ಚಿಕ್ಕಬಳ್ಳಾಪುರ: ಸಮಾಜದಲ್ಲಿ ಗುರುಗಳಿಗೆ ಗೌರವದ ಸ್ಥಾನವಿದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ತರವಾದ ಪಾತ್ರವಹಿಸುವ ಬೋಧಕರು ತಮ್ಮ ಜವಾಬ್ದಾರಿಯರಿತು ಕರ್ತವ್ಯದಲ್ಲಿ ನಿರತರಾಗಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಬಿ.ಕೆ.ರವಿ ಅಭಿಪ್ರಾಯಪಟ್ಟರು.
ನಗರದ ಸರಕಾರಿ ಮಹಿಳಾ ಪ್ರಥಮದರ್ಜೆ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರ ಮತ್ತು ನಿರ್ವ ಹಣಾ ವಿಭಾಗ ಒಟ್ಟುಗೂಡಿ ಎನ್‌ಇಪಿ/ಎಸ್‌ಇಪಿ ಪಠ್ಯಕ್ರಮಗಳ ಬಗ್ಗೆ ಪ್ರಾಧ್ಯಾಪಕರಿಗಾಗಿ ಏರ್ಪಡಿಸಿದ್ದ ಒಂದು ದಿನದ ಪುನರ್ಮನನ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿ ದರು.
ವಾಣಿಜ್ಯ ಮತ್ತು ವ್ಯವಹಾರಿಕ ವಿಭಾಗ ಸೇರಿದಂತೆ ಉಳಿದೆಲ್ಲಾ ವಿಭಾಗಗಳಲ್ಲಿ ಈ ರೀತಿಯ ಪುನರ್ಮನನ ತರಬೇತಿ ಕಾರ್ಯಾಗಾರಗಳನ್ನು ಏರ್ಪಡಿಸಿದಾಗ ಮಾತ್ರವೇ ಪರಿಣಾಮಕಾರಿ ಯಾಗಿ ವಿದ್ಯಾರ್ಥಿಗಳಿಗೆ ಬೋಧಿಸಲು ಸಾಧ್ಯವಾಗಲಿದೆ. ಬೋಧಕರು ಕೂಡ ನಿರಂತರ ವಿದ್ಯಾರ್ಥಿಗಳಾದಾಗ ಮಾತ್ರವೇ ಬೋಧನೆಯಲ್ಲಿ ಹೊಸತನ್ನು ಶೋಧಿಸಲು ಅನುಕೂಲ ಎಂದರು.
ಇದನ್ನೂ ಓದಿ: Chikkaballapur News: ಹೋಳಿ ಯುಗಾದಿ ರಂಜಾನ್ ಹಬ್ಬಗಳು ಭಾವೈಕ್ಯತೆಯಿಂದ ಆಚರಿಸಿ: ಡಿವೈಎಸ್‌ಪಿ ಮುರಳೀಧರ್
ವಾಣಿಜ್ಯ ಶಾಸ್ತ್ರದ ಅಧ್ಯಯನವಿಂದು ವಿಶಾಲವಾದ ಹರಹನ್ನು ಪಡೆದಿದೆ. ಇದನ್ನು ಮನ ಗಂಡು ವಿದ್ಯಾರ್ಥಿಗಳು ಹೆಚ್ಚೆಚ್ಚು ದಾಖಲಾತಿ ಪಡೆಯುತ್ತಿದ್ದಾರೆ.ಇವರ ಭವಿಷ್ಯ ಕಾಯುವ ಜವಾಬ್ದಾರಿ ವಿಶ್ವವಿದ್ಯಾಲಯ ಸೇರಿದಂತೆ ಬೋಧಕರ ಮೇಲಿದೆ ಎಂದು ಎಚ್ಚರಿಸಿದರು.
ಬ್ಯುಸಿನೆಸ್ ಜರ್ನಲಿಸಂ, ಬ್ಯುಸಿನೆಸ್ ಕಮ್ಯುನಿಕೇಷನ್ ಬಗ್ಗೆ ಸರಳವಾಗಿ ಜನಸಾಮಾನ್ಯರಿಗೆ ತಿಳಿಹೇಳುವ ಕೆಲಸ ಆಗಬೇಕಿದೆ. ಬಜೆಟ್ ಬಗ್ಗೆಯೂ ಜನರಿಗೆ ಸುಲಭವಾಗಿ ತಿಳಿಸಲು ಇಂದಿಗೂ ಕಷ್ಟವಾಗಿದೆ. ಪ್ರಾಧ್ಯಾಪಕರು ಇತ್ತ ಗಮನ ಹರಿಸಬೇಕಿದೆ. ತಂತ್ರಜ್ಞಾನದ ನೆರವು ಹೆಚ್ಚಿದ್ದರೂ ಇನ್ನಷ್ಟು ಜನಪರವಾಗಿಸಬೇಕು ಎಂದರು.
ಪುಣ್ಯಾತ್ಮರಿಗೆ ಮಾತ್ರ ಗುರುಗಳಾಗುವ ಯೋಗ ಬರಲಿದೆ ಎಂಬ ಮಾತಿದೆ. ಈ ಎಚ್ಚರಿಕೆ ಇಟ್ಟುಕೊಂಡು ಗುರುಗಳಾದವರು ತಮ್ಮ ವೃತ್ತಿಗೆ ಗೌರವ ತರುವ ರೀತಿಯಲ್ಲಿ ನಡೆದುಕೊಳ್ಳ ಬೇಕಿದೆ ಎಂದು ಹೇಳಿದರು.
ಸೆಮಿಸ್ಟರ್ ಕಾಲದಲ್ಲಿ ಬೋಧನೆಗೆ ದೊರೆಯುವ ಅವಧಿ, ಅವಕಾಶ ತೀರಾ ಕಡಿಮೆ. ಈ ಕಡಿಮೆ ಅವಧಿಯಲ್ಲಿ ಕೂಡ ಗುಣಮಟ್ಟದ ಬೋಧನೆ ನೀಡಲು ಬೋಧಕರು ಸಿದ್ಧರಿದ್ದಾರೆ. ಇಂದಿನ ಎಐ ಯುಗದಲ್ಲಿ ಕಾಲೇಜಿಗೇ ಬಂದು ಓದುವ ಅಗತ್ಯವೇಕೆ ಬೇಕು? ಎಂದು ಕೇಳುವವರಿಗೆ ನನ್ನ ಉತ್ತರ, ಒಂದು ಗಂಟೆ ಅವಧಿಯಲ್ಲಿ ಒಬ್ಬ ನುರಿತ ಪ್ರಾಧ್ಯಾಪಕ ನೀಡುವ ಜ್ಞಾನವನ್ನು ವಿದ್ಯಾರ್ಥಿಗಳು ೩ ತಿಂಗಳ ಕಾಲ ಕಷ್ಟಪಟ್ಟು ಓದಿದರೂ ದೊರೆ ಯುವುದಿಲ್ಲ. ಹೀಗಾಗಿಯೇ ಭೌತಿಕ ತರಗತಿಗಳಿಗೆ ಬಂದು ಉನ್ನತ ಶಿಕ್ಷಣ ಪಡೆಯುವುದು ಅಗತ್ಯ ಎಂದು ಪ್ರತಿಪಾದಿಸಿದರು.
ಶಾಲಾ ಕಾಲೇಜುಗಳಲ್ಲಿ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಸ್ವಯಂಪ್ರೇರಿತರಾಗಿ ಪಠ್ಯಕ್ರಮ ಗಳನ್ನು ಅರ್ಥಮಾಡಿಕೊಳ್ಳುವ ಹಾಗೆ ಬೋಧನೆಯಲ್ಲಿ ಖಚಿತ ಹೊಳಹುಗಳನ್ನು ನೀಡಬೇಕು.
ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಕ್ಷೇತ್ರಕ್ಕೆ ಒಗ್ಗುವ ರೀತಿಯಲ್ಲಿ ಸಜ್ಜುಗೊಳಿಸುವ ಸವಾಲು ನಮ್ಮ ಮೇಲಿದೆ. ಬಾಬಾ ಸಾಹೇಬರು ಸಂವಿಧಾನದ ಮೂಲಕ ನೀಡಿದ ಅಗಣಿತ ಅವಕಾಶ ಗಳ ಕಾರಣವಾಗಿ ನಾವು ನೀವೆಲ್ಲಾ ಇಲ್ಲಿ ಇಂತಹ ಕಾರ್ಯಕ್ರಮಗಳಲ್ಲಿ ಭಾಗಿಯಾಗುವಂತೆ ಆಗಿದೆ. ಸಮಸಮಾಜದ ಚಿಂತನೆ ನಮ್ಮ ಉಸಿರಾಗಬೇಕಿದೆ. ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರ್ತಿಸಿ ಪ್ರೋತ್ಸಾಹಿಸುವ ವಿಶಾಲ ಹೃದಯವಂತಿಕೆ ಬೋಧಕರಿಗಿರಲಿ ಎಂದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಯ ಹೊಸ ವಿಶ್ವವಿದ್ಯಾಲಯ ಆಗಿದ್ದು ಈಗಲೇ ಎಲ್ಲ ವನ್ನೂ ಮಾಡಿಬಿಡಬೇಕು ಎಂದು ಬಯಸುವುದು ಸರಿಯಾದ ಕ್ರಮವಲ್ಲ. ಸರಕಾರದಿಂದ ಅನುದಾನ ಲಭ್ಯವಾಗದಿದ್ದರೂ ವಿದ್ಯಾರ್ಥಿಗಳು ಪಾವತಿಸುವ ಶುಲ್ಕದ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದೆ. ನ್ಯಾಕ್ ಗ್ರೇಡ್‌ನಲ್ಲಿ ನಮ್ಮ ಕಾಲೇಜುಗಳ ಸಾಧನೆ ದೇಶಕ್ಕೆ ಮಾದರಿಯಾಗಿವೆ. ಕಾಲೇಜು ಶಿಕ್ಷಣ ಇಲಾಖೆ ಪ್ರಾಧ್ಯಾಪಕರಿಂದಲೇ ವಿಶ್ವವಿದ್ಯಾಲಗಳು ನಡೆಯುತ್ತಿದ್ದು, ಇಂತಹ ಸಮರ್ಪಣಾ ಭಾವವಿರುವ ಎಲ್ಲಾ ಅಧ್ಯಾಪಕರಿಗೆ ಧನ್ಯವಾದ ಗಳನ್ನು ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರಾದ ಅಶ್ವತ್ಥ್ನಾರಾಯಣ, ಡಾ.ನವೀನ್ ಕುಮಾರ್, ಪ್ರೊ.ಹರೀಶ್‌ಬಾಬು, ಡಾ.ಶಾರದ, ಡಾ.ರಾಜಪ್ಪ, ಡಾ.ಮಂಜಯ್ಯ, ಡಾ.ಜಿ.ಕೆ.ರಮೇಶ್, ಡಾ.ಮಧುಸೂಧನ್‌ರೆಡ್ಡಿ, ಪ್ರೊ.ಪ್ರೇಮಕುಮಾರ್, ಮತ್ತಿತರರು ಇದ್ದರು.
![]()
ಜಗತ್ತಿನಲ್ಲಿ ತಂದೆ ತಾಯಿಯನ್ನು ಬಿಟ್ಟರೆ ವಿದ್ಯಾರ್ಥಿಗಳ ಬಗ್ಗೆ ಕಾಳಜಿ ವಹಿಸುವ ಮತ್ತೊಂದು ಮಾತೃ ಹೃದಯದ ಜೀವವೆಂದರೆ ಅದು ಗುರುಗಳು ಮಾತ್ರ. ಇಂದಿನ ಯುವ ಪೀಳಿಗೆ ತಂತ್ರಜ್ಞಾನದ ಭರಾಟೆಯಲ್ಲಿ ನೈತಿಕ ಮೌಲ್ಯಗಳ ಅಧಃಪತನಕ್ಕೆ ಕಾರವಾಗು ತ್ತಿದ್ದಾರೆ. ತಂತ್ರಜ್ಞಾನ ಬೇಕು, ಅದನ್ನು ಎಲ್ಲಿ ಹೇಗೆ ಬಳಸಬೇಕು ಎಂಬ ಬಗ್ಗೆ ಅರಿವಿರಬೇಕು. ಶಿಕ್ಷಕರು ಬಾಯಿಮುಚ್ಚಿಕೊಂಡು ಕೂತರೆ ಮುಂದಿನ ದಿನಗಳು ಕರಾಳವಾಗಲಿವೆ. ಮಾನವ ಸಂಬಂಧಗಳು, ಕೌಟುಂಬಿಕ ಸಂಬಂಧಗಳು ಕಣ್ಮರೆಯಾಗುತ್ತಿವೆ. ಹೀಗಾಗಿ ಸಾಮಾಜಿಕ ಹೊಣೆಗಾರಿಕೆ ಅರಿತು ಕೆಲಸ ಮಾಡಬೇಕು. ಯಾವುದು ಸರಿ ಯಾವುದು ತಪ್ಪು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಓದುವ ಬರೆಯುವ ಕೌಶಲ್ಯ ಬೆಳೆಸಿ. ಆ ಮೂಲಕ ನೈತಿಕತೆ ಬೆಳೆಸಿ. ಬಿಎನ್‌ಯು ಬ್ರಾಂಡ್ ನೇಮ್ ವಿಶ್ವದಗಲ ಬೆಳಗಲಿ.
-ಡಾ.ಬಿ.ಕೆ.ರವಿ. ಉಪಕುಲಪತಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ.
![]()
ದೂರದೃಷ್ಟಿಯುಳ್ಳ ಕುಲಪತಿ ಬಿ.ಕೆ.ರವಿ ಅವರು ನಮ್ಮ ಕಾಲೇಜಿಗೆ ಬಂದು ಕಾರ್ಯಾಗಾರ ಉದ್ಘಾಟಿಸಿರುವುದು ಸಂತೋಷ ತಂದಿದೆ. ಪ್ರಶ್ನಿಸುವ ಮನೋಭಾವವೇ ನಾಗರೀಕತೆಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದೆ ಎನ್ನುವುದು ನನ್ನ ಭಾವನೆ. ವಾಣಿಜ್ಯ ವಿಭಾಗವು ಸ್ಪರ್ಧಾತ್ಮಕ ಜಗತ್ತಿಗೆ ಪೂರಕವಾಗಿ ತನ್ನನ್ನು ಹೊಂದಿಸಿಕೊಂಡು ಹೋಗು ತ್ತಿರುವಂತೆ ಕಲಾನಿಕಾಯವೂ ಈ ಕೆಲಸ ಮಾಡಲಿ.ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಏರ್ಪಡಿಸುವ ಎಲ್ಲಾ ಕಾರ್ಯಕ್ರಮಗಳಿಗೆ ಕಾಲೇಜಿನ ಮುಖ್ಯಸ್ಥನಾಗಿ ಬೆಂಬಲ ನೀಡುತ್ತೇನೆ.
-ಪ್ರೊ.ಜಿ.ಡಿ.ಚಂದ್ರಯ್ಯ ಪ್ರಾಂಶುಪಾಲರು. ಸರಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಚಿಕ್ಕಬಳ್ಳಾಪುರ.