ಗೌರಿಬಿದನೂರು: ಮಕ್ಕಳಿಗೆ ವಿದ್ಯಾರ್ಥಿ ದಿಸೆಯಿಂದಲೇ ಅರಣ್ಯೀಕರಣ ಹಾಗೂ ಪರಿಸರ ಕಾಳಜಿ ಕುರಿತು ಅರಿವು ಮೂಡಿಸಬೇಕು ಎಂದು ಶಾಸಕ ಪುಟ್ಟಸ್ವಾಮಿಗೌಡರು(MLA Puttaswamy Gowda) ತಿಳಿಸಿದರು.
ಅವರು ತಾಲೂಕಿನ ಮಲ್ಲಸಂದ್ರ ಗ್ರಾಮದಲ್ಲಿರುವ ಸರ್ಕಾರೀ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸಾಮಾಜಿಕ ಅರಣ್ಯೀಕರಣ ಯೋಜನೆಯಡಿ ಅರಣ್ಯ ಇಲಾಖೆ ಹಾಗೂ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆಯವರಿಂದ ಗಿಡಗಳ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇದನ್ನೂ ಓದಿ: Chikkaballapur News: ಕೈವಾರ ತಾತಯ್ಯ ಪುತ್ಥಳಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗ ಮಂಜೂರು ಮಾಡಲು ಮನವಿ
ಸುಮಾರು ನನ್ನೂರು ಗಿಡಗಳನ್ನು ಇಲ್ಲಿನ ಶಾಲಾ ಮಕ್ಕಳು ನೆಟ್ಟಿದ್ದಾರೆ,ಪ್ರತಿಯೊಬ್ಬ ವಿಧ್ಯಾರ್ಥಿ ಅವರ ಅವಧಿಯಲ್ಲಿ ಒಂದು ಗಿಡವನ್ನು ದತ್ತು ಪಡೆದು ಅವರು ಶಾಲೆಯಿಂದ ಹೊರ ಹೋಗು ವವರಿಗೂ ಪೋಷಣೆ ಮಾಡಬೇಕೆಂದು ಮಕ್ಕಳಿಗೆ ಸೂಚಿಸಲಾಗಿದೆ ಎಂದು ಧರ್ಮಸ್ಥಳ ಸಂಸ್ಥೆಯ ಯೋಜನಾಧಿಕಾರಿ ನಾಗರಾಜ ನಾಯ್ಕ ತಿಳಿಸಿದರು.
ಕಾರ್ಯಕ್ರಮದಲ್ಲಿ ಅರಣ್ಯಾಧಿಕಾರಿ ಹಂಸವಿ,ಚAದ್ರಶೇಖರ ರೆಡ್ಡಿ,ಪ್ರನ್ಸಿಪಾಲ್ ಸಿದ್ದಾರ್ಥ ಸ್ವಾಮಿ, ನರಸಿಂಹಸ್ವಾಮಿ. ಕುಬೇರನಾಯ್ಕ, ರವಿತೇಜ ಮುಂತಾದವರು ಭಾಗವಹಿಸಿದ್ದರು.