ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Shidlaghatta News: ಬೇಸಿಗೆ ಶಿಬಿರಗಳಿಂದ ಮಕ್ಕಳಲ್ಲಿ ಆತ್ಮವಿಶ್ವಾಸ ವೃದ್ಧಿ: ಡಾ.ನವೀನ್ ಭಟ್ ವೈ

ತಾಲೂಕಿನ ಸುಗುಟೂರು ಜಂಗಮಕೋಟೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಜೈ ವೆಂಕಟಾಪುರ ಪಂಚಾಯತಿ ಶಾಲೆ ಹಾಗೂ ಶಿಡ್ಲಘಟ್ಟ ನಗರದ ಸರ್ಕಾರಿ ಉರ್ದು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಬೇಸಿಗೆ ಶಿಬಿರಗಳ ಮಹತ್ವ ವಿವರಿಸಿದರು. “ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳು ಹಾಗೂ ಸೃಜನಾತ್ಮಕತೆಯನ್ನು ಬೆಳೆಸುತ್ತವೆ. ಇಂತಹ ಅವಕಾಶಗಳನ್ನು ಪಾಲಕರು ಮತ್ತು ಶಿಕ್ಷಕರು ಸಮರ್ಪಕವಾಗಿ ಬಳಸಿಕೊಳ್ಳ ಬೇಕು,” ಎಂದು ತಿಳಿಸಿದರು.

"ಬೇಸಿಗೆ ರಜೆ ಸಮಯವನ್ನು ಮಕ್ಕಳು ಕೇವಲ ವಿಶ್ರಾಂತಿಗೆ ಮಾತ್ರ ಸೀಮಿತಗೊಳಿಸದೆ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರ ವ್ಯಕ್ತಿತ್ವ ಸಂಪೂರ್ಣವಾಗಿ ರೂಪುಗೊಳ್ಳುತ್ತದೆ," ಎಂದು ಸಿಇಓ ಡಾ. ನವೀನ್ ಭಟ್ ವೈ ಹೇಳಿದರು.

ಶಿಡ್ಲಘಟ್ಟ: “ಬೇಸಿಗೆ ರಜೆ ಸಮಯವನ್ನು ಮಕ್ಕಳು ಕೇವಲ ವಿಶ್ರಾಂತಿಗೆ ಮಾತ್ರ ಸೀಮಿತಗೊಳಿಸದೆ, ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡರೆ ಅವರ ವ್ಯಕ್ತಿತ್ವ ಸಂಪೂರ್ಣವಾಗಿ ರೂಪು ಗೊಳ್ಳುತ್ತದೆ,” ಎಂದು ಸಿಇಓ ಡಾ.ನವೀನ್ ಭಟ್ ವೈ ಹೇಳಿದರು.

ತಾಲೂಕಿನ ಸುಗುಟೂರು ಜಂಗಮಕೋಟೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಜೈ ವೆಂಕಟಾಪುರ ಪಂಚಾಯತಿ ಶಾಲೆ ಹಾಗೂ ಶಿಡ್ಲಘಟ್ಟ ನಗರದ ಸರ್ಕಾರಿ ಉರ್ದು ಶಾಲೆಯ ಮಕ್ಕಳೊಂದಿಗೆ ಸಂವಾದ ನಡೆಸಿದ ಅವರು, ಬೇಸಿಗೆ ಶಿಬಿರಗಳ ಮಹತ್ವ ವಿವರಿಸಿದರು. “ಶಿಬಿರಗಳು ಮಕ್ಕಳಲ್ಲಿ ಆತ್ಮವಿಶ್ವಾಸ, ನಾಯಕತ್ವ ಗುಣಗಳು ಹಾಗೂ ಸೃಜನಾತ್ಮಕತೆಯನ್ನು ಬೆಳೆಸುತ್ತವೆ. ಇಂತಹ ಅವಕಾಶಗಳನ್ನು ಪಾಲಕರು ಮತ್ತು ಶಿಕ್ಷಕರು ಸಮರ್ಪಕವಾಗಿ ಬಳಸಿಕೊಳ್ಳ ಬೇಕು,” ಎಂದು ತಿಳಿಸಿದರು.

ಇದನ್ನೂ ಓದಿ: Shidlaghatta News: ಜನಪದ ಪರಂಪರೆಗೆ ಜೀವ ತುಂಬಿದ ಕೋಲಾಟ ಪ್ರದರ್ಶನ

ಆರೋಗ್ಯ ಕೇಂದ್ರದಲ್ಲಿ ವಿದ್ಯಾರ್ಥಿಗಳ ಆರೋಗ್ಯ ಪರಿಶೀಲಿಸಿದ ಅವರು, “ಆರೋಗ್ಯವೇ ಉತ್ತಮ ಶಿಕ್ಷಣಕ್ಕೆ ಅಸ್ತಿವಾರ. ಆರೋಗ್ಯವಾಗಿರುವ ಮಕ್ಕಳೇ ಉತ್ತಮವಾಗಿ ಕಲಿಯಲು ಸಾಧ್ಯ. ಶಾಲೆಗಳು ಹಾಗೂ ಆರೋಗ್ಯ ಇಲಾಖೆ ಒಟ್ಟಾಗಿ ಮಕ್ಕಳ ಆರೈಕೆಗೆ ಹೆಚ್ಚಿನ ಆದ್ಯತೆ ನೀಡಬೇಕು,” ಎಂದು ಹೇಳಿದರು.

7b

ಬೇಸಿಗೆ ಶಿಬಿರಗಳಲ್ಲಿ ಚಿತ್ರಕಲೆ, ನೃತ್ಯ, ಸಂಗೀತ, ಕ್ರೀಡೆ, ವ್ಯಕ್ತಿತ್ವ ವಿಕಸನ ಹಾಗೂ ವಿಜ್ಞಾನ ಪ್ರಯೋಗಗಳಂತಹ ಚಟುವಟಿಕೆಗಳನ್ನು ಕಲಿಸಲಾಗುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಇಒ ಹೇಮಾವತಿ ಆರ್, ಜೈ ವೆಂಕಟಾಪುರ ಪಿಡಿಒಗಳಾದ ಮಮತಾ ಮತ್ತು ಸವಿತಾ, ತಾಲ್ಲೂಕು ಆರೋಗ್ಯಾಧಿಕಾರಿ ವೆಂಕಟೇಶ ಮೂರ್ತಿ, ದೇವರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಸೇರಿದಂತೆ ಶಿಕ್ಷಕರು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.