ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gudibande News: ಮೊಬೈಲ್ ವ್ಯಸನದಿಂದ ದೂರವಿರಿ, ಕ್ರೀಡಾಸಕ್ತಿ ಬೆಳೆಸಿಕೊಳ್ಳಿ: ನವೀನ್ ಕಿರಣ್ ಕರೆ

ಕ್ರೀಡೆಗಳು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣ ಗಳನ್ನು ಬೆಳೆಸುತ್ತವೆ. ಆದ್ದರಿಂದ ಯುವಕರು ತಮ್ಮ ಸಮಯವನ್ನು ಸದುಪಯೋಗಪಡಿಸಿಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಷ್ಟ್ರಕ್ಕೆ ಕೀರ್ತಿ ತರುವಂತಹ ಸಾಧನೆಗಳನ್ನು ಮಾಡಬೇಕು.

ಗುಡಿಬಂಡೆ: ಇಂದಿನ ಯುವಜನತೆ ಮೊಬೈಲ್ ಮತ್ತು ಇಂಟರ್‌ನೆಟ್‌ನ ಅತಿಯಾದ ಬಳಕೆಯ ಕಡೆ ಹೆಚ್ಚು ಆಕರ್ಷಿತರಾಗುತ್ತಿದ್ದು, ಇದರ ಪರಿಣಾಮವಾಗಿ ಅನೇಕರು ತಮ್ಮ ಗುರಿಯಿಂದ ದೂರ ಸರಿಯುವ ಅಪಾಯ ಎದುರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರು ಮೊಬೈಲ್ ವ್ಯಸನದಿಂದ ದೂರವಿದ್ದು, ಕ್ರೀಡೆಗಳತ್ತ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಕೆ.ವಿ. ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕೆ.ವಿ. ನವೀನ್ ಕಿರಣ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಬಳಿಯ ಮಿನಿ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಗುಡಿಬಂಡೆ ಕಬ್ಬಡಿ ಪ್ರೀಮಿಯಂ ಲೀಗ್ ಪಂದ್ಯಾವಳಿಗಳನ್ನು ಗಿಡ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಕ್ರೀಡೆಗಳು ವ್ಯಕ್ತಿತ್ವ ವಿಕಸನಕ್ಕೆ ನೆರವಾಗುವುದರ ಜೊತೆಗೆ ಶಿಸ್ತು, ಆತ್ಮವಿಶ್ವಾಸ ಮತ್ತು ನಾಯಕತ್ವ ಗುಣಗಳನ್ನು ಬೆಳೆಸುತ್ತವೆ. ಆದ್ದರಿಂದ ಯುವಕರು ತಮ್ಮ ಸಮಯವನ್ನು ಸದುಪಯೋಗಪಡಿಸಿ ಕೊಂಡು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರಾಷ್ಟ್ರಕ್ಕೆ ಕೀರ್ತಿ ತರುವಂತಹ ಸಾಧನೆಗಳನ್ನು ಮಾಡಬೇಕು.

ಇದನ್ನೂ ಓದಿ: Gudibande News: ಆಧುನಿಕತೆ, ನಗರೀಕರಣ ಹೆಸರಿನಲ್ಲಿ ಪರಿಸರ ನಾಶ ಸರಿಯಲ್ಲ: ನ್ಯಾ.ಪ್ರೇಮ್ ಕುಮಾರ್

ದೇಶದಲ್ಲಿ ಜನರು ಒಂದಾಗುವುದು ಯುದ್ದದ ಸಮಯದಲ್ಲಿ ಹಾಗೂ ಕ್ರೀಡಾಕೂಟಗಳ ಸಮಯ ದಲ್ಲಿ. ಈ ನಿಟ್ಟಿನಲ್ಲಿ ಕ್ರೀಡೆಗಳಿಗೆ ತುಂಬಾನೆ ಮಹತ್ವವಿದೆ. ಈ ರೀತಿಯ ಕ್ರೀಡಾಕೂಟಗಳನ್ನು ಆಗಾಗ ಆಯೋಜನೆ ಮಾಡಿದರೇ ಯುವಜನರಲ್ಲಿ ಒಗ್ಗಟ್ಟಿನ ಜೊತೆಗೆ ಕ್ರೀಡಾಸಕ್ತಿ ಸಹ ಬೆಳೆಯುತ್ತದೆ. ಇನ್ನೂ ಗುಡಿಬಂಡೆಯಲ್ಲಿ ಕ್ರೀಡಾಕೂಟಗಳನ್ನು ನಡೆಸಲು ಮ್ಯಾಟ್ ವ್ಯವಸ್ಥೆಯನ್ನು ಶೀಘ್ರವಾಗಿ ಒದಗಿಸುತ್ತೇನೆ ಎಂದರು.

ನಿವೃತ್ತ ಉಪನ್ಯಾಸಕ ಬಿ.ಅಮೀರ್ ಜಾನ್ ಮಾತನಾಡಿ, ಗುಡಿಬಂಡೆ ತಾಲೂಕು ಕ್ರೀಡಾಕೂಟಗಳಲ್ಲಿ ಸಾಕಷ್ಟು ಹೆಸರುವಾಸಿಯಾಗಿದೆ. ಇಲ್ಲಿನ ಅನೇಕ ಕ್ರೀಡಾಪಟುಗಳು ರಾಜ್ಯ ಹಾಗೂ ರಾಷ್ಟ್ರಮಟ್ಟ ದಲ್ಲಿ ಹೆಸರು ಗಳಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಹೆಚ್ಚು ದೈಹಿಕ ಶಿಕ್ಷಕರನ್ನು ಹೊಂದಿರುವ ತಾಲೂಕು ಎಂದರೇ ಅದು ಗುಡಿಬಂಡೆ ಎಂದು ಹೇಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಯುವಕರಲ್ಲಿ ಕ್ರೀಡಾಸಕ್ತಿ ಕಡಿಮೆಯಾಗುತ್ತಿದೆ. ಇದಕ್ಕೆ ನಮ್ಮಲ್ಲಿ ಸುಸಜ್ಜಿತ ಕ್ರೀಡಾಂಗಣ ಇಲ್ಲದೇ ಇರುವುದು ಒಂದು ಕಾರಣ ಎನ್ನಬಹುದಾಗಿದೆ. ಈಗಾಗಲೇ ನಾವು ಅನೇಕ ಬಾರಿ ಜನಪ್ರತಿನಿಧಿಗಳಿಗೆ ಕ್ರೀಡಾಂಗಣ ನಿರ್ಮಾಣಕ್ಕಾಗಿ ಮನವಿ ಸಹ ಮಾಡಿದ್ದೇವೆ. ತಾಲೂಕು ಕಚೇರಿಯ ಮುಂಭಾಗದಲ್ಲಿನ ಹಳೇಯ ಕೋರ್ಟ್ ಜಾಗವನ್ನು ಒಳಾಂಗಣ ಕ್ರೀಡಾಂಗಣ ನಿರ್ಮಾಣ ಮಾಡಿದರೇ ಇಲ್ಲಿಂದ ಸಾಕಷ್ಟು ಕ್ರೀಡಾಪಟುಗಳು ಅಭ್ಯಾಸ ಮಾಡಿ ರಾಷ್ಟ್ರ ಮಟ್ಟದಲ್ಲಿ ಸಾಧನೆ ಮಾಡುತ್ತಾರೆ ಎಂದರು.

ಇನ್ನೂ ಈ ಕ್ರೀಡಾಕೂಟದಲ್ಲಿ ಹರಿಟ್ರೆಂಡ್ಸ್ ತಂಡ ಮೊದಲನ ಸ್ಥಾನವನ್ನು, 7 ಸ್ಟಾ ತಂಡ ದ್ವಿತೀಯ ಹಾಗೂ ಸಿದ್ದು ಬಾಯ್ಸ್ ತೃತೀಯ ಸ್ಥಾನವನ್ನು ಪಡೆದುಕೊಂಡರು. ಈ ಸಮಯದಲ್ಲಿ ಪಪಂ ಅಧ್ಯಕ್ಷ ವಿಕಾಸ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಕ್ಷಯ್, ಆರಕ್ಷಕ ಉಪನಿರೀಕ್ಷಕ ಮುತ್ತುರಾಜ್, ನಿವೃತ್ತ ದೈಹಿಕ ಶಿಕ್ಷಕ ಅಶ್ವತ್ಥಪ್ಪ, ಲೀಗ್ ನ ಆಯೋಜಕರಾದ ಜೆಸಿಬಿ ಮಂಜುನಾಥ್, ಮನೋಹ, ಹರಿಕೃಷ್ಣ ಸೇರಿದಂತೆ ಕ್ರೀಡಾಭಿಮಾನಿಗಳು, ಪ್ರೋತ್ಸಾಹಕರು ಹಾಜರಿದ್ದರು.