ಗೌರಿಬಿದನೂರು: ತಾಲ್ಲೂಕಿನ ಡಿ.ಪಾಳ್ಯ ಹೋಬಳಿಯ ವದ್ದೇನಹಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆ ಯ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ ಮತ್ತು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಜಾನುವಾರುಗಳ ಆರೋಗ್ಯ ತಪಾಸಣೆ ಮತ್ತು ಪಶು ಆರೋಗ್ಯ ಶಿಬಿರವನ್ನು ಯಶಸ್ವಿಯಾಗಿ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಗ್ರಾಮದ ಅನೇಕ ರೈತರು ತಮ್ಮ ಜಾನುವಾರುಗಳನ್ನು ತಪಾಸಣೆ ಮಾಡಿಸಿದರು. ಒಟ್ಟು 65 ಹಸುಗಳ ಆರೋಗ್ಯ ತಪಾಸಣೆ ನಡೆಸಿ ಅವುಗಳ ದೈಹಿಕ ಸ್ಥಿತಿ, ಪೌಷ್ಟಿಕಾಂಶದ ಮಟ್ಟ, ಸಂತಾ ನೋತ್ಪತ್ತಿ ಆರೋಗ್ಯ ಹಾಗೂ ವಿವಿಧ ಸೋಂಕುಗಳ ಲಕ್ಷಣಗಳ ಬಗ್ಗೆ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಚಿಕಿತ್ಸೆಯನ್ನು ನೀಡಲಾಯಿತು.
ಜಾನುವಾರುಗಳಲ್ಲಿ ಕಂಡುಬರುವ ಸಾಮಾನ್ಯ ಆರೋಗ್ಯ ಸಮಸ್ಯೆಗಳ ಕುರಿತು ರೈತರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಹಾಗೂ ತಿಳುವಳಿಕೆ ನೀಡಲಾಯಿತು. ಅಲ್ಲದೆ, ಜಾನುವಾರುಗಳಿಗೆ ಅಗತ್ಯವಿದ್ದ ಚಿಕಿತ್ಸೆ ಮತ್ತು ಲಸಿಕೆಗಳನ್ನು ಸ್ಥಳದಲ್ಲೇ ನೀಡುವ ಮೂಲಕ ರೈತರ ಸಮಯ ಮತ್ತು ಹಣವನ್ನು ಉಳಿಸಲಾಯಿತು.
ಇದನ್ನೂ ಓದಿ: Gauribidanur News: ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಜವಾಬ್ದಾರಿ ವಹಿಸಿ: ಎನ್. ಎಚ್.ಶಿವಶಂಕರರೆಡ್ಡಿ ಕರೆ
ಈ ಕುರಿತು ಮಾಹಿತಿ ನೀಡಿದ ಪಶು ವೈದ್ಯಾಧಿಕಾರಿ ಡಾ. ಮಾರುತಿ ಅವರು, ರೈತರು ಜಾನುವಾರುಗಳ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ, ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಜಾನುವಾರುಗಳಲ್ಲಿ ರೋಗಗಳನ್ನು ತಡೆಗಟ್ಟಬಹುದು ,ರೈತರ ಆರ್ಥಿಕ ಭದ್ರತೆಯ ದೃಷ್ಟಿಯಿಂದ ಜಾನುವಾರುಗಳ ಆರೋಗ್ಯ ರಕ್ಷಣೆ ಅತ್ಯಗತ್ಯ. ಯೋಜನೆ ಗಳನ್ನು ರೈತರ ಸರ್ಕಾರದ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಈ ಶಿಬಿರ ಹಮ್ಮಿಕೊಳ್ಳ ಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕೃಷಿ ಅಧಿಕಾರಿ ರೈತರು ಜಾನುವಾರುಗಳ ಆರೋಗ್ಯದ ಬಗ್ಗೆ ನಿರಂತರ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಜಾನುವಾರುಗಳಲ್ಲಿ ರೋಗಗಳನ್ನು ತಡೆಗಟ್ಟಬಹುದು. ಆರೋಗ್ಯ ತಪಾಸಣೆ ಮತ್ತು ಪಶು ಆರೋಗ್ಯ ಶಿಬಿರವು ಶುಕ್ರವಾರ ದಂದು ಡಿ.ಪಾಳ್ಯ ಗ್ರಾಮದಲ್ಲಿ, ಶನಿವಾರ ದಂದು ಹುದುಗೂರಿನಲ್ಲಿ ನಡೆಯ ಲಿದೆ ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು.
ಈ ಸಂಧರ್ಭದಲ್ಲಿ ರಮೇಶ್ ಬಾಬು, ವೀರಕುಮಾರ್, ಮಧುಸೂಧನ್, ಲಕ್ಷ್ಮೀನಾರಾಯಣ ಹಾಗೂ ಸ್ಥಳೀಯ ಕೃಷಿ ಇಲಾಖೆ ಮತ್ತು ಪಶುಪಾಲನಾ ಇಲಾಖೆ ಸಿಬ್ಬಂದಿಗಳು, ಮತ್ತು ರೈತರು ಉಪಸ್ಥಿತ ರಿದ್ದರು.