ಚಿಂತಾಮಣಿ : ನಗರದ ಪ್ರಸಿದ್ಧ'ಕೇಶವ ಅಕಾಡೆಮಿ'ಯ ಸಂಸ್ಥಾಪಕರು ಹಾಗೂ ಖ್ಯಾತ ಡ್ಯಾನ್ಸ್ ಮಾಸ್ಟರ್ ಆಗಿರುವ ಕೇಶವ ಅವರು,ಈ ಬಾರಿಯ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ವಿಶೇಷವಾಗಿ ಈಜು ತರಬೇತಿಯನ್ನು ನೀಡುತ್ತಿದ್ದಾರೆ. ಕಳೆದ 15 ವರ್ಷಗಳಿಂದ ನಿರಂತರ ವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಅವರು,ಮಕ್ಕಳಿಗೆ ಆತ್ಮರಕ್ಷಣೆ ಹಾಗೂ ದೈಹಿಕ ಸಾಮರ್ಥ್ಯ ವೃದ್ಧಿಗಾಗಿ ಈಜು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಬೇಸಿಗೆಯ ರಜಾ ದಿನಗಳಲ್ಲಿ ಮಕ್ಕಳು ಕೆರೆ, ಕುಂಟೆಗಳಿಗೆ ಹೋಗಿ ಅನಾಹುತಕ್ಕೀಡಾಗುವು ದನ್ನು ತಪ್ಪಿಸಲು,ಕೇಶವ ಅವರು ಸುರಕ್ಷಿತವಾದ ಬಾವಿಗಳಲ್ಲಿ ಮಕ್ಕಳಿಗೆ ಈಜು ಕಲಿಸು ತ್ತಿದ್ದಾರೆ. ನುರಿತ ತರಬೇತುದಾರರ ಮೇಲ್ವಿಚಾರಣೆಯಲ್ಲಿ ಮಕ್ಕಳಿಗೆ ಟ್ಯೂಬ್ ಹಾಗೂ ಇತರ ಸುರಕ್ಷಿತ ಪರಿಕರಗಳನ್ನು ಬಳಸಿ ತರಬೇತಿ ನೀಡಲಾಗುತ್ತಿದೆ.
ಇದನ್ನೂ ಓದಿ: Chinthamani News: ಶಿಷ್ಯನಾದವನು ಭಕ್ತಿಯಿಂದ ಶರಣಾಗತನಾದರೆ ಗುರು ಶಿಷ್ಯರ ಭಾರ ಹೊರುತ್ತಾನೆ : ಧರ್ಮಾಧಿಕಾರಿ ಎಂ.ಆರ್.ಜಯರಾಮ್
ಈಜು ತರಬೇತಿಯ ಜೊತೆಗೆ,ಕೇಶವ ಅವರು ಮಕ್ಕಳಿಗೆ ಅಂಡರ್ ವಾಟರ್ ಸ್ವಿಮ್ಮಿಂಗ್, ಶವಾಸನ, ಚಕ್ರಾಸನ ಸೇರಿದಂತೆ ವಿವಿಧ ಯೋಗಾಸನಗಳನ್ನು ನೀರಿನಲ್ಲೇ ಮಾಡುವ ಕಲೆಗಳನ್ನು ಕಲಿಸಿಕೊಡುತ್ತಿದ್ದಾರೆ.ಒಂದು ತಿಂಗಳ ಈ ವಿಶೇಷ ಶಿಬಿರದಲ್ಲಿ ಸುಮಾರು 60 ರಿಂದ 100ಕ್ಕೂ ಹೆಚ್ಚು ಮಕ್ಕಳು ಭಾಗವಹಿಸುತ್ತಿದ್ದು, ಬೆಂಗಳೂರು ಮತ್ತು ಕೋಲಾರ ಜಿಲ್ಲೆಯ ವಿವಿಧ ಭಾಗಗಳಿಂದಲೂ ಮಕ್ಕಳು ಆಗಮಿಸುತ್ತಿರುವುದು ವಿಶೇಷವಾಗಿದೆ.
ಕೇಶವ ಅವರ ಈ ಸಾಮಾಜಿಕ ಕಳಕಳಿಗೆ ಪೋಷಕರು ಮತ್ತು ಶಿಕ್ಷಕರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. "ಮಕ್ಕಳು ತಮ್ಮ ಪ್ರಾಣವನ್ನು ತಾವೇ ರಕ್ಷಿಸಿಕೊಳ್ಳುವಂತಹ ಕೌಶಲ ಗಳನ್ನು ಕಲಿಯುತ್ತಿರುವುದು ಸಂತೋಷ ತಂದಿದೆ"ಎಂದು ಪೋಷಕರು ಅಭಿಪ್ರಾಯ ಪಟ್ಟಿದ್ದಾರೆ.
ಕೇಶವ ಅವರು ಮಾತನಾಡುತ್ತಾ ಪ್ರತಿ ವರ್ಷ ಬೇಸಿಗೆ ಶಿಬಿರದ ಮೂಲಕ ಮಕ್ಕಳಿಗೆ ಹೊಸ ಕೌಶಲಗಳನ್ನು ಕಲಿಸುವುದು ನಮ್ಮ ಉದ್ದೇಶ. ಪೋಷಕರು ತಮ್ಮ ಮಕ್ಕಳನ್ನು ಸುರಕ್ಷಿತ ವಾಗಿ ಈಜು ಕಲಿಯಲು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.
ಈಜು ಕಲಿಯಲು ಬಂದ ಮಕ್ಕಳ ಪೋಷಕರು ಮಾಧ್ಯಮದವರೊಂದಿಗೆ ಮಾತನಾಡಿ, ನಮ್ಮ ಮಕ್ಕಳು ಕೇವಲ ಕೆಲವು ದಿನಗಳಲ್ಲೇ ಈಜನ್ನು ಕಲಿಯುತ್ತಿರುವುದು ಸಂತಸ ತಂದಿದೆ. ಕೇಶವ ಅಕಾಡೆಮಿಯ ಈ ಪ್ರಯತ್ನ ಶ್ಲಾಘನೀಯ ಎಂದು ತಿಳಿಸಿದರು.
ಮಕ್ಕಳಿಗೆ ಬಾಲ್ಯದಲ್ಲೇ ಈಜು ಕಲಿಸುವುದು ಒಂದು ಸುರಕ್ಷತಾ ಕವಚವಿದ್ದಂತೆ. ಶಿಬಿರದ ಮೂಲಕ ಮಕ್ಕಳಿಗೆ ಈ ಜೀವರಕ್ಷಕ ಕಲೆಯನ್ನು ಕಲಿಸುತ್ತಿರುವುದು ನಮಗೆ ತೃಪ್ತಿ ನೀಡಿದೆ.
ಬೇಸಿಗೆಯ ರಜೆಯಲ್ಲಿ ಮಕ್ಕಳು ಕೇವಲ ಮೊಬೈಲ್ ಮತ್ತು ಟಿವಿಗಳಿಗೆ ಸೀಮಿತ ವಾಗದೆ, ದೈಹಿಕವಾಗಿ ಸದೃಢರಾಗಲು ಮತ್ತು ಸಂಭವನೀಯ ಅನಾಹುತಗಳಿಂದ ಪಾರಾಗಲು ಈಜು ಒಂದು ಅತ್ಯಗತ್ಯ ಕಲೆಯಾಗಿದೆ ಎಂಬ ಉದ್ದೇಶದಿಂದ ಈ ತರಬೇತಿಯನ್ನು ಪಡೆಯು ತ್ತಿರುವದು ಸಂತೋಷವಾಗಿದೆ.