃಖವನ್ನು ತಡೆಯುವ ಶಕ್ತಿ ಯಾರಿಗೂ ಇಲ್ಲ ಇಂತಹ ಕುಟುಂಬಗಳ ದುಃಖಕ್ಕೆ ಕಾರಣವಾಗಿ ದ್ವಿಚಕ್ರ ವಾಹನಗಳ ಅಪಘಾತ ಸಮಯದಲ್ಲಿ ಸವಾರನ ಪ್ರಾಣವನ್ನು ರಕ್ಷಿಸಿಕೊಳ್ಳಲು ಆಗತ್ಯವಾಗಿರುವ ಹೆಲ್ಮೆಟ್‌ನ್ನು ಟ್ರಸ್ಟ್ ವತಿಯಿಂದ ವಿತರಿಸಿ ಯುವಕರ ಪ್ರಾಣಕ್ಕೆ ರಕ್ಷಣೆ ನೀಡುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಅಭಿನಂದನೀಯ ಕೆಲಸವಾಗಿದೆ ಎಂದರು.

ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹರಿನಾಥರೆಡ್ಡಿ ಮಾತನಾಡಿ, ರಾಜ್ಯ ಪೋಲಿಸ್ ಇಲಾಖೆಯ ಸಲಹೆಯಂತೆ ಚಾರಿಟೆಬಲ್ ಟ್ರಸ್ಟ್ವತಿಯಿಂದ ದ್ವಿಚಕ್ರ ವಾಹನ ಸವಾರರಿಗೆ ಉಚಿತ ಹೆಲ್ಮೆಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಪೊಲೀಸ್ ಬಂದೋಬಸ್ತ್ ನೀಡುವಂತೆ ಎನ್‌ಡಿಎ ಮುಖಂಡರು ಠಾಣಾಧಿಕಾರಿಗಳಿಗೆ ಮನವಿ ಮಾಡಿದರೆ, ಕ್ಷೇತ್ರದ ಶಾಸಕರು ಪೊಲೀಸ್ ಬಂದೋಬಸ್ತ್ ನೀಡಬಾರದೆಂದು ಗುಡಿಬಂಡೆ ಠಾಣೆ ಪೋಲಿಸರಿಗೆ ಅದೇಶಿಸುತ್ತಾರೆ. ಕ್ಷೇತ್ರದ ಅಭಿವೃದ್ದಿ ಬಗ್ಗೆ ಯೋಚನೆ ಮಾಡುವುದು ಬಿಟ್ಟು ಜನರಿಗೆ ಸೇವೆ ಮಾಡುತ್ತಿರುವ ಸಮಾಜ ಸೇವಕರಿಗೆ ತೊಂದರೆ ನೀಡಲು ಹೊರಟಿದ್ದಾರೆ.

MP with helmet

ಕಳೆದ 15 ವರ್ಷಗಳಿಂದ ಅಭಿವೃದ್ದಿಯಿಂದ ಹಿಂದುಳಿದಿರುವ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಅಭಿವೃದ್ದಿ ಬಗ್ಗೆ ಯೋಚಿಸದೆ ಸೇಡಿನ ರಾಜಕೀಯಕ್ಕೆ ಮುಂದಾಗಿರುವ ಈ ಕ್ಷೇತ್ರದ ಶಾಸಕರು ಜನರಿಗೆ ನ್ಯಾಯ ಒದಗಿಸುವವರೆ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಾಗಿದೆ. ಬಾಗೇಪಲ್ಲಿ, ಗುಡಿಬಂಡೆ, ಚೇಳೂರು ತಾಲೂಕಿನ ಎಲ್ಲಾ ಮನೆಗಳಿಗೆ ಉಚಿತ ಹೆಲ್ಮೆಟ್ ಯೋಜನೆ ಯನ್ನು ಅನುಷ್ಠಾನಗೊಳಿಸಿ ಸಮಾಜ ಸೇವೆ ಮುಂದುವರಿಸುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಶ್ವತ್ಥ ರೆಡ್ಡಿ, ಮುಖಂಡರಾದ ಕೋನಪರೆಡ್ಡಿ, ಪಾವಜೇನಹಳ್ಳಿ ನಾಗರಾಜುರೆಡ್ಡಿ, ವಾಲ್ಮೀಕಿ ಅಶ್ವತ್ಥಪ್ಪ, ತಟ್ಟಹಳ್ಳಿ ಮದ್ದಿರೆಡ್ಡಿ, ಹೆಚ್.ಮಂಜುನಾಥರೆಡ್ಡಿ, ಆ.ನ.ಮೂರ್ತಿ, ಡಿ.ಎನ್.ಆರ್.ಮಂಜುನಾಥರೆಡ್ಡಿ, ಗುತ್ತಿದಾರ ಬೈರಪ್ಪ, ಪಯ್ಯೂರು ವೇಣು, ರಾಮಾಂಜಿ, ಸಿ.ಎಂ.ಚೌಡರೆಡ್ಡಿ, ವಿ.ವೆಂಕಟಶಿವಾರೆಡ್ಡಿ ಮತ್ತಿತರರು ಇದ್ದರು.