ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Bagepally News: ಎಸ್.ಎನ್.ಸುಬ್ಬಾರೆಡ್ಡಿ ಬಗ್ಗೆ ಹಗುರ ಮಾತು ಅಪಪ್ರಚಾರ ನಿಲ್ಲಿಸಿ; ದಾಖಲೆಗಳೊಂದಿಗೆ ಚರ್ಚೆಗೆ ಬನ್ನಿ: ದಲಿತ ಸಂಘರ್ಷ ಸಮಿತಿ ಆಗ್ರಹ

ನಮ್ಮ ನಾಯಕ ಎಸ್.ಎನ್.ಸುಬ್ಬಾರೆಡ್ಡಿ ಕೇವಲ ಉದ್ಯಮಿಯಲ್ಲ, ಜನಪರ ಕಾಳಜಿಯುಳ್ಳ ಸ್ನೇಹಜೀವಿ.25 ವರ್ಷಗಳಿಗೂ ಹೆಚ್ಚುಕಾಲ ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತಾ ಬಡ ಜನರ, ದಲಿತರ, ಕಾರ್ಮಿಕರ,ಹಾಗೂ ಸಾಮಾನ್ಯ ಜನತೆಯ ಕಷ್ಟಕ್ಕೆ ಸುಖಗಳಲ್ಲಿ ಜತೆಗಿದ್ದವರು. ಜನರ ಪ್ರೀತಿ ವಿಶ್ವಾಸದ ಕಾರಣವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆ ಯಾದವರು. ಇಂತಹ ವ್ಯಕ್ತಿ ಜನತೆಗೆ ಮತ್ತು ವ್ಯವಸ್ಥೆಗೆ ಮೋಸ ಮಾಡುತ್ತಾರೆಂದರೆ ದೇವರು ಕೂಡ ಮೆಚ್ಚುವುದಿಲ್ಲ

ಬಾಗೇಪಲ್ಲಿ: ಜನಪರ ಕಳಕಳಿ ಕಾಳಜಿಯುಳ್ಳ ನಮ್ಮ ನಾಯಕರಾದ ಎಸ್.ಎನ್.ಸುಬ್ಬಾ ರೆಡ್ಡಿ ವಿರುದ್ಧ ಮಾತನಾಡುವ ಯೋಗ್ಯತೆ ಬಿಜೆಪಿ ಮುಖಂಡ ಸಿ.ಮುನಿರಾಜು ಹಾಗೂ ಎಂ.ಎನ್.ರಾಜಾರೆಡ್ಡಿ ಮುಖಂಡರಿಗಿಲ್ಲ. ಸುಖಾಸುಮ್ಮನೆ ಆರೋಪ ಮಾಡುವ ಬದಲು ನಿಮ್ಮ ಆರೋಪಗಳಿಗೆ ತಕ್ಕ ದಾಖಲೆಗಳೊಂದಿಗೆ ಮುಕ್ತ ಚರ್ಚೆಗೆ ಬನ್ನಿ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಎನ್.ಕೋಟಪ್ಪ ಆಗ್ರಹಿಸಿದರು.

ಪಟ್ಟಣದ ತಾಲ್ಲೂಕು ಪತ್ರಕರ್ತರ ಭವನದಲ್ಲಿ ತಾಲ್ಲೂಕು ದಲಿತ ಸಂಘರ್ಷ ಸಮಿತಿ ವತಿಯಿಂದ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಮ್ಮ ನಾಯಕ ಎಸ್.ಎನ್.ಸುಬ್ಬಾರೆಡ್ಡಿ ಕೇವಲ ಉದ್ಯಮಿಯಲ್ಲ, ಜನಪರ ಕಾಳಜಿಯುಳ್ಳ ಸ್ನೇಹಜೀವಿ.25 ವರ್ಷಗಳಿಗೂ ಹೆಚ್ಚುಕಾಲ ಜನಸೇವೆಯೇ ಜನಾರ್ಧನ ಸೇವೆ ಎನ್ನುತ್ತಾ ಬಡಜನರ, ದಲಿತರ, ಕಾರ್ಮಿಕರ,ಹಾಗೂ ಸಾಮಾನ್ಯ ಜನತೆಯ ಕಷ್ಟಕ್ಕೆ ಸುಖಗಳಲ್ಲಿ ಜತೆಗಿದ್ದವರು. ಜನರ ಪ್ರೀತಿ ವಿಶ್ವಾಸದ ಕಾರಣವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆ ಯಾದವರು. ಇಂತಹ ವ್ಯಕ್ತಿ ಜನತೆಗೆ ಮತ್ತು ವ್ಯವಸ್ಥೆಗೆ ಮೋಸ ಮಾಡುತ್ತಾರೆಂದರೆ ದೇವರು ಕೂಡ ಮೆಚ್ಚುವುದಿಲ್ಲ ಎಂದು ತಿಳಿಸಿದರು.

ಇದನ್ನೂ ಓದಿ: Bagepally News: ಕುಟುಂಬದ ನೆಮ್ಮದಿ ಮತ್ತು ಜೀವ ರಕ್ಷಣೆಗಾಗಿ ಸಂಚಾರಿ ನಿಯಮಗಳನ್ನು ಪಾಲಿಸಿ ತಪ್ಪದೆ ಹೆಲ್ಮೆಟ್ ಧರಿಸಿ : ಹರಿನಾಥರೆಡ್ಡಿ ಸಲಹೆ

ಶಾಸಕರು ಇಡೀ ವಿಧಾನಸಭಾ ಕ್ಷೇತ್ರದಲ್ಲಿ ನೂರಾರು ದಲಿತರಿಗೆ ಕೊಳವೆ ಬಾವಿ, ಸಾಲ ಸೌಲಭ್ಯಗಳನ್ನು ನೀಡಿದ್ದಾರೆ. ಬಾಗೇಪಲ್ಲಿ, ಗುಡಿಬಂಡೆ ಹಾಗೂ ಚೇಳೂರು ಕ್ಷೇತ್ರದಲ್ಲಿ 120 ಅಂಬೇಡ್ಕರ್ ಭವನಗಳನ್ನು ನಿರ್ಮಾಣ ಮಾಡಿ ದಾಖಲೆ ಮಾಡಿದ್ದಾರೆ. 

ಇಂತಹ ನಾಯಕರ ಮೇಲೆ ದಲಿತರ ಜಮೀನು ಕಬಳಿಕೆ ಮಾಡಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಮುನಿರಾಜು ಬಹಳ ಗಂಭೀರ ಆರೋಪ ಮಾಡಿರುವುದು ಶುದ್ದ ಸುಳ್ಳು ಒಂದು ವೇಳೆ ದಲಿತರ ಜಮೀನು ಕಬಳಿಕೆ ಮಾಡಿದ್ದರೆ ದಾಖಲೆ ನೀಡಿ ಬಹಿರಂಗ ಚರ್ಚೆಗೆ ಬನ್ನಿ  ಎಂದು ಸವಾಲು ಹಾಕಿದರು.

ಸಿ.ಮುನಿರಾಜು ಅವರೇ ಕ್ಷೇತ್ರದವರೇ ಅಲ್ಲ ಎಲ್ಲೋ ಸರ್ಜಾಪುರದವರು. ಅಲ್ಲಿ ನಮ್ಮ ದಲಿತರ ಸಾವಿರಾರು ಎಕರೆ ಜಮೀನು ಲೂಟಿ ಹೊಡೆದಿರುವುದು ನೀವು. ನಿಮ್ಮ ಗ್ರಾಮದ ಸರ್ಜಾಪುರದ ರಚ್ಚಕಟ್ಟೆಯನ್ನು ಕೆಡವಿ ಅಲ್ಲಿ ಬಂಗಲೆ ನಿರ್ಮಾಣ ಮಾಡಿಕೊಂಡು ಒಳ್ಳೆಯ ಐಷಾರಾಮಿ ಜೀವನ ನಡೆಸುತ್ತಿರುವುದು ನೀವು ಎಂದು ಕಿಡಿ ಕಾರಿದರು.

ಎಂ.ಎನ್.ರಾಜಾರೆಡ್ಡಿ ಅವರು ನಿನ್ನೆ ಒಬ್ಬ ರೌಡಿಶೀಟರ್ ಹಾಗೂ ಜೈಲಿಗೆ ಹೋಗಿ ಬಂದಿರುವ ಮುಖಂಡ ನೀನು ಸಹಾ ಸುಬ್ಬಾರೆಡ್ಡಿಯ ಬಗ್ಗೆ ಮಾತನಾಡುವ ಮೊದಲು ನಾಲಿಗೆ ಹಿಡಿತದಲ್ಲಿ ಇಟ್ಟುಕೊಂಡು ಮಾತನಾಡಿ. ವೇಶ್ಯಾವಾಟಿಕೆಯ ಮೂಲಕ ಜೀವನ ನಡೆಸುತ್ತಿರುವ ನೀವು ಸುಬ್ಬಾರೆಡ್ಡಿ ಅವರ ವಿರುದ್ದ ಮಾತನಾಡುವ ನೈತಿಕತೆ ಇದೆಯೇ ನಿಮಗೆ ಇಡೀ ಕ್ಷೇತ್ರದ ಅಭಿವೃದ್ದಿಯ ಬಗ್ಗೆ ಕಿಂಚತ್ತು ಕಾಳಜಿ ಇಲ್ಲದ ನೀವು ಪುಡಿ ರಾಜಕಾರಣ ಮಾಡುತ್ತಿದ್ದೀರಿ. ಸುಬ್ಬಾರೆಡ್ಡಿ ಅವರ ಅಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ನಾವು ದಾಖಲೆ ಸಮೇತ ಬರುತ್ತೇವೆ. ಅಭಿವೃದ್ದಿ ಕುಂಠಿತಗೊಂಡಿದೆ ಎಂದು ದಾಖಲೆ ಸಮೇತ ಬರಲು ಸಿದ್ದರಿದ್ದೀರಾ ಎಂದು ಮುನಿರಾಜು ಮತ್ತು ರಾಜಾರೆಡ್ಡಿ ಅವರಿಗೆ ಬಹಿರಂಗ ಸವಾಲ್ ಹಾಕಿದರು.

ತಾಲ್ಲೂಕು ಸಂಚಾಲಕ ಎಲ್.ಎನ್.ನರಸಿಂಹಯ್ಯ ಮಾತನಾಡಿ, ಬಾಗೇಪಲ್ಲಿ ಕ್ಷೇತ್ರದಲ್ಲಿ ಕಳೆದ 25 ವರ್ಷದಿಂದ ಜಾತಿ ಧರ್ಮ ನೋಡದೆ, ಅವರು ಇವರೆನ್ನದೆ ಶಿಕ್ಷಣ, ಆರೋಗ್ಯ ಜತೆಗೆ ಸಾಮೂಹಿಕ ವಿವಾಹಗಳನ್ನು 2002ರಿಂದ ಮಾಡಿ ಕೊಂಡು ಬಂದಿದ್ದಾರೆ. 

ಆದರೆ ಮುನಿರಾಜು ಅವರೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಜಾಪುರಲ್ಲಿ ದಲಿತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದು ಖಂಡನೀಯ. ಅದೇ ರೀತಿಯಲ್ಲಿ ಬಾಗೇಪಲ್ಲಿ ಕ್ಷೇತ್ರದ ದಲಿತರ ಜೀವನದ ಜೊತೆ ಚೆಲ್ಲಾಟವಾಡಲು ಬಂದರೆ ನಿಮಗೆ ತಕ್ಕ ಬುದ್ದಿ ಕಲಿಸ ಬೇಕಾಗುತ್ತದೆ ಸುಬ್ಬಾರೆಡ್ಡಿ ಅವರು ಜನಾದೇಶದ ಮೂಲಕ ಆಯ್ಕೆಯಾಗಿದ್ದಾರೆ ಅದೇ ರೀತಿಯಲ್ಲಿ ನೀವೂ ಸಹಾ ಜನಾದೇಶದ ಮೂಲಕ ಗೆದ್ದು ಬನ್ನಿ ಅದಕ್ಕೆ ನಮ್ಮ ವಿರೋಧ ವಿಲ್ಲ. ಅದರ ಬದಲು ಜಾತಿ ಧರ್ಮಗಳ ನಡುವೆ ಬೆಂಕಿ ಹಚ್ಚಿ ಶಾಸಕರಾಗಿ ಆಯ್ಕೆಯಾಗು ತ್ತೇನೆ ಎಂದು ಹಗಲ ಕನಸು ಕಾಣಬೇಡಿ ಎಂದರು.

ಈ ಸಂದರ್ಭದಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಗಂಗುಲಪ್ಪ, ತಾಲ್ಲೂಕು ಸಂ.ಸಂಚಾಲಕರಾದ ಎಂ.ವಿ.ನರಸಿಂಹಪ್ಪ, ಭಗವಾನ್ ಮೂರ್ತಿ, ಸದ್ದುಪಲ್ಲಿ ಸುಧಾಕರ್, ವೈ.ನಾರಾಯಣಸ್ವಾಮಿ, ಎಸ್.ಎಸ್.ಆದಿನಾರಾಯಣ, ವೆಂಕಟೇಶ್, ಕದಿರಪ್ಪ, ಚೇಳೂರು ಸುಧಾಕರ್, ಮುಖಂಡರಾದ ಎಂ.ಎನ್.ವೆಂಕಟೇಶ್, ಜಯಪ್ಪ, ಸುಬ್ಬರಾಯಪ್ಪ ಹಾಜರಿದ್ದರು.